ಕಳ್ಳತನ ಪ್ರಕರಣ:
ಸ್ಟೇಶನ ಬಜಾರ ಠಾಣೆ:ಶ್ರೀ ಮಲ್ಲಿಕಾರ್ಜುನ ತಂದೆ ವಿರಭದ್ರಪ್ಪ ಕುಕುಂಧ ಉ|| ಸೇಡಂದಲ್ಲಿ ಹಾರ್ಡವೇರ್ ವ್ಯಾಪಾರ ಸಾ|| ನಾಗರ ಕಟ್ಟೆ ಸೇಡಂ ಹಾ|| ವ|| ಶ್ರೀಕಾಂತ ಪವಾರ ಇವರ ಮನೆಯಲ್ಲಿ ಬಾಡಿಗೆ ವೆಂಕಟೇಶ ನಗರ ಗುಲಬರ್ಗಾ ನಾನು ಸುಮಾರು ವರ್ಷಗಳಿಂದ ಸೇಡಂದಲ್ಲಿ ಶ್ರೀರಾಮಚಂದ್ರ ಮಿಶನ್ ಆಧ್ಯಾತ್ಮಿಕ ಸಂಸ್ಥೆ ಕೇಂದ್ರದಲ್ಲಿ, ಕೇಂದ್ರದ ಸಂಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿದೆನೆ. ಸೇಡಂದಲ್ಲಿ ಶ್ರೀರಾಮಚಂದ್ರ ಮಿಶನ್ ಸಂಸ್ಥೆ ಅಡಿಯಲ್ಲಿ ಜ್ಞಾನ ಮಂದಿರ ಕಟ್ಟಡ ರಚನೆಯಾಗುತ್ತಿದ್ದು, ಈ ಕಟ್ಟಡದ ವೆಚ್ಚಕ್ಕಾಗಿ ಕೇಂದ್ರ ಕಛೇರಿ ಚೆನೈದಿಂದ 4,00,000=00 ನಗದು ರೂಪಾಯಿ ಮಂಜೂರಾಗಿದ್ದು, ಈ ಹಣ ಗುಲಬರ್ಗಾ ಕೇಂದ್ರದ ಖಾತೆಗೆ ಜಮಾ ಆಗಿರುತ್ತದೆ. ಡಾ|| ಗಜೇಂದ್ರ ಸಿಂಗ್ ಮತ್ತು ಅಶೋಕ ಬಿರಾದಾರ ಹೆಸರಿನಿಂದ ಜೆಂಟಿ ಖಾತೆ ಇರುತ್ತದೆ. ಚೆಕ್ಕನ್ನು ಅಶೋಕ ಬಿರಾದಾರ ಇವರ ಜೋತೆಗೆ ಸ್ಟೇಟ್ ಬ್ಯಾಂಕ್ ಆಫ್ ಹೈದ್ರಾಬಾದ ಸ್ಟೇಷನ ಬಜಾರ ಶಾಖೆಗೆ ಕಳುಹಿಸಿಕೊಡುತ್ತೆನೆ ನೀವು ಆ ಬ್ಯಾಂಕಿನಲ್ಲಿ ಹೋಗಿ ಅಶೋಕ ಬಿರಾದಾರ ರವರನ್ನು ಕಂಡು ಚೆಕ್ಕ ಡ್ರಾ ಮಾಡಿದ ನಂತರ ಅವರಿಂದ 4,00,000=00 ನಗದು ರೂಪಾಯಿ ಹಣ ಪಡೆದುಕೊಳ್ಳಿ ಅಂತಾ ಹೇಳಿದ್ದರು. ದಿನಾಂಕ : 05/03/2012 ರಂದು 12.15 ಪಿ.ಎಮ್ ಕ್ಕೆ ಬ್ಯಾಂಕಿನಲ್ಲಿ ಚೆಕ್ಕನ್ನು ಡ್ರಾ ಮಾಡಿಕೊಳ್ಳುವಾಗ ಅಂದಾಜು 12.45 ಪಿ.ಎಮ್ ಆಗಿರಬಹುದು. ಹಣ ಡ್ರಾ ಆದ ನಂತರ ನಾನು ಮತ್ತು ಅಶೋಕ ಬಿರಾದಾರ ಇದೆ ಸಂಸ್ಥೆಯಲ್ಲಿ ಕೆಲಸ ಮಾಡುವ ಮನೋಹರ ಸಿಂಗ್ ಕೂಡಿ ಹಣವನ್ನು ಬ್ಯಾಂಕಿನಲ್ಲಿ ಕುಳಿತುಕೊಂಡು ಏಣಿಸಿ ನೋಡಲಾಗಿ ಸರಿ ಇದ್ದವು. 4,00,000=00 ನಗದು ರೂಪಾಯಿಗಳನ್ನು ನಾನು ತೆಗೆದುಕೊಂಡು ಹೋಗಿದ್ದ ದ್ವಿಚಕ್ರ ವಾಹನ ನಂಬರ ಕೆಎ 32 ಡಬ್ಲೂ 3401 ನೇದ್ದರ ಶೀಟಿನ ಕೆಳಗೆ (ಡಿಕ್ಕಿ) ಇಟ್ಟು ಲಾಕ ಮಾಡಿಕೊಂಡು ವಾಹನ ಸಮೇತ ಡಾ|| ಘನಾಟೆ ಆಸ್ಪತ್ರೆಯ ಹಿಂದೆ ಅಪೈರ್ ಲೈನ್ ಕಾಲೋನಿಯಲ್ಲಿರುವ ಕಾಯಿ ಪಲ್ಯ ಅಂಗಡಿಗೆ ಹೋಗಿ ಉಳ್ಳಾಗಡ್ಡಿ ತೆಗೆದುಕೊಂಡು ಮನೆಗೆ ಹೋಗಬೇಕು ಅಂತಾ ನಿರ್ಧರಿಸಿ ತರಕಾರಿ ಅಂಗಡಿ ಹತ್ತಿರ ದ್ವಿಚಕ್ರ ವಾಹನ ನಿಲ್ಲಿಸಿ ವಾಹನದ ಲಾಕ್ ವಾಹನದಲ್ಲಿಯೇ ಬಿಟ್ಟು ಉಳ್ಳಾಗಡ್ಡಿ ಖರೀದಿಮಾಡಿಕೊಂಡು ವಾಹನದ ಹತ್ತಿರ ಬಂದು ನೋಡಲಾಗಿ ವಾಹನದ ಲಾಕ್ ಡಿಕ್ಕಿಗೆ ಇತ್ತು. ಡಿಕ್ಕಿ ತೆಗೆದು ನೋಡಲಾಗಿ ನಾನು ವಾಹನದ ಡಿಕ್ಕಿಯಲ್ಲಿಟ್ಟದ್ದ 4,00,000=00 ನಗದು ರೂಪಾಯಿಗಳನ್ನು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿದ್ದಾರೆ. ಕಾಯಿ ಪಲ್ಯ ಮಾರಾಟ ಮಾಡುವ ಹೆಣ್ಣು ಮಗಳಿಗೆ ನನ್ನ ಗಾಡಿಯ ಹತ್ತಿರ ಯಾರು ಬಂದಿದ್ದರು ಅಂತಾ ಕೇಳಲಾಗಿ ಎರಡು ಜನ ಹುಡುಗರು ಅದರಲ್ಲಿ ಒಬ್ಬನು ಇನ್ ಶರ್ಟ ಮಾಡಿದ್ದ, ಮತ್ತೊಬ್ಬನ್ನು ನೀಲಿ ಬಣ್ಣದ ಟಿ. ಶರ್ಟ ಹಾಕಿದ್ದ ಅವರಿಬ್ಬರು ಕೂಡಿ ನಿಮ್ಮ ಗಾಡಿಯ ಡಿಕ್ಕಿ ತೆರೆದು ಒಳಗಡೆ ಇದ್ದ ಒಂದು ಕ್ಯಾರಿ ಬ್ಯಾಗನ್ನು ತೆಗೆದುಕೊಂಡು ಅವರು ತಂದಿದ ಮೋಟಾರ ಸೈಕಲ್ ಮೇಲೆ ಕುಳಿತುಕೊಂಡು ಹೋಗಿದ್ದಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ 21/12 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಯು.ಡಿ.ಅರ್. ಪ್ರಕರಣ:
ನರೋಣಾ ಪೊಲೀಸ ಠಾಣೆ: ಶ್ರೀ ರಸೂಲ ತಂದೆ ದಸ್ತಗಿರಿ ನಾಗೂರೆ ಸಾ: ಬೆಳಮಗಿ ರವರು ನನ್ನ ತಂದೆ ದಸ್ತಗಿರಿ ನಾಗೂರೆ ವಯ: 65 ವರ್ಷ ಇತನು ಮನೆಯಿಂದ ಮುಂಜಾನೆ 8-00 ಗಂಟೆಯ ಸುಮಾರಿಗೆ ಕಟ್ಟೆಗೆ ಖರೀದಿಸಲು ಹೋಗಿ ಬರುತ್ತೇನೆ ಅಂತಾ ಹೇಳಿ ಹೋಗಿರುತ್ತಾರೆ. ಆದರೆ ಕಲ್ಯಾಣರಾವ ಸಂಭಾಜಿ ರವರ ತೋಟದ ತಗಡದ ಕೊಟ್ಟಿಗೆಯಲ್ಲಿ ಬಿದ್ದಿರುವದನ್ನು ತಿಳಿದುಕೊಂಡು ಸ್ಥಳಕ್ಕೆ ಹೋಗಿ ನೋಡಲು ತಮ್ಮ ತಂದೆಯವರು ಉತ್ತರ ಕ್ಕೆ ತಲೆ ಮಾಡಿ ಅಂಗಾಂತಾಗಿ ಬಿದ್ದಿದ್ದು ಹತ್ತಿರ ಯಾವುದೋ ಕ್ರಿಮಿನಾಶಕ ಔಷಧಿಯ ವಾಸನೆ ಬರುತ್ತಿದ್ದು ಎಬ್ಬಿಸಲು ಎಳಲಿಲ್ಲ ಬಾಯಿಯಿಂದ ಬಿಳಿಯ ಬೂರುಗು ಬಂದಿದ್ದು ತಂದೆಯವರು ಮೃತ ಪಟ್ಟಿದ್ದು ತಂದೆಯವರು ವಿ ಕೆ ಸಲಗರ ಕೆ ಬಿ ಬ್ಯಾಂಕಿನಲ್ಲಿ 1 ಲಕ್ಷ ರೂಪಾಯಿ ಸಾಲ ಮಾಡಿದ್ದು ಹಾಗೂ ಮನೆಯ ನಡೆಸುವ ಸಮಸ್ಯೆಯಲ್ಲಿ ಮಾನಸಿಕ ಮಾಡಿಕೊಂಡು ಕ್ರಿಮಿನಾಶಕ ಔಷದಿ ಸೇವನೆ ಮಾಡಿ ಆತ್ಯ ಹತ್ಯೆ ಮಾಡಿಕೊಂಡಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಯುಡಿಆರ್ ನಂ 02/2012 ಕಲಂ 174 ಸಿ ಆರ್ ಪಿ ಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ: ಶ್ರೀ ರಾಣಪ್ಪ ತಂದೆ ಸಂಬಣ್ಣಾ ದೊಡ್ಡಮನಿ ಸಾ: ಕೆರೆ ಭೋಸಗಾ ಗ್ರಾಮ ತಾ:ಜಿ: ಗುಲಬರ್ಗಾರವರು ನಾನು, ನನ್ನ ಮಗ ಶರಣಬಸಪ್ಪ, ಮತ್ತು ಸಿದ್ರಾಮಪ್ಪ ಮೂರು ಜನರು ಹೊಲದಿಂದ ಕೆಲಸ ಮುಗಿಸಿಕೊಂಡು ಎತ್ತಿನ ಬಂಡಿಯಲ್ಲಿ ಕುಳಿತುಕೊಂಡು ಮನೆಗೆ ಕಡೆ ಹೊರಟಿದ್ದು ಹಿಂದಿನಿಂದ (ಗುಲಬರ್ಗಾ) ಕಡೆಯಿಂದ ಹಿರೋ ಹೊಂಡಾ ಕರಿಶ್ಮಾ ಸವಾರ ಬಾಹು ಬಲಿ ತಂದೆ ಜವಾಹರ ಲಾಲ ಹೊಸಳ್ಳಿ ಸಾ: ಜೈನ ಗಲ್ಲಿ ಆಳಂದ ಇತನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸುತ್ತಾ ನಮ್ಮ ಎತ್ತಿನ ಬಂಡಿಗೆ ಡಿಕ್ಕಿ ಹೊಡೆದಿದ್ದರಿಂದ ಡಿಕ್ಕಿ ಹೊಡೆದ ರಭಸಕ್ಕೆ ಬಂಡಿಯ ತೊಟ್ಟಿಲು ಮತ್ತು ಹಂದಿಗೊಡ್ಡ ಜಾಯಿಂಟ ಮುರಿದಿದ್ದು ಇರುತ್ತದೆ. ಅಲ್ಲದೇ ಎತ್ತಿನ ಬಂಡಿಯಲ್ಲಿದ್ದ ಜನರಿಗೆ ಮತ್ತು ಮೋಟಾರ ಸೈಕಲ ಮೇಲೆ ಬಿದ್ದ ಇಬ್ಬರಿಗೂ ಸಾದಾ ಮತ್ತು ಭಾರಿ ರಕ್ತಗಾಯವಾಗಿರುತ್ತವೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 69/2012 ಕಲಂ 279,337,338 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ: ಶ್ರೀ ಶೈಲೇಸ ತಂದೆ ಸುರೇಶ ಕಾಂಬಳೆ ಸಾ: ಘಾಟಗೇ ಲೇಔಟ್ ಗುಲಬರ್ಗಾರವರು ನಾನು ಮತ್ತು ನನ್ನ ಗೆಳೆಯ ವೆಂಕಟೇಶ ದಿಃ05-03-12 ರಂದು ರಾತ್ರಿ 9-30 ಗಂಟೆ ಸುಮಾರಿಗೆ ಶರಣಸಿರಸಗಿ ಹೋಗಿ ಬರುವಾಗ ಅನಿಲ, ಚೇತನ, ಅರುಣ ರವರು ಕೂಡಿಕೊಂಡು ಬಡಿಗೆಯಿಂದ ಪಂಚನಿಂದ ಹೊಡೆದು ರಕ್ತಗಾಯಗೊಳಿಸಿ ಜೀವದ ಭಯ ಹಾಕಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 70/2012 ಕಲಂ 341, 323,324, 504, 506 (2) ಸಂ.34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
No comments:
Post a Comment