Police Bhavan Kalaburagi

Police Bhavan Kalaburagi

Saturday, March 3, 2012

GULBARGA DIST REPORTED CRIMES

ಹಲ್ಲೆ ಮತ್ತು ಕೊಲೆಗೆ ಯತ್ನ :

ನಿಂಬರ್ಗಾ ಪೊಲೀಸ ಠಾಣೆ:ಶ್ರೀಮತಿ ಪಾರ್ವತಿ ಗಂಡ ಭೀಮರಾಯ ಪಾಂಡ್ರೆ, ಸಾ|| ಮಾಡಿಯಾಳರವರು ನನ್ನ ಮಗಳ ಗಂಡನಾದ ಪ್ರಭಾಕರ ತಂದೆ ರಾಮಚಂದ್ರ ಸಲಗರ ಸಾ|| ಮಾಡಿಯಾಳ ಇವನು ಸುಮಾರು 3-4 ವರ್ಷಗಳಿಂದ ಸ್ವ ಗ್ರಾಮದ ಕಮಲಾಬಾಯಿ ಇವಳೊಂದಿಗೆ ಅನೈತಿಕ ಸಂಭಂಧ ಇಟ್ಟುಕೊಂಡಿದ್ದು,ಇದಕ್ಕೆ ನಾನು ಹಾಗು ನನ್ನ ಮಕ್ಕಳು ವಿರೋಧ ವ್ಯಕ್ತಪಡಿಸಿದ್ದರಿಂದ ಪ್ರಭಾಕರ ಇತನು ಅವಾಚ್ಯವಗಿ ಬೈದು ಜಗಳ ತೆಗೆದು ನನಗೆ ಹಾಗೂ ನನ್ನ ಮಗಳಾದ ಸಾವಿತ್ರಾ ಮತ್ತು ಮಗನಾದ ಸಂತೋಷ ಇವರಿಗೆ ಕೊಡಲಿಯಿಂದ ಹೊಡೆ ಬಡೆ ಮಾಡಿ ರಕ್ತಗಾಯಪಡಿಸಿ ಮರಣಾಂತಿಕ ಹಲ್ಲೆಗೈದು ಕೊಲೆಗೆ ಯತ್ನಿಸಿರುತ್ತಾನೆ ಅಂತ ದೂರಿನ ಅನ್ವಯ ಠಾಣೆ ಗುನ್ನೆ ನಂ:17/2012 ಕಲಂ 324, 504, 307 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.

ಮುಂಜಾಗ್ರತೆ ಕ್ರಮ:

ಬ್ರಹ್ಮಪೂರ ಠಾಣೆ: ಶ್ರೀ.ರಾಜಕುಮಾರ ಸಿ.ಪಿ.ಸಿ ಮತ್ತು ಸುಧಾಕರ ಸಿಪಿಸಿ ಬ್ರಹ್ಮಪೂರ ಠಾಣೆರವರು ದಿನಾಂಕ:03/03/12 ರಂದು ಮಧ್ಯಾಹ್ನ ಠಾಣಾ ಹದ್ದಿಯಲ್ಲಿ ಪೆಟ್ರೋಲಿಂಗ ಮತ್ತು ಹಳೆ ಗುನ್ನೆಗಳ ಪತ್ತೆ ಕುರಿತು ಹೋದಾಗ ನಗರದ ವೀರಶೈವ ಕಲ್ಯಾಣ ಮಂಟಪದ ಹತ್ತಿರ ಸಾಯಂಕಾಲ ಒಬ್ಬ ವ್ಯಕ್ತಿ ಅನುಮಾನಾಸ್ಪದವಾಗಿ ಓಡಾಡುವುದನ್ನು ಕಂಡು ಸಂಶಯ ಬಂದು ಸದರಿಯವನನ್ನು ಹಿಡಿದು ಹೆಸರು ಮತ್ತು ವಿಳಾಸ ವಿಚಾರಿಸಲು ಇಸ್ಮಾಯಿಲ ತಂದೆ ಮಹ್ಮದ ಖಾಸಿಂ ಶೇಖ, ಸಾ|| ತಾಜ ನಗರ ಮುಸ್ಲಿಂ ಸಂಘ ಗುಲಬರ್ಗಾ ಅಂತಾ ತಿಳಿಸಿದ್ದು, ಆ ಸ್ಥಳದಲ್ಲಿ ಇರುವಿಕೆಯ ಬಗ್ಗೆ ವಿಚಾರಿಸಲು ಯಾವುದೇ ಸಮಂಜಸ ಉತ್ತರ ಕೊಡಲಿಲ್ಲಾ. ಸದರಿಯವನನ್ನು ಸ್ಥಳದಲ್ಲಿ ಹಾಗೆಯೆ ಬಿಟ್ಟಲ್ಲಿ ಯಾವುದಾದರೊಂದು ಸ್ವತ್ತಿನ ಅಪರಾಧ ಮಾಡಬಹುದೆಂದು ತಿಳಿದು ವಶಕ್ಕೆ ತೆಗೆದುಕೊಂಡು ಠಾಣೆಗೆ ಬಂದು ಸೂಕ್ತ ಕ್ರಮಕ್ಕಾಗಿ ವರದಿ ಸಲ್ಲಿಸಿದ್ದರಿಂದ ಠಾಣಾ ಗುನ್ನೆ ನಂ: 32/12 ಕಲಂ: 109 ಸಿ.ಆರ್.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.

ಬೆಂಕಿ ಅಪಘಾತ ಪ್ರಕರಣ:

ಸ್ಟೆಶನ ಬಜಾರ ಠಾಣೆ: ದಿನಾಂಕ: 2/03/2012 ರಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ನಿರ್ದೇಶಕರ ಕೋಣೆಯಲ್ಲಿ ಸಾಯಂಕಾಲ 7.00 ಗಂಟೆಯ ಸುಮಾರಿಗೆ ಕೋಣೆಯಲ್ಲಿರುವ ಹವಾ ನಿಯಂತ್ರಣ (ಎಸ್.ಸಿ) ದಲ್ಲಿ ಆಕಸ್ಮಿಕವಾಗಿ ವಿದ್ಯುತ ಶಾರ್ಟ ಸರ್ಕ್ಯೂಟ ದಿಂದ ಹವಾ ನಿಂಯತ್ರಣ (ಎಸ್.ಸಿ) ಗೆ ಬೆಂಕಿ ತಗುಲಿ ಸುಮಾರು 40,000=00 ರೂಪಾಯಿಗಳ ಕಿಮ್ಮತ್ತಿನ ವಸ್ತುಗಳು ಸುಟ್ಟ ಭಸ್ಮವಾಗಿರುತ್ತವೆ ಅಂತಾ ಶ್ರೀ ಸೈಯದ ಖಲಿಂಧರ್ ನಿರ್ದೇಶಕರು ಸಾರ್ವಜನಿಕ ಶಕ್ಷಣ ಇಲಾಖೆಯ ಗುಲಬರ್ಗಾ ರವರು ದೂರು ಸಲ್ಲಿಸಿದ್ದರಿಂದ ಠಾಣೆ ಗುನ್ನೆ ನಂ: 02/2012 ಬೆಂಕಿ ಅಪಘಾತ ಪ್ರಕರಣದ ಅಡಿಯಲ್ಲಿ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

No comments: