ಕಳ್ಳತನ ಪ್ರಕರಣ:
ಸ್ಟೇಶನ ಬಜಾರ ಠಾಣೆ: ಶ್ರೀಮತಿ ಸರಸ್ವತಿ ಗಂಡ ಗೀರಿಶ ನಾರಾಯಣ ಹೆಬ್ಬಾರ ಸಾ: ಪ್ಲಾಟ ನಂ 4 ಚೆನ್ನಕೇಶವ ನಿಲಯ ಬ್ಯಾಂಕ ಕಾಲೋನಿ ಗುಲಬರ್ಗಾ ರವರು ನನ್ನ ಗಂಡ ಕೃಷ್ಣ ಗ್ರಾಮೀಣ ಬ್ಯಾಂಕ ಕೇಂದ್ರ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನಾನು ಸ್ವದೇಶಿ ಕೈ ಕಸಬು ಮಾಡುತ್ತಿದ್ದನೆ. ನಮಗೆ ಸುಮಾರು 7 ವರ್ಷಗಳಿಂದ ಮಂಜುನಾಥ ತಂದೆ ಗುರುನಾಥ ಕಣಜೆ ಎಂಬುವವರು ಪರಿಚಯವಿದ್ದು ಇವರು ಸಹ ಕೈ ಕಸಬು ಮಾಡುತ್ತಾ ನಮಗೆ ವ್ಯವಹಾರದಲ್ಲಿ ಸಹಾಯ ಮಾಡುತ್ತಿದ್ದನು ಹೀಗಾಗಿ ನಾವು ಊರಿಗೆ ಹೋಗುವಾಗ ಮಂಜುನಾಥ ಇವರನ್ನು ನಮ್ಮ ಮನೆಯಲ್ಲಿ ಇರುವಂತೆ ಹೇಳಿ ಹೋಗುತ್ತಿದ್ದೇವು.ನಾನು ದಿನಾಂಕ 23/02/2012 ರಂದು ಗುಲಬರ್ಗಾದಿಂದ ಹುಬ್ಬಳ್ಳಿಗೆ ಹೋದೇನು ದಿನಾಂಕ 24/02/2012 ರಂದು ರಾತ್ರಿ 10-30 ಗಂಟೆ ಸುಮಾರಿಗೆ ಗುಲಬರ್ಗಾ ದಿಂದ ನನ್ನ ಗಂಡ ಹೈದ್ರಾಬಾದಗೆ ಖಾಸಗಿ ಕೆಲಸದ ನಿಮಿತ್ಯವಾಗಿ ಹೋಗುವದಾಗಿ ಹೇಳಿದ್ದು ಅಲ್ಲದೆ ಮಂಜುನಾಥ ಇವರನ್ನು ಮನೆಯಲ್ಲಿ ಬಿಟ್ಟು ಹೋಗುವದಾಗಿ ನನ್ನೊಂದಿಗೆ ಮೊಬೈಲನಲ್ಲಿ ಮಾತಾಡಿ ತಿಳಿಸಿ ಹೋಗಿರುತ್ತಾರೆ. ದಿನಾಂಕ 25/02/2012 ರಂದು ಬೆಳಿಗ್ಗೆ 5-10 ಗಂಟೆಗೆ ಮಂಜುನಾಥ ಇತನು ನನ್ನ ಮೋಬಾಯಿಲ್ ಗೆ ಕರೆ ಮಾಡಿ ಗಿರೀಶ ಅಣ್ಣ ಇವರನ್ನು ದಿನಾಂಕ 24/02/2012 ರಂದು ರಾತ್ರಿ 10-30 ಕ್ಕೆ ಗುಲಬರ್ಗಾ ಕೇಂದ್ರ ಬಸ ನಿಲ್ದಾಣಕ್ಕೆ ಬಿಟ್ಟು ದ್ವೀ ಚಕ್ರ ವಾಹನದಲ್ಲಿ ನಮ್ಮ ಮನೆಗೆ ಹೋಗಿ ಊಟ ಮಾಡಿ ಸ್ವಲ್ಪ ವಿಶ್ರಾಂತಿ ಪಡೆಯುವಾಗ ನನಗೆ ನಿದ್ದೆ ಹತ್ತಿ ದ್ದು ನಿಮ್ಮ ಮನೆ ಕಡೆಗೆ ಹೋಗುವದಕ್ಕೆ ಆಗಿರುವದಿಲ್ಲ ದಿನಾಂಕ 25/02/2012ರ ಬೆಳಿಗ್ಗೆ 5-10 ಗಂಟೆಗೆ ಬಂದು ನೋಡಿದಾಗ ಮನೆಯ ಮುಖ್ಯ ದ್ವಾರದ ಸೆಂಟ್ರಲ್ ಲಾಕ ಯಾರೋ ಕಳ್ಳರು ಮುರಿದು ಮನೆ ಒಳಗೆ ಹೋಗಿ ಮನೆಯಲ್ಲಿರುವ ಆಲ್ಮಾರಿಯ ಕೀಲಿಯನ್ನು ಮುರಿದು ಆಲ್ಮಾರದಲ್ಲಿದ್ದ ಬಟ್ಟೆ ಮತ್ತು ವಸ್ತುಗಳನ್ನು ಚೆಲ್ಲಾಪಿಲ್ಲಿಯಾಗಿ ಕೆಳಗಡೆ ಹಾಕಿರುತ್ತಾರೆ. ಅಲ್ಲದೆ ಮತ್ತೊಂದು ರೂಮಿನಲ್ಲಿ ವಸ್ತುಗಳನ್ನು ಎಸೆದಿರುತ್ತಾರೆ ಹಾಗೂ ದೆವರ ಕೋಣೆಯಲ್ಲಿರುವ ಸಾಮಾನುಗಳು ಸಹ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ತಿಳಿಸಿದ್ದರಿಂದ ನಾನು ಹುಬ್ಬಳಿಯಿಂದ ಗುಲಬರ್ಗಾದ ನಮ್ಮ ಮನೆಗೆ ಬಂದು ನೋಡಲಾಗಿ ಬಂಗಾರದ ಆಭರಣಗಳು ಮತ್ತು ನಗದು ಹಣ 2000=00 ರೂ ಹೀಗೆ ಓಟ್ಟು 2,20,000=00 ರೂಪಾಯಿಗಳದ್ದು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 18/2012 ಕಲಂ 457, 380 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಪಿ.ಡಿ.ಓ ಅಧಿಕಾರಿಯ ಮೇಲೆ ಹಲ್ಲೆ :
ಕಮಲಾಪೂರ ಠಾಣೆ: ಶ್ರೀ ಅರವಿಂದ ತಂದೆ ಶಂಕರ ಚವ್ವಾಣ ಪಿ.ಡಿ.ಓ ಮತ್ತು ಕಾರ್ಯದರ್ಸಿ ಕಲ್ಮೂಡ ಗ್ರಾಮ ಪಂಚಾಯತ ಕಾರ್ಯಲಯ ಸಾ ಕಾಳನೂರ ಗುಲಬರ್ಗಾ ರವರು ನಾನು ದಿನಾಂಕ: 25/02/2012 ರಂದು ಕಲ್ಮೂಡ ಗ್ರಾಮ ಪಂಚಾಯತ ಕಾರ್ಯಾಲಯದಲ್ಲಿ 2012 -13 ನೇ ಸಾಲಿನ ಇಂದಿರಾ ಆವಾಸ ಯೋಜನೆ ಅಡಿಯಲ್ಲಿ ಗ್ರಾಮ ಆಯ್ಕೆ ಕುರಿತು ಗ್ರಾಮ ಪಂಚಾಯತ ಅಧ್ಯಕ್ಷರು ಮತ್ತು ಎಲ್ಲಾ ಸದಸ್ಯರನ್ನು ಕರೆದು ಸಾಮಾನ್ಯ ಸಭೆ ಕೈಕೊಂಡಿದ್ದು, ಐ.ಎ.ವೈ ಅಡಿಯಲ್ಲಿ ಗ್ರಾಮ ಆಯ್ಕೆ ಮಾಡುವ ವಿಷಯದಲ್ಲಿ ಚರ್ಚೆ ಮಾಡುತ್ತಿದ್ದಾಗ ಕಲ್ಮೂಡ ಗ್ರಾಮ ಪಂಚಾಯತಿ ನಾಮು ನಾಯಕ ತಾಂಡಾದ ಗ್ರಾಮ ಪಂಚಾಯತ ಸದಸ್ಯನಾದ ಶ್ರೀ.ಗೋಪಾಲ ತಂದೆ ದೇವಲಾ ರಾಠೋಡ ಸಾ: ಲಿಂಬು ನಾಯಕ ತಾಂಡಾ ಕಲ್ಮೂಡ ಈತನು ಸಭೆಯಲ್ಲಿ ಎದ್ದು ನಿಂತು ನನಗೆ ಅವಾಚ್ಯವಾಗಿ ಬೈದು ಇಂದಿರಾ ಆವಾಸ ಯೋಜನೆ ಅಡಿಯಲ್ಲಿ ಮಂಜೂರಾದ ಹೆಚ್ಚುವರಿ 11 ಮನೆಗಳನ್ನು ನಾನು ಹೇಳಿದ ನಮ್ಮ ಜನರಿಗೆ ಕೊಡು ಅಂತಾ ಅವಾಚ್ಯ ಶಬ್ದಗಳಿಂದ ಬೈಯುತ್ತಿರುವಾಗ ನಾನು ಈ ವಿಷಯದಲ್ಲಿ ಗ್ರಾಮ ಸಭೆ ಮಾಡದೇ ಹೊರತು ಮನೆ ಹಂಚಿಕೆ ಮಾಡುವುದಿಲ್ಲ ಅಂತಾ ಅಂದಾಗ ಗೋಪಾಲ ರಾಠೋಡ ಈತನು ಎದ್ದು ಬಂದು ನನ್ನ ಎದೆಯ ಮೇಲಿನ ಅಂಗಿ ಹಿಡಿದು ಎಳೆದಾಡಿ ಕೈಯಿಂದ ಕಪಾಳಕ್ಕೆ ಹೊಡೆದು ಗುಪ್ತಗಾಯ ಪಡಿಸಿ ಕೈ ಮುಷ್ಟಿ ಮಾಡಿ ನನ್ನ ಬೆನ್ನಿನ ಮೇಲೆ ಹೊಡೆದು ಗುಪ್ತಗಾಯ ಪಡಿಸಿದನು. ಆಗ ನಾನು ಸಭೆಯನ್ನು ಅರ್ಧಕ್ಕೆ ಮುಕ್ತಾಯ ಮಾಡಿ ಅಲ್ಲಿಂದ ಹೊರಗೆ ಹೋಗುತ್ತಿದ್ದಾಗ ಮತ್ತೆ ಬಂದು ನನಗೆ ಅಡ್ಡಗಟ್ಟಿ ನಿಲ್ಲಿಸಿ ನನ್ನೊಂದಿಗೆ ತೆಕ್ಕಿಮುಸ್ತಿ ಮಾಡಿ ನೆಲಕ್ಕೆ ಬಿಳಿಸಿರುತ್ತಾನೆ ನನ್ನನ್ನು ಕರ್ತವ್ಯ ನಿರ್ವಹಿಸಲು ಅಡೆ ತಡೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಹೊಡೆ ಬಡೆ ಮಾಡಿದವರ ಮೇಲೆ ಸೂಕ್ತ ಕಾನೂನಿನ ಕ್ರಮ ಜರುಗಿಸಬೇಕು ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 21/2012 ಕಲಂ 341.323.324.353.504 ಐಪಿಸಿ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ಆಳಂದ ಪೊಲೀಸ ಠಾಣೆ:ಶ್ರೀ ಸುರೇಶ ತಂದೆ ಕರಬಸಪ್ಪ ಸೇರಿ ಸಾಃ ಖಜೂರಿ ಗ್ರಾಮ ರವರು ನನ್ನ ಹೆಸರಿಗೆ ನಮ್ಮೂರಿನ ಸಿಮಾಂತರದಲ್ಲಿ 13 ಎಕರೆ ಜಮೀನು ಹೊಲ ಇದ್ದು ಅಳಂದ ದಿಂದ ಉಮರ್ಗಾಕ್ಕೆ ಹೋಗಿ ಬರುವ ರೋಡಿಗೆ ಹತ್ತಿ ಕೊಂಡು ಇರುತ್ತದೆ. ನನ್ನಂತೆ ನಮ್ಮೂರಿನ ದಯಾನಂದ ತಂದೆ ವಿಠೋಬಾ ಬಂಡೆ ಮತ್ತು ಮಹೆತಾಬ ತಂದೆ ಮಹ್ಮದಅಲಿ ನಿಂಬಾಳಕಾರ ಇವರು ಸಹ ನನ್ನಂತೆ ಅವರ ಜಮೀನು ಸಾಗುವಳಿ ಮಾಡಲು ತಲಾ ಎರಡೆರಡು ಎತ್ತುಗಳು ಇಟ್ಟುಕೊಂಡು ಸಾಗುವಳಿ ಮಾಡಿಕೊಂಡಿರುತ್ತಾರೆ ನಾವು ದಿನಾಲು ಪ್ರತಿ ದಿನ ಮುಂಜಾನೆಯಿಂದ ಸಾಯಂಕಾಲದವರೆಗೆ ಹೊಲದಲ್ಲಿದ್ದು ಒಕ್ಕುಲುತನ ಕೆಲಸ ಮಾಡಿ ಸಾಯಂಕಾಲ ಹೊಲದಲ್ಲಿ ಎತ್ತುಗಳು ಕಟ್ಟಿ ಹಾಕಿ ಅವುಗಳಿಗೆ ಮೇವು ಹಾಕಿ ಮನೆಗೆ ಹೋಗಿ ಬರುವುದು ಮಾಡುತ್ತೇವೆ. ದಿನಾಂಕ 20/02/2012 ರಂದು ಮುಂಜಾನೆ ಹೊಲದಲಿ ನೇಗಿಲು ಹೊಡೆಯುವ ಕೆಲಸ ಬಹಳಷ್ಟು ಇರುವುದರಿಂದ ದಯಾನಂದ ಬಂಡೆ ಇವರ 2 ಎತ್ತುಗಳು ಮತ್ತು ಮಹೆತಾಬ ನಿಂಬಾಳಕರ ಇವರ 2 ಎತ್ತುಗಳು ಮತ್ತು ಪರಿಚಯದ ತೆಲಾಕುಣಿ ಗ್ರಾಮದ ಎಕನಾಥ ತಂದೆ ಲಕ್ಷ್ಮಣ ಎಟೆ ಇವರ 2 ಎತ್ತುಗಳು ನಮ್ಮ ಹೊಲಕ್ಕೆ ತರೆಸಿಕೊಂಡು ನಾಲ್ಕು ನೇಗಿಲುಗಳು ಹೂಡಿ ಹೊಲದಲ್ಲಯೇ ಕಟ್ಟಿಹಾಕಿ ಊಟಕ್ಕೆ ಮನೆಗೆ ಹೋಗಿದ್ದು ರಾತ್ರಿ ಮನೆಯಲ್ಲಿ ಇದ್ದು ಮುಂಜಾನೆ ದಿನಾಂಕ 21/02/2012 ರಂದು ಬೆಳಗಿನ ಜಾವ 5-00 ಗಂಟೆ ಸುಮಾರಿಗೆ ನಾನು ಹೊಲಕ್ಕೆ ಬಂದು ನೊಡಲಾಗಿ ಮಹೆತಾಬ ನಿಂಬಾಳಕಾರ ಇವರ ಒಂದು ಎತ್ತು ಹೊರತು ಪಡಿಸಿ ಉಳಿದ 7 ಎತ್ತುಗಳು ಹೊಲದಲ್ಲಿ ಇರಲಿಲ್ಲ ಅವಗಳಿಗೆ ಕಟ್ಟಿ ಹಾಕಿದ ಹಗ್ಗ ನೋಡಲಾಗಿ ಅದು ಕೂಯಿದಾ ಹಾಗೆ ಕಂಡು ಬಂದಿತ್ತು ಇದರಿಂದ ನನಗೆ ನಮ್ಮ ಎಲ್ಲರ ಎಲ್ಲಾ ಎತ್ತುಗಳು ಯಾರೂ ಕಳ್ಳರು ಕಳುವು ಮಾಡಿಕೊಂಡು ಹೋಗಿ ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 42/2012 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಸುಲೇಪೇಟ ಠಾಣೆ: ಶ್ರೀ ಪಾಂಡು ತಂದೆ ವಿಠ್ಠಲರಾವ ಸಿಂಧೆ ಸಾಃ ಜಟ್ಟೂರ ಹಾ ವ ಹೈದ್ರಾಬಾದ ರವರು ನಾನು ಮತ್ತು ಜಟ್ಟೂರ ಗ್ರಾಮದ ಸಂತೋಷ ತಂದೆ ಅರ್ಜುನಪ್ಪ ಸಿಂಧೆ ಕೂಡಿಕೊಂಡು ಹಿರೋ ಹೋಂಡಾ ಪ್ಯಾಶನ್ ಮೋಟಾರ್ ಸೈಕಲ್ ನಂ. ಎಪಿ-28 ಡಿ.ಜೆ-9660 ನೇದ್ದರ ಮೇಲೆ ಕೆಲಸದ ನಿಮಿತ್ಯ ಉಮರ್ಗಾಕ್ಕೆ ಹೋಗಿ ಚಿಂಚೋಳಿ ಸುಲೇಪೇಟ ಮಾರ್ಗವಾಗಿ ವಾಪಾಸ ಜಟ್ಟೂರ ಗ್ರಾಮಕ್ಕೆ ಹೋಗುತ್ತಿರುವಾಗ ರಾತ್ರಿ 8:00 ಗಂಟೆಯ ಸುಮಾರಿಗೆ ನಿಡಗುಂದಾ ಗ್ರಾಮದ ಸೀಮಾಂತರದಲ್ಲಿರುವ ರೋಡಿನ ಮೇಲೆ ಎದುರಿನಿಂದ ಒಬ್ಬ ಆಟೋ ಚಾಲಕನು ತನ್ನ ಆಟೋ ವನ್ನು ಅತೀವೇಗ ಮತ್ತು ನಿಸ್ಕಾಳಜಿತನದಿಂದ ಓಡಿಸುತ್ತಾ ಬಂದು ಮೋಟಾರ್ ಸೈಕಲಕ್ಕೆ ಡಿಕ್ಕಿ ಹೊಡೆದಿದ್ದರಿಂದ ಹಿಂದೆ ಕುಳಿತಿದ್ದ ನಾನು ಸಿಡಿದು ಕೆಳಗೆ ಬಿದ್ದು ಎಡಗಾಲು ಕಿರು ಬೆರಳಿಗೆ, ಎಡ ಮೊಳಕಾಲಿಗೆ ಮತ್ತು ತಲೆಯ ಮುಂಭಾಗಕ್ಕೆ ರಕ್ತ ಗಾಯವಾಗಿ ಎಡ ಮೊಳಕೈಗೆ ತೆರೆಚಿದ ಮತ್ತು ಗುಪ್ತಘಾಯವಾಗಿದ್ದು ಮೋಟಾರ ಸೈಕಲ ಚಲಾಯಿಸುತ್ತಿದ್ದ ಸಂತೋಷನ ತಲೆಯ ಎಡಭಾಗದ ಮುಂಭಾಗಕ್ಕೆ ಭಾರಿ ರಕ್ತಘಾಯವಾಗಿ ಮತ್ತು ಇತರೆ ಕಡೆಯಲ್ಲಿ ರಕ್ತಘಾಯ ಮತ್ತು ಗುಪ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಅಪಘಾತದ ಪಡಿಸಿದ ಆಟೋ ಚಾಲಕನು ತನ್ನ ಆಟೋ ನಿಲ್ಲಿಸದೆ ಓಡಿಸಿಕೊಂಡು ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 19/2012 ಕಲಂ. 279, 337, 304 [ಎ] ಸಂ. 187 ಐ.ಎಮ್.ವಿ ಆಕ್ಟ್ ಪ್ರಕಾರ ಪ್ರಕರಣದ ದಾಖಲು ಮಾಡಿಕೊಂಡಿರುತ್ತಾರೆ.

No comments:
Post a Comment