Police Bhavan Kalaburagi

Police Bhavan Kalaburagi

Monday, March 26, 2012

GULBARGA DIST REPORTED CRIMES


ಅಪಘಾತ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ:
ಶ್ರೀಮತಿ ಪಾರ್ವತಿ ಗಂಡ ವಿಶ್ವನಾತ ನಾಲವಾರ ಸಾ; ಎ.ಬಿ.ಎಲ್. ಹೌಸಿಂಗ ಸೊಸಾಯಿಟಿ ಶಾಂತನಗರ ಭಂಕೂರ ರವರು ನನ್ನ ಗಂಡ ವಿಶ್ವನಾಥ ಹಾಗೂ ವಿಜಯ ಸಾರಾಥಿ ರವರು ಕೂಡಿಕೊಂಡು ಹೂಂಡಾ ಎಕ್ಟಿವ್ ದ್ವಿಚಕ್ರ ನಂ: ಕೆ.ಎ-32/ಆರ್- 9753 ನೇದ್ದರ ಮೇಲೆ ದಿನಾಂಕ: 25/03/2012 ರಂದು ಮುಂಜಾನೆ ಎ.ಬಿ.ಎಲ್.ದಿಂದ ಶಹಾಬಾದಕ್ಕೆ ಹೋಗುತ್ತಿರುವಾಗ ಮಾರ್ಗ ಮದ್ಯದಲ್ಲಿ ಭೀಮಶಪ್ಪಾ ನಗರ ಹತ್ತಿರ ಇರುವ ರೋಡಿಗೆ ಹಾಕಿದ ಜಂಪಿನಲ್ಲಿ ವಿಜಯ ಸಾರಾಥಿ ಇತನು ನನ್ನ ದ್ವಿಚಕ್ರ ವಾಹನವನ್ನು ಅತೀವೇಗ ಮತ್ತು ನಿಷ್ಕಾಳಜಿತನ ಚಲಾಯಿಸಿಕೊಂಡು ಒಮ್ಮೇಲೆ ಬ್ರೇಕ್ ಹಾಕಿದ್ದರಿಂದ ಹಿಂದೆ ಕುಳಿತ ನನ್ನ ಗಂಡ ವಿಶ್ವನಾಥ ಕೆಳಗೆ ಬಿದ್ದು ಬಲ ಎದೆಗೆ ಬಾರಿ ಒಳಪೆಟ್ಟು ಮತ್ತು ಎಡಗೈ ಮೊಳಕೈಗೆ ರಕ್ತಗಾಯವಾಗಿದ್ದು. ಜಿಂಗಾಡೆ ಆಸ್ಪತ್ರೆಗೆ ಉಪಚಾರ ಕುರಿತು ಸೇರಿಕೆ ಮಾಡಿದ್ದು ಉಪಚಾರ ಹೊಂದುತ್ತಾ ಮೃತಪಟ್ಟಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:30/2012 ಕಲಂ 279,304 [ಎ] ಐಪಿಸಿ ಸಂ 187 ಐ.ಎಂ.ವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಗ್ರಾಮೀಣ ಪೊಲೀಸ ಠಾಣೆ:
ಶ್ರೀ ಮೋಬಿನ ತಂದೆ ಮಶಾಕ ಪಟೇಲ ಸಾ: ತಾವರಗೇರಾ ಗ್ರಾಮ ತಾ:ಜಿ: ಗುಲಬರ್ಗಾರವರು ನಾನು ನಾಗೀ ಹೊಲದಲ್ಲಿ ಕ್ರಿಕೆಟ ಆಟ ಆಡಿ ಮುಗಿಸಿಕೊಂಡು ನನ್ನ ಗೆಳೆಯರೊಂದಿಗೆ ಮನೆಯ ಕಡೆಗೆ ಹೊರಟಾಗ ಬೀರಪ್ಪ ಗುಡಿ ಹತ್ತಿರ ಬಂದಾಗ ಮಲಕಪ್ಪ ತಂದೆ ಚಂದ್ರಕಾಂತ ಪೂಜಾರಿ ಈತನು ನನ್ನ ಹತ್ತಿರ ಬಂದು ಅವಾಚ್ಯವಾಗಿ ಬೈದು ಹೊಡೆ ಬಡೆ ಮಾಡಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 94/2012 ಕಲಂ 504, 324 ಐಪಿಸಿ ಪ್ರಕಾರ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

No comments: