Police Bhavan Kalaburagi

Police Bhavan Kalaburagi

Tuesday, March 20, 2012

GULBARGA DIST REPORTED CRIMES

ಅಪಘಾತ ಪ್ರಕರಣ:

ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ: ಶ್ರೀ ಪುಂಡಲಿಕ ತಂದೆ ಭೀಮಶಾ ಕೋರೆ ಸಾ:ಮನೆ ನಂ:ಎಲ್.ಐ.ಜಿ.104 ಹೌಸಿಂಗ ಬೋರ್ಡ ಕಾಲೋನಿ ಹಳೆ ಜೇವರ್ಗಿ ಕಾಲೋನಿ ಗುಲಬರ್ಗಾ ರವರು ದಿನಾಂಕ: 18-03-2012 ರಂದು 13=00 ದಿಂದ 14=00 ಪಿ.ಎಮ್.ಗಂಟೆಯ ಸುಮಾರಿ ಆರ್.ಪಿ.ಸರ್ಕಲ್ ದಿಂದ ಜೇವರ್ಗಿ ರೋಡ ಮಧ್ಯ ರೋಡಿನಲ್ಲಿ ಬರುವ ಓವರ ಬ್ರೀಜ್ ಹತ್ತಿರ ಆರೋಪಿ ಮೋಟಾರ ಸೈಕಲ್ ನಂಬರ ಕೆಎ-36 ವಿ-6087 ನೇದ್ದನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ವಾಹನಕ್ಕೆ ಡಿಕ್ಕಿ ಪಡಿಸಿದ್ದರಿಂದ ನನ್ನ ಹಿಂದೆ ಕುಳಿತು ವ್ಯಕ್ತಿಗೆ ಭಾರಿಗಾಯವಾಗಿದ್ದು, ಮೋಟಾರ ಸೈಕಲ ಸವಾರನು ಅಪಘಾತ ಪಡಿಸಿ ತನ್ನ ಮೋಟಾರ ಸೈಕಲ್ ಸಮೇತ ಓಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 34/2012 ಕಲಂ: 279,338 ಐ.ಪಿ.ಸಿ ಸಂ:187 ಐ.ಎಮ್.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಅಪಘಾತ ಪ್ರಕರಣ:

ಗುಲಬರ್ಗಾ ಗ್ರಾಮೀಣ ಠಾಣೆ: ಶ್ರೀ ವಿಶಾಲ ತಂದೆ ಮದುಕರ ಕಾಂಬಳೇ ಸಾ: ಕೆಕೆ ನಗರ ಗುಲಬರ್ಗಾರವರು ನಾನು ದಿನಾಂಕ: 19/3/12 ರಂದು ಮುಂಜಾನೆ ಮಾಸಾಬ್ದಿ ದರ್ಗಾದ ಹತ್ತಿರ ಟಂ ಟಂ ನಂಬರ ಕೆಎ 28 ಎ-5288 ನೇದ್ದರಲ್ಲಿ ಕಟ್ಟಿಗೆ ತರಲು ಹೋಗುತ್ತಿದ್ದಾಗ ಹುಮನಾಬಾದ ಕಡೆಯಿಂದ ಕ್ರೋಜರ್ ಜೀಪ ನಂ ಕೆಎ 35 8029 ನೇದ್ದರ ಚಾಲಕ ಅತೀವೇಗ & ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ನಾನು ಕುಳಿತ ಟಂ ಟಂಗೆ ಡಿಕ್ಕಿ ಪಡೆಸಿದ್ದರಿಂದ ಟಂ ಟಂ ಪಲ್ಟಿಯಾಗಿ ಬಿದ್ದಿದ್ದರಿಂದ ನನಗೆ ಹಾಗೂ ಟಂ ಟಂ ಚಾಲಕ ಮತ್ತು ನನ್ನ ಗೆಳೆಯನಿಗೆ ಭಾರಿ ಮತ್ತು ಸಾದಾಗಾಯಗಳಾಗಿರುತ್ತವೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 86/2012 ಕಲಂ 279 337 338 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

No comments: