Police Bhavan Kalaburagi

Police Bhavan Kalaburagi

Thursday, May 17, 2012

GULBARGA DIST REPORTED CRIME


ಹಲ್ಲೆ ಪ್ರಕರಣ:
ಅಶೋಕ ನಗರ ಪೊಲೀಸ್ ಠಾಣೆ:ಶ್ರೀ ಜಗದೀಶ ತಂದೆ ಮಲ್ಕಯ್ಯ ಗುತ್ತೇದಾರ ಉ:ನ್ಯೂ ತ್ರೀಶೂಲ ಬಾರ ಮ್ಯಾನೇಜರ ಸಾ:ವಿದ್ಯಾನಗರ ಗುಲಬರ್ಗಾ   ರವರು ನಾನು ಬಾರದಲ್ಲಿದ್ದಾಗ ದಿನಾಂಕ:16/05/2012 ರಂದು ರಾತ್ರಿ 9:30 ಗಂಟೆಗೆ ಕೆಲವರು ಮಧ್ಯ ಕುಡಿಯಲು ಬಂದವರು ವಿನಾಕಾರಣ ತಂಟೆ ಮಾಡುತಿದ್ದಾರೆ ಅಂತಾ ನಮ್ಮ ವೇಟರ ತಿಳಿಸಿದಕ್ಕೆ ನಾನು ಹೋಗಿ ನೋಡಲು ಬಿಲ್ ಕೊಡುವ ವಿಷಯದಲ್ಲಿ ನಮ್ಮ ರೆಸ್ಟೂರೆಂಟ ಮಾಲಿಕನಾದ ಸೂರ್ಯಕಾಂತ ತಂಟೆ ತಕರಾರು ಮಾಡುತಿದ್ದು, ನಾನು ವಿಚಾರಿಸಸುತ್ತಿರುವಾಗ ಉದಯ ಸಿಐಬಿ ಕಾಲೋನಿ, ಸತೀಶ ಬಸವನಗರ ಹಾಗೂ ಇನ್ನೂ 10-12 ಜನರು ಕೂಡಿಕೊಂಡು ಬಿಲ್ ಕೊಡುವ ವಿಷಯದ ಬಗ್ಗೆ ತಕರಾರು ಮಾಡಿ ಅವಾಚ್ಯವಾಗಿ ಬೈದು ಉದಯ ಇತನು ಬೀರ ಬಾಟಲಿಯಿಂದ ನನ್ನ ಎಡಗಣ್ಣಿನ ಕೆಳಭಾಗಕ್ಕೆ ಹೊಡೆದು ಗಾಯಗೊಳಿಸಿದ್ದು ಮತ್ತು ಇನ್ನೊಬ್ಬ ಕಲ್ಲಿನಿಂದ ಬಲಗಾಲ ತೊಡೆಗೆ ಹೋಡೆದು ಗಾಯಗೊಳಿಸಿದ್ದು, ಬಿಡಿಸಲು ಬಂದ ಸೂರ್ಯಕಾಂತ ನಂದೂರ ಈತನಿಗೆ ಜಬರ ದಸ್ತಿಯಿಂದ ಆಟೋರಿಕ್ಷಾದಲ್ಲಿ ಹಾಕಿಕೊಂಡು ಹೋಗಿರುತ್ತಾರೆ ಮತ್ತು ನಮ್ಮ ಬಾರದ  ಕೌಂಟರ, ಗ್ಲಾಸ್ ಟೇಬಲ್ ಗಳನ್ನು ಒಡೆದು ಹಾನಿ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:42/2012 ಕಲಂ:147, 148, 323, 324, 364, 504, 506, 427, ಸಂ:149 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

No comments: