Police Bhavan Kalaburagi

Police Bhavan Kalaburagi

Wednesday, April 18, 2012

GULBARGA DIST REPORTED CRIMES

ಕಳ್ಳತನ ಪ್ರಕರಣ:

ಸ್ಟೇಷನ ಬಜಾರ ಪೊಲೀಸ ಠಾಣೆ:ಶ್ರೀ ಸಂಜಿವಕುಮಾರ ತಂದೆ ಸಿದ್ರಾಮ ಉ|| ಚರ್ಚನಲ್ಲಿ ಫಾಸ್ಟರ್ ಸಾ|| ಮನೆ ನಂ 1-949/2/585 ಜಿಡಿಎ ಲೇಔಟ ಕೊರಂಟಿ ಹನುಮಾನ ಗುಡಿ ಹತ್ತಿರ ಗುಲಬರ್ಗಾರವರು ನಾವು ದಿನಾಂಕ:16-04-2012 ರಂದು ರಾತ್ರಿ 8-00 ಗಂಟೆಗೆ ಮನೆ ಕೀಲಿ ಹಾಕಿಕೊಂಡು ನಮ್ಮ ಅಣ್ಣನ ಮನೆಗೆ ಹೋಗಿದ್ದು ದಿನಾಂಕ: 17-04-2012 ರಂದು ಬೆಳಗ್ಗೆ 7-00 ಗಂಟೆಗೆ ಮರಳಿ ಮನೆಗೆ ಬಂದು ನೋಡಲಾಗಿ ಮನೆಯ ಬಾಗಿಲು ಕೀಲಿ ಮುರದಿದ್ದು ಒಳಗೆ ಹೋಗಿ ನೋಡಲಾಗಿ ಗೃಹ ಉಪಯೋಗ ಸಾಮನುಗಳು ಒಟ್ಟು ಅಕಿ 24500/- ರೂ ಮೌಲ್ಯದ ಸಾಮಾನುಗಳು ಕಳ್ಳತನವಾಗಿದ್ದು ಯಾರೋ ಕಳ್ಳರೂ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ 53/2012 ಕಲಂ 457,380 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಕಳ್ಳತನ ಪ್ರಕರಣ:

ಸ್ಟೇಷನ ಬಜಾರ ಪೊಲೀಸ ಠಾಣೆ : ಶ್ರೀ ಭಿಮರಾವ ಮಾಲಿ ಸಾ|| ಗಾಜಿಪೂರ ಗುಲಬರ್ಗಾರವರು ನಾನು ದಿನಾಂಕ:17-04-2012 ರಂದು ಸಾಯಂಕಾಲ 6-00 ಗಂಟೆಗೆ ರೈಲ್ವೆ ಸ್ಟೇಷನ ಹತ್ತಿರ ಇರುವ ಜಿ-ಶಾನ ಹೋಟೆಲ್ ದಲ್ಲಿ ಚಹಾ ಕುಡಿದು ಬರುವಾಗ ಪ್ಯಾಂಟಿನ ಜೇಬಿನಲ್ಲಿದ್ದ ಆಪ್ಯಾಲ್ ಐ ಫೊನ ಸೆಲ್ ನಂ 9008609888 ಐ.ಎಮ್.ಇ.ಐ ನಂ 013029004344614 ಅಕಿ 44000/- ರೂ ನೇದ್ದನ್ನು ಯಾರೋ ಕಳ್ಳರೂ ಕಳ್ಳತನ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 54/2012 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ

ಹಲ್ಲೆ ಪ್ರಕರಣ:

ಶಹಾಬಾದ ನಗರ ಪೊಲೀಸ ಠಾಣೆ:ಶ್ರೀ ಜಹಾಂಗೀರ ತಂದೆ ರಹಮಾನ ಸಾಬ ಸಾ:ಶಾಸ್ತ್ರಿಚೌಕ ಲೋಹಾರ ಗಲ್ಲಿ ಶಹಾಬಾದ ರವರು ನನಗೆ ದಿನಾಂಕ 10/02/2011 ಮತ್ತು 30/03/2012 ರಂದು ಭರತ ಪವಾರ ಸಂಗಡ ಇನ್ನೂ 4 ಜನರು ಕೂಡಿಕೊಂಡು ನಾನು ತೆಗೆದುಕೊಂಡ ಸಾಲವನ್ನು ಕೊಡಬೇಕಾದ ಅವಧಿಯೊಳಗೆ ಕೊಡಲಾರದಕ್ಕೆ ಭರತ ಪವಾರ ಸಂಗಡ 4 ಜನರು ಅವಾಚ್ಯ ಶಬ್ದಗಳಿಂದ ಬೈದು ಎತ್ತಿಕೊಂಡು ಹೋಗಿ ಹೊಡೆದಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:39/2012 ಕಲಂ 144, 420, 344, 504, 506 ಸಂ 34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ

No comments: