Police Bhavan Kalaburagi

Police Bhavan Kalaburagi

Sunday, April 15, 2012

GULBARGA DIST REPORTED CRIMES

ಅಪಘಾತ ಪ್ರಕರಣ:

ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ: ಶ್ರೀಮತಿ ಮಂದಾಕನಿ ಗಂಡ ಅರ್ಜುನ ಹೊಳಕುಂದಿ ಉ: ಅಂಗನವಾಡಿ ಟೇಚರ ಸಾ: ತಾಜಸುಲ್ತಾನಪೂರ ಗುಲಬರ್ಗಾ ರವರು ನಾನು ದಿನಾಂಕ: 15-04-2012 ರಂದು ಮಧ್ಯರಾತ್ರಿ 1=00 ಗಂಟೆಯ ಸುಮಾರಿಗೆ ಶ್ರೀಕಾಂತ ಎ.ಪಿ.ಸಿ 43 ಇತನು ತನ್ನ ಮೋಟಾರ ಸೈಕಲ ನಂ: ಕೆಎ-32 ಎಸ್-7498 ನೇದ್ದನ್ನು ಚಲಾಯಿಸಿ ತನ್ನ ಕೊರಳ್ಳಲಿದ್ದ ಟಾವೆಲ ಮೋಟಾರ ಸೈಕಲ ಹಿಂದಿನ ಚಕ್ರಕ್ಕೆ ತಗುಲಿಸಿಕೊಂಡು ಮೋಟಾರ ಸೈಕಲ ಸಮೇತ ಸ್ಕಿಡ ಆಗಿ ಬಿದ್ದು ಭಾರಿಗಾಯ ಹೊಂದಿರುತ್ತಾನೆ ಅಂತಾ ಅವರ ತಾಯಿಯಾದ ಶ್ರೀಮತಿ ಮಂದಾಕಿನಿ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:44/2012 ಕಲಂ 279, 338 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಅಪಘಾತ ಪ್ರಕರಣ:

ಆಳಂದ ಪೊಲೀಸ ಠಾಣೆ:ಶ್ರೀ ಮೈಹಿಬೂಬ ತಂದೆ ಗಪೂರಸಾಬ ಮಡಕಿ ಸಾ||ರೇವಣಸಿದ್ದೇಶ್ವರ ಕಾಲೋನಿ ಆಳಂದ ರವರು ನಾನು ದಿನಾಂಕ 14/04/2012 ರಂದು ಸಾಯಾಂಕಾಲ 5.30 ಸುಮಾರಿಗೆ ಗಂಟೆಗೆ ನನ್ನ ಪಂಕ್ಚರ ಅಂಗಡಿ ಎದುರಿಗೆ ಕುಳಿತಾಗ ಮೋಟಾರ ಸೈಕಲ ನಂ:ಕೆಎ 32.ಡಬ್ಲೂ 7571 ಡಿಸ್ಕವರಿ ಮೋಟರ ಸವಾರನು ತನ್ನ ಮುಂದೆ ಒಂದು ಮಗುವಿಗೆ ಹಿಂದೆ ತನ್ನ ಹೆಂಡತಿಗೆ ಕೂಡಿಸಿಕೊಂಡು ಆಳಂದ ಕಡೆಯಿಂದ ಚಲಾಯಿಸುತ್ತಾ ಬಂದು ರೋಡಿನ ಬಲಗಡೆ ಎಸ್.ಆರ್.ಜಿ ಪೆಟ್ರೋಲ ಪಂಪ ಕಡೆಗೆ ತಿರುಗುವಾಗ ಹಿಂದಿನಿಂದ ಬರುತ್ತಿದ್ದ ಒಂದು ಬಜಾಜ ಕೆಎ 32. ಎಲ್ 4217 ನೇದ್ದು ಮೋಟರ ಸೈಕಲ ಚಾಲಕನು ಅತೀ ವೇಗದಿಂದ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದವನೇ ಪಂಪ ಕಡೆಗೆ ತಿರುಗುತ್ತಿದ್ದ ಮೋಟರ ಡಿಸ್ಕವರಿ ಮೋಟಾರ ಸೈಕಲಿಗೆ ಡಿಕ್ಕಿ ಹೊಡೆದನು . ಡಿಕ್ಕಿ ಪರಿಣಾಮ ಡಿಸ್ಕವರಿ ಮೋಟಾರ ಸೈಕಲ ಮೇಲಿದ್ದ ಮಗು ಮತ್ತು ಸವಾರ ಹಾಗು ಹಿಂದೆ ಕುಳಿತ ಹೆಣ್ಣ ಮಗಳು ರೋಡಿನ ಬಲಬದಿಗೆ ಬಿದ್ದು ಬಿಟ್ಟರು.ಡಿಕ್ಕಿ ಪಡಿಸಿದ ಸವಾರನು ಸಹ ಕೆಳಗೆ ಬಿದ್ದನು. ನಾನು ಮತ್ತು ಪೆಟ್ರೋಲ ಪಂಪ ಮ್ಯಾನೇಜರ ಶರಣಬಸಪ್ಪ ಹೋಗಿ ಅವರಿಗೆ ಎಬ್ಬಿಸಿ ನೋಡಲು ಡಿಸ್ಕವರಿ ಚಾಲಕನ ಬಲಗಾಲ ಮೊಣಕಾಲ ಕೆಳಗೆ ಭಾರಿ ಗುಪ್ತಗಾಯವಾಗಿ ಕಾಲ ಮುರಿದಂತಾಗಿತ್ತು ತಲೆಗೆ ಅಲ್ಲಲ್ಲಿ ರಕ್ತಗಾಯವಾಗಿದ್ದು ಕುಸಿಗೆ ಹೆಣ್ಣು ಮಗಳಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಸಿ.ಟಿ 100 ಮೊಟರ ಸೈಕಲ ಚಾಲಕನಿಗೆ ಯಾವದೇ ಗಾಯ ವಗೈರೆ ಯಾಗಿರುವದಿಲ್ಲ ಗಾಯಗೊಂಡಿರುವವನ ಹೆಸರು ವಿಚಾರಿಸಲಾಗಿ ಬಸವರಾಜ @ ಬಿಸ್ಯೆ ತಂದೆ ರತ್ನು ಪವಾರ ಆತನು ಹಿಂದೆ ಕುಳಿತ ಹೆಣ್ಣ ಮಗಳ ಹೆಸರು ಅಂಜನಾಬಾಯಿ ಗಂಡ ಬಿಸ್ಯೆ ಸಾ||ಕಮಸುರ ನಾಯಕ ತಾಂಡಾ ಮತ್ತು ಸಿ.ಟಿ 100 ಚಾಲಕನ ಹೆಸರು ಜಯರಾಮ ತಂದೆ ಧನಸಿಂಗ ಚವ್ಹಾಣ ಸಾ: ಕೋರಳ್ಳಿ ತಾಂಡಾ ಅಂತಾ ತಿಳಿದಿರುತ್ತದೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 81/2012 ಕಲಂ 279, 338 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

No comments: