Police Bhavan Kalaburagi

Police Bhavan Kalaburagi

Monday, April 16, 2012

BIDAR DISTRICT DAILY CRIME UPDATE - 16-04-2012

ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 16-04-2012


ಬೀದರ ಸಂಚಾರ ಪೊಲೀಸ್ ಠಾಣೆ ಗುನ್ನೆ ನಂ. 82/12 ಕಲಂ 279, 338 ಐಪಿಸಿ :-


ದಿನಾಂಕ 15/04/2012 ರಂದು 12:30 ಗಂಟೆಗೆ ಆರೋಪಿ ವಿಠ್ಠಲರಾವ ತಂದೆ ಭಿಮಣ್ಣಾ ಮಯನಾಳಕರ ಸಾ: ಮುಲ್ತಾನಿ ಕಾಲೋನಿ ಬೀದರ ರವರು ತನ್ನ ಮೋಟಾರ ಸೈಕಲ ನಂ ಕೆಎ27ಹೆಚ್-9623 ನೇದ್ದರ ಮೇಲೆ ಬೀದರ ಅಂಬೇಡ್ಕರ ವೃತ್ತದ ಕಡೆಯಿಂದ ಸಿದ್ಧಾರ್ಥ ಕಾಲೇಜ ಕಡೆಗೆ ತನ್ನ ಮೋಟಾರ ಸೈಕಲನ್ನು ವೇಗವಾಗಿ ಹಾಗೂ ಅಜಾಗೂರುಕತೆಯಿಂದ ಇತರರ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬರುತ್ತಿರುವಾಗ ಜನವಾಡ ರೋಡ ಹತ್ತಿರ ಇರುವ ಮೇಟ್ರಿಕ ಪೂರ್ವ ಬಾಲಕರ ವಸತಿ ಗೃಹದ ಹತ್ತಿರ ಇರುವ ಡಿವೈಡರಿಗೆ ಡಿಕ್ಕಿ ಹೊಡೆದು ತನ್ನಿಂದ ತಾನೆ ಕೇಳಗೆ ಬಿದ್ದು ಪ್ರಯುಕ್ತ ಆರೋಪಿಗೆ ನಡುತಲೆಯಲ್ಲಿ ಭಾರಿ ರಕ್ತಗಾಯ ಮತ್ತು ಬಲಕಾಲಿನ ಮೋಳಕಾಲಿಗೆ ರಕ್ತ ಗಾಯವಾಗಿರುತ್ತದೆ. ಅಂತ ಆರೋಪಿಯ ಅಣ್ಣನಾದ ಶ್ರೀ ತುಕಾರಾಮ ರವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.


ಹುಲಸೂರ ಪೊಲೀಸ್ ಠಾಣೆ ಗುನ್ನೆ ನಂ. 99/12 ಕಲಂ 454, 380 ಐಪಿಸಿ :-


ದಿನಾಂಕ 15/04/2012 ರಂದು 1800 ಗಂಟೆಗೆ ಫಿರ್ಯಾದಿರಮೇಶ ತಂದೆ ಬಾಬುರಾವ ಹಾರಕೂಡೆ ವಯ: 45 ವರ್ಷ ಜಾ: ಲಿಂಗಾಯತ ಉ: ವೇಟರನರಿ ಇನ್ಸಪೇಕ್ಟರ ಸಾ: ಹುಲಸೂರ ರವರು ಠಾಣೆಗೆ ಹಾಜರಾಗಿ ತನ್ನ ಲಿಖಿತ ಫಿರ್ಯಾದಿ ಅಜರ ಸಲ್ಲಿಸಿದ ಸಾರಾಂಶವೆನೆಂದರೆ ದಿ: 15/04/2012 ರಂದು ಸೋದರ ಸೊಸೆಯ ಲಗ್ನವಿದ್ದ ಕಾರಣ ಮನೆಯ ಬಾಗಿಲಿಗೆ ಬೀಗ ಹಾಕಿ ಅಲ್ಲಿಯೇ ಇದ್ದ ಗಣೇಶ ಮೂತರ್ಿಯ ಬಳಿ ಇಟ್ಟು ಮಧ್ಯಾಹ್ನ 1200 ಗಂಟೆಗೆ ಮದುವೆ ಕಾರ್ಯಕ್ರಮಕ್ಕೆ ಹೋಗಿ ಮದುವೆ ಕಾರ್ಯಕ್ರಮ ಮುಗಿಸಿಕೊಂಡು ಮರಳಿ 1430 ಗಂಟೆಗೆ ಮನೆಗೆ ಹೋಗಿ ಬೀಗ ತೆಗೆದು ನೋಡಲು ಒಳಗಡೆ ಇದ್ದ ಅಲಮಾರಿ ನೋಡಲಾಗಿ ಅಲಮಾರಿ ಕೀಲಿ ಮುರಿದ ಒಳಗಡೆ ಇಟ್ಟಿದ್ದ 1) 5 ಗ್ರಾಂ ಬಂಗಾರದ 5 ಸುತ್ತೂಂಗುರ ಅ.ಕಿ 50,000/-ರೂ. 2) 1 ಬಂಗಾರದ ಹರಳಿನ ಉಂಗುರ ಅ.ಕಿ 10,000/-ರೂ 3) 1 ಜೊತೆ ಬಂಗಾರದ ಝೂಮಕಾ ಅ.ಕಿ 10,000/-ರೂ. 4) 1 ಜೊತೆ ಬಂಗಾರದ ಲಟ್ಕನ್ ಅ.ಕಿ 3,000/-ರೂ 5) 3 ಜೊತೆ ಬೆಳ್ಳಿ ಚೈನ್ ಅ.ಕಿ 2,000/- 6) 1 ಬೆಳ್ಳಿ ಕುಂಕುಮ ಡಬ್ಬಿ ಅ.ಕಿ 1,50/- ರೂ 7) 1 ನೋಕಿಯಾ ಮೊಬೈಲ್ ಫೋನ್ ಅ.ಕಿ 13,00/-ರೂ - ಒಟ್ಟು =79,450/- ರೂ ಸಾಮಾನುಗಳು ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.


ನೂತನ ನಗರ ಪೊಲೀಸ್ ಠಾಣೆ ಗುನ್ನೆ ನಂ. 77/12 ಕಲಂ 457,380 ಐಪಿಸಿ :-


ದಿನಾಂಕ 15-04-2012 ರಂದು 1000 ಗಂಟೆಗೆ ಫಿರ್ಯಾದಿವಿನೋದ ಕುಮಾರ ತಂದೆ ಘಾಳೆಪ್ಪಾ ಬಾಗಲೆ ವಯ 33 ವರ್ಷ ಜಾತಿ ಲಿಂಗಾಯತ ಉ ಖಾಸಗಿ ಕೆಲಸ ಸಾ: ನೌಬಾದ ಬೀದರ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ, ದಿನಾಂಕ 14-04-2012 ರಂದು ರಾತ್ರಿ 1200 ಗಂಟೆಗೆಯ ವರೆಗೆ ಮನೆಯಲ್ಲಿ ಎಲ್ಲಾರೂ ಎಚ್ಚರವಿದ್ದು, ದಿನಾಂಕ 15-04-2012 ರಂದು ರಾತ್ರೀ ಬಾಗಿಲು ಮುಚ್ಚಿಕೊಂಡು ಮಲಗಿಕೊಂಡಿದ್ದಾಗ ಫಿಯರ್ಾದಿಯ ಅತ್ತಿಗೆಯಾದ ಚಂದ್ರಕಲಾ ಗಂಡ ದಿ. ವಿಜಯಕುಮಾರ ಇವರಿಗೆ ಒಂದು ಗಂಡು ಒಂದು ಹೆಣ್ಣು ಮಗಳು ಇದ್ದು ಇವರು ಸಹ ನಮ್ಮ ಮನೆಯ ಮೇಲ ಛಾವಣಿಯಲ್ಲಿ ಮಲಗಿರುತ್ತಾರೆ. ಅಣ್ಣನ ಮಗಳಾದ ಪ್ರಿಯಾಂಕ ಇವಳು ಲಗ್ನಕ್ಕೆ ಬಂದಿದ್ದು ಇವಳ ಮುಂದೆ ಮದುವೆಗೋಸ್ಕರ ನಾವೆಲ್ಲಾರೂ ಮುಂಚಿತವಾಗಿ ಬಂಗಾರದ ಅಭರಣಗಳು ಸ್ವಲ್ಪ ಸ್ವಲ್ಪ ಖರೀದಿ ಮಾಡಿಕೊಂಡು ಇಟ್ಟಿರುತ್ತೇವೆ. ಎಂದಿನಂತೆ ಬೆಳ್ಳಿಗೆ 0415 ಗಂಟೆಗೆ ಎದ್ದು ನೋಡಲು ರೂಮಿನ ಬಾಗಿಲು ಕೀಲಿ ಮುರಿದು ಒಳಗಡೆ ಯಾರೋ ಅಪರಿಚಿತ ಕಳ್ಳರು ಪ್ರವೇಶ ಮಾಡಿ ರೂಮಿನಲ್ಲಿದ್ದ ಒಂದು ಅಲ್ಮಾರ ಒಡೆದು 1 ಬಂಗಾರದ ಚೈನು 25 ಗ್ರಾಂ ಅ.ಕಿ 62,500/- ರೂ 2] 1 ಬಂಗಾರದ ಸುತ್ತುಂಗರ 8 ಗ್ರಾಂ ಅ.ಕಿ 20,000/- ರೂ 3] 1 ಬಂಗಾರದ ಸುತ್ತುಂಗರ 10 ಗ್ರಾಂ ಅ.ಕಿ 25,000/- ರೂ 4] ಬಂಗಾರದ ಸುತ್ತುಂಗರ 6 ಗ್ರಾಂ ಅ.ಕಿ 15,000/- 5] ಸೆಟಗೇನ ರೂಪ 1 ಗ್ರಾಂ ಅ.ಕಿ 2500/- ರೂ 6] 1 ,ಬಂಗಾರದ ಸುತ್ತುಂಗರ 1 ಗ್ರಾಂ ಅ.ಕಿ 2500/- ರೂ 7] 4 ಬಂಗಾರದ ಗೊಂಡ 4 ಗ್ರಾಂ ಅ.ಕಿ 10,000/- 8] ಬಂಗಾರದ ಝಮಕಾ 2 ಜೊತೆ 14 ಗ್ರಾಂ ಅ.ಕಿ 35,000/- ಹೇಗೆ ಒಟ್ಟು 1,72,500/- ಬೆಲೆ ಬಾಳುವ ಬಂಗಾರದ ಅಭರಣಗಳು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.


No comments: