ದರೋಡೆ ಪ್ರಕರಣ:
ಎಂ.ಬಿ.ನಗರ ಠಾಣೆ: ಶ್ರೀಮತಿ ಜಗದೇವಿ ಗಂಡ ದಿ:ರಾಮಲಿಂಗ್ ವಯ:40 ವರ್ಷ ಜಾತಿಃ ಪೂಜಾರಿ ಉಃ ಕೂಲಿಕೆಲಸ ಸಾಃಜಿಡಿಎ ಕಾಲೋನಿ ಕೆ.ಎನ.ಜಡ್ಜ ಪಂಕ್ಷನ ಹಾಲ್ ಹಿಂದುಗಡೆ ಆದರ್ಶ ನಗರ ಗುಲಬರ್ಗಾರವರು ನಾನು ಇಂದು ಮುಂಜಾನೆ 9-30 ಗಂಟೆಗೆ ಮನೆಯಿಂದ ನಡೆದುಕೊಂಡು ಕೂಲಿ ಕೆಲಸಗೋಸ್ಕರ ಬಸವೇಶ್ವರ ಕಾಲೋನಿ ಹೋಸ ಬಡಾವಣೆಯ ಶಿವ ಮಂದಿರ ಹತ್ತಿರದ ಮನೆ ಕಟ್ಟಡದ ಕೆಲಸ ಮಾಡುವ ಸಲುವಾಗಿ ನಡೆದುಕೊಂಡು ಹೊಗುತ್ತಿರುವಾಗ ಬಸವೇಶ್ವರ ಕಾಲೋನಿಯ ಹೊಸ ಬಡಾವಣೆಯ ಶ್ರೀ ನಂದಿ ಇವರ ಮನೆಯ ಎದುರುಗಡೆ ರೊಡಿನ ಮೇಲೆ ಹೋಗುತ್ತಿರುವಾಗ ಎದುರಿನಿಂದ ಒಬ್ಬ ಹುಡುಗನು ಬಂದವನೆ ನನಗೆ ನೀನು ನನ್ನ ಮೋಬೈಲಿಗೆ ಏಕೆ ಮೇಸೇಜ್ ಕಳುಹಿಸಿದ್ದಿ ಅಂತ ಕೇಳಿದನು, ನಾನು, ನನಗೆ ಮೇಸೆಜ್ ಕಳಿಸಲಿಕ್ಕೆ ಬರಲ್ಲಾ ನಾನೆಕೆ ಮೇಸೆಜ್ ಕಳಿಸಲಿ ಅಂದೆ ಅಷ್ಟರಲ್ಲಿ ನನಗೆ ಬಲ ಕಪಾಳದ ಮೇಲೆ ಕೈಯಿಂದ ಹೊಡೆದನು. ನಾನು ಸಿಟ್ಟಿನಿಂದ ಆತನ ಎದೆಯ ಮೇಲಿನ ಅಂಗಿಹಿಡಿದೆನು ಆತನು ನನ್ನ ಕುತ್ತಿಗೆ ಹೀಡಿದು ಕುತ್ತಿಗೆಯಲ್ಲಿರುವ ಆರು ಗ್ರಾಂ ಬಂಗಾರದ ಜೀರಾ ಮಣಿ ಅ.ಕಿ.13,000/- ರೂ ಬೆಲೆಬಾಳುವದನ್ನು ಕಿತ್ತಿಕೊಂಡು ಹೋದನು ಸದರಿಯವನು ಅಂದಾಜು 20 ವರ್ಷದವನಾಗಿದ್ದು ತೆಳ್ಳಗೆ ಮೈಕಟ್ಟು, ಕಪ್ಪು ಮೈ ಬಣ್ಣ , ಜೀನ್ಸ್ ಪ್ಯಾಂಟ್, ನಾಸಿ ಬಣ್ಣದ ಶರ್ಟ್ ಧರಿಸಿರುತ್ತಾನೆ. ಬಲ ಕಿವಿಯಲ್ಲಿ ರಿಂಗ್ ಇರುತ್ತದೆ. ಸದರಿವನಿಗೆ ನೊಡಿದ್ದಲ್ಲಿ ಗುರುತಿಸುತ್ತನೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 23/2012 ಕಲಂ. 392 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಕೆ ಕೈಕೊಂಡಿರುತ್ತಾರೆ
ಕಳ್ಳತನ ಪ್ರಕರಣ:
ಅಶೋಕ ನಗರ ಪೊಲೀಸ್ ಠಾಣೆ : ಶ್ರೀ ಬಸಯ್ಯ ತಂದೆ ಶಂಕ್ರಯ್ಯ ಮಠಪತಿ ಸಾ|| ಹಸರಗುಂಡಗಿ ಗ್ರಾಮ ತಾ|| ಚಿಂಚೋಳಿ ಜಿ|| ಗುಲಬರ್ಗಾರವರು ನನ್ನದೊಂದು ಜೀಪ್ ಎಂ.ಹೆಚ್-10 ಸಿ-0408 ನೇದ್ದು 1,00,000/- ರೂ ಖರಿದಿಸಿದ್ದು ಸುಮಾರು 3 ತಿಂಗಳ ಹಿಂದೆ ರಮೇಶ ಮನ್ನಾಯಖೇಳ್ಳಿ ಇವರಿಗೆ ಮಾರಾಟ ಮಾಡಿದ್ದು ಪೈನಾನ್ಸ ಲೋನ ಇಲ್ಲದ ಕಾರಣ ಇನ್ನೂ ವರ್ಗಾವಣೆ ಕಾಗದ ಪತ್ರಗಳು ಮಾಡಿಕೊಟ್ಟಿರುವದಿಲ್ಲ ದಿನಾಂಕ: 26/02/2012 ರಂದು ನಾನು ಮತ್ತು ರಮೇಶ ಚಿಮ್ಮೊನ ಚೋಡದಲ್ಲಿರುವಾಗ ಒಬ್ಬ ವ್ಯಕ್ತಿ ಕೋಳಿ ಗೊಬ್ಬುರ ಪ್ರಚಾರ ಕುರಿತು ಬಾಡಿಗೆ ಜೀಪ ಕೇಳಿದ್ದು ಒಂದು ದಿನಕ್ಕೆ 400/- ರೂ ಡ್ರೈವರೆಗೆ 100/- ರೂ. ಭತ್ಯೆ ಡಿಸೇಲ ಹಾಕಿಕೊಳ್ಳುವ ಬಗ್ಗೆ ಮಾತಾಗಿ ಕೊಟ್ಟಿದ್ದು ದಿನಾಂಕ : 27/02/2012 ರಂದು ಬೆಳಿಗ್ಗೆ 8 ಗಂಟೆಗೆ ಮನ್ನಾಯಖೆಳ್ಳಿಗೆ ಹೋಗಿದ್ದು ಭೀಮಶಾ ಇತನು ಆರಾಮ ಇಲ್ಲದಕ್ಕೆ ಚಾಲಕ ಒಮನಾಥ ಎಂಬುವವರಿಗೆ ಕೊಟ್ಟಿದ್ದು ಕೆಲಸ ಮುಗಿಸಿಕೊಂಡು ರಾತ್ರಿ ಗುಲಬರ್ಗಾಕ್ಕೆ ಯಾತ್ರಿಕ ನಿವಾಸದಲ್ಲಿ ಬಂದು ಉಳಿದು ಜೀಪ ಪಾರ್ಕಿನಲ್ಲಿ ಇಟ್ಟಿದ್ದು ಅಪರಿಚಿತ ವ್ಯಕ್ತಿ ತನಗೆ ಮೀಟಿಂಗ ಇರುತ್ತದೆ ಅಂತಾ ಅಂದು ಸದರಿ ಜೀಪ್ ಕಳವು ಮಾಡಿಕೊಂಡು ಹೋಗಿರುತ್ತಾನೆ 1992 ನೇ ಸಾಲಿನ ಜೀಪ ಇದ್ದು 1,00,000/- ರೂ. ಬೆಲೆ ಬಾಳುತ್ತಿದ್ದು ಬೂದು ಬಣ್ಣದಾಗಿರುತ್ತದೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಅಶೋಕ ನಗರ ಪೊಲೀಸ್ ಠಾಣೆ ಗುನ್ನೆ ನಂ. 18/2012 ಕಲಂ 379 ಐ.ಪಿ.ಸಿ ನೇದ್ದರ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಹರಣ, ಅತ್ಯಾಚಾರ ಪ್ರಕರಣ:
ಆಳಂದ ಪೊಲೀಸ ಠಾಣೆ: ಆಳಂದ ತಾಲೂಕಿನ ಸಾ|| ಸೀಡ್ಸ್ ಪಾರಂ ತಾಂಡಾದ ಹುಡಗಿಯಾದ ನಾನು, ನಾನು ಮತ್ತು
ನನ್ನ ತಾಯಿ ಸೋನಾಬಾಯಿ ಮನೆಯಲ್ಲಿ ಇರುತ್ತೆವೆ.
ನನ್ನ ತಂದೆ ತಾಯಿ ಹಾಗೂ ಇಬ್ಬರು ಆಣ್ಣಂದಿರು ಹೊಟ್ಟೆ ಉಪಜೀವನಕ್ಕಾಗಿ ಮುಂಬೈಯಿಗೆ
ಹೋಗಿದ್ದು ಆಗಾಗ ಬಂದು ಹೋಗುವದು ಮಾಡುತ್ತಾರೆ ನಮ್ಮ ಮನೆಗೆ ಹತ್ತಿ ಭೀಬಾಬಾಯಿ ಬಂದು ಇವಳು ತನ್ನ
ಮಕ್ಕಳೊಂದಿಗೆ ಇರುತ್ತಾಳೆ. ಹರವಾಳ
ತಾಂಡದಿಂದ ಆಕೆಯ ಮೈದುನ ಕುಪೇಂದ್ರ ತಂದೆ ಗೇಮು ರಾಠೋಡ, ಅವನೊಂದಿಗೆ
ಅದೆ ತಾಂಡಾದ ಸಂಜು ತಂದೆ ಗೇಮು ರಾಠೋಡ, ಸುನಿಲ ತಂದೆ
ಜೈರಾಮ ರಾಠೋಡ, ಸಂತೋಷ ರಾಠೋಡ, ಹಾಗೂ ಜೀಪ ಚಾಲಕ ಪ್ರಕಾಶ ರಾಠೋಡ ಎಲ್ಲರೂ ಬಿಬಾಬಾಯಿ ಹತ್ತಿರ ಕ್ರೂಜರ
ವಾಹನದಲ್ಲಿ ಬಂದು ಹೋಗುವದು ಮಾಡುತ್ತಿದರು ದಿನಾಂಕ 18/02/2012
ರಂದು ಶನಿವಾರ ನಾನು ರಾತ್ರಿ ಮನೆಯಲ್ಲಿ ಮಲಗಿದಾಗ 11.00
ಗಂಟೆ ಸುಮಾರಿಗೆ ಮನೆಯ ಬಾಗಿಲ ಬಡಿದ ಸಪ್ಪಳ ಕೇಳಿದಾಗ ನಾನು ಯಾರು ಎಂದು ಕೇಳಿದಾಗ ನಿಮ್ಮ
ಆಣ್ಣ ಕಂಠು ಇದ್ದೆನೆ ಎಂದಾಗ ನಾನು ಬಾಗಿಲು ತೆರೆದು ನೋಡಲು ಬಾಗಿಲ ಹತ್ತಿರ ನಿಂತಿದ್ದ ಕುಪೇಂದ್ರ
ತಂದೆ ಗೇಮು ರಾಠೋಡ, ಸಂಜು ರಾಠೋಡ, ಸುನಿಲ ರಾಠೋಡ, ಸಂತೋಷ ರಾಠೋಡ, ಹಾಗೂ ಜೀಪ ಚಾಲಕ ಪ್ರಕಾಶ ರಾಠೋಡ,
ಸಾ: ಹರವಾಳ ತಾಂಡಾ ಇವರು
ಇದ್ದು ನನಗೆ ಕುಪೇಂದ್ರನು ಒತ್ತಿಹಿಡಿದ್ದು ಮುಖಕ್ಕೆ ಬಟ್ಟೆಯಿಂದ ಬಿಗಿದು ಚಿರಾಡಿದರೆ ಖಲಾಸ
ಮಾಡುತ್ತೆವೆ ಎಂದು ಅಂಜಿಸಿ ಜೀಪಿನಲ್ಲಿ ಹಾಕಿ ಜೇವರ್ಗಿ ಬಸ್ಸ ಸ್ಟಾಂಡ ಹತ್ತಿರ ಹೋದಾಗ ಕುಪೇಂದ್ರನು
ಒಂದು ಜೋಗೆರ ಹತ್ತಿರ ಖರೀದಿ ಮಾಡಿದ (ರೆಡಿಮೆಡ್
ತಾಳಿ) ತಾಳಿ
ನನ್ನ ಕೋರಳಲ್ಲಿ ಹಾಕಿ ಬಸ್ಸ ಸ್ಟಾಂಡ ಹತ್ತಿರ ಇದ್ದ ಲಾಡ್ಜನಲ್ಲಿ ಕರೆದುಕೊಂಡು ಹೋಗಿ ಹಗಲು
ರಾತ್ರಿ ಜಬರಿ ಸಂಭೋಗ ಮಾಡಿ ನಂತರ ಸಂತೋಷ ರಾಠೋಡ ಈತನು ಒಂದು ಮೋಟರ ಸೈಕಲ ತಂದು ಕುಪೇಂದ್ರನಿಗೆ
ಕೊಟ್ಟು ಹೋದನು ನನ್ನ ಬಾಳನ್ನೆ ಹಾಳು ಮಾಡಿದನೆಂದು ಅವನ ಬೆನ್ನ ಹತ್ತಿ ಅವನ ಹಿಂದೆ ಮೋಟರ ಸೈಕಲಿನ
ಮೇಲೆ ಕುಳಿತುಕೊಂಡು ಹರವಾಳ ತಾಂಡಾದಲ್ಲಿ ಇರುವ ಅವರ ಮನೆಗೆ ಹೋದೆವು ಅಲ್ಲಿ 4 ದಿವಸ ಅವರ ಮನೆಯಲ್ಲಿ ಉಳಿದಾಗ ಅವನ ತಂದೆ ತಾಯಿಯವರು ಆಣ್ಣಂದಿರು
ಯಾರೆಂದು ಕೇಳಿದರು ಚಿಕ್ಕಮ್ಮಳ ಮಗಳೆಂದು ಹೇಳು ಅಂತಾ ಕುಪೇಂದ್ರನು ಹೇಳಿದಕ್ಕೆ ನಾನು ಅದೆ ರೀತಿ
ಹೇಳಿದಾಗ ಸದರಿ ಯವರು ಈಕೆಯನ್ನು ಅವರ ತಾಂಡಾಕ್ಕೆ ಒಯ್ದು ಬಿಡು ಎಂದು ಹೇಳಿದಾಗ ದಿನಾಂಕ 24/02/2012 ರಂದು ಶುಕ್ರವಾರ ದಿನ ನನಗೆ ರಾತ್ರಿ 10-11 ಗಂಟೆಯ ಸುಮಾರಿಗೆ ನಮ್ಮತಾಂಡಾದಲ್ಲಿರುವ ನಮ್ಮ ಮನೆಗೆ
ಬಿಟ್ಟಿರುತ್ತಾರೆ ನನಗೆ ಜಬರದಸ್ತಿಯಿಂದ ಎತ್ತಿಕೊಂಡು ಹೋಗಿ ಅಂಜಿಸಿ ನನಗೆ ಬಲಾತ್ಕಾರ ಸಂಬೋಗ
ಮಾಡಿದ ಕುಪೇಂದ್ರನ ಮೇಲೆ ಹಾಗೂ ಆತನಿಗೆ ಸಹಾಯ ಮಾಡಿ ನನ್ನ ಬದುಕು ಹಾಳು ಮಾಡಿದವರ ಮೇಲೆ ಕಾನೂನು
ಕ್ರಮ ಜರಗಿಸಬೇಕು ಅಂತಾ ನೊಂದ ಯುವತಿ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 47/2012 ಕಲಂ 366,376,342,
506 ಸಂಗಡ 149 ಐಪಿಸಿ ಪ್ರಕಾರ ಪ್ರಕರಣ
ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
No comments:
Post a Comment