Police Bhavan Kalaburagi

Police Bhavan Kalaburagi

Sunday, March 25, 2012

GULBARGA DIST REPORTED CRIMES


ಅತ್ಯಾಚಾರ ಪ್ರಕರಣ:
ಸುಲೇಪೇಟ ಪೊಲೀಸ್ ಠಾಣೆ:  ದಿನಾಂಕಃ 16/03/2012 ರಂದು ದಸ್ತಾಪೂರದ ಅತ್ತೆ ಮನೆಗೆ ಹೋಗಿದ್ದು, ಮಧ್ಯರಾತ್ರಿ ದಿನಾಂಕಃ 17/03/2012 ರಂದು ನಾನು ಸರಕಾರಿ ಶಾಲೆಯ ಹತ್ತೀರ ಬಹಿರ್ದೆಸೆಗೆ ಹೋಗುವ ಸಮಯದಲ್ಲಿ ಪರಮೇಶ್ವರ @ ಅಪ್ಪು ತಂದೆ ನಾಗಪ್ಪ ಡೋಣಿ ಸಾಃ ದಸ್ತಾಪೂರ ಇತನು ನನಗೆ ಚಾಕು ತೋರಿಸಿ ಜೀವ ಬೇದರಿಕೆ ಹಾಕಿ ಶಾಲೆಯ ಗ್ರೌಂಡ ಹತ್ತೀರ ಕರೆದುಕೊಂಡು ಹೋಗಿ ಜಬರಿ ಸಂಭೋಗ ಮಾಡಿ ದಿನಾಂಕಃ 18/03/2012 ರಂದು ಬೆಳಿಗ್ಗೆ 8:00 ಗಂಟೆಗೆ ಮದುವೆಯಾಗಲು ಪರಮೇಶ್ವರನೊಂದಿಗೆ ಸುಲೇಪೇಟ ಪೊಲೀಸ್ ಠಾಣೆಗೆ ಬರುತ್ತಿರುವಾಗ ದಾರಿಯಲ್ಲಿ ಅಮೃತ ವಾಹನ ಚಾಲಕ ಸರಕಾರಿ ಆಸ್ಪತ್ರೆ ಸುಲೇಪೇಟ ಮತ್ತು ಅವನ ಹೆಂಡತಿಯಾದ ಸುಬ್ಬಮ್ಮ ಇವರು ಬಂದು ಅವಳಿಗೆ ಯಾಕೆ ಮದುವೆಯಾಗುತ್ತಿ, ನಿನಗೆ ಬೇರೆ ಮದುವೆ ಮಾಡಿಸುತ್ತೆವೆ. ನಾವು ಏನು ಬಂದರು ನೋಡಿಕೊಳ್ಳುತ್ತೆವೆ ಅಂತಾ ಹೇಳಿರುತ್ತಾರೆ. ನಾಗಪ್ಪ ತಂದೆ ತಿಪ್ಪಣ್ಣ ಡೋಣಿ ಹಾಗೂ ಕಲಾವತಿ @ ನಾಗಮ್ಮಾ ಗಂಡ ನಾಗಪ್ಪ ಡೋಣಿ ಸಾಃ ದಸ್ತಾಪೂರ ಇವರು ನನ್ನ ಮಗ ಸರಕಾರಿ ನೌಕರಿಯಲ್ಲಿದ್ದಾನೆ 5 ತೊಲೆ ಬಂಗಾರ ಹಾಗೂ 2 ಲಕ್ಷ ರೂಪಾಯಿ ಒಂದು ಹಿರೋ ಹೊಂಡಾ ಮೋಟಾರ ಸೈಕಲ ಮತ್ತು ವರದಕ್ಷಿಣೆ ಕೊಟ್ಟರೆ ಮದುವೆ ಮಾಡಿಸುತ್ತೆವೆ ಅಂತಾ ಹೇಳಿರುತ್ತಾರೆ ಅಂತಾ ನೊಂದ ಯುವತಿ ದೂರು ಸಲ್ಲಿಸಿದ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣಾ ಗುನ್ನೆ ನಂ. 31/2012 ಕಲಂ. 506, 504, 376, 109 ಸಂ. 149 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡಿರುತ್ತಾರೆ.
ಜೂಜಾಟ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ: ದಿನಾಂಕ 24-03-12 ರಂದು ಸಂಜೆ 5-00 ಗಂಟೆ ಸುಮಾರಿಗೆ ವೈಭವ ಟ್ರಾನ್ಸಪೋರ್ಟ ಎದುರುಗಡೆ ಖುಲ್ಲಾ ಜಾಗೆಯಲ್ಲಿ ಪ್ರವೀಣ ತಂದೆ ರೇವಣಸಿದ್ಧಪ್ಪ ಕೋರವಾರ ವ:34 ಸಾ: ಕೈಲಾಸ ನಗರ ಗುಲಬರ್ಗಾ, ಪ್ರಶಾಂತ ತಂದೆ ಕಮಲಾಕರ ವೀರಶಟ್ಟಿ ವ:32 ವರ್ಷ ಸಾ: ಆರ್.ಎಸ್. ಕಾಲನಿ ಗುಲಬರ್ಗಾ, ಹಣಮಂತ ತಂದೆ ಕಲ್ಯಾಣಪ್ಪ ತೇಲಿ ವ:24 ವರ್ಷ ಸಾ: ಸೈಯ್ಯದ ಚಿಂಚೋಳಿ, ವಿರೇಶ ತಂದೆ ನಾಗಪ್ಪ ಬಡಿಗೇರ ವ:30 ವರ್ಷ ಸಾ: ಬಸವೇಶ್ವರ ಕಾಲನಿ ಗುಲ್ಬರ್ಗಾ,ಭೀಮಾಶಂಕರ ತಂದೆ ಶಾಮಣ್ಣಾ ಕೊರವಿ ವ:31ವರ್ಷ ಸಾ: ಬಸವೇಶ್ವರ ಕಾಲನಿ ಗುಲಬರ್ಗಾರವರು ದುಂಡಾಗಿ ಕುಳಿತುಕೊಂಡು ಇಸ್ಟೇಟ ಜೂಜಾಟ ಆಡುತ್ತಿದ್ದ ಬಗ್ಗೆ ಬಾತ್ಮಿ ಮೇರೆಗೆ ಪಿ.ಎಸ.ಐ ಮತ್ತು ಠಾಣೆಯ ಸಿಬ್ಬಂದಿಯವರು ಕೂಡಿಕೊಂಡು ಪಂಚರ ಸಮಕ್ಷಮ ದಾಳಿ ಮಾಡಿ ಆವರನ್ನು ವಶಕ್ಕೆ ತೆಗೆದುಕೊಂಡು ಅವರಿಂದ ನಗದು ಹಣ 8190/- ರೂ. ಮತ್ತು ಇಸ್ಪೇಟ ಎಲೆಗಳು ಜಪ್ತಿ ಮಾಡಿಕೊಂಡಿದ್ದರ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 92/2012 ಕಲಂ 87 ಕೆ.ಪಿ.ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಹರಣ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ: ಶ್ರೀ ಮಯೂರ ತಂದೆ ವಿಜಯಕುಮಾರ ಪುಕಾಳೇ ಸಾ|| ಪುಣಾಣಿ ಗಲ್ಲಿ ಗುಲಬರ್ಗಾರವರು ನಾನು ಮತ್ತು ನಸ್ರೀನ ಇವಳು ಬೇರೆ ಬೇರೆ ಜಾತಿಗೆ ಸೇರಿದವರಾಗಿದ್ದು, ನನ್ನ ಮತ್ತು ನಸ್ರೀನ ಇವರ ಮಧ್ಯೆ ಪ್ರೀತಿ ಬೆಳೆದು ದಿನಾಂಕ 22-01-2012 ರಂದು ಮನೆ ಬಿಟ್ಟು ಹೋಗಿ ದಿನಾಂಕ 31-01-2012 ರಂದು ಯಾದಗೀರ ಕೋರ್ಟ ಹಿಂದುಗಡೆಯಿರುವ ಲಕ್ಷ್ಮೀ ದೇವಸ್ಥಾನದಲ್ಲಿ ಮದುವೆ ಮಾಡಿಕೊಂಡಿರುತ್ತೆವೆ. ನಾವು ಮದುವೆಯಾಗುವದಕ್ಕೆ ಮನೆಯವರು ವಿರೋಧ ವ್ಯಕ್ತ ಪಡಿಸಿದ್ದು ಇರುತ್ತದೆ. ದಿನಾಂಕ 3-03-2012 ರಂದು ರಾತ್ರಿ 8-00 ಗಂಟೆ ಸುಮಾರಿಗೆ ಮುಕ್ತಾರ ಅತ್ತಾರ, ಪರವೀನ ತಂದೆ ಮುಕ್ತಾರ ಅತ್ತಾರ ಸಾ: ಇಬ್ಬರು ಶುಕ್ರವಾರ ಪೇಟ್ ಕೋಂಟಮ್ ಚೌಕ ಸೋಲಾಪೂರ ಮತ್ತು ಇತರರು ಮಾಹಾರಾಷ್ಟ ರಾಜ್ಯ ತನ್ನ ಮಗಳಾದ ನಸ್ರೀನ ಇವಳಿಗೆ ಮಾತಾಡುವದಿದೆ ಮತ್ತು ಭೇಟ್ಟಿಯಾಗುವದಿದೆ ಎಂದು ಹೇಳಿ ಗುಲಬರ್ಗಾದ ಮಸಾಪ್ತಿ ದರ್ಗಾ ಹತ್ತಿರ ಕರೆಯಿಸಿಕೊಂಡ ಮೇರೆಗೆ ನಾವು ಹೋದಾಗ ನಮ್ಮ ಜಾತಿ ಬೇರೆ ನಿಮ್ಮ ಜಾತಿ ಬೇರೆ ನಿಮ್ಮ ಮದುವೆ ಒಪ್ಪುದಿಲ್ಲಾವೆಂದು ಹೇಳಿ ನಸ್ರೀನ ಇವಳನ್ನು ಜಬರ ದಸ್ತಿಯಿಂದ ಟಾಟಾ ಸುಮೊದಲ್ಲಿ ಅಪಹರಿಸಿಕೊಂಡು ಹೋಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:93/2012 ಕಲಂ 365 366 368 504 506 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಕುಡಿತದ ಚಟಕ್ಕೆ ಬಲಿಯಾಗಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ:

ಬ್ರಹ್ಮಪೂರ ಠಾಣೆ: ಶ್ರೀಮತಿ.ಕಮಲಾಬಾಯಿ ಗಂಡ ಸಿದ್ದಣ್ಣ ಚಾಣಕರ್, ಸಾ|| ಜಗತ ಗುಲಬರ್ಗಾ ರವರು ನನಗೆ 4 ಜನ ಹೆಣ್ಣು ಮಕ್ಕಳು ಪ್ರಕಾಶ ಅಂತಾ ಒಬ್ಬ ಗಂಡು ಮಗ ಇದ್ದು, 4 ಜನ ಹೆಣ್ಣು ಮಕ್ಕಳ ಮದುವೆ ಮಾಡಿದ್ದು, ಪ್ರಕಾಶ ಈತನಿಗೆ ಇನ್ನೂ ಮದುವೆಯಾಗಿರುವದಿಲ್ಲ. ಮಗ ಪ್ರಕಾಶ ಈತನು ಯಾವುದೇ ಕೆಲಸ ಮಾಡದೆ ಕುಡಿತದ ಚಟಕ್ಕೆ ಬಲಿಯಾಗಿದ್ದು, 7-8 ದಿವಸಗಳ ಹಿಂದೆ ಕುಡಿದ ಅಮಲಿನಲ್ಲಿ ಬಂದು ನೀವು ಹಣ ಕೊಡದೆ ಇದ್ದರೆ ನಾನು ಮೈಗೆ ಬೆಂಕಿ ಹಚ್ಚಿಕೊಂಡು ಆತ್ಮ ಹತ್ಯೆ ಮಾಡಿಕೊಳ್ಳುತ್ತೇನೆ ಅಂತಾ ಹೇಳಿದ್ದನು, ಈ ಹಿಂದೆಯು ಕೂಡ 2006 ನೇ ಸಾಲಿನಲ್ಲಿ ಮೈಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿರುತ್ತಾನೆ , ದಿನಾಂಕ: 24/03/2012 ರಂದು ರಾತ್ರಿ 9:00 ಗಂಟೆಯ ಸುಮಾರಿಗೆ ನಾನು ನನ್ನ ಮಗಳು ಪೂರ್ಣಿಮಾ, ಮತ್ತು ಪ್ರೀಯಾ ಮೂರು ಜನರು ಕೂಡಿಕೊಂಡು ಮೆಲಗಡೆ ಮಹಡಿ ಕೋಣೆಯಲ್ಲಿ ಟಿ.ವ್ಹಿ ನೋಡುತ್ತಾ ಇದ್ದೇವು. ಕೆಳಗಡೆ ಅಡುಗೆ ಕೋಣೆಯಲ್ಲಿ ಹೊಗೆ ಬರುವದನ್ನು ನೋಡಿ ನಾವು ಮೂರು ಜನರು ಕೆಳಗೆ ಬಂದು ನೋಡಲು ನಮ್ಮ ಮಗ ಪ್ರಕಾಶ ಈತನು ಕೊರಳಿಗೆ ಮತ್ತು ಎರಡು ಕೈಗೆ ಹಗ್ಗ ಕಟ್ಟಿಕೊಂಡು ಮೈಮೇಲೆ ಸೀಮೆ ಎಣ್ಣೆ ಸುರಿದುಕೊಂಡು ಮೈಗೆ ಬೆಂಕಿಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಯು.ಡಿ.ಆರ್ ನಂ:5/2012 ಕಲಂ: 174 ಸಿ.ಆರ್.ಪಿ.ಸಿ .ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ

No comments: