ಅಪಘಾತ ಪ್ರಕರಣ:
ಸುಲೇಪೇಟ ಠಾಣೆ: ಸುಭದ್ರಮ್ಮಾ ತಂದೆ ರಾಜಪ್ಪ ತಳವಾರ ಸಾಃ ತೇಗಲತಿಪ್ಪಿ ರವರು ನಾನು ಮತ್ತು ತನ್ನ ತಾಯಿ ಶಂಕ್ರೇಮ್ಮಾ ಇವಳೊಂದಿಗೆ ದಿನಾಂಕಃ 15/02/2012 ರಂದು ಮುಂಜಾನೆ ಸುಲೇಪೇಟ ಗ್ರಾಮಕ್ಕೆ ಬಂದು ಕಿರಾಣಿ ಸಾಮಾನುಗಳನ್ನು ತೆಗೆದುಕೊಂಡು ಮರಳಿ ತೇಗಲತಿಪ್ಪಿ ಗ್ರಾಮಕ್ಕೆ ಹೋಗುವ ಕುರಿತು ಸುಲೇಪೇಟ ಬಸ್ ನಿಲ್ದಾಣದ ಹತ್ತಿರ ಬಂದಾಗ ಮದ್ಯಾಹ್ನ ತೇಗಲತಿಪ್ಪಿ ಗ್ರಾಮದ ಶರಣಪ್ಪ ಹಳ್ಳಿ ಇತನು ಟಂಟಂ ನಂ. ಕೆಎ-32 ಎ-812 ನೇದ್ದನ್ನು ತೆಗೆದುಕೊಂಡು ಬಂದು ತೇಗಲತಿಪ್ಪಿ ಗ್ರಾಮಕ್ಕೆ ಹೋಗುತ್ತದೆ ಕುಳಿತುಕೊಳ್ಳಿರಿ ಅಂತಾ ಹೇಳಿದ್ದಾಗ ನಾನು ನನ್ನ ತಾಯಿ ಶಂಕ್ರೇಮ್ಮಾ ಮತ್ತು ನಮ್ಮ ಗ್ರಾಮದ ಅಂಬ್ರೇಶ ಪೆಂಚನಪಳ್ಳಿ ಕೂಡಿ ಟಂ ಟಂ ಟ್ರೈಲಿಯಲ್ಲಿ ಹತ್ತಿ ಕುಳಿತ್ತಾಗ ಟಂ ಟಂ ಚಾಲಕನು ಟಂ ಟಂ ಚಲಾಯಿಸಿಕೊಂಡು ಸುಲೇಪೇಟ ಗ್ರಾಮದ ಮೇಘರಾಜ ರಾಠೋಡ್ ಇವರ ಕಟ್ಟಿಗೆ ಅಡ್ಡದ ಹತ್ತಿರ ಹೋಗುತ್ತಿದ್ದಾಗ ಎದುರಿನಿಂದ ಟಂಟಂ ನಂ. ಕೆಎ-32 ಎ-4409 ನೇದ್ದರ ಚಾಲಕ ಜಾಫರ ಸಾಃ ಭಂಟ್ನಳ್ಳಿ ಇತನು ತನ್ನ ಟಂಟಂ ಅತೀವೇಗ ಮತ್ತು ನಿಸ್ಕಾಳಜಿತನದಿಂದ ತಂದು ನಾವು ಕುಳಿತ್ತಿದ್ದ ಟಂ ಟಂ ಗೆ ಡಿಕ್ಕಿ ಹೊಡೆದು ಟಂ ಟಂ ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದು ಟಂ ಟಂ. ಟ್ರೈಲಿಯಲ್ಲಿ ಕುಳಿತ ನನ್ನ ಎಡ ರಟ್ಟಿಗೆ ಮತ್ತು ಅಂಬ್ರೇಶನ ಎಡ ಮುಂಗೈ ಹಾಗೂ ಎಡಗೈ ರಟ್ಟಿಗೆ ಗುಪ್ತಗಾಯವಾಗಿರುತ್ತದೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 16/2012 ಕಲಂ. 279, 337 ಐಪಿಸಿ & 187 ಐ.ಎಮ್.ವಿ ಆಕ್ಟ್ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡಿರುತ್ತಾರೆ.
ವರದಕ್ಷಿಣೆ ಪ್ರಕರಣ:
ಮಹಿಳಾ ಪೋಲಿಸ ಠಾಣೆ:ಶ್ರೀಮತಿ. ಶಿವಾನಿ @ ಶಿವಮ್ಮಾ ಗಂಡ ಸಾಯಿ ಪ್ರಸಾದ ವ: 31 ವರ್ಷ ಉ: ಕೈಗಾರಿಕ ವಿಸ್ತಾರಣಾ ಅಧಿಕಾರಿ ಅಫಜಲಪೂರ ರವರು ನನ್ನ ಮದುವೆಯು ದಿನಾಂಕ; 13.05.2009 ರಂದು ಸಚೀನ ತಂದೆ ಸುಭಾಶ ಸಾ|| ವಿದ್ಯಾ ನಗರ ಇತನೊಂದಿಗೆ ನೇರವೆರಿದ್ದು ಮದುವೆಯ ಸಮಯದಲ್ಲಿ 2 ಲಕ್ಷ ರೂಪಾಯಿ ನಗದು ಹಣ, 11 ತೊಲೆ ಹಾಗು ಇನ್ನಿತರ ಸಾಮಾನು ಕೊಟ್ಟಿದ್ದು, ಮದುವೆ ನಂತರ ಹೊಡೆ ಬಡೆ ಮಾಡೋದು, ನನ್ನ ಸಂಬಳ ತೆಗೆದುಕೊಳ್ಳುವುದು, ಇನ್ನೂ ಹಣ ತೆಗೆದುಕೊಂಡು ಬಾ ಅಂತಾ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿ ತವರು ಮನೆಗೆ ಕಳುಹಿಸಿದ್ದರು. ನನ್ನ ಗಂಡ ಕುಟುಂಬ ನ್ಯಾಯಾಲಯದಲ್ಲಿ ವಿವಾಹ ವಿಚ್ಛೇಧನೆ ಹಾಕಿದ್ದು, ನ್ಯಾಯಾಲಯ ನಿರಾಕರಿಸಿರುತ್ತದೆ. ಅದರ ಸಂ. ಎಮ್.ಸಿ.ನಂ.171/2010 ಇದ್ದು, ದಿನಾಂಕ: 23.08.11 ರಂಧು ತೀರ್ಪು ನೀಡಿ ವಜಾ ಮಾಡಿರುತ್ತಾರೆ. ದಿನಾಂಕ: 14.02.2012 ರಂದು ಮುಂಜಾನೆ 8-30 ಗಂಟೆಗೆ ಕೇಂದ್ರ ಬಸ್ ನಿಲ್ದಾಣದಲ್ಲಿ ಅಫಜಲಪೂರ ಬಸ್ಸಿಗೆ ಕಾಯುತ್ತಿದ್ದಾಗ ನನ್ನ ಗಂಡ , ಮಾವ ಅತ್ತೆ, ನಾದಿನಿ ಇವರೆಲ್ಲರೂ ಸೇರಿ ಬಸ್ ನಿಲ್ದಾಣಕ್ಕೆ ಬಂದು ನನ್ನನ್ನು ಹೊಡೆ-ಬಡೆ ಮಾಡಿ ಅವಾಚ್ಯವಾಗಿ ಬೈದು ವಿವಾಹ ವಿಚ್ಛೇಧನೆ ಬೇಡವಾಗಿದ್ದರೆ, 10 ಲಕ್ಷ ರೂಪಾಯಿ ವರದಕ್ಷೀಣೆ ತೆಗೆದುಕೊಂಡು ಬಾ ಅಂತಾ ಬೇದರಿಕೆ ಬೆರಿಕೆ ಹಾಕಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 13/12 ಕಲಂ. 498(ಎ), 504,506, ಸಂ. 34 ಐ.ಪಿ.ಸಿ ಮತ್ತು 3 & 4 ಡಿ.ಪಿ.ಕಾಯ್ದೆ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಜೂಜಾಟ ಪ್ರಕರಣ:
ನಿಂಬರ್ಗಾ ಪೊಲೀಸ ಠಾಣ: ದಿನಾಂಕ 15/02/2012 ರಂದು 1130 ಗಂಟೆಯ ಸುಮಾರಿಗೆ ನಿಂಬರ್ಗಾ ಗ್ರಾಮದ ಅಂಬೇಡ್ಕರ ವೃತ್ತದ ಬಳಿ ಇರುವ ಮರೆಮ್ಮಾ ದೇವಿಯ ದೇವಸ್ಥಾನದ ಕಟ್ಟೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಶರಣಬಸಪ್ಪ ತಂದೆ ದುರ್ಗಪ್ಪ ಚಿಂಚನಸೂರ ವ|| 28 ವರ್ಷ, ಜಾ|| ಹರಿಜನ, ಉ|| ಕೂಲಿ ಕೆಲಸ ಸಾ|| ನಿಂಬರ್ಗಾ ತಾ|| ಆಳಂದ ಇವನು ಸಾರ್ವಜನಿಕರಿಗೆ ಮೋಸ ಮಾಡುವ ಉದ್ದೇಶದಿಂದ ಓಪನ ನಂಬರ ಬಂದರೆ 1 ರೂಪಾಯಿಗೆ 8 ರೂಪಾಯಿ ಗೆಲ್ಲಿರಿ ಜಾಯಿಂಟ ನಂಬರ ಬಂದರೆ 1 ರೂಪಾಯಿಗೆ 80ರೂಪಾಯಿ ಗೆಲ್ಲಿರಿ ಅಂತ ಜನರಿಗೆ ಹೇಳುತ್ತಾ ಹಣ ಪಡೆದು ಮಟಕಾ ಚೀಟಿ ಬರೆದುಕೊಟ್ಟು ಜನರಿಗೆ ಮೋಸ ಮಾಡುತ್ತಿರುವಾಗ ಶ್ರೀ ಎಸ್.ಎಸ್ ದೊಡಮನಿ ಪಿ.ಎಸ್.ಐ ರವರು ಹಾಗೂ ಸಿಬ್ಬಂದಿ ಶಿವರಾಯ, ಮಲ್ಲಿಕಾರ್ಜುನ, ಕಲ್ಲಪ್ಪ ರವವರೆಲ್ಲರೂ ಸೇರಿ ಮಟಕಾ ಜೂಜಾಟ ನಡೆಸುತ್ತಿದ್ದವನ ಮೇಲೆ ದಾಳಿ ಮಾಡಿ ಅವನನ್ನು ವಶಕ್ಕೆ ತೆಗೆದುಕೊಂಡು ಜೂಜಾಟಕ್ಕೆ ಉಪಯೋಗಿಸಿದ ನಗದು ಹಣ 185/- ರೂ, ಪೆನ್ನು ಹಾಗೂ ಮಟಕಾ ಚೀಟಿ ಜಪ್ತಿ ಮಾಡಿಕೊಂಡಿದ್ದರಿಂದ ಠಾಣೆ ಗುನ್ನೆ ನಂ. 12/2012 ಕಲಂ 78(3) ಕೆ.ಪಿ ಆಕ್ಟ ಮತ್ತು 420 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
No comments:
Post a Comment