Police Bhavan Kalaburagi

Police Bhavan Kalaburagi

Wednesday, March 28, 2012

GULBARGA DIST REPORTED CRIMES

ಅಪಘಾತ ಪ್ರಕರಣ:

ಸೇಡಂ ಪೊಲೀಸ ಠಾಣೆ: ಶ್ರೀ. ಶಿವಾನಂದ ತಂದೆ ಸಾಯಬಣ್ಣ ಹೊಸಮನಿ ಸಾ:ಕಲಕಂಬ ಗ್ರಾಮ, ತಾ:ಸೇಡಂ ರವರು ನಾವು ಮೂರು ಜನ ಅಣ್ಣ-ತಮ್ಮಂದಿರಿದ್ದು, ನನ್ನ ತಮ್ಮನಾದ ಲಿಂಗಾನಂದ @ ವಿಜಯಕುಮಾರ ತಂದೆ ಸಾಬಣ್ಣ ಹೊಸಮನಿ ವಯ:33 ವರ್ಷ, ದಿನಾಂಕ:27-03-2012 ರಂದು ಬೆಳಿಗ್ಗೆ 8-00 ಗಂಟೆಗೆ ವಿ.ಸಿ.ಎಫ್. ಫ್ಯಾಕ್ಟರಿ ಕೆಲಸಕ್ಕೆ ಮೋಟಾರ ಸೈಕಲ ನಂಬರ ಕೆಎ-26.ಜೆ-6740 ನೇದ್ದರ ಮೇಲೆ ಹೋಗಿರುತ್ತಾನೆ. ದಿನಾಂಕ:28-03-2012 ರಂದು ಬೆಳಿಗ್ಗೆ 7-30 ಗಂಟೆಯ ಸುಮಾರಿಗೆ ನನ್ನ ತಮ್ಮ ದೇವಾನಂದ ಹೊಸಮನಿ ಮತ್ತು ಊರಿನ ಜನರು ಒಂದು ಆಟೋ ಟಂಟಂ ದಲ್ಲಿ ಕುಳಿತುಕೊಂಡು ಸೇಡಂಕ್ಕೆ ಹೋಗುವಾಗ ಸೇಡಂ-ಯಾದಗಿರಿ ಮುಖ್ಯ ರಸ್ತೆಯ ಮೇಲೆ ರಾಮಲಿಂಗ್ ಕುರಬುರ ರವರ ಹೊಲದ ಬಾಂದಾರಿಯಲ್ಲಿ ರಸ್ತೆಯ ಎಡಗಡೆ ನಮ್ಮ ಮೋಟಾರು ಸೈಕಲ್ ನೋಡಿ ಗುರುತಿಸಿ ಅಲ್ಲಿಬಿದ್ದ ವ್ಯಕ್ತಿಗೆ ನೋಡಲಾಗಿ ಅವನು ನನ್ನ ತಮ್ಮ ಲಿಂಗಾನಂದ @ ವಿಜಯಕುಮಾರ ಇವನ ತಲೆಯ ಬಲಗಡೆ ಹಾಗೂ ಬಲಗಾಲ ಮೊಳಕಾಲಿಗೆ ಭಾರಿ ರಕ್ತಗಾಯವಾಗಿ ರಸ್ತೆ ಅಪಘಾತ ಹೊಂದಿ ಸ್ಥಳದಲ್ಲಿ ಮೃತಪಟ್ಟು ಬಿದ್ದಿದ್ದು. ಯಾರೋ ತಮ್ಮ ವಾಹನವನ್ನು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ನಡೆಯಿಸಿ ನನ್ನ ತಮ್ಮನ ಮೋಟಾರ ಸೈಕಲ್ ಗೆ ಡಿಕ್ಕಿ ಪಡಿಸಿದ್ದರಿಂದ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:67/2012 ಕಲಂ. 279, 304(ಎ) ಐಪಿಸಿ ಸಂಗಡ 187 ಐ.ಎಮ್.ವ್ಹಿ. ಆಕ್ಟ್ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ವರದಕ್ಷಿಣೆ ಕಿರುಕುಳ ಪ್ರಕರಣ:

ಮಹಿಳಾ ಪೊಲೀಸ ಠಾಣೆ:ಶ್ರೀಮತಿ ರೀಜವಾನ ಬೇಗಂ ಗಂಡ ಸಲೀಮ್ @ ಜವೀದ ವ: 20 ವರ್ಷ ಉ: ಎಕ್ಬಾಲ ಕಾಲೋನಿ ಎಮ್.ಎಸ್.ಕೆ ಮಿಲ್ ಗುಲಬರ್ಗಾರವರು ನನ್ನ ಮದುವೆಯು ಸಲಿಂ @ ಜಾವೀದ ವ: 30 ವರ್ಷ ಉ: ಆಟೋ ಚಾಲಕ ಸಾ||ಯಕಬಾಲ ಕಾಲೋನಿ ಗುಲಬರ್ಗಾ ಇತನ ಜೋತೆ ಧರ್ಮ ಸಂಪ್ರದಾಯದಂತೆ ಮದುವೆಯಾಗಿದ್ದು, ಮದುವೆಯಾದಾಗಿನಿಂದ ನನ್ನ ಗಂಡನು ಕುಡಿದು ಬಂದು ಹೊಡೆ ಬಡೆ ಮಾಡಿ ತವರು ಮನೆಯಿಂದ ಬಂಗಾರ ತೆಗೆದುಕೊಂಡು ಬಾ ಅಂತಾ ಹಿಂಸೆ ನೀಡುತ್ತಿರುತ್ತಾನೆ, ದಿನಾಂಕ:07.03.2012 ರಂದು ಸಾಯಂಕಾಲ 6-00 ಗಂಟೆಯ ಸುಮಾರಿಗೆ ನನ್ನ ಗಂಡ , ಅತ್ತೆಯಾದ ಅಮೀರಾಬಿ. ಮಾವನಾದ, ಬಾಸುಮಿಯಾ, ಮೈದುನರಾದ ವಾಜೀದ, ಸಾಜೀದ, ನಾದಿನಿಯರಾದ ರೇಷ್ಮಾ , ಆಸ್ಮಾ ಇವರೆಲ್ಲರೂ ಸೇರಿ ಹೊಡೆ ಬಡೆ ಮಾಡಿ ಮಾಡಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 28/2012 ಕಲಂ. 498(ಎ), 506, ಸಂ. 149 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. .

No comments: