Police Bhavan Kalaburagi

Police Bhavan Kalaburagi

Saturday, March 31, 2012

BIDAR DISTRICT DAILY CRIME UPDATE : 31-03-2012

ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ : 31-03-2012

ಬಸವಕಲ್ಯಾಣ ಸಂಚಾರ ಪೊಲೀಸ ಠಾಣೆ ಗುನ್ನೆ ನಂ. 53/12 ಕಲಂ 279, ಐ.ಪಿ.ಸಿ. ಜೊತೆ 187 ಐ.ಎಂ.ವಿ. ಕಾಯ್ದೆ :-

ದಿನಾಂಕ 30/03/2012 ರಂದು 0630 ಗಂಟೆಗೆ ರಾ.ಹೆ.ನಂ 9 ಮೇಲೆ ಅಮೃತಕುಂಡದ ಹತ್ತಿರ ರಸ್ತೆ ಬದಿಯಲ್ಲಿ ಫಿರ್ಯಾದಿ ಜಗನ್ನಾಥ ತಂದೆ ಕಲ್ಲಪ್ಪಾ ಫಿರಂಗೆ ರವರು ತನ್ನ ಲಾರಿ ನಂ ಎಂ.ಹೆಚ್- 25, ಬಿ- 2316 ನೇದ್ದನ್ನು ನಿಲ್ಲಿಸಿ ಬಹಿರ್ದೆಸೆಗೆ ಹೋಗುತ್ತಿರುವಾಗ ಹಿಂದಿನಿಂದ ಉಮರ್ಗಾ ಕಡೆಯಿಂದ ಸಸ್ತಾಫುರ ಬಂಗ್ಲಾ ಕಡೆಗೆ ಲಾರಿ ನಂ ಎ.ಡಿ.ಟಿ. 7301 ನೇದ್ದರ ಚಾಲಕನು ತನ್ನ ಲಾರಿಯನ್ನು ಅತಿವೇಗ ಹಾಗೂ ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿದಾರನು ನಿಲ್ಲಿಸಿದ ಲಾರಿಯ ಹಿಂಬಂಧಿಗೆ ಡಿಕ್ಕಿ ಮಾಡಿ ಮುಂದೆ ಹೊಗೆ ತನ್ನ ಲಾರಿ ಪಲ್ಟಿ ಮಾಡಿರುತ್ತಾನೆ. ಎರಡು ವಾಹನಗಳು ಡ್ಯಾಮೇಜ ಆಗಿರುತ್ತವೆ. ಅಂತಾ ಫಿರ್ಯಾದಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಬ.ಕಲ್ಯಾಣ ನಗರ ಪೊಲೀಸ್ ಠಾಣೆ ಗುನ್ನೆ ನಂ. 44/12 ಕಲಂ 143, 147, 148, 323, 324, 504, 506, ಜೊತೆ 149, ಐಪಿಸಿ :-

ದಿನಾಂಕ 30/03/2012 ರಂದು 1900 ಗಂಟೆಗೆ ಫಿರ್ಯಾದಿ ಲಕ್ಷ್ಮಣ ತಂದೆ ಅರ್ಜುನರಾವ ಕಪನೂರೆ ವಯ 38, ವರ್ಷ ಜಾತಿ ಮರಾಠಾ ಉ/ ಖಾಸಗಿ ಕೆಲಸ ಸಾ; ಬಟಗೇರಾ ಸಧ್ಯ ವಿಜಯ ನಗರ ಕಾಲೋನಿ ಬಸವಕಲ್ಯಾಣ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ಫಿರ್ಯಾದಿ ಹಾಗು ಅವರ ಅಣ್ಣನ ನಡುವೆ ತಂದೆಯ ಆಸ್ತಿಯ ಹಂಚಿಕೆಯಾಗಿ ಬೇರೆಬೇರೆ ಇದ್ದು ದಿನಾಂಕ 29/03/2012 ರಂದು ಮಧ್ಯಾನ 01:00 ಗಂಟೆ ಸುಮಾರಿಗೆ ಫಿರ್ಯಾದಿ ಮನೆಯಲ್ಲಿದ್ದಾಗ ಮನೆ ಮುಂದೆವಿರುವ ರಸ್ತೆ ಮೇಲೆ ತಂದೆ ಅಜರ್ುನರಾವ, ಅಣ್ಣ ವಿನಾಯಕ ಅಕ್ಕ ಶೋಭಾ, ಅತ್ತಿಗೆ ಸವಿತಾ ಹಾಗು ಇನ್ನು 20 ಜನರು ಎಲ್ಲರು ಫಿರ್ಯಾದಿ ಮನೆಯ ಮುಂದೆ ಬಂದು ಅವಾಚ್ಯವಾಗಿ ಬೈದು ನಿನು ನಿನಗೆ ಬೇಕಾದ ರೀತಿಯಲ್ಲಿ ಆಸ್ತಿ ಹಂಚಿಕೆ ಮಾಡಿಕೊಂಡಿದ್ದಿ ಅಂತಾ ಹೇಳಿ 20 ಜನರು ಸೇರಿಕೊಂಡು ಹೋಡೆದು ರಕ್ತಗಾಯ ಪಡಿಸಿರುತ್ತಾರೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಧನ್ನೂರ ಠಾಣೆ ಗುನ್ನೆ ನಂ. 62/2012 ಕಲಂ 279,337,338 ಐಪಿಸಿ ಜೊತೆ 187 ಐ.ಎಮ.ವ್ಹಿ. ಕಾಯ್ದೆ :-

ದಿನಾಂಕ: 30-03-2012 ರಂದು 1830 ಗಂಟೆಗೆ ಫಿರ್ಯಾದಿ ಗೊವಿಂದರಾವ ತಂದೆ ಪ್ರೆಮಸಿಂಗ ಮಹಾರಾಜ ಹಾಗು ಶಿವಾಜಿ ತಂದೆ ರಾಮಸಿಂಗ ,ದೇವಿದಾಸ ತಂದೆ ಮೋತಿರಾಮ ಮನೊಹರ ತಂದೆ ನಾಮದೇವ ,ಮನೊಹರ ತಂದೆ ಡಾಕು ರವರೆಲ್ಲರು ಜೀಪ ನಂ ಕೆ.ಎ. -12-ಎನ 0437 ನೇದರಲ್ಲಿ ಕುಳೀತುಕೊಂಡು ಪೌರಾದೇವಿಗೆ ಹೊಗುವಾಗ ದಾರಿಯಲಿ ಹುಪ್ಪಳಾ ಗ್ರಾಮದ ಶಿವಾರದಲ್ಲಿ ಹಿಂದಿನಿಂದ ಒಬ್ಬ ಲಾರಿ ನಂ ಎಮ.ಎಚ 26/ ಬಿ.4605 ನೇದರ ಚಾಲಕನು ತನ್ನ ವಾಹನ ಅತಿ ವೇಗ ಹಾಗು ಅಜಾಗುರಕತೆಯಿಂದ ಚಲಾಯಿಕೊಂಡು ಬಂದು ಫಿಯರ್ಾದಿಗೆ ಹಾಗು ಇತರರಿಗೆ ಡಿಕ್ಕಿ ಮಾಡಿದ್ದು ಡಿಕಿಯ ಪ್ರಯುಕ್ತ ಸಾದಾ ರಕ್ತಗಾಯ ಹಾಗು ಭಾರಿರಕ್ತಗಾಯವಾಗಿದ್ದು ಇರುತ್ತವೆ. ಅಂತ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಜನವಾಡ ಪೊಲೀಸ್ ಠಾಣೆ. ಕಲಂ 34/2012 ಕಲಂ: 279, 304(ಎ) ಐಪಿಸಿ ಜೊತೆ 187 ಐಎಮ್ವಿ ಆಕ್ಟ್. :-

ದಿನಾಂಕ 30.03.2012 ರಂದು 1900 ಗಂಟೆ ಸಮಯದಲ್ಲಿ ಜನವಾಡ ಹತ್ತಿರ ಅಪರಿಚಿತ ವಾಹನ ಚಾಲಕ ತನ್ನ ವಾಹವನ್ನು ನಿಸ್ಕಾಳಜಿತನದಿಂದ ಚಲಾಯಿಸಿ ಮಾರ್ತಂಡ ಇವರಿಗೆ ಡಿಕ್ಕಿ ಮಾಡಿ ವಾಹನ ಸಮೇತ ಓಡಿ ಹೋಗಿದ್ದು, ಡಿಕ್ಕಿಯಿಂದ ಫಿರ್ಯಾದಿ ಅಶೋಕ ರವರ ತಂದೆ ಮಾರ್ತಂಡ ಇವರು ತೀವ್ರ ಗಾಯಹೊಂದಿ ಘಟನಾ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ(.) ಎಂದು ಕೊಟ್ಟ ಫಿಯರ್ಾದಿಯ ದೂರಿನ ಆಧಾರದಿಂದ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 35/2012 ಕಲಂ 379 ಐ.ಪಿ.ಸಿ. :-

ದಿನಾಂಕ: 30-03-2012 ರಂದು ಫಿರ್ಯಾದಿ ಶ್ರೀಮತಿ. ಮಿನಾಕ್ಷಿ ಗಂಡ ಬಸವರಾಜ ವರವಟ್ಟಿ ಸಾ: ತ್ರಿಪುರಾಂತ ರವರ ಯರಂಡಗಿ ಗ್ರಾಮದ ಶಿವಾರದಲ್ಲಿರು ಫಾರ್ಮಹೌಸ ಕೌಡಿಯಾಳ ಹತ್ತಿರವಿರುವ ಜಮೀನ ಸವರ್ೇ ನಂ. 35 ರಲ್ಲಿ ತನ್ನ ಜನರೇಟರಗೆ ಅಳವಡಿಸಲಾದ ಡೈನಮಾವನ್ನು ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಅದರ ಅಂ.ಕಿ. 30,000/- ಇದ್ದು ಅದನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಧನ್ನೂರ ಠಾಣೆ ಗುನ್ನೆ ನಂ. 63/2012 ಕಲಂ 457,380 ಐಪಿಸಿ ;-

ದಿನಾಂಕ: 31/03/2012 ರಂದು 1230 ಗಂಟೆಗೆ ಫಿರ್ಯಾದಿ ತುಕಾರಮ ತಂದೆ ನಾರಾಯಣರಾವ ಸಾ: ಜೋಳದಾಪಕಾ ರವರು ನೀಡಿದ ದೂರಿನ ಸಾರಾಂಶವೆನೆಂದರೆ ಫಿರ್ಯಾದಿ ಹಾಗು ಅವರ ಮನೆಯವರು ಊಟಮಾಡಿ ರಾತ್ರಿ ಮಲಗಿದಾಗ ಯಾರೋ ಅಪರಿಚಿತ ಕಳ್ಳರು ಮನೆಯಲ್ಲಿದ್ದ 5 ಗ್ರಾಮದ ಬಂಗಾರದ 2 ಉಂಗುರು ಮತ್ತು ಅದೇ ರೀತಿ ಅಶೋಕ ತಂದೆ ಮಾಣಿಕ, ಕಾಶಿನಾಥ ತಂದೆ ಅಮೃತ ಬಮ್ಮಾ, ಶೇಷವರಾವ ತಂದೆ ದಶರಥರಾವ ಮಲಹರಿ ಮತ್ತು ಶಂಕರಾವ ತಂದೆ ಗುಂಡಾಜಿ ಚಿಮ್ಮಾಜಿ ಪಾಟಿಲ ಇವರ ಮನೆಗಳಿಗು ಸದರಿ ಅಪರಿಚಿತ ಕಳ್ಳರು ಹೋಗಿ ಮನೆಯಲ್ಲಿ ಅಕ್ರಮ ಪ್ರವೇಶಿಸಿ ಮನೆಯಲ್ಲಿ ಇದ್ದ ಸುಟಕೇಸದಲಿ ಇದ್ದ ಮಕ್ಕಳ ಉಂಗುರು ಮತ್ತು ಮೋಬೈಲ್ ಫೋನ ಹಾಗು ಇತರೆ ಬೆಲೆಬಾಳುವ ಸಾಮಗ್ರಿಗಳು ಮತ್ತು ನಗದು ಹಣ ಹೀಗೆ ಒಟ್ಟು 24000/- ರೂ ಯಾರು ಅಪರಿಚಿತರು ಕಳವುಮಾಡಿಕೊಂಡು ಹೋಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: