Police Bhavan Kalaburagi

Police Bhavan Kalaburagi

Monday, March 19, 2012

Gulbarga Dist Reported Crimes


ಕಳ್ಳತನ ಪ್ರಕರಣ:
ಸ್ಟೇಷನ ಬಜಾರ ಪೊಲೀಸ ಠಾಣೆ:
ಶ್ರೀ ಮದುಸೂಧನ ತಂದೆ ನಾಗಪ್ಪ ಸಾ: ದೇವಾ ನಗರ ಗುಲಬರ್ಗಾರವರು ನಾನು ದಿನಾಂಕ 17.03.2012 ರಂದು ರಾತ್ರಿ ದ್ವಿ ಚಕ್ರ ವಾಹನ ನಂ ಕೆ ಎ 39 ಇ 100 ಹೀರೊ ಹೊಂಡಾ ಸಿಡಿ 100 ಅಕಿ 15,000/- ರೂ ನೇದ್ದನ್ನು ನಿಲ್ಲಿಸಿದ ಬೇಳಿಗ್ಗೆ ಎದ್ದು ನೋಡಲು ಯಾರೋ ಕಳ್ಳರು ರಾತ್ರಿ ವೇಳೆಯಲ್ಲಿ ದ್ವಿ-ಚಕ್ರ ವಾಹನ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣಾ ಗುನ್ನೆ 32/12 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಮಾರಣಾಂತಿಕ ಹಲ್ಲೆ ಪ್ರಕರಣ:
ರೇವೂರ ಪೊಲೀಸ್ ಠಾಣೆ:
ಶ್ರೀ ಸಿದ್ದರಾಮ ತಂದೆ ಭೀಮಶ್ಯಾ ಬಿಲ್ಕರ ಸಾ ನೀಲೂರ ಗ್ರಾಮ ರವರು ನನ್ನ ತಮ್ಮನಾದ ಕೃಷ್ಣಾ ಇತನಿಗೆ ದಿನಾಂಕ:18-03-2012 ರಂದು ರಾತ್ರಿ 9-00 ಗಂಟೆಯ ಸುಮಾರಿಗೆ ಹಳೆಯ ವೈಷ್ಯಮದಿಂದ ಪ್ರಭುರಾವ ತಂದೆ ಪರಶುರಾಮ ತೋಳೆ ಸಂಗಡ 18 ಜನರು ಮತ್ತು ಗುಲಬರ್ಗಾ ಹೀರಾಪೂರ ಏರಿಯಾದ 2-3 ಜನರು ಗಂಭೀರವಾಗಿ ಹೊಡೆ ಬಡೆ ಕೊಲೆ ಮಾಡಲು ಪ್ರಯತ್ನಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 30/2012 ಕಲಂ 143,147, 148, 341, 323, 324, 504, 506, 307 ಸಂಗಡ 149 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

No comments: