ಮುಂಜಾಗ್ರತೆ ಕ್ರಮ:
ಮಾದನ ಹಿಪ್ಪರಗಾ ಪೊಲೀಸ್ ಠಾಣೆ: ದಿನಾಂಕ 17/03/2012 ರಂದು ಬೆಳಿಗ್ಗೆ 10:00 ಗಂಟೆಗೆ ಸರಸಂಬಾ ಗ್ರಾಮದಲ್ಲಿ ಗ್ರಾಮ ಪಂಚಾಯತಿ ವತಿಯಿಂದ ಸಾರ್ವಜನಿಕ ನೀರು ಸರಬರಾಜು ಸಂಬಂದದಲ್ಲಿ ಹಮ್ಮಿಕೊಂಡಿರುವ ರಸ್ತಾ ರೋಕೊ ಕಾರ್ಯಕ್ರಮದ ಬಂದೋಬಸ್ತ ಕರ್ತವ್ಯಕ್ಕೆ ಹೋದಾಗ, ಗ್ರಾಮದ ಹೊಲ ಸರ್ವೇ ನಂ. 199 ನೇದ್ದರ ಮಾಲೀಕ ಮಲ್ಲಿನಾಥ ಗೋವಿನ, ವೈಜನಾಥ ಗೋವಿನ ಇವರು ಓ. ಎಸ್. ನಂ. 118/2011 ನೇದ್ದರಲ್ಲಿ ವಾಗ್ದರ್ಗಿ – ರಿಬ್ಬನಪಲ್ಲಿ ರಾಜ್ಯ ಹೆದ್ದಾರಿ ಕಾಮಗಾರಿ ಮಾಡುತ್ತಿರುವುದು ಕಾನೂನು ಬಾಹಿರ ಅಂತ ಅರ್ಜಿ ಸಲ್ಲಿಸಿದ್ದರಿಂದ ಮಾನ್ಯ ನ್ಯಾಯಾಲಯ ದಿನಾಂಕ 17/12/2011 ರಂದು ಭೂ ಪರಿಹಾರ ಧನ ನೀಡುವವರೆಗೆ ಯಾವುದೇ ಕಾಮಗಾರಿ ಮಾಡಬಾರದೆಂದು ಜಿಲ್ಲಾಧಿಕಾರಿಗಳು ಮತ್ತು ಕಾರ್ಯ ನಿರ್ವಾಹಕ ಅಭಿಯಂತರರು ರಾಜ್ಯ ಹೆದ್ದಾರಿ ಪ್ರಾಧಿಕಾರ ಗುಲಬರ್ಗಾ ಹಾಗೂ ಕಾರ್ಯನಿರ್ವಾಹಕ ಅಭಿಯಂತರರು [ ಪಿ.ಡಬ್ಲು.ಡಿ ] ಗುಲಬರ್ಗಾ ರವರ ವಿರುದ್ದ ಆದೇಶ ಪಡೆದುಕೊಂಡಿರುತ್ತಾರೆ. ರಸ್ತೆಯ ಪಕ್ಕ 2010 ರಲ್ಲಿ ಜಲಾನಯನ ಅಭಿವೃದ್ದಿ ಮಂಡಳಿ ಗುಲಬರ್ಗಾರವರು ಸರಸಂಬಾ ಗ್ರಾಮದ ಸಾರ್ವಜನಿಕರಿಗೆ ಕೂಡಿಯುವ ನೀರಿಗಾಗಿ ಒಂದು ಕೋಳವೆ ಭಾವಿ ಹಾಕಿಸಿ ಅದಕ್ಕೆ ವಿದ್ಯೂತ್ ಯಂತ್ರ ಅಳವಡಿಸಿ ವಿದ್ಯೂತ್ ಪೂರೈಕೆ ಮಾಡಿ, ಪೈಪ್ ಲೈನ ಮುಖಾಂತರ ಸರಸಂಬಾ ಗ್ರಾಮದ ಸಾರ್ವಜನಿಕರಿಗೆ ನೀರು ಸರಬರಾಜು ಮಾಡಿದ್ದು, ಸದರಿ ಕೋಳವೆ ಭಾವಿಯನ್ನು ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳಿಗೆ ಹಸ್ತಾಂತರಿಸಿರುತ್ತಾರೆ. ನ್ಯಾಯಾಲಯದ ಅದೇಶ ತಮ್ಮ ಪರವಾಗಿ ಇರುವುದಾಗಿ ಒಂದು ವರ್ಷದಿಂದ ಕೊಳವೆ ಭಾವಿಯಿಂದ ನೀರು ಸರಬರಾಜು ಆಗುವ ಪೈಪ್ ಲೈನನ್ನು ಮಲ್ಲಿನಾಥ ಗೋವಿನ ಇವರು ಕಟ್ ಮಾಡಿದ್ದರಿಂದ ಗ್ರಾಮದ ಜನತೆ ಮತ್ತು ಇವರ ಮಧ್ಯೆ ಹಗೆತನ ಬೆಳೆದು ಬಂದಿರುತ್ತದೆ. ಇವರನ್ನು ಹಾಗೆ ಬಿಟ್ಟರೆ ಯಾವ ವೇಳೆಯಲ್ಲಿ ಜೀವ ಹಾನಿ, ಹಾಗೂ ಗ್ರಾಮದಲ್ಲಿ ಶಾಂತತಾ ಭಂಗವುಂಟಾಗುವ ಸಂಭವವಿರುವುದಾಗಿ ಕಂಡು ಬಂದಿದ್ದರಿಂದ, ಮುಂಜಾಗ್ರತಾ ಕ್ರಮ ಕುರಿತು ಕಾಶಿನಾಥ ತಂದೆ ಶರಣಪ್ಪ ಗೋವಿನ, ಸಾ: ಸರಸಂಬಾ, ವೈಜನಾಥ ತಂದೆ ಕಾಶಿನಾಥ ಸರಸಂಬಾ, ಸಾ: ಸರಸಂಬಾ, ಶಿವಪುತ್ರ ತಂದೆ ಶಿವಶರಣಪ್ಪ ಪಾಟೀಲ, ಸಾ: ದಣ್ಣೂರ ತಾ: ಆಳಂದ ಮತ್ತು ಗ್ರಾಮದ ಅವರ ಎದುರಾಳಿದಾರರಾದ ಪಂಡೀತ ತಂದೆ ಸಿದ್ದಪ್ಪ ಜಿಡಗೆ, ರಾಜಶೇಖರ ಪಾಟೀಲ ತಂದೆ ಮಲ್ಕಪ್ಪ ಪಾಟೀಲ, ಮಹಾಂತಪ್ಪ ತಂದೆ ಸಿದ್ರಾಮಪ್ಪ ಆಲುರ್, ವಿಜಯಾನಂದ ತಂದೆ ಹಣಮಂತ ಕುಂಬಾರ್, ಇವರನ್ನು ಠಾಣೆಗೆ ಕರೆದುಕೊಂಡು ಬಂದು ಮುಂಜಾಗ್ರತಾ ಕ್ರಮಕ್ಕಾಗಿ ಎ.ಎಸ.ಐ ಶ್ಯಾಮರಾವ ರವರು ಸರ್ಕಾರಿ ತರ್ಪೆಯಾಗಿ ಠಾಣೆ ಗುನ್ನೆ ನಂ. 07/2012 ಕಲಂ 107. 151 ಸಿ.ಆರ್.ಪಿ,ಸಿ ಪ್ರಕಾರ ಪ್ರಕರಣ ದಾಖಲ ಮಾಡಿದ್ದಾರೆ.
Police Bhavan Kalaburagi
Sunday, March 18, 2012
GULBARGA DIST REPORTED CRIME
Subscribe to:
Post Comments (Atom)
No comments:
Post a Comment