Police Bhavan Kalaburagi

Police Bhavan Kalaburagi

Thursday, April 12, 2012

GULBARGA DIST REPORTED CRIME

ವಂಚನೆ ಪ್ರಕರಣ:

ಸ್ಟೇಷನ ಬಜಾರ ಪೊಲೀಸ ಠಾಣೆ: ಮಾನ್ಯ ಪ್ರಿನ್ಸಿಪಾಲ್ ಜೆ.ಎಮ್.ಎಫ್.ಸಿ ಕೊರ್ಟ ಗುಲಬರ್ಗಾರವರ ಆದೇಶ ಪತ್ರ ನಂ:1501/2012 ದಿನಾಂಕ:09/04/2012 ಪಿ.ಸಿ ನಂ 90/12 ನೇದ್ದನ್ನು ಕೊರ್ಟ ಕರ್ತವ್ಯದ ಕಾನ್ಸಟೇಬಲ್ ಮುಖಾಂತರ ಖಾಸಗಿ ದೂರು ದಿನಾಂಕ:12-04-2012 ರಂದು ವಸೂಲಾಗಿದ್ದರ ಸಾರಂಶವೆನೆಂದರೆ, ಶ್ರೀ ಯಲ್ಲಪ್ಪಾ ತಂದೆ ಶಿವಶರಣಪ್ಪಾ ನಾಯಿಕೊಡಿ ಸಾ|| ಪಿಲ್ಟರ್ ಬೆಡ್ ರೋಡ ಎಕಲವ್ಯ ಸ್ಟೋರ ತಾಕ ಸುಲ್ತಾನಪೂರ ಗುಲಬರ್ಗಾರವರು ಆರೋಪಿಗಳಾದ ಕಲ್ಯಾಣರಾದ ತಂದೆ ಯಶ್ವಂತರಾವ ಗನ್ನೂರೆ ನಿಟಾ ಎಂಟ್ರಪ್ರೇಜೆಸ್ ಸುಪರ ಮಾರ್ಕೆಟ ಗುಲಬರ್ಗಾ ಮತ್ತು ಇವರ ಸಂಗಡ ಇನ್ನೂ 4 ಜನರು ವಂಚನೆ ಮಾಡಿರುತ್ತಾರೆ ಅಂತಾ ಯಲ್ಲಪ್ಪಾ ರವರು ಮಾನ್ಯ ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಿದ್ದ ಸಾರಂಶದ ಮೇರೆಗೆ ಮಾನ್ಯ ನ್ಯಾಯಾಲಯವು ಕಲಂ 156 (3) ಸಿ.ಆರ್.ಪಿ.ಸಿ ಯ ಪ್ರಕಾರ ತನಿಖೆ ಕೈಕೊಂಡು ವರದಿ ಸಲ್ಲಿಸುವಂತೆ ಆದೇಶಿಸಿದ್ದರಿಂದ ಠಾಣೆ ಗುನ್ನೆ ನಂ 50/2012 ಕಲಂ 419, 420,ಸಂ 149 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.

No comments: