ಶ್ರೀ.ಪ್ರವೀಣ ಮಧುಕರ ಪವಾರ ಐ.ಪಿ.ಎಸ್, ಪೊಲೀಸ ಅಧೀಕ್ಷಕರು, ಗುಲಬರ್ಗಾರವರು , ಮತ್ತು ಹೆಚ್ಚುವರಿ ಎಸ್.ಪಿ ಶ್ರೀ.ಕಾಶಿನಾಥ ತಳಕೇರಿ ರವರು , ಶ್ರೀ ಭೂಷಣ ಬೋರಸೆ ಐ.ಪಿ.ಎಸ್ ಸಹಾಯಕ ಪೊಲೀಸ ಅಧೀಕ್ಷಕರು (ಎ) ಉಪ-ವಿಭಾಗ ಗುಲಬರ್ಗಾ ರವರ ಮಾರ್ಗದರ್ಶನದಲ್ಲಿ ಬ್ರಹ್ಮಪೂರ ಪೊಲೀಸ್
ಠಾಣೆಯ ಪೊಲೀಸ್ ಇನ್ಸಪೇಕ್ಟರ ಶರಣಬಸವೇಶ್ವರ,ರಾಘವೇಂದ್ರ ನಗರ ಠಾಣೆಯ
ಪಿ.ಎಸ.ಐ ಬಸವರಾಜ ತೇಲಿ, ಮತ್ತು (ಎ) ಉಪ-ವಿಭಾಗದ ಅಪರಾಧ ಪತ್ತೆ ದಳದ
ಸಿಬ್ಬಂದಿಯವರಾದ ರಫೀಕ, ಶಿವಪ್ರಕಾಶ, ರಾಮು ಪವಾರ, ದೇವಿಂದ್ರ, ಪಾಂಡುರಂಗ, ಪಂಡೀತ, ರವರು ರಾಘವೇಂದ್ರ ನಗರ ಪೊಲೀಸ ಠಾಣೆಯ ವ್ಯಾಪ್ತಿಯಲ್ಲಿ ಬರುವ ಬೋರಾಬಾಯಿ
ನಗರದ ಸಮುದಾಯ ಭವನದ ಎದುರುಗಡೆ ದಶರಥ ತಂದೆ ಕಿಶನ ಜಾಧವ, ವಯ|| 20, ಉ|| ವಿದ್ಯಾರ್ಧಿ, ಸಾ|| ಶಹಾಬಜಾರ ತಾಂಡಾ ಗುಲಬರ್ಗಾ
ಇತನನ್ನು ಕೋಲೆ ಮಾಡಿ ಆರೋಪಿಗಳ ವಿರುದ್ದ ಕಾರ್ಯಚರಣೆ ನಡೆಯಿಸಿ ಕೊಲೆ ಮಾಡಿದವರಾದ ಹೀರಾ ತಂದೆ ಅಂಬಾದಾಸ ನವೇಂದ್ರಕರ್, ವಿನೋದ @ ಚಿನ್ನು ತಂದೆ ನಾಗರಾಜ ಜೋಕೆನವರ್, ಗಿರೀಶ ತಂದೆ ಶಿವಶರಣಪ್ಪ ಹೊನ್ನಗುಂಟಿ, ಶರಣು @ ಶಿವಶರಣಪ್ಪ ತಂದೆ ಕೆಂಚಪ್ಪ ಕುರುಬರ, ರೇವಣಸಿದ್ದ ತಂದೆ ಶಿವಕುಮಾರ ಹೀರೆಮಠ, ವಿರೇಶ ತಂದೆ ಸಿದ್ದಯ್ಯ ಸ್ವಾಮಿ ಹೀರೆಮಠ ಸಾ|| ಎಲ್ಲರೂ ಗುಲಬರ್ಗಾ ಇವರನ್ನು ಶರಣಸಿರಸಗಿ
ಮಡ್ಡಿಯ ಮನೆಯಲ್ಲಿ ಅಡಗಿ ಕುಳಿತಿರುವವರನ್ನು ದಸ್ತಗಿರಿ ಮಾಡಿ, ಆರೋಪಿತರಿಂದ ಕೊಲೆಗೆ ಉಪಯೋಗಿಸಿದ, ಮಚ್ಚು, ಖಂಜರ, ಚಾಕು, ಒಂದು ಆಟೋ, ಹಾಗೂ ಇತರೆ ವಸ್ತುಗಳನ್ನು ಜಪ್ತಿ ಮಾಡಿಕೊಂಡಿದ್ದು, ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಮುಂಜಾಗ್ರತೆ ಕ್ರಮ:
ಗುಲಬರ್ಗಾ ಗ್ರಾಮೀಣ ಠಾಣೆ: ದಿನಾಂಕ 07/05/2012 ರಂದು ಸಾಯಂಕಾಲ 4:30 ಗಂಟೆ ಸುಮಾರಿಗೆ ಠಾಣಾ ವ್ಯಾಪ್ತಿಯ ಬೇಲೂರ (ಜೆ) ಕ್ರಾಸ ಹತ್ತಿರದ ಇಂಡಸ್ಟ್ರಿಯಲ್
ಏರಿಯಾದಲ್ಲಿ ಪೊಲೀಸ ಜೀಪ ನೋಡಿ ಒಬ್ಬ ವ್ಯಕ್ತಿ ಓಡಿ ಹೋಗುತ್ತಿರುವಾಗ ಅವನ ಮೇಲೆ ಸಂಶಯ ಬಂದು ಅವನನ್ನು
ವಿಚಾರಿಸಲು ಸಮರ್ಪಕ ಉತ್ತರ ನೀಡದೆ ಇರುವದರಿಂದ ಠಾಣೆಗೆ ಕರೆತಂದು ಕೂಲಂಕೂಶವಾಗಿ ವಿಚಾರಿಸಲು
ನಾಗರಾಜ ತಂದೆ ಅಮೃತರಾವ ಯಲ್ಲಮಡಗಿ ಸಾ|| ಸುಂಠಾಣ ತಾ|| ಚಿಂಚೋಳಿ ಇತನನ್ನು ದಸ್ತಿಗಿರ
ಮುಂಜಾಗ್ರತೆ ಕ್ರಮದ ಅಡಿಯಲ್ಲಿ ಗುನ್ನೆ ನಂ: 143/2012 ಕಲಂ 109 ಸಿಅರಪಿಸಿ ಪ್ರಕಾರ ಪ್ರಕರಣ
ದಾಖಲಿಸಿಕೊಂಡಿರುತ್ತಾರೆ.
No comments:
Post a Comment