ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 09-04-2012
ಗಾಂಧಿ ಗಂಜ ಪೊಲೀಸ್ ಠಾಣೆ ಗುನ್ನೆ ನಂ. 56/12 ಕಲಂ 457, 380 ಐಪಿಸಿ :-
ದಿನಾಂಕ 08-04-2012 ರಂದು 1700 ಗಂಟೆಗೆ ಫಿರ್ಯಾದಿ ಶ್ರೀ ವಿದ್ಯಾಸಾಗರ ಪಾಟೀಲ ತಂದೆ ವೀರಶೆಟ್ಟಿ ಪಾಟೀಲ 43 ವರ್ಷ, ಲಿಂಗಾಯತ, ಗುತ್ತೆದಾರ ಕೆಲಸ ಸಾ|| ಸಂಗೋಳಗಿ ಸದ್ಯ ಶಾರದಾ ಕಾಂಪ್ಲೇಕ್ಸ ಉದಗೀರ ರೋಡ ಬೀದರ ಇವರು ಪೊಲೀಸ್ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ಕೆ.ಹೆಚ್.ಬಿ ಕಾಲೋನಿ ಗೂನ್ನಳಿ ಗ್ರಾಮದ ಸವರ್ೇ ನಂ 8, 9, 10 ರಲ್ಲಿ ಕರ್ನಾಟಕ ಗೃಹ ಮಂಡಳಿಯ ವತಿಯಿಂದ ಗೃಹ ನಿಮರ್ಾಣ ಮಾಡುತ್ತಿರುವ ಮನೆಗಳ ಮೇಲೆ ಅಳವಡಿಸಿದ ಮನೆಗಳ ಪೈಕಿ 15 ಮನೆಗಳ ಮೇಲೆ ಅಳವಡಿಸಿರುವ ಸೋಲಾರ ವಾಟರಹಿಟರಗಳಲ್ಲಿರುವ ಹೀಟರ್ ಕಾಪರ ಕ್ವಾಯಿಲ್ ಅ|| ಕಿ|| 20,2500=00 ರೂ ನೇದು ಯಾರೋ ಅಪರಿಚಿತ ಕಳ್ಳರು ದಿನಾಂಕ: 06,07-04-2012 ರಂದು ರಾತ್ರಿ ಸಮಯದಲ್ಲಿ ಕಳವು ಮಾಡಿಕೊಂಡು ಹೋಗಿರುತಾರೆ. ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.
ಮುಡಬಿ ಪೊಲೀಸ್ ಠಾಣೆ ಗುನ್ನೆ ನಂ. 36/12 ಕಲಂ 385 ಐಪಿಸಿ :-
ದಿನಾಂಕ 07-04-2012 ರಂದು 2030 ಗಂಟೆಗೆ ಬಸವಕಲ್ಯಾಣ ಸರಕಾರಿ ಆಸ್ಪತ್ರೆಯಿಂದ ಮಾಹಿತಿ ಬಂದಿದ ಮೇರೆಗೆ ಆಸ್ಪತ್ರೆಗೆ ಬೇಟ್ಟಿ ನೀಡಿ ಪಿಯರ್ಾದಿ ಗಾಯಾಳು ರಂಜನಾ ಗಂಡ ಯೋಗೇಶ ಬಿರಾದಾರ ವಯ; 22 ವರ್ಷ ಜಾ; ಮರಾಠಾ ಉ; ಮನೆಕೆಲಸ ಸಾ; ಘಾಟಹಿಪ್ಪರ್ಗಾ ರವರು ನೀಡಿದ ದೂರಿನ ಸಾರಾಂಶವೆನೆಂದರೆ ದಿನಾಂಕ 7-04-2012 ರಂದು 1300 ಗಂಟೆಗೆ ಫಿರ್ಯಾದಿಮನೆಯಲ್ಲಿರುವ ಬಟ್ಟೆ ಒಗೆದು ಬಟ್ಟೆಗಳನ್ನು ಮಹಡಿಯ ಮೇಲೆ ಒಣಗಿಸಲು ಹಾಕಿ ಕೆಳಗಡೆ ಬರುವಷ್ಟರಲ್ಲಿ ಫಿಯರ್ಾದಿಯ ಅಣ್ಣತಮ್ಮ ಉಮೇಶ ತಂದೆ ತಾತೆರಾವ ಬಿರಾದಾರ .ಪ್ರೇಮನಾಥ ತಂದೆ ಚಂಗದೇವ ಸಿಂಧೆ. ವೈಜೀನಾಥ ತಂದೆ ಚಂಗದೆವ ಮತ್ತು ರಮೇಶ ತಂದೆ ತಾತೆರಾವ ಬಿರಾದಾರ ಇವೆರೆಲ್ಲರೂ ಕೋಣೆಯಲ್ಲಿ ಹೋಗಿ ಅಲಮಾರಿ ಮತ್ತು ಸಂದೂಕದಲ್ಲಿರುವ ನಗದು ಹಣ 4 ಲಕ್ಷ 9 ಸಾವಿರ ? ಹಾಗೂ ಅಂ.ಕಿ 90 ಸಾವಿರ ಬೆಲೆಬಾಳುವ ಬಂಗಾರದ ಆಭರಣ? ಹೀಗೆ ಒಟ್ಟು 4 ಲಕ್ಷ 99 ಸಾವಿರ ? ಬೆಲೆಬಾಳುವುದನ್ನು ತೆಗೆದುಕೊಂಡು ಹೋಗಲು ಪ್ರಯತ್ನಿಸಿದಾಗ ಫಿರ್ಯಾದಿಅವರಿಗೆಲ್ಲಾ ತಡೆಯಲು ಹೋದಾಗ ಅವರೆಲ್ಲರೂ ಫಿಯರ್ಾದಿಗೆ ಹೋಡೆದು ಗಾಯಪಡಿಸಿರುತ್ತಾರೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಕಮಲನಗರ ಪೊಲೀಸ್ ಠಾಣೆ ಗುನ್ನೆ. ನಂ. 34/2012 ಕಲಂ 341, 323, 504 ಜೋತೆ 34 ಐ.ಪಿ.ಸಿ :-
ದಿನಾಂಕ:-08/04/2012 ರಂದು 0930 ಗಂಟೆಗೆ ಫಿರ್ಯಾದಿ ಶ್ರೀ ಧರ್ಮರಾಜ ತಂದೆ ವಿಶ್ವನಾಥ ಬೀರಾದಾರ ಸಾ: ಕಮಲನಗರ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶ ವೇನೆಂದರೆ ಫಿರ್ಯಾದಿ1997 ನೇ ಸಾಲಿನಲ್ಲಿ ಆರೋಪಿ ಶೇಷರಾವ ತಂದೆ ವೀರಶೆಟ್ಟಿ ಬೀರಾದಾರ ಇವನ ಹತ್ತಿರ 11,150 ರೂ ಸಾಲ ಪಡೆದಿದ್ದು ಸದರಿ ಸಾಲ 1998 ನೇ ಸಾಲಿನಲ್ಲಿ ಮರಳಿ ಕೊಟ್ಟಿದರು ಸಹ ಆರೋಪಿತರು ದಿನಾಂಕ 08/04/2012 ರಂದು 0700 ಗಂಟೆಗೆ ಹನುಮಾನ ಮಂದಿರ ಹತ್ತಿರ ಫಿರ್ಯಾದಿಹಾಗು ಅವನ ಅಣ್ಣಂದಿರಾದ ಉಮಾಕಾಂತ ಮಹಾದೇವ ಸತ್ಯವಾನ ರವರು ಮಾತಾಡುತ್ತಾ ನಿಂತಾಗ ಆರೋಪಿತರು ಬಂದು ನಮ್ಮ ಹಣ ಯ್ಯಾವಾಗ ಕೊಟ್ಟಿರಿ ಅಂತಾ ಜಗಳ ತೆಗೆದು ಫಿರ್ಯಾದಿಯ ಅಣ್ಣಂದಿರರಿಗೆ ಕೈಗಳಿಂದ ಹೋಡೆದು ಗುಪ್ತಗಾಯ ಪಡಿಸಿರುತ್ತಾರೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
No comments:
Post a Comment