Police Bhavan Kalaburagi

Police Bhavan Kalaburagi

Saturday, March 31, 2012

GULBARGA DIST REPORTED CRIME

ಕಳ್ಳತನ ಪ್ರಕರಣ:

ಅಶೋಕ ನಗರ ಪೊಲೀಸ್ ಠಾಣೆ: ಶ್ರೀ ನಾಗಣ್ಣ ತಂದೆ ಬಸವಂತರಾವ ಬಿರಾದಾರ ಸಾ: ಕವಲಗಾ(ಕೆ) ತಾ||ಗುಲಬರ್ಗಾರವರು ನಾವು ದಿನಾಂಕ 28/03/2012 ರಂದು ನನ್ನ ಅಳಿಯನ ಮದುವೆ ಕಾರ್ಯಕ್ರಮಕ್ಕಾಗಿ ಗುಲಬರ್ಗಾದ ಅಪ್ಪಾಸಾಬ ಬಿರಾದಾರ ಕರುಣೇಶ್ವರ ನಗರ ಗುಲಬರ್ಗಾಕ್ಕೆ ಬಂದಿದ್ದು, ಮಧ್ಯರಾತ್ರಿ 12 ಗಂಟೆಯವರೆಗೆ ಮದುವೆ ಕಾರ್ಯಕ್ರಮದ ಕೆಲಸವನ್ನು ಮಾಡಿ ಮನೆಯಲ್ಲಿ ಹೆಣ್ಣುಮಕ್ಕಳು ಇರುವುದ್ದರಿಂದ ಮನೆಯ ಮಾಳಿಗೆಯ ಮೇಲೆ ಮಲಗುವಾಗ ನನ್ನ ಪ್ಯಾಂಟ ಶರ್ಟ ಬಿಚ್ಚಿ ಲುಂಗಿ ಹಾಕಿಕೊಂಡು ಪ್ಯಾಂಟಶರ್ಟ ತೆಲೆ ದಿಂಬು ಇಟ್ಟುಕೊಂಡಿರುತ್ತೆನೆ. ದಿನಾಂಕ 29/03/2012 ರಂದು ಬೆಳಗಿನ ಜಾವ 4 ಗಂಟೆಗೆ ನನ್ನ ಹೆಂಡತಿ ಬಂದು ಎಬ್ಬಿಸಿದಾಗ ನನ್ನ ಪ್ಯಾಂಟ ಶರ್ಟ ಇರಲಿಲ್ಲ. ಅದರಲ್ಲಿಟ್ಟಿದ 3 ತೊಲೆ ಬಂಗಾರದ ಮಂಗಳಸೂತ್ರ ಅ:ಕಿ 75000/- ರೂ , ನಗದು ಹಣ 2000/- ರೂ ಮತ್ತು ಒಂದು ನೊಕಿಯಾ ಮೊಬೈಲ ಫೋನ ಸೀಮ ನಂ. 9972868832 ಅ:ಕಿ:500 ರೂ ನೇದ್ದವುಗಳನ್ನು ಯಾರೋ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ನನ್ನ ಅಳಿಯನ ಮದುವೆ ಕಾರ್ಯಕ್ರಮ ಮುಗಿಸಿಕೊಂಡು ಬರಲು ದೂರು ಕೊಡುವದಕ್ಕೆ ತಡವಾಗಿರುತ್ತದೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:27/2012 ಕಲಂ. 457, 380 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

No comments: