Police Bhavan Kalaburagi

Police Bhavan Kalaburagi

Monday, March 19, 2012

GULBARGA DIST REPORTED CRIMES


ಹಲ್ಲೆ ಪ್ರಕರಣ:
ಮಾದನ ಹಿಪ್ಪರಗಾ ಪೊಲೀಸ್ ಠಾಣೆ :
ಶ್ರೀ. ಬೇನಕಪ್ಪ ತಂದೆ ಅಣ್ಣಪ್ಪ ಸೂಸೈಟಿ ಸಾ: ಸರಸಂಬಾ ರವರು ನಾನು ದಿನಾಂಕ 17/03/2012 ರಂದು ರಾತ್ರಿ ನಮ್ಮ ಅಣ್ಣ ತಮ್ಮಕಿಯವರಾದ ಸಿದ್ದಲಿಂಗಪ್ಪ ತಂದೆ ರೇವಪ್ಪ ಸೂಸೈಟಿ ಮತ್ತು ಸಂಜುಕುಮಾರ ತಂದೆ ಸಿದ್ದಲಿಂಗಪ್ಪ ಸೂಸೈಟಿ ಹಾಗೂ ರಾಜಕುಮಾರ ತಂದೆ ಸಿದ್ದಲಿಂಗಪ್ಪ ಸೂಸೈಟಿ ಸಾ: ಎಲ್ಲರೂ ಸರಸಂಬಾ ಗ್ರಾಮದವರು ಇವರು ನಮ್ಮ ಮನೆಯಲ್ಲಿ ಅಕ್ರಮವಾಗಿ ಪ್ರವೇಶ ಮಾಡಿ ಹೊಲದ ಬಾಂದಾರಿಯ ವಿಷಯದ ಸಂಬಂದವಾಗಿ ತಕರಾರು ಮಾಡಿ ನನಗೆ ಮತ್ತು ನನ್ನ ಹೆಂಡತಿ ಪಾರ್ವತಿಗೂ ಅವಾಚ್ಯವಾಗಿ ಬೈದು ಹೊಡೆ ಬಡೆ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದಠಾಣೆ ಗುನ್ನೆ ನಂ: 8/2012 ಕಲಂ 323, 448, 504, 506 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಮುದೋಳ ಠಾಣೆ:
ನರಸಿಂಹಲು ತಂದೆ ನರಸಪ್ಪಾ ಮಡಿವಾಳ ಸಾ ಪಾಕಾಲ ಗ್ರಾಮ ಈತನು ಮೇದಕ ಬಸ್ಟಾಂಡ ಎದುರುಗಡೆ ಕೋಡಂಗಲ ಯಾದಗಿರಿ ರಸ್ತೆಯಲ್ಲಿ ನಿಲ್ಲಿಸಿದ ಟ್ರಾಕ್ಟರ ನಂ. ಎಪಿ-07 ವೈ-2173/ಎಪಿ-29 ಜಿ 8950 ನೇದ್ದರಿಂದ ಇಳಿದು ಮೂತ್ರ ವಿಸರ್ಜನೆ ಮಾಡಲು ರಸ್ತೆ ದಾಟುವ ಕಾಲಕ್ಕೆ ಯಾನಾಗುಂದಿ ಕಡೆಯಿಂದ ಹೊರಟಿದ್ದ ಬುಲೆರೋ ನಂಬರ. ಎಪಿ-22-ಎಎ 8900 ನೇದ್ದರ ಚಾಲಕನಾದ ತನ್ನ ವಾಹನವನ್ನು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ನಡೆಸುತ್ತಾ ಬಂದು ರಸ್ತೆ ದಾಟುತ್ತಿದ್ದ ನರಸಿಂಹಲು ಈತನಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದು ಈ ಅಪಘಾತದಲ್ಲಿ ನರಸಿಂಹಲುಗೆ ಭಾರಿಗಾಯವಾಗಿ ಕೋಡಂಗಲ ಸರಕಾರಿ ಆಸ್ಪತ್ರೆಯಲ್ಲಿ ಉಪಚರಿಸುತ್ತಿರುವಾಗ ಮೃತ ಪಟ್ಟಿರುತ್ತಾನೆ ಅಂತಾ ಶ್ರೀ ದೊಡ್ಡ ಸಾಯಪ್ಪಾ ತಂದೆ ಕಾಶಪ್ಪಾ ಮಡಿವಾಳ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ. 27/2012 ಕಲಂ: 279,304 (ಎ) ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

No comments: