Police Bhavan Kalaburagi

Police Bhavan Kalaburagi

Wednesday, March 14, 2012

GULBARGA DIST REPORTED CRIMES


ಹಲ್ಲೆ ಪ್ರಕರಣ:
ಕಮಲಾಪೂರ ಠಾಣೆ:
ಶ್ರೀ ರವೀಂದ್ರನಾಥ ತಂದೆ ಶರಣಪ್ಪ ಮೋಗಾ ಸಾ ಕಿಣ್ಣಿಸಡಕ ಗ್ರಾಮ ತಾಜಿಗುಲಬರ್ಗಾರವರು ನಮಗೆ ನಮ್ಮೂರ ಸಂಜೀವಕುಮಾರ ಹೊಸಮನಿ ಈತನು ನಮ್ಮ ಸಂಭಂದಿಕರಾದ ಬಾಬುರಾವ ಸೊನ್ನದಿ ಮತ್ತು ಸುಂದರಾಬಾಯಿ ಪಂಡರಗೇರಾ ಇವರ ವಿರುದ್ದ ಕಳೆದ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು ಬಂದಿದ್ದರಿಂದ ಆಗಾಗ ತಕರಾರು ಆಗುತ್ತಿದೆ, ಆ ಕಾರಣಕ್ಕಾಗಿ ಸಂಜೀವಕುಮಾರ ಮತ್ತು ಆತನ ಅಣ್ಣ ತಮ್ಮಂದಿರು ನಮ್ಮೊಂದಿಗೆ ವಿನಾಃಕಾರಣ ವೈಮನಸ್ಸು ಬೆಳಸಿಕೊಂಡು ಬಂದಿರುತ್ತಾರೆ. 1 ತಿಂಗಳ ಹಿಂದೆ ಸಂಜೀವ ಕುಮಾರ ಈತನು ಮೃತಪಟ್ಟಿರುತ್ತಾನೆ. ದಿನಾಂಕ: 13/03/2012 ರಂದು ಬೆಳೆಗ್ಗೆ ನಾನು ಸಂಜೀವಕುಮಾರ ಈತನ ಮನೆಯ ಮುಂದಿನ ರಸ್ತೆಯ ಮುಖಾಂತರ ಹೋಗುತ್ತಿದ್ದಾಗ ಈತನ ಅತ್ತಿಗೆ ಕವಿತಾ ಹೊಸಮನಿ ಇವಳು ನನ್ನನ್ನು ನೋಡಿ ಅವಾಚ್ಯವಾಗಿ ಬೈಯುತ್ತಿದ್ದಾಗ ವಿನಾಃಕಾರಣ ಅವಾಚ್ಯವಾಗಿ ಬೈಯ್ಯುವುದು ಸರಿ ಕಾಣುವುದಿಲ್ಲ ಅಂತಾ ಹೇಳಿ ನಾನು ರಸ್ತೆಯ ಮೇಲೆ ನಡೆದುಕೊಂಡು ಹೋಗುತ್ತಿದ್ದಾಗ ಕವಿತಾ ಇವಳ ಗಂಡ ರಾಜೇಂದ್ರ ಹೊಸಮನಿ ಮತ್ತು ಶರಣಪ್ಪ ಇಂಗನಕಲ್ಲ ಇವರು ಬಡಿಗೆಯಿಂದ ಹೊಡೆಬಡೆ ಮಾಡಿರುತ್ತಾರೆ, ಜಗಳ ಬಿಡಿಸಲು ಬಂದ ನನ್ನ ಹೆಂಡತಿ ಲಲಿತಾ ಇವಳಿಗೂ ಹೊಡೆ ಬಡೆ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 28/2012 ಕಲಂ. 341, 323, 324, 504 ಸಂ. 34 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಕಮಲಾಪೂರ ಠಾಣೆ:
ಶ್ರೀಮತಿ, ಕವಿತಾ ಗಂಡ ರಾಜೇಂದ್ರ ಹೊಸಮನಿ ಸಾಕಿಣ್ಣಿಸಡಕ ಗ್ರಾಮ ತಾಜಿಗುಲಬರ್ಗಾರವರು ನನ್ನ ಮೈದುನಾದ ಸಂಜಿವಕುಮಾರ ಇತನು ಕಳೆದ ಗ್ರಾಮ ಪಂಚಾಯತ ಚುನಾವಣೆಯಲ್ಲಿ ನಮ್ಮ ಗ್ರಾಮದ ಸುಂದರಬಾಯಿ ಇವಳ ವಿರುದ್ದ ಗೆದ್ದು ಬಂದಿದ್ದರಿಂದ ಇವಳ ಮಕ್ಕಳಾದ ರಾಹುಲ ಪಂಡರಗೇರಾ ರವರು ನಮ್ಮೊಂದಿಗೆ ವೈಷಮ್ಯ ಬೆಳೆಸಿಕೊಂಡು ಆಗಾಗ ತಕರಾರು ಮಾಡಿಕೊಂಡು ಬರುತ್ತಿದ್ದಾರೆ, ಸುಮಾರು 1 ತಿಂಗಳ ಹಿಂದೆ ನನ್ನ ಮೈದುನ ಸಂಜುಕುಮಾರ ಈತನು ಮೃತಪಟ್ಟಿರುತ್ತಾನೆ. ದಿನಾಂಕ:13/3/12 ರಂದು ಬೆಳಿಗ್ಗೆ ನಾನು ನಮ್ಮ ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ ನಮ್ಮ ಗ್ರಾಮದ ಲಲಿತಾಬಾಯಿ ಗಂಡ ರವಿ ಮತ್ತು ರವಿ ತಂದೆ ಶರಣಪ್ಪಾ ಹಾಗು ರಾಹುಲ್ ತಂದೆ ಶಂಕರ ಎಲ್ಲರೂ ಕೂಡಿಕೊಂಡು ನಮ್ಮ ಮನೆ ಮುಂದೆ ಬಂದು ವಿನಾಃಕಾರಣ ನನಗೆ ಅವಾಚ್ಯವಾಗಿ ಬೈದು ಹೋದ ಗ್ರಾಮ ಪಂಚಾಯತ ಚುನಾವಣೆಯಲ್ಲಿ ನಮಗೆ ಅನ್ಯಾಯ ಮಾಡಿ ಗೆದ್ದಿದ್ದಿರಿ ಈಗ ಸುಂಜುಕುಮಾರ ಈತನು ಮೃತಪಟ್ಟಿದ್ದು ದೇವರು ನಿಮಗೆ ಸರಿಯಾಗಿ ಬುದ್ದಿ ಕಲಿಸಿದ್ದಾನೆ. ಅಂತಾ ಅವಾಚ್ಯವಾಗಿ ಬೈಯುತ್ತಿದ್ದರು. ನಾನು ಮನೆಯಿಂದ ಹೊರಗೆ ಬಂದು ಯಾಕೆ ಸುಮ್ಮನೆ ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದಿರಿ, ಇದು ಸರಿಯಲ್ಲಾ ನಮ್ಮ ಮೈದುನ ತೀರಿಕೊಂಡಿದ್ದು ನಮಗೆ ದುಖಃವಾಗಿದೆ ಸುಮ್ಮನೇ ಹೋಗಿರಿ ಅಂತಾ ಹೇಳಿ ಮನೆ ಕಡೆಗೆ ಹೋಗುತ್ತಿದ್ದಾಗ ಹೊಡೆ ಬಡೆ ಮಾಡಿರುತ್ತಾರೆ, ಮನೆಯಲ್ಲಿದ್ದ ನನ್ನ ಗಂಡ ರಾಜೇಂದ್ರ ಮತ್ತು ನಾದಿನಿ ಇವರು ಜಗಳ ಬಿಡಿಸಲು ಬಂದಾಗ ಅವರಿಗೂ ಸಹ ಹೊಡೆಬಡೆ ಮಾಡಿರುತ್ತಾರೆ, ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ. 29/2012 ಕಲಂ. 341, 323, 324, 504 ಸಂ. 34 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

No comments: