ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 30-03-2012
ಚಿಟಗುಪ್ಪಾ ಪೊಲೀಸ್ ಠಾಣೆ ಗುನ್ನೆ ನಂ. 52/12 ಕಲಂ 454, 380 ಐಪಿಸಿ :-
ದಿನಾಂಕ 29/03/2012 ರಂದು 1330 ಗಂಟೆಗೆ ಫಿರ್ಯಾದಿ ಡಾ: ಶಶಿಕಾಂತ ಭೂರೆ ರವರು ಪೊಲೀಸ್ ಠಾಣೆಗೆ ಹಾಜರಾಗಿ ತಮ್ಮ ಲಿಖೀತ ಫಿರ್ಯಾದಿ ಸಲ್ಲಿಸಿದ ಸಾರಂಶವೆನೆಂದರೆ, ಫಿರ್ಯಾದಿರವರು ಸಂಗೀತಾ ಶಾಪ ಬೆಂಗಳೂರದಲ್ಲಿ ದಿನಾಂಕ 05/03/2012 ರಂದು ಹೆಚ್.ಟಿ.ಸಿ. ಕಂಪನಿಯ ಎಸ್. 710 ಇ ಮಾಡಲ ಮೊಬೈಲ್ ಫೋನ ಐ.ಎಮ್.ಇ ನಂ 358000046543870 ನೆದ್ದನ್ನು 24,950/- ರೂಪಾಯಿಗೆ ಖರಿದಿಸಿದ್ದು, ಫಿರ್ಯಾದಿ ಹತ್ತಿರ ಎರಡು ಮೊಬೈಲ್ ಫೋನ್ ಬಳಕೆಯಲ್ಲಿರುತ್ತವೆ. ಹೀಗಿರುವಲ್ಲಿ ದಿನಾಂಕ 29/03/2012 ರಂದು ಮುಂಜಾನೆ 9:00 ಗಂಟೆಗೆ ಫಿರ್ಯಾದಿರವರು ತಮ್ಮ ಕರ್ತವ್ಯಕ್ಕೆ ಬಂದು ತನ್ನ ಕಾರ ಆಸ್ಪತ್ರೆಯ ಹೊರಗಡೆ ನೆರಳಿನಲ್ಲಿ ಪಾರ್ಕ ಮಾಡಿ ತಮ್ಮ ಹತ್ತಿರ ಎರಡು ಮೊಬೈಲ್ಗಳು ಇರುವುದರಿಂದ ಹೊಸದಾಗಿ ತೆಗೆದುಕೊಂಡು ಹೆಚ್.ಟಿ.ಸಿ ಮೊಬೈಲ್ ತನ್ನ ಕಾರಿನ ಡ್ಯಾಸ್ ಬೋರ್ಡದಲ್ಲಿ ಲಾಕ್ ಹಾಕಿ ತನ್ನ ಕಾರಿನ ಬಾಗಿಲುಗಳನ್ನು ಮುಚ್ಚಿ ಲಾಕ್ ಹಾಕಿಕೊಂಡು ಹೊದಾಗ ಯಾರೋ ಕಳ್ಳರು ಯಾವುದೋ ಉಪಕರಣದಿಂದ ತನ್ನ ಕಾರಿನ ಗ್ಲಾಸ್ ಇಳಿಸಿ ಕಾರಿನ ಡ್ಯಾಸ್ ಬೋರ್ಡ ಲಾಕ್ನ್ನು ಮುರಿದು, ಡ್ಯಾಸ್ ಬೋರ್ಡದಲ್ಲಿಟ್ಟಿದ್ದ ಹೆಚ್.ಟಿ.ಸಿ. ಮೊಬೈಲ್ ಫೋನ್ ಐ.ಎಮ್.ಇ ನಂ 358000046543870 ನೆದ್ದನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಸದರಿ ಘಟನೆಯು ಮುಂಜಾನೆ 9:00 ಗಂಟೆಯಿಂದ ಮದ್ಯಾಹ್ನ 1:00 ಗಂಟೆಯ ಮದ್ಯೆ ಅವಧಿಯಲ್ಲಿ ಜರುಗಿರುತ್ತದೆ. ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.
ಭಾಲ್ಕಿ ನಗರ ಪೊಲಿಸ ಠಾಣೆ ಗುನ್ನೆ ನಂ. 44/12 ಕಲಂ 420 ಐಪಿಸಿ ಜೋತೆ 78(3) ಕೆ.ಪಿ. ಕಾಯ್ದೆ :-
ದಿನಾಂಕ : 29/03/2012 ರಂದು 0930 ಗಂಟೆಗೆ ಭಾಲ್ಕಿ ಎ ಪಿ ಎಂ ಸಿ ಮಾರ್ಕೆಟನಲ್ಲಿ ಇಬ್ಬರು ಸಾರ್ವಜನಿಕರಿಂದ ಆಕ್ರಮವಾಗಿ ಹಣ ಪಡೆದು ನಬೀಬಿನ ಮಟಕಾ ಜೂಜಾಟದ ಚೀಟಿ ಬರೆದು ಕೊಡುತ್ತಿದ್ದಾರೆ ಎಂದು ಖಚಿತ ಮಾಹಿತಿ ಬಂದಿದ ಮೇರೆಗೆ ಪಿಐ ರವರು ಸಿಬ್ಬಂದಿಯವರೊಂದಿಗೆ ಹೋಗಿ ಭಾಲ್ಕಿ ಎ ಪಿ ಎಂ ಸಿ ಮಾರ್ಕೆಟನಲ್ಲಿ ಆರೋಪಿತರಾದ ಬಾಲಾಜಿ ತಂದೆ ಜಗನ್ನಾಥ ವಗ್ಗೆ ಮತ್ತು ಸುಭಾಷ ಸಂಪಂಗೆ ರವರುಗಳು ಸಾರ್ವಜನಿಕರಿಗೆ ಮಟಕಾ ಚೀಟಿ ಬರೆದು ಕೊಟ್ಟು ಹಣ ಪಡೆದು ನಂಬರ ಹತ್ತಿದರು ಹಣ ನೀಡದೆ ಮೊಸ ಮಾಡುತ್ತಿದ್ದಾಗ ಅವರುಗಳ ಮೇಲೆ ದಾಳಿ ಮಾಡಿದ್ದು ಅದರಲ್ಲಿ ಸುಭಾಷ ಸಂಪಂಗೆ ಓಡಿ ಹೋಗಿರುತ್ತಾನೆ ಹಾಗು ಸಿಕ್ಕ ಬಿದ್ದ ಆರೋಪಿ ಬಾಲಾಜಿ ತಂದೆ ಜಗನಾಥ ವಗ್ಗೆ 24 ವರ್ಷ ಜಾ : ಕುರುಬ ಉ : ಕೂಲಿ ಕೆಲಸ ಸಾ : ಸಾಯಿ ನಗರ ಭಾಲ್ಕಿ ಈತನನ್ನು ಹಿಡಿದು ವಿಚಾರಣೆ ಮಾಡಲು ಆತನ ತನ್ನ ತಪ್ಪು ಒಪ್ಪಿಕೊಂಡಿದ್ದು ಆರೋಪಿತನಿಂದ ಮಟಕಾ ಜೂಜಾಟಕ್ಕೆ ಬಳಸುತ್ತಿದ್ದ ನಗದು 800=00 ರೂ 5 ಮಟಕಾ ಚೀಟಿ ಹಾಗು ಒಂದು ಬಾಲ ಪೆನ್ನ ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.
ಬೀದರ ಸಂಚಾರ ಪೊಲೀಸ್ ಠಾಣೆ ಗುನ್ನೆ ನಂ. 72/2012 ಕಲಂ 279,337, ಐ.ಪಿ.ಸಿ.ಜೋತೆ 187 ಐ,ಎಮ,ವಿ,ಎಕ್ಟ :-
ದಿನಾಂಕ 29/03/2012 ರಂದು 09:30 ಗಂಟೆಗೆ ಫಿರ್ಯಾದಿ ಗಣಪತಿ ತಂದೆ ನರಸಿಂಗರಾವ ಬಾದಾಮಿ 58 ವರ್ಷ ಸಾ/ ಬಾವರ್ಚಿ ಿಗಲ್ಲಿ ಬೀದರ ರವರು ತನ್ನ ಮೋಟಾರ ಸೈಕಲ ನಂ ಕೆಎ32 ವ್ಹಿ7528 ನೇದ್ದರ ಮೇಲೆ ತನ್ನ ಗಳೆಯನಾದ ಶಿವಲಿಂಗಪ್ಪಾ ಇತನ್ನು ತನ್ನ ಮೋಟಾರ ಸೈಕಲ ಹಿಂಬದಿಯಲ್ಲಿ ಕೂಡಿಸಿಕೊಂಡು ಬೀದರ ಮೈಲೂರ ಕ್ರಾಸ ಕಡೆಯಿಂದ ಬೀದರ ಬಸವೇಶ್ವರ ವೃತ್ತದ ಕಡೆಗೆ ಬೊಮ್ಮಗೊಂಡೇರ್ಶವರ ವೃತ್ತದ ಮುಖಾಂತರ ಬರುತ್ತಿರುವಾಗ ಅಂಡರ ಬ್ರಿಡ್ಜ ಹತ್ತಿರ ಇದ್ದಾಗ ಎದುರಿನಿಂದ ಒಬ್ಬ ಅಪರಿಚಿತ ಮೋಟಾರ ಸೈಕಲ ಚಾಲಕನು ತನ್ನ ಮೋಟಾರ ಸೈಕಲಅನ್ನು ವೇಗವಾಗಿ ಹಾಗೂ ಅಜಾಗೂರುಕತೆಯಿಂದ ಇತರರ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಎದುರಿನಿಂದ ಡಿಕ್ಕಿ ಪಡಿಸಿದರಿಂದ ತಲೆಯ ಹಿಂಬದಿಯಲ್ಲಿ ಪೇಟ್ಟಾಗಿ ರಕ್ತಗಾಯ ಮತ್ತು ಬಲಗಡೆಯ ಹಣೆಯಲ್ಲಿ, ಎರಡು ಕಾಲೂಗಳಿಗೆ ತರಚಿದ ರಕ್ತಗಾಯ, ಹಾಗೂ ಹಿಂದೆ ಕುಳಿತ ನನ್ನ ಗೇಳೆಯನಾದ ಶಿವಲಿಂಗಪ್ಪಾ ಇವರಿಗೆ ಬಲಕಾಲಿನ ಮೋಳಕಾಲಿಗೆ ತರಚಿದ ರಕ್ತಗಾಯ, ಬಲಕಾಲಿನ ಪಾದದ ಮೇಲೆ ರಕ್ತ ಗಾಯ ಹಾಗೂ ಬಲಗಡೆ ಭುಜದಲ್ಲಿ ಗುಪ್ತಗಾಯ ಪಡಿಸಿ ತನ್ನ ಮೋಟಾರ ಸೈಕಲ ನಿಲ್ಲಿಸಿದೆ ಅಪಘಾತ ಸ್ಥಳದಿಂದ ಮೋಟಾರ ಸೈಕಲ ಸಮೇತ ಓಡಿ ಹೋಗಿರುತ್ತಾನೆ ಅಂತ ಫಿಯರ್ಾದಿಯ ಹೇಳಿಕೆಯನ್ನು ಬೀದರ ಜಿಲ್ಲಾ ಆಸ್ಪತ್ರೆಯಲ್ಲಿ ಪಡೆದು ಕೊಂಡು ದಿನಾಂಕ 29/03/2012 ರಂದು ಪ್ರಕರಣ ದಾಖಲಿಸಿ ತನಿಖೆ ಕೈಗೋಳ್ಳಲಾಗಿದೆ.
ಧನ್ನೂರ ಠಾಣೆ ಗುನ್ನೆ ನಂ. 60/12 ಕಲಂ 380 ಐಪಿಸಿ :-
ದಿ:29/03/2012 ರಂದು 1600 ಗಂಟೆಗೆ ಫಿರ್ಯಾದಿ ಶ್ರೀಮತಿ ಮಧುಮತಿ ಗಂಡ ಸುಕುಮಾರ ಪವಾರ, 49 ವರ್ಷ, ಮರಾಠ, ಮನೆಕೆಲಸ, ಸಾ/ ಲೆಕ್ಚರರ ಕಾಲೋನಿ ಭಾಲ್ಕಿ ರವರು ಠಾಣೆಗೆ ಹಾಜರಾಗಿ ತನ್ನ ಫಿರ್ಯಾದಿ ನೀಡಿದರ ಸಾರಾಂಶವೆನೆಂದರೆ, ದಿ:13/03/2012 ರಂದು 1500 ಗಂಟೆಗೆ ಬೀದರ ಬಸ್ಸ ನಿಲ್ದಾಣದಿಂದ ಕೆ.ಎಸ್.ಆರ್.ಟಿ.ಸಿ ಬಸ್ಸ ನಲ್ಲಿ ಕೂಳಿತ್ತು ಭಾಲ್ಕಿ ಕಡೆಗೆ ಬರುವಾಗ ನೌಬಾದ ಹಲಬಗರ್ಾ ಮಧ್ಯದಲ್ಲಿ ಯಾರೋ ಅಪರಿಚಿತ ಕಳ್ಳರು ಫಿರ್ಯಾದಿ ಹತ್ತಿರ ಇದ್ದ ಬ್ಯಾಗನ ಒಂದು ಸೈಡಯನ್ನು ಕತ್ತರಿಸಿ ಒಳಗೆ ಇದ್ದ ಕ್ಯಾರಿಬ್ಯಾಗ ಕತ್ತರಿಸಿ, ಪರ್ಸದಲ್ಲಿ ಇದ್ದ ಬಂಗಾರದ ಗಂಟಾನ್ 3 ತೋಲಿ, ಒಂದು ಲ್ಯಾಕೇಟ ಒಂದು ತೋಲೆ ಹೀಗೆ ಒಟ್ಟು 32,000/- ಬೆಲೆಬಾಳುವುದನ್ನು. ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಅಂತ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೋಳ್ಳಲಾಗಿದೆ.
ನೂತನ ನಗರ ಪೊಲೀಸ್ ಠಾಣೆ ಗುನ್ನೆ ನಂ. 67/2012 ಕಲಂ 379 ಐಪಿಸಿ :-
ದಿನಾಂಕ 29-03-2012 ರಂದು 1930 ಗಂಟೆಗೆ ಫಿರ್ಯಾದಿ ನಾರಾಯಣ ಅರ್ಥಮ ತಂದೆ ಶ್ರೀನಿವಾಸ ಅರ್ಥಮ ಉ: ಖಾಸಗಿ ನೌಕರರು, ಜಾತಿ: ಕೋಮಟಿ (ವೈಶಾಲಿ), ಸಾ|| ಮ.ನಂ: 19-5-377/1 ರಾಘವೇಂದ್ರ ಕಾಲೋನಿ ನೌಬಾದ ರವರು ನೀಡಿದ ದೂರಿನ ನೀಡಿದ ಸಾರಾಂಶವೆನೆಂದರೆ ದಿನಾಂಕ 29-03-2012 ರಂದು ಮುಂಜಾನೆ ನೀರು ಕಾಯಿಸಲೆಂದು ನನ್ನ ಹೆಂಡತಿಯಾದ ಸ್ವರೂಪಾರಾಣಿ ಇವರಿಗೆ ಹೇಳಿದಾಗ ಫಿರ್ಯಾದಿ ಹೆಂಡತಿ ತಿಳಿಸಿದೆನೆಂದರೆ, ನೀರು ಬಿಸಿಯಾಗುತ್ತಿಲ್ಲಾ, ಸೋಲಾರಗೆ ಎನೋ ಆಗಿದೆ ನೋಡಿ ಬರಲು ತಿಳಸಿದಾಗ ಫಿಯರ್ಾದಿರವರು ಹೋಗಿ ನೋಡಿದಾಗ ಛಾವಣಿ ಮೇಲೆ ಕೂಡಿಸಿದ ಚಂದನ ಕಂ. ಸೋಲಾರ ಪೇನಾಲ ಪಟ್ಟಿಗಳು ಅ.ಕಿ.: 15,000/- ರೂ ಬೆಲೆಬಾಳುವ ಸೋಲಾರ ಸಾಮಾನುಗಳನ್ನು ದಿನಾಂಕ 28,29-03-2012 ರಂದು ರಾತ್ರಿ ವೇಳೆಯಲ್ಲಿ ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
No comments:
Post a Comment