ಹಲ್ಲೆ ಪ್ರಕರಣ:
ರಾಘವೇಂದ್ರ ನಗರ ಪೊಲೀಸ್ ಠಾಣೆ:ಶ್ರೀಮತಿ ಶಹನಾಜ್ ಬೇಗಂ ಗಂಡ ಅಹ್ಮದ ಹುಸೇನ ಸೌದಾಗರ ಸಾ ಪ್ಲಾಟ ನಂ 168 ಬ್ರಹ್ಮಪೂರ ಗುಲಬರ್ಗಾರವರು ನನ್ನ ಗಂಡ ಅಹ್ಮದ ಹುಸೇನ ಸೌದಾಗರ್ ಈತನು ಬ್ರಹ್ಮಪೂರ ಬಡಾವಣೆಯ ರಾಘವೇಂದ್ರ ಕಾಲೋನಿಯಲ್ಲಿರುವ ಅಲ್-ನಿದಾ ಇಸ್ಲಾಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಇದ್ದು, ಅದರಂತೆ ಅಬ್ದುಲ ರಜಾಕ ತಂದೆ ಅಬ್ದುಲ ಅಜೀಜ ಬಿದರಿ, ಮಹ್ಮದ ಸಲಿಂ, ಅಬ್ದುಲ ಹಮೀದ ರವರುಗಳು ಕ್ರಮವಾಗಿ ಅಧ್ಯಕ್ಷ, ಉಪಾಧ್ಯಕ್ಷ ಹಾಗು ಖಜಾಂಚಿಯಾಗಿರುತ್ತಾರೆ. ನನ್ನ ಗಂಡನು ಸದರಿ ಸಂಸ್ಥೆಯ ಕಟ್ಟಡ ಸಲುವಾಗಿ ಸುಮಾರು 18 ರಿಂದ 19 ಲಕ್ಷ ರೂಪಾಯಿ ಹಣ ಖರ್ಚು ಮಾಡಿ ಕಟ್ಟಿಸಿರುತ್ತಾನೆ, ಅದರಲ್ಲಿ ಸ್ವಲ್ಪ ಹಣ ಸಂಸ್ಥೆಯವರು ಕೊಟ್ಟಿರುತ್ತಾರೆ. ಉಳಿದ ಹಣ ನಾವೆ ಹಾಕಿರುತ್ತೆವೆ. ಸದರಿ ಶಿಕ್ಷಣ ಸಂಸ್ಥೆಯವರಿಗೆ ಹಣದ ಬಗ್ಗೆ ಕೇಳಲು ಸಂಸ್ಥೆಯವರು ಹೆದರಿಸುತ್ತಾ ಬರುತ್ತಿದ್ದಾರೆ, ಈ ವಿಷಯದ ಸಂಬಂಧ ದಿನಾಂಕ 11-02-2012 ರಂದು ಅಬ್ದುಲ ರಜಾಕ ತಂದೆ ಅಬ್ದುಲ ಅಜೀಜ ಬಿದರಿ, ಮಹ್ಮದ ಸಲಿಂ, ಅಬ್ದುಲ ಹಮೀದ, ಅಸ್ಮಾ ಗಂಡ ಅಬ್ದುಲ ರಜಾಕ, ನಸರಿನ್ ಬೇಗಂ ಗಂಡ ಮಹ್ಮದ ಸಲಿಂ, ಶಬನಾ ಬೇಗಂ ಗಂಡ ಅಬ್ದುಲ ಹಮೀದ, ಮಹ್ಮದಿಯಾ ಬೇಗಂ ಸಾ ಎಲ್ಲರೂ ಖಣಿ ಏರಿಯಾ ಹೊಸ ರಾಘವೇಂದ್ರ ಕಾಲೋನಿ ಗುಲಬರ್ಗಾರವರೆಲ್ಲರೂ ಅವಾಚ್ಯವಾಗಿ ಬೈದು ಮನೆಯಲ್ಲಿ ಅತಿಕ್ರಮಣ ಪ್ರವೇಶ ಮಾಡಿ, ತಲೆಯ ಕೂದಲು ಹಿಡಿದು ಜಗ್ಗಾಡಿ, ಕೈಯಿಂದ ಹೊಡೆಬಡೆ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ 23/12 ಕಲಂ 147, 341, 448, 323, 504, 506 ಸಂಗಡ 149 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
Police Bhavan Kalaburagi

Thursday, March 15, 2012
GULBARGA DIST REPORTED CRIME
Subscribe to:
Post Comments (Atom)
No comments:
Post a Comment