ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 03-04-2012
ಭಾಲ್ಕಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 47/12 ಕಲಂ 279, 338 ಐಪಿಸಿ :-
ದಿನಾಂಕ : 02/04/2012 ರಂದು 1230 ಗಂಟೆಗೆ ಭಾಲ್ಕಿ ಸರ್ಕಾರಿ ಆಸ್ಪತ್ರೆಯಲ್ಲಿ ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ಶ್ರೀ ಅಶೋಕ ತಂದೆ ಮೊತಿರಾಮ ಚವ್ಹಾಣ ವಯಸ್ಸು 32 ವರ್ಷ ಸಾ : ಬೀರಿ (ಬಿ) ತಾಂಡಾ ತಾ : ಭಾಲ್ಕಿ ರವರು ನೀಡಿದ ದೂರಿನ ಸಾರಾಂಶವೇನಂದರೆ ದಿನಾಂಕ : 02/04/2012 ರಂದು 1130 ಗಂಟೆಗೆ ಭಾಲ್ಕಿ ಗಾಂಧಿ ಚೌಕದಿಂದ ಸರಾಫ ಬಜಾರ ಕಡೆಗೆ ತಮ್ಮ ಹಿರೊ ಹೊಂಡಾ ಮೋಟಾರ ಸ್ಯಕಲ ನಂ : ಕೆಎ-39-ಜೆ-6670 ನೇದರ ಮೇಲೆ ಬರುತ್ತಿರುವಾಗ ಪಾತ್ರೆ ಕ್ರಾಸ ಹತ್ತಿರ ಎದುರಿನಿಂದ ಅಂದರೆ ಭಾಲ್ಕಿ ಸರಾಫ ಬಜಾರ ಕಡೆಯಿಂದ ಒಬ್ಬ ಮೋಟಾರ ಸ್ಯಕಲ ನಂ ಕೆ ಎ 39-ಜೆ-7791 ನೇದರ ಚಾಲಕ ಅತಿ ವೇಗ ಹಾಗು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಗೆ ಡಿಕ್ಕಿ ಮಾಡಿದ್ದರಿಂದ ಭಾರಿ ರಕ್ತಗಾಯವಾಗಿ ಕಾಲು ಮುರಿದಿರುತ್ತದೆ. ಸದರಿ ಮೋಟಾರ ಸ್ಯಕಲ ನಂ : ಕೆಎ-39-ಜೆ-7791 ನೇದರ ಚಾಲಕನ ಮೇಲೆ ಕಾನೂನ ಕ್ರಮ ಜರುಗಿಸಲು ವಿನಂತಿಸಿಕೊಂಡ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೋಳ್ಳಲಾಗಿದೆ.
ಭಾಲ್ಕಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 48/2012 ಕಲಂ 279, 337, 338 ಐಪಿಸಿ
ದಿನಾಂಕ 02/04/2012 ರಂದು ಫಿರ್ಯಾದಿ ಮನೋಜ ತಂದೆ ಪಂಡರಿನಾಥ ಹಾಗು ಪ್ರತಾಪ ತಂದೆ ವಾಮನರಾವ ಪಾಟೀಲ ಹಾಗು ಅವರ ಮಗಳಾದ ಶ್ರತಿ 2 ವರ್ಷ ಎಲ್ಲರು ಕೂಡಿಕೊಂಡು ಪ್ರತಾಪ ಪಾಟೀಲ ರವರ ಸಿ ಡಿ 100 ಮೋಟಾರ ಸೈಕಲನಂ ಕೆ.ಎ-39 ಇ-5202 ನೇದರ ಮೇಲೆ ಭಾಲ್ಕಿಗೆ ಬರುತ್ತಿರುವಾಗ ಭಾಲ್ಕಿ ಭಾಲ್ಕೇಶ್ವರ ಮಂದಿರದ ಎದರುಗಡೆ ಎದುರಿನಿಂದ ಅಂದರೆ ಭಾಲ್ಕಿ ಕಡೆಯಿಂದ ಕೆ.ಎಸ.ಆರ.ಟಿ.ಸಿ. ಬಸ್ಸ ನಂ ಕೆ.ಎ-38 ಎಫ-578 ನೇದರ ಚಾಲಕನ ತನ್ನ ಬಸ್ಸ ಅತಿ ವೇಗ ಹಾಗು ನಿಸ್ಕಾಳಜಿತನದಿಂದ ಓಡಿಸಿ ಕೊಂಡು ಬಂದು ಫಿರ್ಯಾದಿಯ ಮೋಟಾರ ಸ್ಯಕಲಿಗೆ ಡಿಕ್ಕಿ ಮಾಡಿರುತ್ತಾನೆ ಆದ್ದರಿಂದ ಫಿರ್ಯಾದಿಯ ಬಲ ಮೊಳಕಾಲ ಕೇಳಗೆ ಮತ್ತು ಅಲ್ಲಲಿ ತರಚಿದಗಾಯವಾಗಿರುತ್ತದೆ ಹಾಗು ಪ್ರತಾಪ ಪಾಟೀಲ ಇವರಿಗೆ ಬಲಕಾಲ ಮೊಳಕಾಲ ಕೇಳಗೆ ಭಾರಿ ರಕ್ತಗಾಯವಾಗಿರುತ್ತದೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ದಾಖಲ ಮಾಡಿ ಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಬಗದಲ್ ಪೊಲೀಸ್ ಠಾಣೆ ಗುನ್ನೆ ನಂ. 37/12 ಕಲಂ 394 ಐಪಿಸಿ :-
ದಿನಾಂಕ 03/04/2012 ರಂದು 1030 ಗಂಟೆಗೆ ಈ ಮೇಲ್ಕಂಡ ಫಿರ್ಯಾದಿ ಶಿವಕುಮಾರ ತಂದೆ ಕಲ್ಯಾಣರಾವ ರೆಷಟ್ಟಿ 39ವರ್ಷ, ಸಾ: ಬಾವುಗಿ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ದಿ: 02/04/2012 ರಂದು ಮದ್ಯಾನ ಫಿರ್ಯಾದಿಯು ತನ್ನ ಪತ್ನಿಯ ಜೊತೆ ಮೊ. ಸೈ. ನಂ. ಕೆಎ-38/ಜೆ-1793 ನೇದ್ದರ ಮೇಲೆ ಮಕ್ಕಳ ಬಟ್ಟೆ ಖರೀದಿ ಮಾಡುವ ಕುರಿತು ಬೀದರಕ್ಕೆ ಹೋಗಿ ಬಟ್ಟಿ ಖರಿದಿ ಮಾಡಿ ಮರಳಿ ಬರುವಾಗ ಅಂದಾಜು 1930 ಗಂಟೆಗೆ ಶೆಮಶಿರನಗರ – ಬಾವುಗಿ ಮದ್ಯಾದಲ್ಲಿ ಧರಿ ಹತ್ತಿರ ಬಂದಾಗ ಹಿಂದಿನಿಂದ ಮೂವರು ವ್ಯಕ್ತಿಗಳು ಬಂದು ಮೋ. ಸೈ. ಮೇಲೆ ಬಂದು ಫಿರ್ಯಾದಿಗೆ ಅಡ್ಡ ಗಟ್ಟಿ ನಮ್ಮ ಮೊಬೈಲ ಕಳೆದಿದೆ ನಿಮ್ಮಗೆ ಸಿಕ್ಕಿದಿಯೇ ಅಂತಾ ವಿಚಾರಿಸಿ ನಿಮ್ಮ ಮೊಬೈಲ ಕೊಡಿ ನನ್ನ ಮೊಬೈಲಗೆ ಕಾಲ ಮಾಡುತ್ತೇನೆ. ಅಂತಾ ಹೇಳಿ ಫಿರ್ಯಾದಿ ಮೋಬೈಲ ತೆಗೆದುಕೊಂಡು ಫಿರ್ಯಾದಿಯ ಮೊ. ಸೈ. ಕೀ ತೆಗೆದುಕೊಂಡು ಇಬ್ಬರು ವ್ಯಕ್ತಿಗಳು ಬಂದು ಬಡಿಗೆಯಿಂದ ಫಿರ್ಯಾದಿಯ ಮುಖದ ಬಲಭಾಗಕ್ಕೆ ಎಡ ಮೊಳಕಾಲಕೆಳಗೆ ಹೊಡೆದು ಗುಪ್ತಗಾಯ ಪಡಿಸಿ ಜೇಬಿನಲ್ಲಿ ಇದ್ದ 3000/- ರೂ ತೆಗೆದುಕೊಂಡು ಫಿರ್ಯಾದಿಯ ಪತ್ನಿಯ ಕೋರಳಲಿದ್ದ 10 ಗ್ರಾಮ ಬಂಗಾರದ ಜೈನ ಸರ, ಬಂಗಾರದ ತಾಳಿ, ಹಾಗು ಒಂದು ಊಂಗರ, ಮತ್ತು ಗುಂಡುಗಳು ಒಟ್ಟು 10 ಗ್ರಾಮ, ಬೇಳ್ಳಿಯ ಲಿಂಗದ ಕಾಯಿ 15 ಗ್ರಾಮ, ಒಂದು ಮೊಬೈಲ ಫೊನ ಹಿಗೆ ಎಲ್ಲಾ ಒಟ್ಟು 60200/- ರೂ ಬೆಲೆಯುಳ್ಳ ಬಂಗಾರ, ಬೇಳ್ಳಿ, ವಡವೆಗಳು ನಗದು ಹಣ, ದೋಚಿಕೊಂಡು ಸುಲಿಗೆ ಮಾಡಿಕೊಂಡು ಹೊಗಿರುತ್ತಾರೆ. ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಖೆ ಕೈಗೊಳ್ಳಲಾಗಿದೆ.
No comments:
Post a Comment