Police Bhavan Kalaburagi

Police Bhavan Kalaburagi

Tuesday, March 13, 2012

GULBARGA DIST REPORTED CRIMES

ಬೆಂಕಿ ಅನಾಹುತ:

ಅಫಜಲಪೂರ ಪೊಲೀಸ್ ಠಾಣೆ: ಪರಮೇಶ್ವರ ತಂದೆ ಶೆಟ್ಟೆಪ್ಪ ಒಳಸಂಗ ಸಾ|| ಶೇಷಗಿರಿವಾಡಿರವರು ನನ್ನ ಗುಡಿಸಲಿಗೆ ನಿನ್ನೆ ದಿನಾಂಕ 11/3/2012 ರಂದು ಮದ್ಯಾಹ್ನ 1 ಗಂಟೆ ಸುಮಾರಿಗೆ ಆಕಸ್ಮಿಕವಾಗಿ ಬೆಂಕಿ ಹತ್ತಿದ್ದು, ಒಂದು ಗುಡಿಸಲಿಗೆ ಬೆಂಕಿ ಹತ್ತಿದ್ದರಿಂದ ಗಾಳಿ ವಾತವರಣದಿಂದ ಒಂದಕ್ಕೊಂದು ಬೆಂಕಿ ಚಾಚುತ್ತಾ ಒಟ್ಟು 13 ಗುಡಿಸಲುಗಳು ಮತ್ತು ಮನೆಯಲ್ಲಿದ್ದ ದಿನನಿತ್ಯಕ್ಕೆ ಸಾಮಾನುಗಳು ,ಧವಸ ಧಾನ್ಯಗಳು, ಆಡುಗಳು, 1 ಆಕಳು, 1 ಕರು ಹೀಗೆ ಒಟ್ಟು ಅ.ಕಿ. 8,20,000/- ರೂ. ಮೌಲ್ಯದಷ್ಟು ಲುಕ್ಸಾನು ಆಗಿರುತ್ತದೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಎಫ್. ಎ. ನಂ. 4/2012 ರ ಪ್ರಕಾರ ದಾಖಲು ಮಾಡಿಕೊಂಡಿರುತ್ತಾರೆ.

ಕಳ್ಳತನ ಪ್ರಕರಣ:

ಚೌಕ ಪೊಲೀಸ್ ಠಾಣೆ: ವಿರಯ್ಯ ತಂದೆ ತುಕ್ಕಪ್ಪಾ ಮರಿ ಸಾ|| ಭೇಮಳಖೇಡ ತಾ|| ಹುಮನಬಾದ ಜಿ|| ಬೀದರ ರವರು ನಾನು ಮತ್ತು ನನ್ನ ಗೆಳೆಯ ಬಿಚ್ಚರೆಡ್ಡಿ ಕೂಡಿಕೊಂಡು ಹಮನಬಾದ ಕೋರ್ಟಗೆ ಬಂದು ಮಾರಟ ಹಣ 2 ಲಕ್ಷ 80 ಸಾವಿರ ರೂಪಾಯಿಗಳನ್ನು ಜೋತೆಯಲ್ಲಿ ತೆಗೆದುಕೊಂಡು ಗುಲಬರ್ಗಾಕ್ಕೆ ಬಂದು ನನ್ನ ತಂಗಿಯ ಮನೆಗೆ ಹೋಗುವ ಕುರಿತು ಒಂದು ಅಟೋದಲ್ಲಿ ಕುಳಿತುಕೊಂಡು ಹೊರಟಾಗ ಚಂದ್ರಮೋಹನ ಹೊಟೇಲ ಮುಂದೆ ಮುಖ್ಯ ರಸ್ತೆಯ ಪಕ್ಕದಲ್ಲಿ ಅಟೋ ನಿಲ್ಲಿಸಿದ್ದು, ಅಟೋದಲ್ಲಿ ಕುಳಿತ ಆ ಮನುಷ್ಯನು ಅಟೋ ಚಾಲಕನಿಗೆ ಹಣ ನೀಡುತ್ತಿರುವಾಗ ಸುಮಾರು 20-25 ವರ್ಷದವನು ನನ್ನ ತೊಡೆಯ ಮೇಲೆ ಪ್ಲಾಸ್ಟಿಕ ಚೀಲದಲ್ಲಿ ಇಟ್ಟುಕೊಂಡಿದ್ದ ಹಣದ ಬ್ಯಾಗನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 34/2012 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಕಳ್ಳತನ ಪ್ರಕರಣ:

ಅಶೋಕ ನಗರ ಠಾಣೆ: ಶ್ರೀ ಬಾಲಚಂದ್ರ ತಂದೆ ಶೇಷಪ್ಪಾ ಬಾಚಾ ಸಾ: ಪ್ಲಾಟ ನಂ.60 , 2ನೇ ಕ್ರಾಸ ಶಿವ ಮಂದಿರ ಹತ್ತಿರ ಗೊದುತಾಯಿ ನಗರ ಗುಲಬರ್ಗಾ ರವರು ನಾವು ದಿನಾಂಕ 08/03/2012 ರಂದು ಸಂಜೆ 6 ಗಂಟೆಗೆ ಮನೆಗೆ ಬೀಗ ಹಾಕಿಕೊಂಡು ನನ್ನ ಹೆಂಡತಿ ಅಕ್ಕಳ ಮಗನ ಮದುವೆ ಕಾರ್ಯಕ್ರಮಕ್ಕೆ ನಾವು ಕುಟುಂಬ ಸಮೇತ ನಾಗಪೂರಕ್ಕೆ ಹೊಗಿದ್ದು, ಮದುವೆ ಕಾರ್ಯಕ್ರಮ ಮುಗಿಸಿಕೊಂಡು ದಿನಾಂಕ 12/03/2012 ರಂದು ಬೆಳಿಗ್ಗೆ 7 ಗಂಟೆಗೆ ಮನೆಗೆ ಬಂದು ನೊಡಲು ಯಾರೋ ಕಳ್ಳರು ಅಡುಗೆ ರೂಮಿನ ಔಟ ಸೈಡ ಬಾಗಿಲಿನ ಬೀಗ ಮುರಿದು 665 ಗ್ರಾಂ ಬಂಗಾರದ ಆಭರಣಗಳು ಮತ್ತು 6.5 ಕೆ.ಜಿ ಬೆಳ್ಳಿಯ ಪೂಜಾ ಸಾಮಾನುಗಳು ಮತ್ತು 35,000/- ರೂಪಾಯಿ ನಗದು ಹಣ ಸೇರಿ ಒಟ್ಟು 21,72,000/- ರೂಪಾಯಿ ಮೌಲ್ಯದ ಬಂಗಾರ ಬೆಳ್ಳಿ ಆಭರಣಗಳು ಕಳ್ಳತನ ಆಗಿರುತ್ತವೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ. 21/2012 ಕಲಂ. 457, 380 ಐಪಿಸಿ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

No comments: