ಹಲ್ಲೆ ಮಾಡಿ, ಕೊಲೆಗೆ ಪ್ರಯತ್ನ :
ಶಹಾಬಾದ ನಗರ ಠಾಣೆ : ಶ್ರೀ ದುರ್ಗಪ್ಪಾ ತಂದೆ ಸಾಯಿಬಣ್ಣಾ ಕಂದಳ್ಳಿ ಸಾ: ಸುಣ್ಣಾಭಟ್ಟಿ ಶಹಾಬಾದ ರವರು, ದಿನಾಂಕ 04/03/2012 ರಂದು ನಾನು ಮತ್ತು ನನ್ನ ಹೆಂಡತಿ ಲಕ್ಷ್ಮಿ ಮತ್ತು ನಮ್ಮ ಅಣ್ಣನ ಹೆಂಡತಿ ಅನ್ನಪೂರ್ಣ ಹಾಗೂ ಅಕ್ಕನ ಮಗನಾದ ದುರ್ಗಾ ಗುಲಬರ್ಗಾ ಕೂಡಿ ಮಡ್ಡಿ ನಂ 2 ರಲ್ಲಿ ಸಮುದಾಯ ಭವನ ಕಂಪೌಂಡ ಕೆಲಸಕ್ಕಾಗಿ ನಮ್ಮ ಮನೆಯ ಮುಂದೆ ಪಟ್ರಿ ಹತ್ತಿರ ಹೊಗುವಾಗ ಎದುರಗಡೆಯಿಂದ ವಿಕ್ಕಿ ಸಾ: ಹನುಮಾನ ನಗರ ತಾಂಡ ಇತನು ಬಂದವನೇ ನನ್ನ ಹೆಂಡತಿಗೆ ಡಿಕ್ಕಿ ಹೊಡೆದಿದ್ದಕ್ಕೆ ನಾನು ಕೇಳಲಾಗಿ ಸದರಿಯವನು ಜಗಳ ತೆಗೆದು ಹೋಗಿರುತ್ತಾನೆ. ನಂತರ ನಾವು ಕೆಲಸಕ್ಕೆ ಹೊಗದೆ ಮನಗೆ ಬಂದೆವು. ಆಗ ವಿಕ್ಕಿ ಮತ್ತು ಅವನ ಸಂಗಡ ನಾಗಪ್ಪಾ , ರವಿ ಇವರು ಕೈಯಲ್ಲಿ ಹಾಕಿ ಸ್ಟಿಕ , ಕ್ರಿಕೇಟ ಬ್ಯಾಟ, ಕಲ್ಲು ಹಿಡಿದುಕೊಂಡು ಬಂದು ಅವಾಚ್ಯವಾಗಿ ಬೈದು ಕೊಲೆ ಮಾಡುವ ಉದ್ದೇಶದಿಂದ ವಿಕ್ಕಿ ಸಂಗಡ ನಾಗಪ್ಪಾ ಮತ್ತು ರವಿ ನನಗೆ ಮತ್ತು ಭೀಮರಾಯ ಹೊಡೆಬಡೆ ಮಾಡಿ ರಕ್ತಗಾಯ ಮಾಡಿರುತ್ತಾರೆ. ಹಾಗೂ ಅವಾಚ್ಯವಾಗಿ ಬೈದು ಜೀವದ ಬೇದರಿಕೆ ಹಾಕಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಹಾಬಾದ ನಗರ ಠಾಣೆ ಯಲ್ಲಿ ಗುನ್ನೆ ಸಂಖ್ಯೆ 24/2012 ಕಲಂ: 324, 504, 506, 307 ಸಂ 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಮಹಿಳೆ ಕಾಣೆಯಾದ ಪ್ರಕರಣ :
ನರೋಣಾ ಠಾಣೆ :ಶ್ರೀ ಶಿವಪುತ್ರ ತಂದೆ ಚಂದ್ರಶಾ ಕ್ಯಾರ ಸಾ: ಕಡಗಂಚಿ ರವರು, ದಿನಾಂಕ:29/02/2012 ರಂದು ನನ್ನ ಹೆಂಡತಿ ಮಲ್ಲಮ್ಮ ಇವಳು ನಮ್ಮ ಹೊಲದ ಕೊಠಡಿಯ ಕಸಗುಡಿಸಲು ಹೋಗುತ್ತೇನೆ ಅಂತ ಮನೆಯಿಂದ ಹೇಳಿ ಹೋದವಳು ತಿರುಗಿ ಮನೆಗೆ ಬಂದಿರುವುದಿಲ್ಲ. ನಾನು ನಮ್ಮ ಸಂಬಧಿಕರ ಮನೆಯವರಲ್ಲಿ ಹೋಗಿ ವಿಚಾರಿಸಲು ಬಂದಿರುವದಿಲ್ಲ ವೆಂದು ತಿಳಿದು ಅಲ್ಲಿಂದ ಇಲ್ಲಿಯವರೆಗೆ ಹುಡುಕಾಡಿದರು ಸಿಕ್ಕಿರುವುದಿಲ್ಲ.
No comments:
Post a Comment