ದಿನಂಪ್ರತಿ ಅಪರಾಧಗಳ ಮಾಹಿತಿ : 27-03-2012
ಹುಮನಾಬಾದ ಸಂಚಾರ ಪೊಲೀಸ್ ಠಾಣೆ ಗುನ್ನೆ ನಂ 58//2012 ಕಲಂ 279, 304(ಎ) ಐಪಿಸಿ ಜೋತೆ 187 ಐ.ಎಮ್.ವಿ ಅಕ್ಟ್ :-
ದಿನಾಂಕ 26/03/2012 ರಂದು 0630 ಗಂಟೆಗೆ ಫಿರ್ಯಾದಿ ಇಂದುಮತಿ ಗಂಡ ರೇವಣಸಿದ್ದಪ್ಪಾ ಮದರಗಾಂವ, ವಯ: 55, ಜಾತಿ: ಲಿಂಗಾಯತ, ಉ: ಮನೆ ಕೆಲಸ, ಸಾ ಜನತಾನಗರ, ತಾ ಹುಮನಾಬಾದ ಇವರ ಗಂಡ ಮೃತ ರೇವಣಸಿದ್ದಪ್ಪಾ ತಂದೆ ಬಸಪ್ಪಾ ಮದರಗಾಂವ, ವಯ: 61, ಜಾತಿ: ಲಿಂಗಾಯತ, ಉ: ಕೂಲಿ ಕೆಲಸ, ಸಾ/ ಜನತಾನಗರ, ತಾ ಹುಮನಾಬಾದ ಇವರು ಸೈಕಲ್ ತೆಗೆದುಕೊಂಡು ಹುಡುಗಿಗೆ ಹೋಗುತ್ತಿದ್ದಾಗ ರಾಹೆ 9 ಮೇಲೆ ಜನತಾನಗರದ ಹತ್ತಿರ ಅಪರಿಚಿತ ಕಾರ ಚಾಲಕನು ತನ್ನ ಕಾರನ್ನು ಅತಿ ಜೋರಾಗಿ ಮತ್ತು ಬೇಜವಾಬ್ದಾರಿಯಿಂದ ನಡೆಸಿಕೊಂಡು ಫಿರ್ಯಾಧಿ ಗಂಡನಿಗೆ ಡಿಕ್ಕಿ ಮಾಡಿ ಅಪಘಾತ ಪಡಿಸಿ ಕಾರ ಸಮೇತ ಓಡಿ ಹೋಗಿರುತ್ತಾನೆ. ಸದರಿ ಅಪಘಾತದಿಂದ ಫಿರ್ಯಾದಿ ಗಂಡನಿಗೆ ಭಾರಿ ರಕ್ತ & ಗುಪ್ತಗಾಯಗಳಾಗಿ ಸ್ಥಳದಲ್ಲೆ ಮೃತಪಟ್ಟಿರುತ್ತಾನೆ ಎಂದು ಕೊಟ್ಟ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ
ಬೀದರ ಗ್ರಾಮೀಣ ಪೊಲೀಸ ಠಾಣೆ ಗುನ್ನೆ ನಂ 27/2012 ಕಲಂ 143, 147, 341, 323, 504, 506 ಜೊತೆ 149 ಐಪಿಸಿ :-
ದಿನಾಂಕ 26/03/12 ರಂದ 1300 ಗಂಟೆಗೆ ಫಿಯರ್ಾದಿ ರಾಕೇಶ ತಂದೆ ನರಸಣ್ಣಾ ವಯ 23 ವರ್ಷ ಉ ಆಟೋ ಚಾಲಕ ಸಾ: ಎಂ. ಮಜರ್ಾಪೂರ ಇವನು ಹಾಗೂ ಇವನ ತಮ್ಮ ಸತೀಷ ಇಬ್ಬರು ತಮ್ಮ ಟಾಟಾ ಮ್ಯಾಜಿಕ್ ಆಟೋ ನಂ. ಕೆಎ-38/5349 ನೇದ್ದನ್ನು ಪ್ರಯಾಣಿಕರನ್ನು ಕೂಡಿಸಿಕೊಳ್ಳುತ್ತಿದ್ದಾಗ ನಯಾ ಕಮಾನ ಹತ್ತಿರ ಆಟೋ ನಂ. ಕೆಎ-38/4576 ನೇದ್ದರ ಚಾಲಕ ಸಮದ ಹಾಗೂ ಇನ್ನು 5 ಜನ ಆಟೋ ಚಾಲಕರು ಎಲ್ಲರು ಸಾ: ಕಮಠಾಣಾ ಇವರು ಪ್ರಯಾಣಿಕರ ವಿಷಯದಲ್ಲಿ ತಕರಾರು ತೆಗೆದು ಅಕ್ರಮ ಕೂಟ ರಚಿಸಿಕೊಂಡು ಬಂದು ಫಿಯರ್ಾದಿಗೆ ಮತ್ತು ತಮ್ಮನಿಗೆ ಅವಾಚವಾಗಿ ಬೈದು ಕೈಯಿಂದ ಹಾಗೂ ಕಾಲಿನಿಂದ ಹೊಡೆದು ಗುಪ್ತ ಗಾಯ ಪಡೆಸಿರುತ್ತಾರೆ. ಎಂದು ಕೊಟ್ಟ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಧನ್ನೂರ ಪೊಲೀಸ್ ಠಾಣೆ ಗುನ್ನೆ ನಂ 57/2012 ಕಲಂ 341, 324, 504, 506 ಐಪಿಸಿ :-
ದಿನಾಂಕ : 26/03/2012 ರಂದು 0930 ಗಂಟೆಗೆ ಫಿಯರ್ಾದಿ ಶ್ರೀಕಾಂತ ತಂದೆ ವಿಜಯಕುಮಾರ ಗಾದಗೆ ಸಾ: ಧನ್ನುರ ಇವನು ಹೊಲ ಹೊಡೆಯುತ್ತಿರುವಾಗ ಆರೋಪಿ ಚಂದ್ರಕಾಂತ ತಂದೆ ಶರಣಪ್ಪಾ ಗಾದಗೆ ಸಾ: ಧನ್ನೂರ ಇವನು ಅಕ್ರವಾಗಿ ಫಿಯರ್ಾದಿಗೆ ಹೊಲದ ವಿಚಯದಲ್ಲಿ ಅವಾಚ್ಚ ಶಬ್ದದಿಂದ ಬೈಯ್ದು ಕೈಯಲ್ಲಿ ಇದ್ದ ಬಡಿಗೆಯಿಂದ ಹೊಡೆದು ರಕ್ತಗಾಯ ಪಡೆಸಿ ಜೀವದ ಬೆದರಿಕೆ ಹಾಕಿರುತ್ತಾನೆ ಎಂದು ಕೊಟ್ಟ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಧನ್ನೂರ ಪೊಲೀಸ್ ಠಾಣೆ ಗುನ್ನೆ ನಂ 58/2012 ಕಲಂ 341, 324, 504, 506 ಐಪಿಸಿ :-
ದಿನಾಂಕ : 26/03/2012 ರಂದು 1100 ಗಂಟೆಗೆ ಫಿಯರ್ಾದಿ ಚಂದ್ರಕಾಂತ ತಂದೆ ಶರಣಪ್ಪಾ ಗಾದಗೆ ಸಾ: ಧನ್ನುರ ಇವನ ಹೊಲದಲ್ಲಿ ಆರೋಪಿತರಾದ 1) ಶ್ರೀಕಾಂತ ತಂದೆ ವಿಜಯಕುಮಾರ ಗಾದಗೆ 2] ಶಿವಕುಮಾರ ತಂಧೆ ಶರಣಪ್ಪಾ ಗಾದಗೆ ಇಬ್ಬರು ಸಾ: ಧನ್ನೂರ ತಾ: ಭಾಲ್ಕಿ ಇವರು ಫಿಯರ್ಾದಿ ಹೊಲದಲ್ಲಿ ಅಕ್ರಮವಾಗಿ ಮಾರ್ಕ ಮಾಡಿ ಹೊಲ ಹೊಡೆಯುತ್ತಿರುವದನ್ನು ಕಂಡು ಸದರಿ ವಿಷಯದ ಬಗ್ಗೆ ವಿಚಾರಿಸಿದಾಗ ಆರೋಪಿತರು ಫಿಯರ್ಾದಿಗೆ ಹೊಡೆದು ರಕ್ತಗಾಯ ಪಡೆಸಿರುತ್ತಾನೆ. ಎಂದು ಕೊಟ್ಟ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.
ಹುಮನಾಬಾದ ಪೊಲೀಸ್ ಠಾಣೆ ಗುನ್ನೆ ನಂ 39/2012 ಕಲಂ 457, 380 ಐಪಿಸಿ :-
ದಿನಾಂಕ 26/03/2012 ರಂದು 1130 ಗಂಟೆಗೆ ಫಿಯರ್ಾಧಿ ಶಾರದಾಬಾಯಿ ಗಂಡ ಶಿವಾನಂದ ಹೊನ್ನಳೆ ವಯ 35 ವರ್ಷ ಜಾತಿ ಲಿಂಗಾಯತ ಉ: ಆಶಾ ಕಾರ್ಯಕತರ್ೆ ಸಾಃ ಹುಣಸಗೇರಾ ಇವರು ರಾತ್ರಿ ಅತ್ತೆಯ ಮನೆಯಲ್ಲಿ ಮಲಗಿದ್ದಾಗ ಮನೆಯ ಬಾಗಿಲು ಮುರಿದು ಯಾರೋ ಅಪರಿಚಿತ ಕಳ್ಳರು ಸಾಮಾನುಗಳನ್ನು ಚಲ್ಲಾಪಿಲ್ಲಿಯಾಗಿ ಬೀಸಾಡಿ ಸಂದೂಕಿನಲ್ಲಿ ಇಟ್ಟಿದ್ದ ಬಂಗಾರದ 2 ಪಾಟ್ಲಿ 3 ವರೆ ತೋಲೆ ಅ.ಕಿ. 87,500/- ರೂ. ಒಂದು ಸೂಟಕೇಸನಲ್ಲಿ ಇಟ್ಟಿದ್ದ ಬಂಗಾರದ 6 ಗ್ರಾಂ. ಲ್ಯಾಕೇಟ್ ಅ.ಕಿ. 15,000/- ರೂ. ಹಾಗು ಬೆಳ್ಳಿಯ ಎರಡು ಚೌಕ ಒಟ್ಟು 3 ತೋಲಿ ಅ.ಕಿ. 1500/- ರೂ. ಹಾಗು ಒಂದು ಪ್ಯಾನೋಸೋನೀಕ ಡಿಜಿಟಲ್ ಕ್ಯಾಮರಾ ಅ.ಕಿ. ,5000/- ರೂ ಹಾಗು ಮೂರು ಕೈ ಗಡಿಯಾರ ಸಿಟಿಜನ್ ಒಂದು, ಸೋಯಿಸ್ಟಾರ್ ಎರಡು ಅ.ಕಿ. 5000/-ರೂ. ಹೀಗೆ ಒಟ್ಟು 1,14,000/- ರೂ. ಬೆಲೆ ಬಾಳುವ ವಸ್ತುಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೊಗಿರುತ್ತಾರೆ. ಎಂದು ಕೊಟ್ಟ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.
ಹುಲಸೂರ ಪೊಲೀಸ್ ಠಾಣೆ ಗುನ್ನೆ ನಂ 82/2012 ಕಲಂ 279, 337,338 ಐಪಿಸಿ ಜೊತೆ 187 ಐ.ಎಮ್.ವಿ ಆಕ್ಟ್ :-
ದಿನಾಂಕ 26/03/2012 ರಂದು 1900 ಗಂಟೆಗೆ ಫಿಯರ್ಾದಿ ಗಾಯಾಳು ಏಕಾನಾಥ ತಂದೆ ಕಲ್ಲಪ್ಪಾ ಸೂರ್ಯವಂಶಿ ವಯ: 60 ವರ್ಷ ಜಾ: ಎಸ್.ಸಿ ಮಾದಿಗಾ ಉ: ಕೂಲಿ ಕೆಲಸ ಸಾ; ಉಮಾಪೂರ ಇವನು ಹಾಗು ಇವನ ಹೆಂಡತಿ ಕೂಡಿಕೊಂಡು ಬಂದು ಜೀಪ ನಂ: ಕೆ ಎ 39/ಎಮ್-236 ನೇದರಲ್ಲಿ ಕೂಳಿತುಕೊಂಡು ಕೋಟಮಾಳ ಕಡೆಗೆ ಹೋಗುತ್ತಿರುವಾಗ ಸದರಿ ಜೀಪ ಚಾಲಕ ತನ್ನ ಜೀಪ ಅತೀ ವೇಗ ಹಾಗೂ ನಿಷ್ಕಾಳಜಿನದಿಂದ ಚಲಾಯಿಸಿಕೊಂಡು ಜೀಪ ಒಮ್ಮೆಲೆ ಬ್ರೇಕ್ ಹಾಕಿದರಿಂದ ಗುತ್ತಿ ಗ್ರಾಮದ ಹತ್ತಿರ ಜೀಪ ಪಲ್ಟಿ ಮಾಡಿ ಅದರ ಚಾಲಕ ಓಡಿ ಹೋಗಿರುತ್ತಾನೆ. ಸದರಿ ಘಟನೆಯಿಂದ ಫಿಯರ್ಾದಿಯ ಎಡಗಡೆ ತಲೆಗೆ ಮುಖಕ್ಕೆ ಬಾಯಿ ಮೇಲೆ ಬಲಗೈ ಮುಂಗೈಗೆ ಹತ್ತಿ ರಕ್ತಗಾಯ ಹಾಗೂ ಹೆಂಡತಿ ಸುಸೀಲಬಾಯಿ ಇವಳಿಗೆ ಬಲಭುಜಕ್ಕೆ ಹತ್ತಿ ಗುಪ್ತಗಾಯವಾಗಿದ್ದು ಇನ್ನಿತರರಿಗೆ ಸಾದಾ ಹಾಗೂ ಭಾರಿ ರಕ್ತಗಾಯವಾಗಿರುತ್ತದೆ. ಎಂದು ಕೊಟ್ಟ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗದೆ.
ಹಳ್ಳಿಖೇಡ (ಬಿ) ಪೊಲೀಸ್ ಠಾಣೆ ಗುನ್ನೆ ನಂ 51/2012 ಕಲಂ 323, 324, 504 ಜೊತೆ 34 ಐಪಿಸಿ :-
ದಿನಾಂಕ 26-03-2012 ರಂದು ಮದ್ಯಾಹ್ನ 12 ಗಂಟೆಗೆ ಫಿರ್ಯಾದಿ ದೇವಿದಾಸ್ ತಂದೆ ನರಸಪ್ಪಾ ರಾಜಗೀರಾ ವಯ : 60 ವರ್ಷ, ಸಾ: ಹಳ್ಳಿಖೇಡ್(ಬಿ) ಇವನಿಗೆ ಆರೋಪಿ ಹೇಮಾ ಗಂಡ ಸುನಿಲ್ ಹಾಗೂ ಇನ್ನೂ 3 ಜನರು ಎಲ್ಲರೂ ಸಾ : ಹಳ್ಳಿಖೇಡ್(ಬಿ) ಇವರು ಮನೆಯ ವಿಷಯದಲ್ಲಿ ಫಿಯರ್ಾದಿಗೆ ಅವಾಚ್ಯವಾಗಿ ಬೈದು ಬಡಿಗೆಯಿಂದ, ಕೈಯಿಂದ ಹೊಡೆ¢zÀÄÝ, ಮತ್ತು ಆತನ ಮಗಳಾದ ಸ್ವಪ್ನ ಇವಳಿಗೆ ರಕ್ತಗಾಯ, ಗುಪ್ತಗಾಯ ಪಡಿಸಿರುತ್ತಾರೆ ಎಂದು ಕೊಟ್ಟ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.
ಔರಾದ ಪೊಲೀಸ್ ಠಾಣೆ ಗುನ್ನೆ ನಂ 24/2012 ಕಲಂ 279, 338 ಐಪಿಸಿ ಜೋತೆ 197 ಐ.ಎಮ್.ವಿ. ಕಾಯ್ದೆ :-
ದಿನಾಂಕ 26/03/2012 ರಂದು 1300 ಗಂಟೆ ಫಿರ್ಯಾದಿ ಸಲೀಂ ತಂದೆ ಬಾಬು ಮಿಯ್ಯಾ ಮನಿಯಾರ ಸಾ: ಔರಾದ ಇವರ ಮಗನಾದ ಅಸಲ್ಲಾಂ 3 ವರ್ಷ ಇತನು ಶಾಲೆಯಿಂದ ಮನೆಗೆ ಬರುವಾಗ ರಸ್ತೆ ದಾಟುವ ವೇಳೆಗೆ ಉದಗಿರ ಕಡೆಯಿಂದ ಒಂದು ಎಂ.ಎಸ್.ಆರ್.ಟಿ.ಸಿ ಬಸ್ಸ ನಂ ಎಮ್.ಎಚ್-20/ಡಿ-6855 ನೇದರ ಚಾಲಕ ತನ್ನ ಬಸ್ಸನ್ನು ಅತೀ ವೇಗ ಹಾಗೂ ನಿಷ್ಕಾಳಜಿತದಿ ಚಲಾಯಿಸಿಕೊಂಡು ಬಂದು ಅಸ್ಲಾಂ ಇತನಿಗೆ ಅಪಘಾತ ಪಡಿಸಿದರಿಂದ ಬಲಗಾಲ ಪಾದದ ಮೇಲೆ ಮುಂದಿನ ಗಾಲಿ ಹಾಯಿಸಿದರಿಂದ ಪಾದಕ್ಕೆ ಭಾರಿ ರಕ್ತಗಾಯ ಆಗಿದ್ದು .ಅಪಘಾತ ಪಡಿಸಿದ ಬಸ್ಸ ಚಾಲಕನು ತನ್ನ ಬಸ್ಸ ನಿಲ್ಲಿಸದೆ ಒಡಿಹೋಗಿರುತ್ತಾನೆ. ಎಂದು ಕೊಟ್ಟ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.
No comments:
Post a Comment