Police Bhavan Kalaburagi

Police Bhavan Kalaburagi

Monday, March 12, 2012

GULBARGA DIST REPORTED CRIMES

ಹಲ್ಲೆ ಪ್ರಕರಣ:
ನಿಂಬರ್ಗಾ ಪೊಲೀಸ ಠಾಣೆ:
ಶ್ರೀ ಅಣ್ಣಾರಾವ ತಂದೆ ಲಕ್ಷ್ಮಣ ರಾಠೋಡ ಸಾ ನಿಂಬರ್ಗಾ ತಾಂಡಾರವರು ದಿನಾಂಕ 09/03/2012 ರಂದು ಹೋಳಿ ಹುಣ್ಣಿಮೆ ಪ್ರಯುಕ್ತ ಅಪ್ಪಾರಾವ ಇತನು ನನ್ನ ಅಳಿಯ ರಾಜುನೊಂದಿಗೆ ತಕರಾರು ಮಾಡಿದ್ದು, ಈ ಕಾರಣಕ್ಕಾಗಿ ರಮೇಶನು ನನ್ನ ಹಾಗೂ ನನ್ನ ಕಡೆಯವರ ಹೆಸರು ತೆಗೆದು ಚಿರಾಡುತ್ತಿರುವಾಗ ನಾನು ಮತ್ತು ನನ್ನ ಸಂಗಡಿಗರು ಕೇಳಲು ಹೋಗಿದ್ದಕ್ಕೆ ರಮೇಶ ತಂದೆ ಶಂಕರ ಚವ್ಹಾಣ ಇನ್ನೂ 7 ಜನರು ಎಲ್ಲರೂ ಸಾ ನಿಂಬರ್ಗಾ ತಾಂಡ ರವರು ಅವಾಚ್ಯವಾಗಿ ಬೈದು ನನಗೆ ಮತ್ತು ನನ್ನ ಸಂಗಡಿಗರಿಗೆ ಕಲ್ಲಿನಿಂದ , ಬಡಿಗೆಯಿಂದ ಹೊಡೆದು ರಕ್ತಗಾಯಪಡಿಸಿ ಕಾಲಿನಿಂದ ಒದ್ದು ಒಳಪೆಟ್ಟು ಮಾಡಿ ಕೊಲೆಗೆ ಪ್ರಯತ್ನಿಸಿರುತ್ತಾರೆ ಅಂತ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 20/2012 ಕಲಂ 143, 147, 148, 323, 324, 307, 504, 149 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ನಿಂಬರ್ಗಾ ಪೊಲೀಸ ಠಾಣೆ:
ಶ್ರೀ ಮಹೇಶ ತಂದೆ ಶಂಕರ ಚವ್ಹಾಣ ಸಾ ನಿಂಬರ್ಗಾ ತಾಂಡಾರವರು ನನ್ನ ಚಿಕ್ಕಪ್ಪ ಮತ್ತು ತಮ್ಮ ತಾಂಡಾದ ರಾಜು ಚವ್ಹಾಣ ಇವರ ಮಧ್ಯೆ ದಿನಾಂಕ 09/03/2012 ರಂದು ನಡೆದ ವಾದ ವಿವಾದದ ಸಂಬಂಧವಾಗಿ ದಿನಾಂಕ 11/03/2012 ರಂದು ಮುಂಜಾನೆ ಅಣ್ಣಾರಾವ ತಂದೆ ಲಕ್ಷ್ಮಣ ರಾಠೋಡ ಇನ್ನೂ 7 ಜನರು ಗುಂಪು ಕಟ್ಟಿಕೊಂಡು ನಮ್ಮ ಮನೆಯ ಮುಂದೆ ಅವಾಚ್ವವಾಗಿ ಬೈದು ನನಗೆ ಹಾಗೂ ನನ್ನ ಕಡೆಯವರಿಗೆ ಕಲ್ಲಿನಿಂದ , ಬಡಿಗೆಯಿಂದ ಹೊಡೆದು ರಕ್ತಗಾಯ ಪಡಿಸಿ ಕಾಲಿನಿಂದ ಒದ್ದು ಒಳಪೆಟ್ಟು ಮಾಡಿ ಕೊಲೆಗೆ ಪ್ರಯತ್ನಿಸಿರುತ್ತಾರೆ ಅಂತ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 19/2012 ಕಲಂ 143, 147, 148, 323, 324, 307, 504, 149 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.


ಅಪಘಾತ ಪ್ರಕರಣ:
ಚಿತ್ತಾಪೂರ ಠಾಣೆ:
ಶ್ರೀ ಭೀಮರಾಯ ತಂದೆ ಸಿದ್ದವೀರಪ್ಪಾ ಸಾ ಭಾಗೋಡಿ ರವರು ನನ್ನ ತಮ್ಮನಾದ ಚಂದ್ರಶೇಖರ ಮತ್ತು ಅಳಿಯ ಶರಣಬಸಪ್ಪ ರವರು ಹೋಟೆಲ ಮಾಲು ತರಲು ಚಿತ್ತಾಪೂರಕ್ಕೆ ಹಿರೋ ಹೊಂಡಾ ಸ್ಪ್ಲೆಂಡರ್ ದ್ವಿ-ಚಕ್ರ ವಾಹನದ ಮೇಲೆ ದಿನಾಂಕ; 11-03-2012 ರಂದು ಹೋಗಿ ಮರಳಿ ಭಾಗೋಡಿಗೆ ಬರುತ್ತಿರುವಾಗ ಚಿತ್ತಾಪೂರ ಬಸ್ಸ ಡಿಪೋ ಸಮೀಪ ಶರಣಬಸಪ್ಪಾ ಇತನು ಅತೀವೇಗ ಮತ್ತು ಅಲಕ್ಷತನದಿಂದ ನಡೆಯಿಸಿ ಹೊಸ ಸೇತುವೆ ಕಟ್ಟುವ ತೆಗ್ಗಿನಲ್ಲಿ ಇಬ್ಬರೂ ಬಿದ್ದದರಿಂದ ಚಂದ್ರಶೇಖರ ಇತನು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ಶರಣಬಸಪ್ಪಾನಿಗೆ ಗಾಯಗಳಾಗಿರುತ್ತವೆ. ಹೊಸ ಸೇತುವೆ ಕಟ್ಟುವ ಸಲುವಾಗಿ ಸೇತುವೆ ಗುತ್ತೆದಾರನು ರಸ್ತೆ ತಿರುವಿಕೆ ಮಾರ್ಗ ಸೂಚಿ ಮತ್ತು ಯಾವದೇ ಸಿಗ್ಬಲ್ ಹಾಕದೇ ನಿಷ್ಕಾಳಜಿತನ ತೋರಿಸಿರುತ್ತಾರೆ. ಕಾರಣ ಸದರಿಯವರ ಮೇಲೆ ಸೂಕ್ತ ಕ್ರಮ ಕೈಕೊಳ್ಳಲು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 23/2012 ಕಲಂ 279, 338, 304 (ಎ) ಐಪಿಸಿ ಸಂಗಡ 288ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

No comments: