ಬ್ರಹ್ಮಪೂರ ಠಾಣೆ: ಗುಲಬರ್ಗಾ ನಗರದ ಸುಪರ ಮಾರ್ಕೆಟದಲ್ಲಿ ಬರುವ ರಾಧೆ ಸಿಲ್ಕ ಅಂಗಡಿಯಲ್ಲಿ ಗ್ರಾಹಕರಂತೆ ನಟಿಸುತ್ತಾ ಬಂದು ಅಂಗಡಿಯ ನೌಕರರಿಗೆ ಗೊತ್ತಾಗದೆ ಹಾಗೆ ಸುಮಾರು 45 ರಿಂದ 50 ರೇಷ್ಮೆ ಸೀರೆಗಳು ಅಂದಾಜು 4 ಲಕ್ಷ ದಿಂದ 4.5 ಲಕ್ಷ ಬೆಲೆಬಾಳುವ ಸೀರೆಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದರಿಂದ ಶ್ರೀ.ಚಂದ್ರಶೇಖರ ತಂದೆ ಗುರುನಾಥರಾವ ಸುತ್ರಾವೆ ಸಾ ಗುಲಬರ್ಗಾರವರು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:21/2011 ಕಲಂ 380 ಐಪಿಸಿ ಪ್ರಕಾರ ಪ್ರಕರಣ ದಾಖಲಾಗಿತ್ತು, ಪ್ರಕರಣದ ತನಿಖೆಯ ಕಾಲಕ್ಕೆ ಮಾನ್ಯ ಪ್ರವೀಣ ಮಧುಕರ ಪವಾರ ಐ.ಪಿ.ಎಸ್ ಎಸ್.ಪಿ ಗುಲಬರ್ಗಾ, ಕಾಶಿನಾಥ ತಳಕೇರಿ ಹೆಚ್ಚುವರಿ ಎಸ್.ಪಿ ಗುಲಬರ್ಗಾ, ಮತ್ತು ಭೂಷಣ ಜಿ ಬೊರಸೆ ಐ.ಪಿ.ಎಸ್ ಸಹಾಯಕ ಪೊಲೀಸ ಅಧೀಕ್ಷಕರು (ಎ) ಉಪ-ವಿಭಾಗ ಗುಲಬರ್ಗಾ ರವರ ಮಾರ್ಗದರ್ಶನದಲ್ಲಿ ಶರಣಬಸವೇಶ್ವರ ಪಿ.ಐ ಬ್ರಹ್ಮಪೂರ ಪೊಲೀಸ ಠಾಣೆ, ಮತ್ತು ಅಪರಾಧ ವಿಭಾಗದ ಸಿಬ್ಬಂದಿಯವರಾದ ಮಾರುತಿ ಎ.ಎಸ್.ಐ, ಬಸವರಾಜ ಹೆಚ್.ಸಿ, ಗಜೇಂದ್ರ, ಮಹಾಂತೇಶ, ರಾಜಕುಮಾರ, ಸುಧಾಕರ ಸಿ.ಪಿ.ಸಿ ರವರು ಅಂಗಡಿಯಲ್ಲಿ ಅಳವಡಿಸಿದ ಸಿ.ಸಿ. ಕ್ಯಾಮರಾದ ವಿಡಿಯೋ ಚಿತ್ರದ ಸಹಾಯದಿಂದ ಆಂದ್ರ ಪ್ರದೇಶ ರಾಜ್ಯದ ವಿಜಯವಾಡ ಜಿಲ್ಲೆಯವರಾದ ಮನುಪತಿ @ ಮಚರೇಲಾ ರಾಜೇಶ್ವರಿ ಗಂಡ ನಾಗೇಶ್ವರರಾವ, ಮನುಪತಿ @ ಮಚರೇಲಾ ನರಸಿಂಹರಾವ ತಂದೆ ನಾಗೇಶ್ವರರಾವ ಸಾ ಇಬ್ಬರು ತಾಡೆಪಲ್ಲಿ ಜಿ ಗುಂಟುರು ಆಂದ್ರ ಪ್ರದೇಶ ರಾಜ್ಯ ಇವರನ್ನು ಬಂಧಿಸಿ ಸದರಿಯವರಿಂದ ಸುಮಾರು 40 ಸೀರೆಗಳು ಜಪ್ತ ಮಾಡಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು ಇರುತ್ತದೆ. ಸದರಿ ಪ್ರಕರಣವು ಅಂಗಡಿಯಲ್ಲಿ ಅಳವಡಿಸಿಲಾದ ಸಿ.ಸಿ ಕ್ಯಾಮರದಲ್ಲಿ ಸೆರೆಹಿಡಿದ ಚಿತ್ರದ ಸಹಾಯದಿಂದ ಪತ್ತೆ ಮಾಡಲಾಗಿದ್ದು, ಎಲ್ಲಾ ಅಂಗಡಿಗಳಲ್ಲಿ ಸಿ.ಸಿ ಕ್ಯಾಮರಾ ಅಳವಡಿಸಿದಲ್ಲಿ ಈ ತರಹದ ಪ್ರಕರಣಗಳನ್ನು ತಡೆಗಟ್ಟಲು ಹಾಗೂ ಪತ್ತೆ ಮಾಡಲು ಸಹಾಯವಾಗುತ್ತದೆ, ಆದ್ದರಿಂದ ಎಲ್ಲಾ ಅಂಗಡಿಗಳ ಮಾಲಿಕರು ತಮ್ಮ ತಮ್ಮ ಅಂಗಡಿಗಳಲ್ಲಿ ಮತ್ತು ಬ್ಯಾಂಕಗಳಲ್ಲಿ ಉತ್ಕುಷ್ಠವಾದ ಸಿ.ಸಿ ಕ್ಯಾಮರಾಗಳನ್ನು ಅಳವಡಿಸಲು ಹೆಚ್ಚುವರಿ ಎಸ್.ಪಿ ಶ್ರೀ.ಕಾಶಿನಾಥ ತಳಕೇರಿ ರವರು ಕೋರಿಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಫರತಬಾದ ಪೊಲೀಸ್ ಠಾಣೆ:ಶ್ರೀ ಸೈಯದ್ ಮಹ್ಮದ ತಂದೆ ಸೈಯದ್ ಉಮರ್ ಸಾ: ಪೆದ್ದಾಯರಕಿಚೆಲ್ಲಾ ಕುಂದೂರ ಮತ್ತು ವಿಳಾಸ ಮಂಡಲ ತಾ:ಸಾತನಗರ ಜಿ:ಮಹಿಬೂಬ ನಗರ ಆಂದ್ರ ಪ್ರದೇಶ ರಾಜ್ಯ ರವರು ನಾನು ನಿನ್ನೆ ದಿನಾಂಕ: 20-3-2012 ರಂದು ಸಂಗಾರೆಡ್ಡಿಯಲ್ಲಿ ನನ್ನ ಲಾರಿ ನಂ: ಎಪಿ-04 ಯು-6027 ನೇದ್ದರಲ್ಲಿ ಬಿಯರ್ ಬಾಟಲಿನ ಕೇಸುಗಳು ಲೋಡ ಮಾಡಿಕೊಂಡು ಸಾಯಂಕಾಲ 4-00 ಗಂಟೆ ಸುಮಾರಿಗೆ ಸಂಗಾರೆಡ್ಡಿ ಯಿಂದ ಲಾರಿ ಕ್ಲಿನರ್ ಸೈಯದ್ ಇಲಿಯಾಸ್ ತಂದೆ ಸೈಯದ್ ಉಮರ ಇವರೊಂದಿಗೆ ಲಾರಿಯನ್ನು ಚಲಾಯಿಸಿಕೊಂಡು ಹುಬ್ಬಳಿಗೆ ಹೋಗುವ ಸಲುವಾಗಿ ಗುಲಬರ್ಗಾದ ನಂದಿಕೂರ ತಾಂಡಾದ ಹತ್ತಿರ ಎದುರುಗಡೆಯಿಂದ ಒಬ್ಬ ಡಿಸಿಎಮ್ ಕೆಎ-28 ಜಿ-6015 ಲಾರಿ ಚಾಲಕನು ತನ್ನ ವಾಹವನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಲಾರಿಯ ಮಧ್ಯ ಭಾಗದಲ್ಲಿ ಡಿಕ್ಕಿ ಪಡಿಸಿದ್ದರಿಂದ ಲಾರಿಯಲ್ಲಿ ಲೋಡ ಮಾಡಿದ ಬಿಯರ್ ಬಾಟಲಗಳು ಒಡೆದಿರುತ್ತವೆ, ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 37/2012 ಕಲಂ 279, ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
No comments:
Post a Comment