Police Bhavan Kalaburagi

Police Bhavan Kalaburagi

Thursday, March 15, 2012

GULBARGA DIST REPORTED CRIMES

ಹಲ್ಲೆ ಪ್ರಕರಣ:
ಸುಲೇಪೇಟ ಠಾಣೆ:
ನಾಗೇಶ ತಂದೆ ಸಾಬಣ್ಣ ಕುಕುಂದಿ ಸಾಃ ಭೂತಪೂರ ರವರು ನಾನು ದಿನಾಂಕಃ 14/03/2012 ರಂದು ಸಾಯಂಕಾಲ 4:30 ಗಂಟೆಯ ಸುಮಾರಿಗೆ ನಾಗಪ್ಪ ಕೊಡದೂರ ಇವರ ಚಹಾ ಹೊಟೆಲಕ್ಕೆ ಚಹಾ ಕುಡಿಯಲು ಹೋಗಿದ್ದಾಗ ಚಹಾ ಹೊಟೆಲ ಒಳಗಿನಿಂದ ನಮ್ಮೂರ ಬಾಲರಾಜ ತಂದೆ ರಾಮಚಂದ್ರ ಹಡಪಾದ ಇತನು ನನಗೆ ಡಿಕ್ಕಿ ಹೊಡೆದಿದ್ದು ನಾನು ಯಾಕೆ? ಅಂತಾ ಕೇಳಿದಕ್ಕೆ ಆತನು ನಿನೆ ನನಗೆ ಡಿಕ್ಕಿ ಹೊಡೆದು ಕೇಳುತ್ತಿಯಾ ಅಂತಾ ಅವಾಚ್ಯ ಶಬ್ದಗಳಿಂದ ಬೈದು ಚಾಕುವಿನಿಂದ ಬಲಗೈ ಅಂಗೈಗೆ ಹೊಡೆದು ರಕ್ತಗಾಯ ಪಡಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 30/2012 ಕಲಂ. 324, 504, 506 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಸಂಚಾರಿ ಪೊಲೀಸ್ ಠಾಣೆ:
ಶ್ರೀ ಮಹ್ಮದ ಉಮರ ಫಾರೂಕ ತಂದೆ ಮಹ್ಮದ ಇಬ್ರಾಹಿಂ, ಸಾಃ ಮ. ನಂ. 4-601-65/ಎ3 ಎಮ್.ಬಿ.ನಗರ ಗುಲಬರ್ಗಾರವರು ನಾನು ದಿನಾಂಕ 13-03-2012 ರಂದು ಗೋಲಾ ಚೌಕ ಇರುವ ಸೋನಾ ಅಟೋ ಮೋಬೈಲ್ಸ ಎದುರು ಸಿ.ಸಿ ರೋಡಿನ ಮೇಲೆ ನಡೆದುಕೊಂಡು ಹೋಗುತ್ತಿದ್ದಾಗ ಮೋಟಾರ ಸೈಕಲ ನಂಬರ ಕೆ.ಎ 32 ವೈ 5739 ನೇದ್ದರ ಸವಾರನು ಎಮ್.ಎ.ಟಿ ಕ್ರಾಸ ಕಡೆಯಿಂದ ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಡೆದುಕೊಂಡು ಹೋಗುತ್ತಿದ್ದ ನನಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ ತನ್ನ ಮೋಟಾರ ಸೈಕಲ ಸಮೇತ ಓಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:15/2012 ಕಲಂ 279, 338, ಐಪಿಸಿ ಸಂಗಡ 187 ಐ.ಎಮ.ವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ದರೋಡೆ ಪ್ರಕರಣ:
ಅಶೋಕ ನಗರ ಠಾಣೆ:
ಶ್ರೀಮತಿ. ಶ್ರತಿ ಗಂಡ ಮಲ್ಲಣ್ಣಾ ಮಾಡಬೂಳ ಸಾ: ಪ್ಲಾಟ ನಂ. 70 ಕೊತಂಬರಿ ಲೇಔಟ ಗುಲಬರ್ಗಾ ರವರು ನಾನು ನನ್ನ ಗೆಳತಿ ಸುಮಾ ಗಂಡ ಬಾಬುರೆಡ್ಡಿ ರವರೊಂದಿಗೆ ಮಾತಾಡಿಕೊಂಡು ಮರಳಿ ಮನೆಗೆ ನಡೆದುಕೊಂಡು ದಿನಾಂಕ 14-03-2012 ರಂದು ರಾತ್ರಿ 8-20 ಗಂಟೆ ಸುಮಾರಿಗೆ ಲೈಟ (ಕರೆಂಟ) ಹೋಗಿರುವ ಸಮಯದಲ್ಲಿ ಬರುತ್ತಿರುವಾಗ ಕೊತಂಬರಿ ಲೇಔಟ 4 ನೇ ಕ್ರಾಸಿಗೆ ಎದರುಗಡೆಯಿಂದ ಒಬ್ಬ ಮೊಟರ ಸೈಕಲ ಸವಾರನು ಬಂದವನೇ ನನ್ನ ಕೊರಳಿಗೆ ಕೈ ಹಾಕಿ 4 ತೊಲೆ ಬಂಗಾರದ ತಾಳಿ ಚೈನು (ಮಂಗಳಸೂತ್ರ)ವನ್ನು ಕಿತ್ತಿಕೊಂಡು ಹೋಗಿರುತ್ತಾನೆ. ಕತ್ತಲಲ್ಲಿ ಅವನ ಮುಖ ಮತ್ತು ವಾಹನದ ಸಂಖ್ಯೆ ಕಾಣಿಸಿರುವುದಿಲ್ಲಾ. ನನ್ನ 4 ತೊಲೆಯ ಬಂಗಾರದ ತಾಳಿ ಚೈನು (ಮಂಗಳಸೂತ್ರ) ಅದರ ಅಂದಾಜು ಮೊತ್ತ 1,00,000/- (ಒಂದು ಲಕ್ಷ ರೂಪಾಯಿ) ಬೆಲೆಬಾಳುವದಾಗಿರುತ್ತದೆ ಅಂತಾ ಲಿಖಿತ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಅಶೋಕ ನಗರ ಪೊಲೀಸ ಠಾಣೆ ಗುನ್ನೆ ನಂ. 23/2012 ಕಲಂ. 392 ಐಪಿಸಿ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ವರದಕ್ಷಿಣೆ ಕಿರುಕುಳ ಪ್ರಕರಣ:
ಮುಧೋಳ ಠಾಣೆ:
ಶ್ರೀಮತಿ ಸುನಿತಾ ಗಂಡ ನಾಗಲಿಂಗಯ್ಯಾ ಸ್ವಾಮಿ ರವರು ನನ್ನ ಮದುವೆ ದಿನಾಂಕ: 25-02-2008 ರಂದು ನಾಗಲಿಂಗಯ್ಯ ಸ್ವಾಮಿ ಜೋತೆ ನಡೆದಿದ್ದು, ಲಗ್ನದ ಕಾಲಕ್ಕೆ 5 ತೊಲಿ ಬಂಗಾರ ಹಾಗೂ ಒಂದು ಲಕ್ಷ ರೂಪಾಯಿ ಹಣ ವರದಕ್ಷಿಣೆ ರೂಪದಲ್ಲಿ ಕೊಟ್ಟಿದ್ದು ನನಗೆ ಇನ್ನೂ ವರದಕ್ಷಿಣೆಯ ರೂಪದಲ್ಲಿ 2 ತೊಲಿ ಬಂಗಾರ ತವರು ಮನೆಯಿಂದ ತೆಗೆದುಕೊಂಡು ಬಾ ಅಂತಾ ಒತ್ತಾಯಿಸಿ ಹೊಡೆ ಬಡೆಮಾಡಿ ಮಾನಸಿಕ ಹಾಗೂ ದೈಹಿಕವಾಗಿ ಕಿರುಕುಳ ನೀಡುತ್ತಿದ್ದು ದಿನಾಂಕ: 14-03-2012 ರಂದು ಮುಂಜಾನೆ 8-30 ಗಂಟೆಗೆ ಸುನಿತಾ ಇವಳು ತನ್ನ ತವರು ಮನೆಯಾದ ಬೀದರಛೇಡ ಗ್ರಾಮದ ತಂದೆ-ತಾಯಿಯವರ ಮನೆಯಲ್ಲಿದ್ದಾಗ ನಾಗಲಿಂಗಯ್ಯನು ಸುನಿತಾಳಿಗೆ ಹೊಡೆಬಡೆಮಾಡಿ ಮಾನಸಿಕ ಹಾಗೂ ದೈಹಿಕವಾಗಿ ಕಿರುಕುಳ ನೀಡಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ. 24/2012 ಕಲಂ: 498(ಎ) ಐಪಿಸಿ ಮತ್ತು 3,4 ಡಿ.ಪಿ ಎಕ್ಟ್-1961 ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

No comments: