Police Bhavan Kalaburagi

Police Bhavan Kalaburagi

Thursday, April 5, 2012

GULBARGA DIST REPORTED CRIMES

ಮಟಕಾ ಜೂಜಾಟ ಪ್ರಕರಣ:

ಜೇವರ್ಗಿ ಪೊಲೀಸ್ ಠಾಣೆ:ದಿನಾಂಕ:05-04-2012 ರಂದು ಜೇವರ್ಗಿ ಠಾಣೆ ವ್ಯಾಪ್ತಿಯ ಕೆಲ್ಲೂರ ಗ್ರಾಮದಲ್ಲಿ ಮಟಕಾ ಜೂಜಾಟ ನಡೆಯುತ್ತಿದೆ ಅಂತಾ ಖಚಿತ ಭಾತ್ಮಿ ಬಂದ ಮೇರೆಗೆ ಶ್ರೀ ಪ್ರವೀಣ ಮಧುಕರ ಪವಾರ ಐಪಿಎಸ ಜಿಲ್ಲಾ ಪೊಲೀಸ್ ಅಧೀಕ್ಷಕರು ಗುಲಬರ್ಗಾ ರವರ ಮಾರ್ಗದರ್ಶನದ ಮೇರೆಗೆ ಶ್ರೀ ಚೇತನಕುಮಾರ ಐಪಿಎಸ ಪ್ರೋ ಎ.ಎಸ್.ಪಿ ಗುಲಬರ್ಗಾ ರವರು, ಶ್ರೀ ಅಸ್ಲಾಂ ಬಾಷಾ ಪಿ.ಐ, ಜಿಲ್ಲಾ ವಿಷೇಶ ಶಾಖೆ ಗುಲಬರ್ಗಾ ರವರು ತಮ್ಮ ಸಿಬ್ಬಂದಿ ಜನರೊಂದಿಗೆ ಪಂಚರ ಸಮಕ್ಷಮ ಕೆಲ್ಲೂರ ಗ್ರಾಮಕ್ಕೆ ಹೋಗಿದ್ದಾಗ ಚಂದ್ರಶೇಖರ ತಂದೆ ಅಣ್ಣರಾಯ ಪಾಟೀಲ ಇತನು ತನ್ನ ಹೋಟೆಲದಲ್ಲಿ 1=00 ರೂಪಾಯಿಗೆ 80=00 ರೂಪಾಯಿ ಬರುತ್ತದೆ ಅಂತಾ ಸಾರ್ವಜನಿಕರಿಗೆ ಮೊಸ ಮಾಡಿ ಮಟಕಾ ಜೂಜಾಟದಲ್ಲಿ ತೊಡಗಿಸಿಕೊಂಡಾಗ ಆತನ ಮೇಲೆ ದಾಳಿ ಮಾಡಿ ಆತನನ್ನು ವಶಕ್ಕೆ ತೆಗೆದುಕೊಂಡು ನಗದು ಹಣ 23609 /- ರೂಪಾಯಿ, ಮಟಕಾ ಚೀಟಿಗಳು ಜಪ್ತಿ ಮಾಡಿಕೊಂಡ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ 38/2012 ಕಲಂ 78(3) ಕೆ.ಪಿ.ಆಕ್ಟ 420 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಅಪಘಾತ ಪ್ರಕರಣ:

ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ :ಶ್ರೀ ಮಹ್ಮದ ಆರೀಫ್ ತಂದೆ ಅಬ್ದುಲ ಶುಕುರ ಸಾ: ಮಹ್ಮದಿ ಚೌಕ ಹತ್ತಿರ ಜಿಲಾನಾಬಾ ಎಮ್.ಎಸ್.ಕೆ.ಮಿಲ್ ಗುಲಬರ್ಗಾ ರವರು ನನ್ನ ತಂದೆಯವರಾದ ಅಬ್ದುಲ ಶುಕುರ ರವರು ದಿನಾಂಕ:04-04-2012 ರಂದು ರಾತ್ರಿ 8=30 ಗಂಟೆಗೆ ಸುಮಾರಿಗೆ ಕೇಂದ್ರ ಬಸ್ ನಿಲ್ದಾಣದಿಂದ ಎಮ್.ಎಸ್.ಕೆ.ಮಿಲ್ ರೋಡಿನಲ್ಲಿ ನಡೆದು ಕೊಂಡು ಹೋಗುವಾಗ ನ್ಯೂ ಲೈಫ್ ಆಸ್ಪತ್ರೆಯ ಹತ್ತಿರ ಹೊಂಡಾ ಎಕ್ಟೀವಾ ಮೋಟಾರ ಸೈಕಲ್ ನಂ:ಕೆಎ-25 ಎಸ್-9519 ನೇದ್ದರ ಸವಾರನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹಿಂದಿನಿಂದ ಬಂದು ಡಿಕ್ಕಿ ಪಡಿಸಿ, ಅಪಘಾತ ಮಾಡಿ, ತನ್ನ ವಾಹನ ನಿಲ್ಲಿಸಿದಂತೆ ಮಾಡಿ ವಾಹನವನ್ನು ಚಲಾಯಿಸಿಕೊಂಡು ಹೋಗಿರುತ್ತಾನೆ . ನನ್ನ ತಂದೆಯವರಿಗೆ ತಲೆಯ ಹಿಂದುಗಡೆ ಭಾರಿ ಪೆಟ್ಟು ಆಗಿದ್ದರಿಂದ ಉಪಚಾರ ಕುರಿತು ಸೋಲಾಪೂರದ ಗಂಗಾ ಆಸ್ಪತ್ರೆಗೆ ಉಪಚಾರ ಕುರಿತು ತೆಗೆದುಕೊಂಡು ಹೋಗುವಾಗ ಮಾರ್ಗ ಮಧ್ಯದಲ್ಲಿ ಮೃತ ಪಟ್ಟಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣಾ ಗುನ್ನೆ ನಂ:41/2012 ಕಲಂ:279,304(ಎ) ಐ.ಪಿ.ಸಿ.ಸಂಗಡ 187 ಐ.ಎಮ್.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಅಪಘಾತ ಪ್ರಕರಣ:

ಆಳಂದ ಪೊಲೀಸ ಠಾಣೆ:ಶ್ರೀ ಮೌಲಾಪ್ಪ ತಂದೆ ಧರ್ಮಣ್ಣಾ ಸಿಂಗೆ ಸಾ||ಸಾವಳೇಶ್ವರ ರವರು ನಾನು ಮತ್ತು ನಮ್ಮೂರಿನವರು ದಿನಾಂಕ 04/04/2012 ರಂದು ಸಾಯಂಕಾಲ 7.00 ಗಂಟೆ ಸುಮಾರಿಗೆ ಆಳಂದವಾಗ್ದರಿ ರೋಡಿನ ಬ್ರಿಜ್ಡ ಕಟ್ಟೆಯ ಮೇಲೆ ನಮ್ಮೂರಿನರಾದ ತುಕಾರಾಮ ಬನಸೊಡೆ, ಶರಣಪ್ಪ ಸಿಂಗೆ, ಶಿವರಾಯ ಪೋತೆ, ಚಂದ್ರಕಾಂತ ಕೊಕಟೆ ಹಾಗು ಸಕ್ಕರಗಾ ಗ್ರಾಮದ ನಮ್ಮೂರ ಪೋಸ್ಟ ಮ್ಯಾನ ಶಿವಲಿಂಗಪ್ಪ ಹಾಗು ಇತರರು ಮಾತನಾಡುತ್ತಿದ್ದಾಗ ಆಳಂದ ಚೆಕ್ ಪೋಸ್ಟ ಕಡೆಯಿಂದ ಒಬ್ಬ ಟವರಸ ಲಾರಿ ಚಾಲಕನು ತನ್ನ ವಾಹನವನ್ನು ಅತೀ ವೇಗದಿಂದ ಮತ್ತು ಅಲಕ್ಷ್ಯತನದಿಂದ ನಡೆಸುತ್ತಾ ಬಂದು ರೋಡಿನ ಎಡಬದಿಯಲ್ಲಿ ನಿಂತ ಶಂಕರರಾವ ದೇಶಮುಖ ಇವರ ಮಾರ್ಶಲ ಜೀಪ ನಂ ಕೆಎ- 32 ಝಡ್- 456 ನೇದ್ದಕ್ಕೆ ಡಿಕ್ಕಿ ಪಡಿಸಿ ಅದೇ ವೇಗದಲ್ಲಿ ಬ್ರಿಡ್ಜ ಕಟ್ಟೆಯ ಮೇಲೆ ಕುಳಿತವರಿಗೆ ಡಿಕ್ಕಿ ಪಡಿಸಿದಾಗ ತುಕಾರಾಮ ತಂದೆ ಬೊಮ್ಮಣ್ಣ ಬನಸೊಡೆ ಎಡ ಬ್ರಿಜ್ಡದ ಕೆಳಗಡೆ ತಗ್ಗಿನಲ್ಲಿ ಬಿದ್ದನು ಅದರಂತೆ ಶರಣಪ್ಪ( ನನ್ನ ತಮ್ಮನು) ಕೂಡಾ ಬ್ರಿಜ್ಡದ ಕೆಳಗೆ ಬಿದ್ದನು ತುಕರಾಮನಿಗೆ ತಲೆಯ ಭಾಗಕ್ಕೆ ಹೊಟ್ಟೆಗೆ ಕಾಲಿಗೆ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ನನ್ನ ತಮ್ಮ ಶರಣಪ್ಪನಿಗೆ ತಲೆಯ ಹಿಂಬಾಗಕ್ಕೆ ಭಾರಿ ರಕ್ತಗಾಯವಾಗಿ ಕಾಲುಗಳಿಗೆ ರಕ್ತಗಾಯವಾಗಿದ್ದು ಶಿವರಾಮ ಪೊತೆ ಇತನ ಎರಡು ಕಾಲು ಮುರಿದು ರಕ್ತಗಾಯವಾಗಿದ್ದು ಚಂದ್ರಕಾಂತ ಕೊಕಟೆ ಇತನ ಒಂದು ಕಾಲು ಮುರಿದು ರಕ್ತಗಾಯವಾಗಿದ್ದು ಶಿವಲಿಂಗಪ್ಪ ಪೋಸ್ಟ ಮ್ಯಾನ ಈತನಿಗು ಕಾಲು ಕೈಗೆ ಬಾವು ಬಂದಿದೆ ಸಿದ್ದಾರಾಮ ಗೌಳಿ ಇತನಿಗೆ ತಲೆಗೆ ರಕ್ತಗಾಯವಾಗಿದೆ ವಿರೇಶ ಗೊಡಕೆ ಇತನ ಮುಖಕ್ಕೆ ಬೆನ್ನಿಗೆ ರಕ್ತಗಾಯವಾಗಿರುತ್ತದೆ. ಅಪಘಾತ ಪಡಿಸಿದ ಲಾರಿ ಚಾಲಕನು ತನ್ನ ಲಾರಿಯನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿದ್ದು, ಲಾರಿ ನಂಬರ ನೋಡಲಾಗಿ ಎಂಹೆಚ್-12 ಎಫ್,ಝಡ್-4280 ಇದ್ದು, ಆತನ (ಚಾಲಕನ) ಹೆಸರು ಗುಣವಂತ ತಂದೆ ತುಕಾರಾಮ ಸಿರಸಾಗರ ಸಾ||ಕಾಟಿ ತಾ|| ತುಳಜಾಪೂರ ಜಿಲ್ಲಾ|| ಉಸ್ಮಾನಾಬಾದ ಅಂತಾ ತಿಳಿದಿರುತ್ತದೆ. ಗಾಯಾಳುಗಳನ್ನು ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಆಳಂದಕ್ಕೆ ತರುವಾಗ ಮಾರ್ಗ ಮಧ್ಯದಲ್ಲಿ ನನ್ನ ತಮ್ಮ ಶರಣಪ್ಪ ಈತನು ಮೃತಪಟ್ಟಿರುತ್ತಾನೆ ಕಾರಣ ಅತೀವೇಗ ಮತ್ತು ಅಲಕ್ಷತನದಿಂದ ಲಾರಿಯನ್ನು ಚಲಾಯಿಸಿ ಇಬ್ಬರ ಸಾವಿಗೆ ಕಾರಣನಾಗಿದ್ದ ಹಾಗು ಇನ್ನೂ ಕೆಲವರಿಗೆ ಸಾದಾ ಮತ್ತು ಭಾರಿ ಗಾಯಗೊಳಸಿದವನ ಲಾರಿ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:66/2012 ಕಲಂ 279.337.338.304(ಎ) ಐ,ಪಿ,ಸಿ ಸಂಗಡ 187 ಐ,ಎಂ,ವಿ ಆಕ್ಟ್ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

No comments: