ಹಲ್ಲೆ ಮಾಡಿ, ಜೀವ ಬೆದರಿಕೆ ಹಾಕಿದ ಪ್ರಕರಣ
:
ಮಾದನ ಹಿಪ್ಪರಗಾ ಠಾಣೆ : ಶ್ರೀ ಮಿತಾನಂದ ತಂದೆ ನಾಗಪ್ಪ ಕುಡಕೆ ಸಾ:
ಕಿಣ್ಣಿಅಬ್ಬಾಸ ರವರು ದಿ:17/05/2012 ರಂದು ನಾಮದೇವ ತಂದೆ ತಿಪ್ಪಣ್ಣಾ
ಕುಡಕೆ ಮನೆಯ ಮುಂದೆ
ಹಾದು ಹೊಗುವಾಗ ನಾಮದೇವ ತಂದೆ ತಿಪ್ಪಣ್ಣಾ
ಕುಡಕೆ , ಚಂದ್ರಬಾಗಮ್ಮ
ಗಂಡ ನಾಮದೇವ ಕುಡಕೆ, ಸಂತೋಷ
ತಂದೆ ನಾಮದೇವ ಕುಡಕೆ, ಸಂಜೂಕುಮಾರ ತಂದೆ ನಾಮದೇವ ಕುಡಕೆ
ಇವರೆಲ್ಲರೂ ನನ್ನನ್ನು ತಡೆದು ಮನೆಯ ಜಾಗೆಯ
ವಿಷಯದಲ್ಲಿ ಹಿಂದಿನ ವೈಮನಸ್ಸಿನಿಂದ ತಡೆದು ನಿಲ್ಲಿಸಿ ಅವಾಚ್ಯೆ
ಶಬ್ದಗಳಿಂದ ಬೈದು ಕೈಯಿಂದ ಬಡೆ ಮಾಡಿ ಜೀವ ಭಯದ ಬೆದರಿಕೆ ಹಾಕಿರುತ್ತಾರೆ. ಅಂತಾ
ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗುನ್ನೆ. ನಂ 19/2012 ಕಲಂ 323, 341, 504, 506 ಸಂಗಡ 34 ಐ,ಪಿ,ಸಿ ಪ್ರಕಾರ ಮಾದನ ಹಿಪ್ಪರಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಾತಿ ನಿಂದನೆ ಪ್ರಕರಣ :
ಅಶೋಕ
ನಗರ ಠಾಣೆ : ಶ್ರೀ ಉದಯ ತಂದೆ
ಚಂದ್ರಶ್ಯಾ ಖಾಣಗೆ ಸಾ|| ಸಿ.ಐ.ಬಿ ಕಾಲೋನಿ
ಗುಲಬರ್ಗಾ ರವರು, ದಿನಾಂಕ : 16/05/2012 ರಂದು ಸಾಯಂಕಾಲ 7 ಗಂಟೆ ಸುಮಾರಿಗೆ ನಾನು ಮತ್ತು ನನ್ನ
ಗೆಳೆಯರಾದ ಸತೀಶ ಬಸವನಗರ, ರಾಜು ಅಶೋಕ ನಗರ
ಮೂರು ಜನರು ಬಸ್ ಸ್ಟಾಂಡ ಹತ್ತಿರದ ನ್ಯೂ ತ್ರೀಶೂಲ್ ಬಾರ & ರೆಷ್ಟೋರೆಂಟದಲ್ಲಿ ಪಾರ್ಟಿ ಮಾಡಲು ಹೊಗಿದ್ದು ರೆಷ್ಟೊರೆಂಟಿನ
ಗಾರ್ಡನದಲ್ಲಿ ಕುಳಿತು ಬೀಯರ ಕುಡಿಯುತ್ತಾ, ಗೌಡ ಎಂಬ ಮ್ಯಾನೆಜರನಿಗೆ ಊಟ ಆರ್ಡರ ಮಾಡುತ್ತಿರುವಾಗ
ಆತನು, ನೀವು ಮೊನ್ನೆ ಊಟ ಮಾಡದೆ ಹೊಗಿದ್ದೀರಿ ಅಂತಾ ಏರು ದ್ವನಿಯಲ್ಲಿ ಮಾತನಾಡಿದ್ದು ಆಗ ನಾವು
ಊಟ ಮಾಡ್ಲಿ ಬಿಡ್ಲಿ ಬೀಲ್ ಕೊಟ್ಟಿದ್ದೆವೆ ಅಂತಾ ಹೇಳಿದ್ದಕ್ಕೆ ಆತನು ಅವಾಚ್ಯವಾಗಿ ನನ್ನನ್ನು ಬೈದು ಜಾತಿ ನಿಂದನೆ ಮಾಡಿ ಹೊಡೆದು ಗಾಯಗೊಳಿಸಿರುತ್ತಾನೆ.
ಬಿಡಿಸಲು ಬಂದ ನನ್ನ ಗೆಳೆಯರಿಗೂ ಸಹ ಸಣ್ಣ ಪೂಟ್ಟ
ಗಾಯಗಳಾಗಿರುತ್ತವೆ ಸಪ್ಲೈ ಮಾಡುತ್ತಿದ್ದ ಮೂರು
ಜನ ವೇಟರ ಸೇರಿ ಜಾತಿ ನಿಂದನೆ ಮಾಡಿ, ಜೀವದ ಬೆದರಿಕೆ ಹಾಕಿರುತ್ತಾರೆ. ಅಂತಾ ಸಲ್ಲಿಸಿದ ದೂರು
ಸಾರಾಂಶದ ಮೇಲಿಂದ ಅಶೋಕ ನಗರ ಪೊಲೀಸ್ ಠಾಣೆ ಗುನ್ನೆ ನಂ. 44/2012 ಕಲಂ 323, 324, 504, 506 ಸಂ. 34 ಐ.ಪಿ.ಸಿ ಮತ್ತು 3 (1) (10) ಎಸ್.ಸಿ/ಎಸ್.ಟಿ ಪಿಎ ಎಕ್ಟ
1989 ನೇದ್ದರ ಪ್ರಕಾರ ಗುನ್ನೆ ದಾಖಲಾಗಿರುತ್ತದೆ.
ಕಾಳ ಸಂತೆಗೆ ಸಾಗಣೆ ಮಾಡುತ್ತಿದ ಪಡಿತರ ಧಾನ್ಯ ವಶ :
ಗ್ರಾಮೀಣ ಠಾಣೆ : ದಿನಾಂಕ 17/05/2012 ಲಾರಿ ನಂ
RJ 04 GA 5783 ನೇದ್ದರ ಚಾಲಕ , ಟಂ ಟಂ ಆಟೋ ನಂ KA
32 B 4257 ನೇದ್ದರ ಚಾಲಕ, ಟಂ ಟಂ ಆಟೋ ನಂ KA
32 A 1876 ನೇದ್ದರ ಚಾಲಕ
ಸರಕಾರಿ ಪಡಿತರ ಆಹಾರ ಇಲಾಖೆಯ 50 ಕೆ.ಜಿ ತೂಕದ 150 ಅಕ್ಕಿ
ಯನ್ನು ಸರಕಾರಕ್ಕೆ ಮತ್ತು ಪಡಿತರ ಫಲಾನುಭವಿಗಳಿಗೆ
ಮೋಸ ಮಾಡಿ ಅಕ್ರಮವಾಗಿ ಕಾಳಸಂತೆಯಲ್ಲಿ ಮಾರಾಟ ಮಾಡುವ ಗೋಸ್ಕರ ಅಕ್ಕಿಯನ್ನು ಸಾಗಣೆ ಮಾಡುತ್ತಿರುವಾಗ ಬಾತ್ಮೀಯ
ಮೇರೆಗೆ ಸೈಯದ ಚಿಂಚೋಳಿ ರೋಡಿನ ಹತ್ತಿರ ದಾಳಿ ಮಾಡಿ 50 ಕೆ.ಜಿ. ತೂಕದ 150 ಅಕ್ಕಿ ಚೀಲಗಳು ಅ.ಕೀ. 70,500 /- ಮತ್ತು ಲಾರಿ ನಂ RJ 04 GA 5783
ಅ.ಕೀ 4 ಲಕ್ಷ ರೂ/- ಟಂ ಟಂ ಆಟೋ
ನಂ KA 32 B 4257 ಅ.ಕೀ. 80,000 /- ರೂ. ಟಂ
ಟಂ ಆಟೋ ನಂ KA 32 A 1876 ಅ.ಕೀ.
80,000/- ಜಪ್ತ ಮಾಡಿಕೊಂಡ ಹೀಗೆ ಒಟ್ಟು
6,30,500 /- ಜಪ್ತ ಮಾಡಿಕೊಂಡ ಬಗ್ಗೆ ಫಿರ್ಯಾದಿ ಶ್ರೀಮತಿ ಪ್ರಮೀಳಾಬಾಯಿ
ಗುಜ್ಜಾರಿ ಆಹಾರ ನಿರೀಕ್ಷಕರು ಸರಬರಾಜು
ಇಲಾಖೆ ಗುಲಬರ್ಗಾ ರವರ ದೂರಿನ ಮತ್ತು ಜಪ್ತಿ ಪಂಚನಾಮೆ ಆಧಾರದ ಮೇಲಿಂದ ಗ್ರಾಮೀಣ ಠಾಣೆ ಗುನ್ನೆ ನಂ. 156/12 ಕಲಂ 3
ಮತ್ತು 7 ಈ.ಸಿ. ಎಕ್ಟ 1955 ಮತ್ತು 420 ಐಪಿಸಿ ಪ್ರಕಾರ ಪ್ರಕರಣ ದಾಖಲಾಗಿದೆ.
No comments:
Post a Comment