ಜೂಜಾಟ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ :ಶ್ರೀ ಶಹಾಬಾದ ಪಟ್ಟಣದ ಭಾರತ ಚೌಕ ಭಂಕಟಚಾಳ ಶಕೀಲ ಸೇಟ ಟಾವರ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಖುಲ್ಲಾ ಜಾಗೆಯಲ್ಲಿ ಕೆಲವು ಜನರು ಕುಳಿತು ಅಂದರ ಬಾಹರ ಇಸ್ಪೀಟ ಆಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಶ್ರೀ ಶರಣಪ್ಪಾ ಹಿಪ್ಪರಗಿ ಪಿ.ಐ ಶಹಾಬಾದ ನಗರ ಠಾಣೆ, ಹಾಗೂ ಸಿಬ್ಬಂದಿಯವರಾದ ಗುಂಡಪ್ಪಾ, ಯೆಜಿಕಲ್, ಪರಶುರಾಮ,ಬಸವರಾಜ ಸಿಪಿಸಿ ರವರೊಂದಿಗೆ ಪಂಚರ ಸಮಕ್ಷಮ ಗುಂಪಾಗಿ ಕುಳಿತು ಇಸ್ಟೀಟ ಆಟ ಆಡುತ್ತಿವರನ್ನು ದಾಳಿ ಮಾಡಿ ಹಿಡಿದು ವಿಚಾರಿಸಲಾಗಿ ಅವರ ತಮ್ಮ ತಮ್ಮ ಹೆಸರು ರಾಕೇಶ ತಂದೆ ಯಲ್ಲಪ್ಪಾ ವಡ್ಡರ, ರುಕ್ಮೊದ್ದಿನ್ ತಂದೆ ಉಸ್ಮಾನಶೇಖ ಶಹಾಬಾದ ರವರನ್ನು ವಶಕ್ಕೆ ತೆಗೆದುಕೊಂಡು ಅವರಿಂದ ನಗದು ಹಣ 1150 -ರೂ ಮತ್ತು ಇಸ್ಟೀಟ ಎಲೆಗಳು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡಿದ್ದರಿಂದ ಠಾಣೆ ಗುನ್ನೆ ನಂ: 33/2012 ಕಲಂ:87 ಕೆಪಿ ಆಕ್ಟ್ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
Police Bhavan Kalaburagi
Monday, April 2, 2012
GULBARGA DIST REPORTED CRIME
Subscribe to:
Post Comments (Atom)
No comments:
Post a Comment