ಹುಡಗಿ ಕಾಣೆಯಾದ ಪ್ರಕರಣ:
ಚಿತ್ತಾಪೂರ ಪೊಲೀಸ್ ಠಾಣೆ:ದಿನಾಂಕ:30/03/2012 ರಂದು ಮುಂಜಾನೆ 11-00 ಗಂಟೆ ಸುಮಾರಿಗೆ ನನ್ನ ಹೆಂಡತಿಯಾದ ಕಮಲಾಬಾಯಿ ಮತ್ತು ಹಿರಿಯ ಮಗಳಾದ ವೀಣಾ ಇವರು ಚಿತ್ತಾಫೂರ ನಾಗಾವಿ ಎಲ್ಲಮ್ಮ ದೇವಸ್ಥಾನದ ದರ್ಶನ ಕುರಿತು ಬಂದಿದ್ದು ಮುಂಜಾನೆ 11 ರಿಂದ 11-30 ಗಂಟೆಯ ವೇಳೆಯಲ್ಲಿ ನನ್ನ ಮಗಳಾದ ವೀಣಾ ಇವಳು ಕಾಣೆಯಾಗಿದ್ದು, ಸದರಿಯವಳಿಗೆ ಎಲ್ಲಾ ಕಡೆ ಹುಡುಕಾಡಿದ್ದರು ಸಿಕ್ಕಿರುವದಿಲ್ಲ ಅಂತಾ ಮಾಳಪ್ಪಾ ತಂದೆ ಪೀರಪ್ಪಾ ಪೂಜಾರಿ ವ|| 47 ಸಾ|| ಚೌಡಾಪೂರ ಅಫಜಲಪೂರ ಜಿ|| ಗುಲಬರ್ಗಾ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:34/2012 ಕಲಂ ಹುಡಗಿ ಕಾಣೆಯಾದ ಬಗ್ಗೆ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. ಕಾಣೆಯಾದ ಹುಡಗಿಯ ಚಹರೆ ಪಟ್ಟಿ: ವಯ-20 ವರ್ಷ, ಎತ್ತರ-5.4 ಇಂಚ, ಉದ್ದನೆಯ ಮೂಗು ಎಣ್ಣೆ ಗಂಪು ಬಣ್ಣ, ಕಪ್ಪು ಕೂದಲು, ಕನ್ನಡ ಭಾಷೆ ಬಲ್ಲವಳಾಗಿರುತ್ತಾಳೆ, ನೀಲಿ ಬಣ್ಣದ ಚೂಡಿದಾರ ಧರಿಸಿರುತ್ತಾಳೆ. ಇವರ ಬಗ್ಗೆ ಸುಳಿವು ಸಿಕ್ಕಲ್ಲಿ ದೂರವಾಣಿ ಸಂಖೆಗಳು: 08474-236123 ಮೊಬೈಲ ನಂ 9480803573 ನೇದ್ದಕ್ಕೆ ಸಂಪರ್ಕಿಸಲು ಕೋರಲಾಗಿದೆ.
ಪತ್ನಿಗೆ ಕಿರುಕುಳ ಪ್ರಕರಣ:
ಮಹಿಳಾ ಪೊಲೀಸ ಠಾಣೆ: ದಿನಾಂಕ:05-04-2012 ರಂದು ಬೆಳಿಗ್ಗೆ 11-00 ಗಂಟೆಗೆ ಕೊರ್ಟ ಮಹಿಳಾ ಪೊಲೀಸ್ ಪೇದೆಯಿಂದ ಖಾಸಗಿ ದೂರು ಅರ್ಜಿ ನಂ312/2012 ನೇದ್ದನು ವಸೂಲಾಗಿದ್ದರ ಸಾರಂಶವೆನೆಂದರೆ, ಪಿರ್ಯಾದಿಯದಾದ ಶ್ರೀಮತಿ ರೇಣುಕಾ ಗಂಡ ಮಲ್ಲಪ್ಪಾ ವ: 32 ವರ್ಷ ಉ: ಮನೆಗೆಲಸ ಸಾ: ವೇಧ ಪಾಠ ಶಾಲೆಯ ಹತ್ತಿರ ಕರುಣೇಶ್ವರ ನಗರ ಗುಲಬರ್ಗಾ ರವರು ನಾನು ಮಲ್ಲಪ್ಪಾ ಇವರ ಜೊತೆ 11 ವರ್ಷಗಳ ಹಿಂದೆ ಶರಣಬಸವೇಶ್ವರ ಗುಡಿ ನಗನೂರ ತಾ:ಸುರಪೂರ ಜಿಲ್ಲಾ ಯಾದಗಿರಯಲ್ಲಿ ಮದುವೆಯಾಗಿದ್ದು, ಮದುವೆಯಾದ ಕೆಲವು ದಿನ ಚೆನ್ನಾಗಿದ್ದು, ನಂತರ ವಿನಾಕಾರಣ ಮಲ್ಲಪ್ಪಾ ಯಮನಪ್ಪಾ ವ:35 ವರ್ಷ ಉ:ವಾಹನ ಚಾಲಕ, ಶಾಂತಮ್ಮ, ಶರಣಪ್ಪಾ, ಸಂಗಮ್ಮ, ನಾಗಮ್ಮ, ಬೋರಮ್ಮ ಸಂತೋಷ, ಶಿವಮ್ಮ, ಯಮನಪ್ಪಾ, ಮಲ್ಲಮ್ಮ, ಗುರುಲಿಂಗಪ್ಪಾ, ಮಹಾದೇವಿ ಸಾ||ಎಲ್ಲರೂ ಕೆಂಬಾವಿ ತಾ||ಸುರಪೂರ ಜಿ||ಯಾದಗಿರಿ ರವರು ಮಾನಸಿಕ ಹಾಗೂ ದೈಹಿಕ ಹಿಂಸೆ ಕೊಡುತ್ತಿದ್ದು ತವರು ಮನೆಯಿಂದ ಹಣ ಬಂಗಾರ ತೆಗೆದುಕೊಂಡು ಬಾ ಅಂತಾ ಪೀಡಿಸುತ್ತಿದ್ದರೂ ಮಲ್ಲಪ್ಪಾ ಇತನು ಮಲ್ಲಮ್ಮ ತಂದೆ ಗುರುಲಿಂಗಪ್ಪಾ ಸಾ: ಕಾಜಾಪೂರ ತಾ: ಸುರಪೂರ ಇವಳೊಂದಿಗೆ ಕಾನೂನು ಬಾಹೀರವಾಗಿ ಮದುವೆಯಾಗಿರುತ್ತಾನೆ. ನನಗೆ ಅವಾಚ್ಯವಾಗಿ ಬೈದು ಮನೆಯಿಂದ ಹೊರಗೆ ಹಾಕಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 29/12 ಕಲಂ. 498 (ಎ), 494, 504,506, 323, ಸಂ.34 ಐ.ಪಿ.ಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
No comments:
Post a Comment