Police Bhavan Kalaburagi

Police Bhavan Kalaburagi

Wednesday, April 25, 2012

GULBARGA DIST REPORTED CRIMES


ಕಳ್ಳತನ ಪ್ರಕರಣ:
ನರೋಣಾ ಪೊಲೀಸ್ ಠಾಣೆ :ಶ್ರೀಮತಿ, ರಾಧಾ ಗಂಡ ಅಂಬರಾಯ ಬಾಚಿಂದೆ ಸಾ||ವಿ.ಕೆ.ಸಲಗರ ರವರು ನಾನು ಕಾಟ ಪಿನ್ನು ಮಾರಿಕೊಂಡು ನನ್ನ ಮಕ್ಕಳೊಂದಿಗೆ ಇರುತ್ತೆನೆ. ನನ್ನ ಗಂಡನು ಹೊಟ್ಟೆ ಪಾಡಿಗಾಗಿ ಬಾಂಬೆಗೆ ಹೋಗಿದ್ದು ನನ್ನ ಮೂರು ಜನರ ಸಣ್ಣ ಮಕ್ಕಳಳೊಂದಿಗೆ ಮನೆಯಲ್ಲಿಯೇ ಇರುತ್ತೆನೆ. ದಿನಾಂಕ: 24/04/2012 ರಂದು ರಾತ್ರಿ ನನ್ನ 2 ತಿಂಗಳ ಮಗುವಿಗೆ ಆರಾಮ ಇರದೆ ಇರುವದ್ದರಿಂದ ಮನೆಗೆ ಕೀಲಿ ಹಾಕಿಕೊಂಡು ಅಲ್ಲಿಯೇ ಇರುವ ಅತ್ತೆ ಮಾವರ ಮನೆಗೆ ಹೋಗಿದ್ದು ದಿನಾಂಕ: 25/04/2012 ರಂದು ಬೆಳಿಗ್ಗಿನ ಜಾವ 4-00 ಗಂಟೆಯ ಸುಮಾರಿಗೆ ಎದ್ದು ಮನೆಯ ಕಡೆಗೆ ಹೋದಾಗ ಮನೆಯ ಒಂದು ಬಾಗಿಲು ತೆಗೆದಿದ್ದು ಇನ್ನೊಂದು ಬಾಗಿಲಿಗೆ ಹಾಗೆ ಕೊಂಡಿಗೆ ಕೀಲಿ ಹಾಕಿದ್ದು ಇದ್ದು. ಒಳಗೆ ಹೋಗಿ ನೋಡಲು  ದೇವರ ಮನೆಯ ಎಲ್ಲಾ ಸಾಮಾನುಗಳು ಚಿಲ್ಲಾ ಪಿಲ್ಲಿಯಾಗಿದ್ದವು, ಮನೆಯ ಸಾಮಾನುಗಳು, ½ ತೊಲೆಯ ಬಂಗಾರ ಬೋರಮಳ, ಜುಮ್ಮಕಿ ,ಪದಕಾ ,ತಾಳಿ, ಮುರುಗಳು, ಬೆಳ್ಳಿಯ ಚೈನು , ಬಾದಮ ಗೆಜ್ಜೆ ಮತ್ತು ನಗದು ಹಣ 7,000 ರೂಪಾಯಿಗಳು ಒಟ್ಟು 24,000/- ಮೌಲ್ಯದವುಗಳು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂಬರ್ 43/2012 ಕಲಂ 457 380 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಸೇಡಂ ಪೊಲೀಸ ಠಾಣೆ:ಶ್ರೀ ಗಂಗಾಧರ ತಂದೆ ಗುರುಲಿಂಗಪ್ಪ ನಾಯಕೋಡಿ ಸಾ:ಶೆಟ್ಟ ಹೂಡಾ ಗ್ರಾಮ, ತಾ:ಸೇಡಂ ರವರು ನನ್ನ ತಾತನಾದ (ಅಜ್ಜನಾದ) ಸಾಬಣ್ಣ ತಂದೆ ದೊಡ್ಡಪ್ಪ ನಾಯಕೊಡಿ ವಯ: 70 ವರ್ಷ,  ಇವರು ಮೂತ್ರ ವಿಸರ್ಜನೆ ಮಾಡಿ ಮರಳಿ ಮನೆಗೆ ಬರುತ್ತಿರುವಾಗ ಕಾರ್ ನಂ-ಕೆ.ಎ.09.ಎನ್.-6162 ನೇದ್ದರ ಚಾಲಕ ಅತೀವೇಗ ಮತ್ತು ನಿಷ್ಕಾಳಜಿತನದಿಂದ ನಡೆಯಿಸಿಕೊಂಡು ಬಂದು ನಮ್ಮ ಅಜ್ಜನಿಗೆ ಡಿಕ್ಕಿ ಪಡಿಸಿದ್ದರಿಂದ ಎಡ ಮುಂಗಾಲು ಮುರಿದಿದ್ದು ಎಡಗೈ ಮುರಿದಿದ್ದು, ಬಲಗಣ್ಣಿನ ಹುಬ್ಬಿಗೆ ಹಾಗೂ ಎಡಗಣ್ಣಿನ ಹುಬ್ಬಿಗೆ ರಕ್ತಗಾಯ ಹಾಗೂ ತಲೆಗೆ ರಕ್ತಗಾಯ ಹಾಗೂ ಬಲಗಾಲ ಮೊಳಕಾಲಿಗೆ ತರಚಿದ ಗಾಯಗಳಾಗಿದ್ದವು, ಉಪಚಾರ ಕುರಿತು ಸರ್ಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು , ಉಪಚಾರ ಫಲಕಾರಿಯಾಗದೇ ಸಾಬಣ್ಣ ಇವರು ಮೃತ ಪಟ್ಟಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 89/2012 ಕಲಂ, 279, 304 (ಎ)  ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ

No comments: