Police Bhavan Kalaburagi

Police Bhavan Kalaburagi

Wednesday, April 4, 2012

GULABARGA DIST REPORTED CRIMES


ಹುಡಗಿ ಕಾಣೆಯಾದ ಪ್ರಕರಣ:
ಗ್ರಾಮಿಣ ಪೊಲೀಸ್ ಠಾಣೆ: ಶ್ರೀ ಮೈನೂದ್ದಿನ ತಂದೆ ನಬಿಸಾಬ ಮುಲ್ಲಾ ವಯಾ:65 ವರ್ಷ ಸಾ:ಬೈರಾಮಡಗಿ ತಾ:ಅಫಜಲಪೂರ ವರು ನನ್ನ ಮಗಳಾದ ಮುನ್ನಿ ಇವಳು ಗುಲಬರ್ಗಾದ ಟಿಪ್ಪು ಸುಲ್ತಾನ ಕಾಲೇಜಿನಲ್ಲಿ ಡಿ.ಎಡ್ ಪ್ರತಮ ವರ್ಷದಲ್ಲಿ ವಿದ್ಯಾಬ್ಯಾಸ ಮಾಡುತ್ತ ದಿನಾಲು ಕಾಲೇಜಿಗೆ ಹೋಗಿ ಬರುವುದು ಮಾಡುತ್ತಾಳೆ. ದಿನಾಂಕ:-03/04/2012 ರಂದು ಮುಂಜಾನೆ 9:00 ಗಂಟೆಗೆ ಮನೆಯಿಂದ ಕಾಲೇಜಿಗೆ ಹೋದವಳು ಇಲ್ಲಿಯವರೆಗೆ ಮನೆಗೆ ಬಂದಿರುವುದಿಲ್ಲಾ ಸದರಿಯವಳು ಕಾಣೆಯಾಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ. 103/2012 ಕಲಂ ಹೆಣ್ಣು ಮಗಳು ಕಾಣೆ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಕೊಂಡಿರುತ್ತಾರೆ. ಹುಡಗಿಯ ಚಹರೆ ವಯಸ್ಸು|| 19 ವರ್ಷ, ಎತ್ತರ-5.5 ಪೀಟ ಎತ್ತರ, ದುಂಡು ಮುಖ, ಕೆಂಪು ಬಣ್ಣ, ನಿಟಾದ ಮೂದು ಸದೃಡ ಮೈಕಟ್ಟು, ಕನ್ನಡ ಹಿಂದಿ ಮಾತನಾಡುತ್ತಾಳೆ , ಆರೆಂಜ ಬಣ್ಣದ ಚೂಡಿದಾರ ಧರಿಸಿರುತ್ತಾರೆ ಇವರ ಬಗ್ಗೆ ಸುಳಿವು ಸಿಕ್ಕಲ್ಲಿ ದೂರವಾಣಿ ಸಂ: 08472-263631, 26360 ಅಥವಾ ಮೋಬಾಯಿಲ್ ಸಂ: 9480803616, ಸಿಪಿಐ ಗ್ರಾಮಿಣ- 9480803530, ಅಥವಾ ಡಿಎಸಪಿ ಗ್ರಾಮಿಣ 9480803522 ರವರಿಗೆ ಸಂಪರ್ಕಿಸಲು ಕೋರಲಾಗಿದೆ.
ಹಲ್ಲೆ ಜಾತಿ ನಿಂದನೆ ಪ್ರಕರಣ:
ಚಿತ್ತಾಪೂರ ಪೊಲೀಸ್ ಠಾಣೆ: ಶ್ರೀ ಪ್ರವೀಣ ಕುಮಾರ ತಂಧೆ ಪರಮೇಶ್ವರ ಏರಿ ಸಾ|| ಭಾಗೋಡಿ ರವರು ನಾನು ಮತ್ತು ನನ್ನ ಗೆಳೆಯರು ದಿನಾಂಕ 03/04/2012 ರಂದು ಭಾಗೋಡಿ ಗ್ರಾಮದಲ್ಲಿ ಮಹಿಬೂಬ ಸುಬಾನಿ ಜಾತ್ರೆಯ ಅಂಗವಾಗಿ ಗಂಧ ಕಾರ್ಯಕ್ರಮವಿದ್ದುದರಿಂದ ನೋಡಲು ಹೋದಾಗ ರಾತ್ರಿ 9-00 ಗಂಟೆ ಸುಮಾರಿಗೆ ನನ್ನ ಗೆಳೆಯ ಸಿದ್ದು ಇವಣಿ ಇವನು ಡ್ಯಾನ್ಸ ಮಾಡುತ್ತಿದ್ದಾಗ ಗುಂಡಪ್ಪ ತಂದೆ ನಾಗಣ್ಣ ಹಾಸಬಾ ಮತ್ತು ಅವನ ಸಂಗಡಿಗರು 20 ಜನರು ಸೇರಿಕೊಂಡು ಈ ಹೊಲೆಯ ಸೂಳೆ ಮಕ್ಕಳು ನಮ್ಮ ಕಾರ್ಯಕ್ರಮದಲ್ಲಿ ಬಂದು ಯಾಕೆ ಡ್ಯಾನ್ಸ ಮಾಡುತ್ತಾರೆ ಅಂತ ಜಾತಿ ನಿಂದನೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ನನಗೆ ಮತ್ತು ಮಾರುತಿ ಕೊಡದೂರ, ಸಿದ್ದು ಇವಣಿ, ಸೂರ್ಯಕಾಂತ ಅಂಕಲಕೋಟೆ ದತ್ತಾತ್ರೇಯ ಏರಿ, ಜೈಭೀಮ ಕುದರಿ, ಯಲ್ಲಾಲಿಂಗ ಕುದರಿ ಬಾಬುರಾವ ಹೆಡಗಿ, ವಸಂತ ಕೊಡದೂರ, ಹಣಮಂತ ಏರಿ ರವರಿಗೆ ಬಡಿಗೆ ಮತ್ತು ಕಬ್ಬಿಣದ ರಾಡುಗಳಿಂದ ಹಾಗು ಕೈಯಿಂದ ಹೊಡೆದಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ 30/2012 ಕಲಂ 143,147,148,323,324,504,506, ಸಂ 149 ಐ.ಪಿ.ಸಿ ಮತ್ತು 3(1)(10) ಎಸ್.ಸಿ.ಎಸ್.ಟಿ ಪಿ.ಎ. ಆಕ್ಟ್ 1989 ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ: ಕು.ದೌಲತಬಿ ತಂದೆ ಗೂಡುಬಾಯಿ ವ:18 ಸಾ:ಮುತ್ತಗಾ ರವರು ನಾನು ಮತ್ತು ನನ್ನ ತಮ್ಮ ನಬಾಬ ಮತ್ತು ನನ್ನ ತಾತ ಲಾಲೆಸಾಬ ಕೂಡಿ ನಮ್ಮ ಮನೆಯ ಮುಂದಿನ ಕಟ್ಟೆಯ ಮೇಲೆ ಮಲಗಿದೇವು ದಿನಾಂಕ:02/04/2012 ರಂದು ರಾತ್ರಿ 2.00 ಎಎಂಕ್ಕೆ ನಮ್ಮೂರವನಾದ ರಶೀದ ತಂದೆ ರಜಾಕ ಸೂಗುರ ಇತನು ನಾನು ಮಲಗಿದ ಸ್ಥಳಕ್ಕೆ ಬಂದು ನನಗೆ ಕೈ ಹಿಡಿದು ಎಳೆದಾಡಿದ್ದು ನನಗೆ ಎಚ್ಚರವಾಗಿ ನೋಡಲು ಸದರಿ ರಶೀದ ಇತನು ನನಗೆ ಬಲವಂತವಾಗಿ ಜಗ್ಗಾಡಿ ನನಗೆ ಕೈಯಿಂದ ಹೊಡೆದು ದಬ್ಬಿಕೊಟ್ಟಿರುತ್ತಾನೆ. ಸದರಿಯವನು ಮಾನಭಂಗ ಮಾಡಲು ಪ್ರಯತ್ನ ಮಾಡಿ ಕೈಯಿಂದ ಹೊಡೆದು ಓಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:34/2012 ಕಲಂ 323 354 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳವು ಪ್ರಕರಣ:
ಬ್ರಹ್ಮಪೂರ ಪೊಲೀಸ್ ಠಾಣೆ: ಡಾ|| ಇಮ್ರಾನ್-ಉಲ್-ಹಜ್ ತಂದೆ ಮಂಜೂರ-ಉಲ್-ಹಜ್ ಸಾ|| ಮನೆ ನಂ. 134 ವಿದ್ಯಾನಗರ ಗುಲಬರ್ಗಾರವರು ನಾನು ದಿನಾಂಕ:27/02/2012 ರಂದು 1200 ಗಂಟೆಗೆ ವೀರಶೈವ ಕಲ್ಯಾಣ ಮಂಟಪ ಹತ್ತಿರ ಪಬ್ಲಿಕ್ ಗಾರ್ಡನದಲ್ಲಿ ನನ್ನ ದ್ವಿಚಕ್ರ ವಾಹನ ಹಿರೋ ಹೊಂಡಾ ಸ್ಲೇಂಡರ್‌ ನಂ:ಕೆಎ 32 ಕೆ 7437 ಅ||ಕಿ|| 20,000/- ನೇದ್ದನ್ನು ನಿಲ್ಲಿಸಿ ಮರಳಿ ಸುಮಾರು 1530 ಗಂಟೆಗೆ ಬಂದು ನೋಡಿದಾಗ ನಿಲ್ಲಿಸಿರುವ ವಾಹನವು ಇರುವದಿಲ್ಲ. ನಾನು ಎಲ್ಲಾ ಕಡೆ ಇಲ್ಲಿಯವರೆಗೆ ಹುಡುಕಾಡಿದರು ಸಿಕ್ಕಿರುವದಿಲ್ಲ. ಕಾರಣ ಯಾರೋ ಕಳ್ಳರು ನನ್ನ ಮೋಟರ ಸೈಕಲನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ 43/2012 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಆಳಂದ ಪೊಲೀಸ ಠಾಣೆ: ಇಸ್ಮಾಯಿಲ ತಂದೆ ನಬಿಸಾಬ ಜಮಾದಾರ ರವರು ನಾನು ಮನೆಯಲ್ಲಿದ್ದಾಗ ನನ್ನ ಅಣ್ಣನಾದ ಅಬ್ಬಾಸ ಅಲಿ ಇತನಿಗೆ ರಸ್ತೆಯ ಮೇಲೆ ಯಾಕೆ ಎತ್ತುಗಳು ಕಟ್ಟತಿ ಬೆರೆಕಡೆ ಕಟ್ಟು ಅಂತಾ ಹೇಳಿದ್ದಕ್ಕೆ ಅಬ್ಬಾಸ ಅಲಿ ಇತನು ನನಗೆ ಕೈಯಿಂದ ಗಲ್ಲಕ್ಕೆ ಹೊಡೆದನು ಅಷ್ಟರಲ್ಲಿ ನನ್ನ ಹೆಂಡತಿಯಾದ ಗುಡುಮಾಬೀ ಇವಳು ಬಿಡಿಸಲು ಬಂದಾಗ ನನ್ನ ಅಣ್ಣನಾದ ಅಬ್ಬಾಸ ಅಲಿಯ ಮಗನಾದ ಇಕ್ರಮ ಮತ್ತು ಇರಫಾನ ಇತನು ಮನೆಯ ಒಳಗಿನಿಂದ ಬಂದವರೇ ಬೈಯುತ್ತಾ ಇಕ್ರಮನು ತನ್ನ ಕೈಯಲ್ಲಿದ್ದ ಬಡಿಗೆಯಿಂದ ನನ್ನ ಹೆಂಡತಿಗೆ ಬಲಗೈ ಮುಂಗೈ ಮೇಲೆ ಹೊಡೆದಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:62/2012 ಕಲಂ 323.324.504.506 ಸಂ 34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಸಂಚಾರಿ ಪೊಲೀಸ್ ಠಾಣೆ:ಶ್ರಿ ರುದ್ರಪ್ಪಾ ತಂದೆ ಬಸಪ್ಪಾ ಜಾಕಾ, ಸಾಃ ಉಪನ್ಯಾಸಕ, ಸಾಃ ವೀರೇಂದ್ರಪಾಟೀಲ ಬಡಾವಣೆ ಗುಲಬರ್ಗಾರವರು ನಾನು ದಿನಾಂಕ: 03-04-2012 ರಂದು ನನ್ನ ಮೋಟಾರ ಸೈಕಲ ನಂ.ಕೆ.ಎ ಕೆ.ಎ 33 6187 ನೇದ್ದನ್ನು ಆರ್.ಟಿ.ಓ ಕ್ರಾಸ ಕಡೆಯಿಂದ ಬಂದು ಎಸ್.ಬಿ.ಐ ಬ್ಯಾಂಕದಲ್ಲಿ ಕೆಲಸ ಇರುವ ಕಾರಣ 2-00 ಪಿ.ಎಮ್ ಕ್ಕೆ ರೋಡಿನ ಪಕ್ಕಕ್ಕೆ ಎಸ್.ಬಿ.ಐ ಬ್ಯಾಂಕ ಎದುರುಗಡೆ ತಿರುಗಿಸಿಕೊಂಡು ಮೋಟಾರ ಸೈಕಲ ನಿಲ್ಲಿಸಿ ಕೆಳಗಿಯುವರಷ್ಟರಲ್ಲಿ ಮೋಟಾರ ಸೈಕಲ ನಂ. ಕೆ.ಎ 32 ವೈ 2696 ನೇದ್ದರ ಚಾಲಕನು ಸೇಡಂ ರಿಂಗ ರೋಡ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನಗಡ ಎಡಗಾಲಿಗೆ ಡಿಕ್ಕಿ ಪಡಿಸಿ ವಾಹನ ಸಮೇತ ಓಡಿ ಹೋಗಿರುತ್ತಾನೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 18/2012 ಕಲಂ 279, 338 ಐ.ಪಿ.ಸಿ ಸಂಗಡ 187 ಐ.ಎಮ್.ವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅತ್ಯಾಚಾರ ಪ್ರಕರಣ:
ಗ್ರಾಮೀಣ ಠಾಣೆ ಗುಲಬರ್ಗಾ: ಶ್ರೀ ಶರಣಪ್ಪಾ ತಂದೆ ಯಶ್ವಂತ ಜಮದಾರ ಇತನು 2011 ನೇ ಸಾಲಿನ ಡಿಸೆಂಬರ ತಿಂಗಳಲ್ಲಿ ನಮ್ಮ ಮನೆಯಲ್ಲಿ ಎಲ್ಲರೂ ಹೊಲಕ್ಕೆ ಹೋದಾಗ ಮಧ್ಯಾನದ ವೇಳೆಯಲ್ಲಿ ನಮ್ಮ ಮನೆಯಲ್ಲಿ ಬಂದು ನನಗೆ ಜಬರದಸ್ತಿಯಿಂದ ಜಬರಿ ಸಂಭೋಗ ಮಾಡಿರುತ್ತಾನೆ. ಈ ವಿಷಯದ ಬಗ್ಗೆ ಯಾರಿಗಾದರೂ ಬಾಯಿ ಬಿಟ್ಟರೆ ನಿನನ್ನು ಗ್ರಾಮದಲ್ಲಿ ಮಾನ ಹರಾಜ ಮಾಡುತ್ತೇನೆ, ಇಲ್ಲವಾದರೆ ನಿನ್ನನ್ನು ಕೊಲೆ ಮಾಡುತ್ತೇನೆ ಎಂದು ಹೇದರಿಸಿ ಸಮಯ ಸಿಕ್ಕಾಗ ನನ್ನನ್ನು ಚಿತ್ರ ಹಿಂಸೆಗೆ ಒಳಪಡಿಸಿ ನನಗೆ ಮೇಲಿಂದ ಮೇಲೆ ಅತ್ಯಾಚ್ಯಾರ ವೆಸಗಿ , ಕಾಮತೃಷೆಯನ್ನು ತೀರಿಸಿಕೊಂಡಿರುತ್ತಾನೆ. ಇವನಿಂದ ಅತ್ಯಾಚಾರಕ್ಕೆ ಒಳಗಾಗಿ ನನಗೆ ಎರಡು ತಿಂಗಳ  ಹೊಟ್ಟೆ ಬಂದಿದ್ದು ಈ ವಿಷಯವನ್ನು ನಾನು ನನ್ನ ತಂದೆ ತಾಯಿಯವರಿಗಾಗಲಿ ಅಥವಾ ಇತರರಿಗೆ ಹೇಳದೆ ಹಾಗೆಯೇ ಇದ್ದು ನನ್ನ ದೊಡ್ಡಮನ ಊರಾದ ಹೊನ್ನಕಿರಣಗಿ ಗ್ರಾಮಕ್ಕೆ ಹೋದಾಗ ಅಲ್ಲಿ ನನಗೆ ವೀಪರೀತ ಹೊಟ್ಟೆ ನೋವು ಆದಾಗ ಆಸ್ಪತ್ರೆಗೆ ಹೋಗಿ ತೋರಿಸಿದಾಗ ಎರಡು ತಿಂಗಳು ಗರ್ಭಿಣಿಯಾಗಿದ್ದಾಳೆ ಎಂದು ಧೃಡಪಡಿಸಿರುತ್ತಾರೆ.  ವಿಷಯವನ್ನು ಕೆರೂರ ಗ್ರಾಮದ ಪಂಚರ ನಡುವೆ ಹೇಳಿದಾಗ, ಸದರಿ ವ್ಯಕ್ತಿ ಶರಣಪ್ಪಾ ತಂದೆ ಯಶ್ವಂದ ಜಮಾದಾರ ಇವನನ್ನು ಕೆರೂರ ಪಂಚಾಯತಿಗೆ ಬರಲಾರದೇ ಅವರ ತಂದೆ ತಾಯಿಯವರು ಹಾಗೂ ಅಣ್ಣ ತಮ್ಮಂದಿರು ಹಾಗೂ ಅವರ ಸಂಬಂದಿಕಕರು ಕರೆದು ವಿಚಾರಿಸಿದಾಗ ಹೌದು ಇವಳನ್ನು ಬಲತ್ಕಾರ ಮಾಡಿದ್ದಾನೆ ಎಂದು ನಿಜ ಸ್ಥಿತಿಯನ್ನು ಎಲ್ಲರ ಮುಂದೆ ಒಪ್ಪಿಕೊಂಡು ನನ್ನ ಮಗ ಇವಳನ್ನು ಮದುವೆಯಾಗುತ್ತೇನೆ ಅಂತಾ ಒಪ್ಪಿಕೊಂಡಿರುತ್ತಾರೆ.ಅವರ ತಂದೆ ತಾಯಿ ಹಾಗೂ ಅಣ್ಣ ತಮ್ಮಂದಿರಿಗೆ ಬಾಯಿಯ ಮುಖಾಂತ ಹೇಳಿಸಿದ್ದು. ಇವಳ ಜೋತೆ ನನ್ನ ಮಗ ರೆಜಿಸ್ಟರ ಮದುವೆ ಮಾಡಿಸುತ್ತೇವೆ ಎಂದು ಒಪ್ಪಿಗೆ ಪತ್ರದ ಸಹಿ ಮಾಡಿದ್ದು ಆದರೆ ಮದುವೆ ಮಾಡಿಕೊಳ್ಳುವ ಕುರಿತು ಗುಲಬರ್ಗಾದ ರೆಜಿಸ್ಟರ ಆಫೀಸಗೆ ಬಂದಾಗ  ಆತನು ರೆಜಿಸ್ಟರ ಆಪೀಸಗೆ ಬರುತ್ತಿಲ್ಲಅಂತಾ ಕಂಪ್ಯೂಟರದಲ್ಲಿ ಟೈಪ ಮಾಡಿಸಿದ ಅರ್ಜಿ  16 ವರ್ಷದ ಹುಡಗಿ ಸಾ|| ಕೇರೂರ ಗ್ರಾಮದವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ. 104/2012 ಕಲಂ. 448 , 376, 506 ಐಪಿಸಿ ನೆದ್ದರ ಪ್ರಕಾರ ಗುನ್ನೆ ದಾಖಲಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

No comments: