ಅಪಜಲಪೂರ ಪೊಲೀಸ್ ರಿಂದ 3 ಜನರ
ಬಂದನ, ಎರಡು ನಾಡ ಪಿಸ್ತೂಲ್, ಎರಡು ಜೀವಂತ ಗುಂಡುಗಳು ಜಪ್ತಿ:
ಶ್ರೀ ಪ್ರವೀಣ
ಮಧುಕರ ಪವಾರ ಐಪಿಎಸ್ ಪೊಲೀಸ್ ಅಧೀಕ್ಷಕರು,ಗುಲಬರ್ಗಾ ರವರು ಮತ್ತು ಶ್ರೀ ಕಾಶಿನಾಥ ತಳಕೇರಿ ಹೆಚ್ಚುವರಿ
ಪೊಲೀಸ್ ಅಧೀಕ್ಷಕರು, ಗುಲಬರ್ಗಾ ರವರ ಮಾರ್ಗದರ್ಶನದ ಮೇರೆಗೆ ಶ್ರೀ ಎಸ.ಬಿ.ಸಾಂಬ ಡಿಎಸಪಿ ಆಳಂದ ರವರ ನೇತ್ರತ್ವದಲ್ಲಿ ಶ್ರೀ
ಕೆ.ರಾಜೇಂದ್ರ ಸಿಪಿಐ ಅಜಪಲಪೂರ ವೃತ್ತ ಮತ್ತು
ಶ್ರೀ, ಮಂಜುನಾಥ ಎಸ. ಪಿ.ಎಸ.ಐ ರವರು ಹಾಗು ಸಿಬ್ಬಂದಿಯವರಾದ ರಾಮಚಂದ್ರ, ಜಗನಾಥ, ಅರವಿಂದ , ಶರಣು, ರಾಜೇಂದ್ರ ರವರು ಸಂಶಯಾಸ್ಪದವಾಗಿ ಪಟ್ಟಣದ ಬ್ರಿಜ್
ಹತ್ತಿರ ಕುಳಿತಿದ್ದ ಇಬ್ಬರು ವ್ಯಕ್ತಿಗಳಾದ ರಪೀಕ @ ಸದ್ದಾಂ ತಂದೆ ಬಾಷಾಸಾಬ ಮುಲ್ಲಾ ವ| 20
ವರ್ಷ ಸಾ|| ಗೌರ (ಬಿ) ಅಪಜಲಪೂರ , ಅಶೋಕ ತಂದೆ ಶಿವಪ್ಪಾ ಕೊರಳ್ಳಿ ವ|| 22 ವರ್ಷ ಸಾ|| ಅಪಜಲಪೂರ
ರವರನ್ನು ವಿಚಾರಣೆ ಮಾಡಿ ಅಂಗ ಶೋದನೆ ಮಾಡಲಾಗಿ, ರಪೀಕ @ ಸದ್ದಾಂ ಇತನ ಹತ್ತಿರ ಒಂದು ನಾಡ ಪಿಸ್ತೂಲ್
ಇದ್ದು, ನಾಡ ಪಿಸ್ತೂಲ್ ಇಟ್ಟಿಕೊಂಡಿರುವ ಬಗ್ಗೆ ದಾಖಲಾತಿ ಮತ್ತು ಪರವಾನಿಗೆ ಬಗ್ಗೆ ವಿಚಾರಿಸಲು ಯಾವದೇ
ದಾಖಲಾತಿ ನೀಡದೇ ಇರುವದರಿಂದ ನಾಡ ಪಿಸ್ತೂಲ್ ನ್ನು ವಶಕ್ಕೆ ತೆಗೆದುಕೊಂಡು ಹೆಚ್ಚಿನ ವಿಚಾರಣೆ ಮಾಡಲಾಗಿ
ಶ್ರೀಶೈಲ ಹರಣಾಳ ಸಾ|| ಗೌರ (ಬಿ) ರವರ ಹತ್ತಿರದಿಂದ ಇನ್ನೂ ಒಂದು ನಾಡ ಪಿಸ್ತೂಲ್ ಎರಡು ಜೀವಂತ
ಗುಂಡುಗಳು ಜಪ್ತಿ ಮಾಡಿಕೊಳ್ಳಲಾಗಿದೆ. ಈ ಪ್ರಕರಣ ಯಶಸ್ವಿಗೆ ಕಾರಣರಾದ ಅಧಿಕಾರಿ ಮತ್ತು
ಸಿಬ್ಬಂದಿಯವರಿಗೆ ಮಾನ್ಯ ಎಸ.ಪಿ ಗುಲಬರ್ಗಾ ರವರು ಪತ್ತೆ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತ
ಪಡಿಸಿ ಇಲಾಖಾ ವತಿಯಿಂದ 5000/- ರೂಪಾಯಿಗಳ ನಗದು ಬಹುಮಾನ ಘೊಷಿಸಿರುತ್ತಾರೆ.
No comments:
Post a Comment