ಅಪಘಾತ ಪ್ರಕರಣ:
ಮಳಖೇಡ ಠಾಣೆ: ಶಂಕರ ತಂದೆ ರಾಜಶೇಖರ ಮುತ್ತಂಗಿ ಸಾ ಕರಚಖೇಡ ತಾ ಚಿಂಚೋಳರವರು ನಾನು ಮತ್ತು ನರೇಶ ತಂದೆ ಜಗಪ್ಪಾ ಸಾ ಕರಚಖೇಡ ಚಿಂಚೊಳಿ ಇಬ್ಬರೂ ಕೂಡಿಕೊಂಡು ದಿನಾಂಕ: 29-02-2012 ರಂದು ಮಧ್ಯಾಹ್ನ ಮೋಟಾರ ಸೈಕಲ ನಂಬರ ಕೆಎ-32 ಇಎ-1303 ನೇದ್ದರ ಮೇಲೆ ಮಳಖೇಡದಿಂದ ಸೇಡಂ ಕಡೆಗೆ ಹೋರಟಾಗ ಸೇಡಂ ಕಡೆಯಿಂದ ಲಾರಿ ನಂಬರ MH-12 FZ-8351 ನೇದ್ದರ ಚಾಲಕ ಶಿವಾಜಿ ತಂದೆ ಮಹಾದೇವ ಸಾ ವರವಡ ತಾ ಮಾಡಾ ಜಿ:ಸೋಲ್ಲಾಪೂರ (ಮಹಾರಾಷ್ಟ್ರ) ಇವನು ತನ್ನ ಲಾರಿಯನ್ನು ಅತೀ ವೇಗದಿಂದ ಮತ್ತು ನಿರ್ಲಕ್ಷತನದಿಂದ ನಡೆಸಿಕೊಂಡು ಬಂದು ನಮ್ಮ ಮೋಟಾರ ಸೈಕಲಕ್ಕೆ ಡಿಕ್ಕಿ ಪಡಿಸಿದ್ದರಿಂದ ನನಗೆ ಬಲಗಾಲು ಮೋಳಕಾಲಿಗೆ ರಕ್ತಗಾಯ ಗೊಳಿಸಿ ಮತ್ತು ಮುಖಕ್ಕೆ ಹಾಗೂ ಎರಡು ಕೈಗಳಿಗೆ ತರಚಿದ ಗಾಯಗೊಳಾಗಿದ್ದು ನನ್ನ ಮೋಟಾರ ಸೈಕಲ ಹಿಂದೆ ಕುಳಿತ ನರೇಶ ಇತನಿಗೆ ಇವನಿಗೆ ತಲೆಗೆ ಭಾರಿ ರಕ್ತಗಾಯ ಹೊಂದಿ ಹಾಗೂ ಬಲಗಾಲು ತೋಡೆಗೆ ಭಾರಿ ರಕ್ತ ಗಾಯವಾಗಿ ಸ್ಥಳದಲ್ಲಿ ಮೃತಪಟ್ಟಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 17/2012 ಕಲಂ 279, 337, 304 (ಎ) ಐಪಿಸಿ ಸಂಗಡ 187 ಐಎವಿ,ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ಸ್ಟೇಷನ ಬಜಾರ ಪೊಲೀಸ ಠಾಣೆ. ಶ್ರೀ ಅನಿಲ ತಂದೆ ಶರಣಗೌಡ ಪಾಟಿಲ ಸಾ ಶಹಾಪೂರ ರವರು ನಾನು ಮತ್ತು ಮಾವನಾದ ಜಗದೀಶ ಪಾಟಿಲ್ ಇಬ್ಬರೂ ಕೂಡಿಕೊಂಡು ದಿನಾಂಕ: 29-02-2012 ರಂದು ಕಾರ ನಂ ಕೆ.ಎ 19 ಪಿ 5239 ನೇದ್ದರಲ್ಲಿ ಕಾರ್ಪೊರೇಶನ ಬ್ಯಾಂಕಿಗೆ ಹೋಗಿ 5,00000/- ರೂ ಅದರಲ್ಲಿ 1,14 ಸಾವಿರ ಸನ್ ಸೂಜಿ ಉದ್ಯೋಗ ಪ್ರಾವೇಟ ಇವರ ಹೆಸರಿಗೆ ಆರ್.ಟಿ.ಜಿ.ಎಸ್ ಮಾಡಿಸಿ ಉಳಿದ 3 ಲಕ್ಷ 86 ಸಾವಿರ ತೆಗೆದುಕೊಂಡು ಕಾರಿನಲ್ಲಿ ಕನ್ನಡ ಭವನ ಹತ್ತಿರ ಬಂದು ಆರ್.ಕೆ ಎಂಟರ್ ಪ್ರೇಸಸ್ ಗೆ ಹೋಗಿ ಸಿಸಿ ಟಿವಿ ಬಗ್ಗೆ ವಿಚಾರಿಸಿ ಮರಳಿ ಬರುವಷ್ಟರಲ್ಲಿ ಕಾರಿನಲ್ಲಿಟ್ಟ ಹಣ ಕಳ್ಳತನವಾಗಿದ್ದು ಡ್ರೈವರನಿಗೆ ವಿಚಾರಿಸಿದಾಗ ಗುಡಕಾ ತರಲು ಹೋಗಿರುವುದಾಗಿ ತಿಳಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ 20/12 ಕಲಂ 379 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಮಟಕಾ ಜೂಜಾಟ ಪ್ರಕರಣ:
ಗ್ರಾಮೀಣ ಠಾಣೆ:ದಿನಾಂಕ 29-2-2012 ರಂದು ಮಧ್ಯಾಹ್ನ ಕಪನೂರ ಏರಿಯಾದ ಮಾಸಾಫ್ತಿ ದರ್ಗಾದ ಹಿಂದುಗಡೆ ಪ್ರಬು ವಾಡಿ ಇವರ ಹೋಟೆಲದಲ್ಲಿ ಶ್ರೀ ಪ್ರಭು ತಂದೆ ಶ್ರೀಮಂತರಾವ ಬೇಲೂರೆ ಸಾ: ಮಹಾಗಾಂವ ವಾಡಿ ಹಾವರಾಮನಗರ ಗುಲಬರ್ಗಾ ಇತನು ಮಟಕಾ ಚೀಟಿ ಬರೆದುಕೊಡುತ್ತಿದ್ದಾಗ ಪಿ.ಎಸ.ಐ ರವರು ಮತ್ತು ಸಿಬ್ಬಂದಿಯವರು ದಾಳಿ ಮಾಡಿ ಆತನನ್ನು ವಶಕ್ಕೆ ತೆಗೆದುಕೊಂಡು ಮಟಜಾ ಜೂಜಾಟಕ್ಕೆ ಉಪಯೋಗಿಸಿದ ನೋಕಿಯಾ ಮೋಬಾಯಿಲ್ ಒಂದು ಕಾರ್ಬನ ಮೋಬಾಯಿಲ್ ನಗದು ಹಣ 1060-00 ಮತ್ತು ಮಟಕಾ ಚೀಟಿಗಳು ಜಪ್ತಿ ಮಾಡಿಕೊಂಡಿದ್ದರಿಂದ ಠಾಣೆ ಗುನ್ನೆ ನಂ: 63/2012 ಕಲಂ 73 (3) ಕೆಪಿಆಕ್ಟ ಪ್ಕರಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
Police Bhavan Kalaburagi
Thursday, March 1, 2012
GULBARGA DIST REPORTED CRIMES
Subscribe to:
Post Comments (Atom)
No comments:
Post a Comment