Police Bhavan Kalaburagi

Police Bhavan Kalaburagi

Tuesday, March 27, 2012

GULBARGA DIST REPORTED CRIMES

ಕೊಲೆ ಪ್ರಕರಣ:
ನಿಂಬರ್ಗಾ ಪೊಲೀಸ ಠಾಣೆ:
ಶ್ರೀ ವೀರಭದ್ರಪ್ಪ ತಂದೆ ಭೀಮರಾವ ಮಲಶೆಟ್ಟಿ ಸಾ ದುತ್ತರಗಾಂವ ರವರು ನಮ್ಮ ತಂದೆಯಾದ ಭೀಮರಾವ ಇವರು ದಿನಾಂಕ 26/03/2012 ರಂದು ರಾತ್ರಿ ದೇವರ ಭಾವಿಯ ಹತ್ತಿರ ಸಂಡಾಸಕ್ಕೆ ಹೋದಾಗ ರಾತ್ರಿ 8-30 ಗಂಟೆಯಿಂದ 9-15 ಗಂಟೆಯ ಮಧ್ಯದ ಅವಧಿಯಲ್ಲಿ ಯಾರೋ ದುಷ್ಕರ್ಮಿಗಳು ಹರಿತವಾದ ಆಯುಧದಿಂದ ಕುತ್ತಿಗೆಯ ಬಲಭಾಗಕ್ಕೆ ಬಲವಾಗಿ ಹೊಡೆದು ಕೊಲೆ ಮಾಡಿರುತ್ತಾರೆ ಕೊಲೆ ಮಾಡಿದವರನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಜರುಗಿಸಬೇಕು ಅಂತ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ. 23/2012 ಕಲಂ 302, 201 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ .
ಕಳ್ಳತನ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ:
ಶ್ರೀ ಮಹ್ಮದ ಸೀರಾಜೋದ್ದಿನ ಪಟೇಲ್ ತಂದೆ ಗುಲಾಮ ಮೋಹೀಯೋದ್ದಿನ ಸಾ: ಖಮರ ಕಾಲೋನಿ ಗುಲಬರ್ಗಾರವರು ನನ್ನ ಹೆಸರಿನಲ್ಲಿ ಟಾಟಾ ಕಂಪನಿಯ TIPPER No. KA 32 B 1566 ನೇದ್ದು ಇದಕ್ಕೆ ಟಿಪ್ಪರ ಚಾಲಕನಾಗಿ ಲಾಲ ಅಹ್ಮದ ತಂದೆ ಪಾಶುಮಿಯ್ಯಾ ಸಾ: ಮುಸ್ಲಿಂ ಸಂಘ ಗುಲಬರ್ಗಾರವರು ಸುಮಾರು 4 ವರ್ಷಗಳಿಂದ ಚಾಳಕ ಅಂತಾ ಕೆಲಸ ಮಾಡುತ್ತಿದ್ದಾರೆ, ದಿನಾಲು ಕೆಲಸದ ಮುಗಿದ ಮೇಲೆ ನಮ್ಮ ಟಿಪ್ಪರರನ್ನು ಲಂಗಾರ ಹುನುಮಾನ ನಗರದ ಇಮ್ಮಾಮ ಸಾಬ ಇಟ್ಟಂಗಿ ಭಟ್ಟಿಯ ಖುಲ್ಲಾ ಜಾಗೆಯಲ್ಲಿ ನಿಲ್ಲಿಸುತ್ತಿದ್ದು ಅದೇ ರೀತಿ ದಿನಾಂಕ 25.03.2012 ರಂದು ಲಂಗಾರ ಹುನುಮಾನ ನಗರದಲ್ಲಿರುವ ಇಮ್ಮಾಮ ಸಾಬ ಇವರ ಭಟ್ಟಿಯಲ್ಲಿ ಟಿಪ್ಪರನ್ನು ನಿಲ್ಲಿಸಿ ಚಾಲಕನು ಮನೆಗೆ ಹೋಗಿ ಬೆಳಗ್ಗೆ 4.30 ಗಂಟೆಗೆ ಶಹಾಪೂರಕ್ಕೆ ಹೋಗಬೇಕಾಗಿರುವದರಿಂದ ಬಂದು ನೋಡಿದಾಗ ನಿಲ್ಲಿಸಿದ ಸ್ಥಳದಲ್ಲಿ TIPPER No. KA 32 B 1566 ಇರುವದಿಲ್ಲ ಅಂತಾ ಟಿಪ್ಪರ ಚಾಲಕ ಲಾಲ ಅಹ್ಮದ ಈತನು ಫೋನ ಮುಖಾಂತರ ತಿಳಿಸಿದನು ನಾನು ಸ್ಥಳಕ್ಕೆ ಬಂದು ನೋಡಲು ಸದರಿ ಸ್ಥಳದಲ್ಲಿ ಟಿಪ್ಪರ ಇರಲಿಲ್ಲಾ ಎಲ್ಲಾ ಕಡೆಗಳಲ್ಲಿ ಹುಡುಕಾಡಲಾಗಿ ಟಿಪ್ಪರ ಸಿಕ್ಕಿರುವದಿಲ್ಲ ಟಿಪ್ಪರ ಮಾದರಿ, 2010,ಟಿಪ್ಪರ ಕಲರ್-ಬಿಳಿ & ಆರೇಜ್ ,ಚಸ್ಸಿಸ್ ನಂ:MAT373134A1804261,ಇಂಜನನಂ:697TC56AZY103412, ಅಂದಾಜು ಕಿಮ್ಮತ್ತು 10 ಲಕ್ಷ /- ರೂ ಆಗುತ್ತದೆ. ಕಾರಣ ಕಳೆದು ಹೋದ ನನ್ನ ಟಿಪ್ಪರ ಪತ್ತೆ ಮಾಡಿಕೊಡಬೇಕು ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:96/2012 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಕಾಳಗಿ ಪೊಲೀಸ್ ಠಾಣೆ:
ಶ್ರೀ ದಸ್ತಗಿರಸಾಬ ತಂದೆ ಇಮಾಮ ಸಾಬ ಕೋಹಿರ ಉ ಕೂಲಿ ಕೆಲಸ ಸಾ ಗೋಟುರ ತಾ ಚಿತ್ತಾಪೂರರವರು ನಾನು ಮತ್ತು ನನ್ನ ಮಗಳಾದ ತಬಸುಮಾ ವಯ 18 ವರ್ಷ ಇಬ್ಬರೂ ಕೂಡಿಕೊಂಡು ದಿನಾಂಕ: 27/03/2012 ರಂದು ಮುಂಜಾನೆ 11-00 ಗಂಟೆಯ ಸುಮಾರಿಗೆ ಗೋಟೂರ ಗ್ರಾಮದಿಂದ ಕಾಳಗಿಗೆ ಹೋಗುವ ಕುರಿತು ಗೋಟೂರ ಗ್ರಾಮದ ಬಸ್ಸ ನಿಲ್ದಾಣದ ಎದುರಿಗೆ ಇರುವ ಸುವರ್ಣ ಗ್ರಾಮದ ಅಡಿಗಲ್ಲು ಕಟ್ಟೆಯ ಹತ್ತಿರ ಕುಳಿತ್ತಿದ್ದಾಗ ಮಹಿಂದ್ರಾ ಜೀಪ ನಂಬರ ಕೆಎ: 36. ಎಮ್: 6789 ನೇದ್ದರ ಚಾಲಕ ಗುರುಶಾಂತಪ್ಪಾ ತಂದೆ ಹಣಮಂತರಾವ ಮುತ್ತಗಿ ಸಾ ಗೋಟೂರ ಇತನು ಅತಿವೇಗ ಹಾಗು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ತಬಸುಮಾ ಇವಳಿಗೆ ಡಿಕ್ಕಿ ಪಡಿಸಿದ್ದು, ಉಪಚಾರ ಕುರಿತು ಕಾಳಗಿ ಸರ್ಕಾರಿ ಆಸ್ಪತ್ರೆಗೆ ತಂದು ಉಪಚಾರ ಮಾಡಿಸುವಷ್ಟರಲ್ಲಿ ತಬಸುಮಾ ಇವಳು ಮೃತ ಪಟ್ಟಿರುತ್ತಾಳೆ, ಮತ್ತು ನನಗೆ ಹಾಗು ಸುಲ್ತಾನ ಹಿಪ್ಪರಗಿ ರವರಿಗೆ ಸಾದಾ ಮತ್ತು ಭಾರಿಗಾಯಗಳಾಗಿರುತ್ತವೆ, ಅಪಘಾತಪಡಿಸಿದ ಚಾಲಕನು ತನ್ನ ವಾಹನವನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೊಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 25/2012 ಕಲಂ 279, 337, 338, 304 (ಎ) ಸಂಗಡ 187 ಐ.ಎಮ.ವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಕೆ ಕೈಕೊಂಡಿರುತ್ತಾರೆ.

No comments: