ಜಿಲ್ಲಾ ಪೊಲೀಸ ವಿಶೇಷ ಘಟಕ ಅಧಿಕಾರಿಗಳಿಂದ, ಸೇಡಂ ಪಟ್ಟಣದಲ್ಲಿ ಅಂದರ ಬಹಾರ ಜೂಜಾಟ ನಿರತರ ಮೇಲೆ ದಾಳಿ, 1,43,450/- ರೂಪಾಯಿಗಳು ಜಪ್ತಿ.
ಶ್ರೀ ಪ್ರವೀಣ ಮಧುಕರ ಪವಾರ ಐಪಿಎಸ ಜಿಲ್ಲಾ ಪೊಲೀಸ್ ಅಧೀಕ್ಷಕರು ಗುಲಬರ್ಗಾರವರ ಮಾರ್ಗದರ್ಶನದಲ್ಲಿ ದಿನಾಂಕ: 22-04-2012 ರಂದು ಸೇಡಂ ಪಟ್ಟಣದಲ್ಲಿ ಅಂದರ ಬಾಹರ ಜೂಜಾಟ ನಡೆಯುತ್ತಿದೆ ಅಂತಾ ಖಚಿತ ಭಾತ್ಮಿ ಮೇರೆಗೆ ಶ್ರೀ ಚೇತನ ಆರ. ಐಪಿಎಸ್ (ಪ್ರೋ) ಮತ್ತು ಶ್ರೀ ಅಸ್ಲಾಂ ಬಾಶ ಪೊಲೀಸ್ ಇನ್ಸಪೇಕ್ಟರ ಜಿಲ್ಲಾ ವಿಶೇಷ ಶಾಖೆ ಗುಲಬರ್ಗಾ ರವರು ಹಾಗು ಸಿಬ್ಬಂದಿಯವರಾದ ಶಿವಪ್ಪಾ ಕಮಾಂಡೊ, ರಾಘವೇಂದ್ರ, ಈರಣ್ಣಾ, ಜಯಪಾಲ್ ಸಿಂಗ್, ಸಂತೋಷ, ವಿಠಲರೆಡ್ಡಿ, ವಿಜಯಕುಮಾರ, ಹೀರೆಮಾನ ಪೋಟೊ ಗ್ರಾಪರ್, ರವಿ ಚಾಲಕ ಮತ್ತು ಸೇಡಂ ವೃತ್ತ ನಿರೀಕ್ಷಕರು ಶ್ರೀ ಸಂತೋಷ ಬನಹಟ್ಟಿ ರವರೊಂದಿಗೆ, ಸೇಡಂ ಪಟ್ಟಣದ ಪ್ರೇಮಶೇಠ ರವರ ಎಮ್.ಆರ್.ಎಫ್ ಶೋ ರೂಮದ ಮೊದಲನೆ ಮಹಡಿ ಕಟ್ಟಡದಲ್ಲಿ ಅಂದರ ಬಹಾರ ಜೂಜಾಟ್ ಕೇಂದ್ರದ ಮೇಲೆ ದಾಳಿ ಮಾಡಿ ಈ ಕೆಳಕಂಡ ಆರೋಪಿತರಾದ 1. ಶಿವಶರಣಪ್ಪಾ ತಂದೆ ರೇವಣಸಿದ್ದಪ್ಪಾ ನಾಶೀ ವ|| 45 ಉ| ಟ್ರಾನ್ಸಪೋರ್ಟ ಸಾ||ಉಡಗಿ ರೋಡ ಸೇಡಂ, 2. ನಾಗೇಶ ತಂದೆ ಚಂದ್ರಶೇಟ್ಟಿ ಔರಾದಿ ವ|| 42 ಜ|| ಲಿಂಗಾಯತ ಸಾ|| ಬಸವನಗರ ಸೇಡಂ, 3. ಸಂಗಮೇಶ ತಂದೆ ಬಸವರಾಜ ಅಣಿಕೆರಿ ವ|| 38 ವರ್ಷ, ಸಾ|| ಬಸವನಗರ ಸೇಡಂ, 4. ಶಿವಕುಮಾರ ತಂದೆ ವೀರಶೇಟ್ಟಿ ಪಾಟೀಲ ವಯ 40 ಸಾ|| ವಿದ್ಯಾನಗರ ಸೇಡಂ, 5.ಬಂಡೆಪ್ಪಾ ತಂದೆ ಕಂಟೆಪ್ಪಾ ಚಿಂಚೋಳಿ ಸಾ|| ವಿವೇಕಾನಂದ ಶಾಲೆ ಹತ್ತಿರ ಸೇಡಂ, 6. ಭೀಮರಾಯ ತಂದೆ ಶರಣಪ್ಪಾ ರಟಕಲರ್ ವಯ|| 24 ಸಾ|| ಆಶ್ರಯ ಕಾಲೋನಿ ಸೇಡಂ, 7.ಜಗದೀಶ ತಂದೆ ಶಂಕರಪ್ಪಾ ಪಾಟೀಲ್ ವಯ|| 34 ಸಾ|| ವಿದ್ಯಾನಗರ ಸೇಡಂ, 8. ಭೀಮರೆಡ್ಡಿ ತಂದೆ ಶರಣರೆಡ್ಡಿ ನಾಗರೆಡ್ಡಿ ವಯ|| 42 ಸಾ|| ವಿದ್ಯಾ ನಗರ ಸೇಡಂ, 9. ರಾಜೇಂದ್ರಯ್ಯ ತಂದೆ ನರಸಯ್ಯ ಬಂಡಾರಿ ವಯ|| 57 ಸಾ|| ಕೊಂತಂಪಲ್ಲಿ ಸಾ|| ಸೇಡಂ ರವರಿಂದ ಅಂದರ ಬಹಾರ ಜೂಜಾಟಕ್ಕೆ ಬಳಸಿದ ನಗದು ಹಣ 1,43,450/- ರೂಪಾಯಿಗಳು ಮತ್ತು ಇಸ್ಪೇಟ ಎಲೆಗಳು ಜಪ್ತಿ ಮಾಡಿದ್ದು ಮೇಲ್ಕಂಡ 9 ಜನ ಆರೋಪಿತರನ್ನು ದಸ್ತಗಿರಿ ಮಾಡಲಾಗಿದೆ ಈ ಸಂಬಂಧ ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment