Police Bhavan Kalaburagi

Police Bhavan Kalaburagi

Friday, March 2, 2012

GULBARGA DIST REPORTED CRIMES

ವರದಕ್ಷೀಣೆ ಪ್ರಕರಣ:

ಮಹಿಳಾ ಪೊಲೀಸ್ ಠಾಣೆ: ಜರೀನಾ ಬೇಗಂ ಬಾಹೋದ್ದೀನ ಸಾ||ಇಸ್ಲಾಮಾಬಾ ಕಾಲೋನಿ ಗುಲಬರ್ಗಾ ರವರು ನನಗೆ 4 ಜನ ಹೆಣ್ಣು ಮಕ್ಕಳಿದ್ದು ಮೊದಲನೇ ಮಗಳಾದ ಸಫಿಯಾ ಬೇಗಂಳಿಗೆ ನನ್ನ ನಾದಿನಿಯ ಮಗನಾದ ಮಹ್ಮದ ಅಕ್ಬರ ಇತನಿಗೆ ಕೊಟ್ಟು ಈಗ 4 ವರ್ಷಗಳ ಹಿಂದೆ ಲಗ್ನ ಮಾಡಿದ್ದು ಲಗ್ನದ ಸಮಯದಲ್ಲಿ ಮಾತುಕತೆ ಆಡಿದ ಪ್ರಕಾರ ಬಂಗಾರ ಮತ್ತು ನಗದು ಹಣ 10,000 ಸಾವಿರ ರೂಪಾಯಿ ಕೊಟ್ಟು ಸಂಪ್ರದಾಯದಂತೆ ಲಗ್ನ ಮಾಡಿದ್ದು ಅದೆ. ನನ್ನ ಅಳಿಯ ಬೇರೆ ಹೆಣ್ಣಿನ್ನೊಂದಿಗೆ ಅನೈತಿಕ ಸಂಬಂಧ ಇಟ್ಟಿಕೊಂಡಿದ್ದರಿಂದ ನನ್ನ ಮಗಳೊಂದಿಗೆ ಅಳಿಯ ಕಿರಿಕಿರಿ ಮಾಡುತ್ತಿದ್ದನು. ಒಂದೊಂದು ದಿನ ಮನೆಗೆ ಬರುತ್ತಿರಲ್ಲಿಲ್ಲಾ. ಮನೆಗೆ ಯಾಕೆ ಬರುವುದಿಲ್ಲಾ ಅಂತಾ ಕೇಳಿದರೆ ನೀನೇನು ಕೇಳುತ್ತಿ ಅಂತಾ ಹೊಡೆ ಬಡೆ ಮಾಡುತ್ತಿದ್ದನು. ಪಕ್ಕದ ಮನೆಯವರು ಮತ್ತು ಹಿರಿಯರಾದ ಅಬ್ದುಲ ಅಜೀಮ, ಡಾ|| ಮಹ್ಮದ ಖುರಮ ಇವರೆಲ್ಲರು ಅಳಿಯನಿಗೆ ತಿಳಿಸಿ ಹೇಳಿದರು. ದಿನಾಂಕ: 01.03.2012 ರಂದು ನನ್ನ ಮಗಳು ನನ್ನ ಮನೆಗೆ ಬಂದು ನನ್ನ ಗಂಡ ನನಗೆ ನೀನು ತವರು ಮನೆಗೆ ಹೋಗು ನಾನು ಬೇರೆ ಲಗ್ನವಾಗುತ್ತೇನೆ. ಅಂತಾ ಹೊಡೆದು ಹೊರಗೆ ಹಾಕಿದ್ದಾನೆ ಅಂತಾ ಹೇಳಿದಳು. ರಾತ್ರಿ 8-00 ಗಂಟೆ ಸುಮಾರಿಗೆ ನನ್ನ ಮಗಳು ಸುಟ್ಟಿಕೊಂಡಿದ್ದಾಳೆ ಬಸವೇಶ್ವರ ಆಸ್ಪತ್ರೆಯಲ್ಲಿದ್ದಾಳೆಂದು ತಿಳಿದು ನಾನು ಮತ್ತು ನನ್ನ ಕುಟುಂಬದವರೆಲ್ಲರೂ ಆಸ್ಪತ್ರೆಗೆ ಬಂದು ವಿಚಾರಿಸಿದಾಗ, ನನ್ನ ಗಂಡನಿಗೆ ಒಂದು ಫೋನ್ ಕಾಲ ಬಂತು ಮಾತನಾಡಿ ಹೊರಗೆ ಹೋಗುತ್ತಿರುವಾಗ ಎಲ್ಲಿಗೆ ಹೋಗುತ್ತಿರಿ ಅಂತಾ ಕೇಳಿದ್ದಕ್ಕೆ ನೀನು ಯಾಕೆ ಕೇಳುತ್ತಿ ನಾನು ಎಲ್ಲಿಗಾದರೂ ಹೋಗುತ್ತೇನೆಂದರು ನಾನು ಬೇಡ ಅಂದರೆ ನನಗೆ ಕೈಯಿಂದ ಹೊಡೆದು ದಬ್ಬಿಕೊಟ್ಟು ನೀನು ಸಾಯಿ ನಾನು ಬೇರೆ ಲಗ್ನವಾಗುತ್ತೇನೆ ಅಂತಾ ಹೇಳಿ ಹೋದನು. ನಾನು ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ಇರುವುದಕ್ಕಿಂತ ಸಾಯುವುದೇ ಲೇಸು ಅಂತಾ ನಾನೇ ಸೀಮೇ ಎಣ್ಣೆ ಸುರುವಿಕೊಂಡು ಬೆಂಕಿ ಹಚ್ಚಿಕೊಂಡೇನು ಅಂತಾ ಹೇಳಿದಳು.ನನ್ನ ಮಗಳು ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಿದ ಅಳಿಯನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 20/2012 ಕಲಂ.498(ಎ), ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಕಳ್ಳತನ ಪ್ರಕರಣ:

ರೋಜಾ ಪೊಲೀಸ್ ಠಾಣೆ: ಶ್ರೀಮತಿ ಮಹ್ಮದಿ ಬೇಗಂ ಗಂಡ ಜೆ. ಶಾಹಾಬುದ್ದಿನ ಉ:ಸಹ ಶಿಕ್ಷಕಿ ನ್ಯಾಶನಲ್ ಹೈಸ್ಕೂಲ್ ಗುಲಬರ್ಗಾ ರವರು ನಾನು ದಿನಾಂಕ:01/03/2012 ರಂದು ನ್ಯಾಶನಲ ಹೈಸ್ಕೂಲ್ ಶಾಲೆಗೆ ಕರ್ತವ್ಯಕ್ಕೆ ಹೋಗಿದ್ದು ಮಧ್ಯಾಹ್ನ 3:30 ಗಂಟೆಯ ಸುಮಾರಿಗೆ 7ನೇ ತರಗತಿಯ ಕ್ಲಾಸದಲ್ಲಿ ಹೋಗಿ ವ್ಯಾನಿಟಿ ಬ್ಯಾಗನ್ನು ಕುರ್ಚಿಯ ಮೇಲೆ ಇಟ್ಟು ಮುಖ ತೊಳೆದುಕೊಂಡು ನೀರು ಕುಡಿದು ಬರುವಷ್ಟರಲ್ಲಿ ಹುಡುಗರೆಲ್ಲರೂ ಇರಲಿಲ್ಲ ಅಲ್ಲಿ ನನ್ನ ಬ್ಯಾಗ ನೋಡಿದಾಗ ಅದು ಸಹ ಇರಲಿಲ್ಲಾ ವ್ಯಾನಿಟ ಬ್ಯಾಗಿನಲ್ಲಿ ಬಂಗಾರದ ಆಭರಣ ಮತ್ತು ಒಂದು ಮೋಬಾಯಿಲ್ ಹಾಗು ನಗದು ಹಣ ಅಂದಾಜು 1000/-ರೂ. ಹೀಗೆ ಒಟ್ಟು 82500/-ರೂ. ಬೆಲೆ ಬಾಳುವವುಗಳು ಯಾರೋ ಕಳವು ಮಾಡಿಕೊಂಡು ಹೊಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ.19/2012 ಕಲಂ. 379 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

No comments: