ಅಪಹರಣ ಪ್ರಕರಣ:
ವಾಡಿ ಪೊಲೀಸ್ ಠಾಣೆ:ಶ್ರೀ ಬಸವರಾಜ ತಂದೆ ಹಣಮಂತಪ್ಪಾ ಸಾ|| ಇಂಗಳಗಿ ರವರು ನಮ್ಮ ಮನೆಯ ಅಂಗಳದಲ್ಲಿ ರಾತ್ರಿ 11-00 ಗಂಟೆ ಸುಮಾರಿಗೆ ನಾವು ಮಲಗಿಕೊಂಡಾಗ ಅಂಬಿಕಾ ಇವಳು ನನಗೆ ಸಂಡಾಸ ಬಂದಿದೆ ಅಂತಾ ಹೇಳಿದಳು.ನಾವಿಬ್ಬರೂ ನನ್ನ ಮಗಳಿಗೆ ಹೋಗಿ ಬಾ ಅಂತಾ ಹೇಳಿದೆವು ಸ್ವಲ್ಪ ಸಮಯದ ನಂತರ ನನ್ನ ಮಗಳು ಅಂಬಿಕಾ ಅಮ್ಮಾ ಅಂತಾ ಚೀರಿದ್ದರಿಂದ ನಾವು ಗಾಬರಿಯಾಗಿ ನೊಡಲಾಗಿ ನನ್ನ ಮಗಳು ಅಂಬಿಕಾಳಿಗೆ ನಮ್ಮ ಊರಿನ ಹರಿಜನ ಕೇರಿಯ ಪರ್ದಾನಿ ಹೊನಗುಂಟಾ ಮತ್ತು ಮೊನಪ್ಪಾ ತಳಗೆರಿ ಇವರು ಎಳೆದುಕೊಂಡು ಹೊರಟಿದ್ದರು ಪರ್ದಾನಿ ನನ್ನ ಮಗಳ ಬಾಯಿ ಒತ್ತಿ ಹಿಡಿದಿದ್ದನು ಆಗ ನಾವು ಬೆನ್ನು ಹತ್ತಿದೆವು ಊರ ಹೊರಗೆ ಕತ್ತಲಲ್ಲಿ ಓಡಿ ಹೊದರು ನಾವು ಹುಡುಕಾಡಿದರು ನನ್ನ ಮಗಳು ಪತ್ತೆಯಾಗಲಿಲ್ಲಾ ಮನೆಯಲ್ಲಿ ಬಂದು ನೊಡಲಾಗಿ ಅಂಬಿಕಾಳ ನಿಶ್ಚಯ ಕಾರಣದಿಂದಾಗಿ ಅಳಿಯನಿಗೆಂದು ತಂದಿರುವ 10 ಗ್ರಾಂ ಬಂಗಾರದ ಲಾಕೆಟ, 10 ಗ್ರಾಂ ಬಂಗಾರದ ಉಂಗುರ ಮನೆಯಲ್ಲಿ ಇರಲಿಲ್ಲ ಸದರಿಯವರ ಮೇಲೆ ಕಾನೂನು ಕ್ರಮ ಜರೂಗಿಸ ಬೇಕು ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:78/2012 ಕಲಂ 366(ಎ) ಐಪಿಸಿ ಪ್ರಕಾರ ಪ್ರಕರಣ ದಾಖಲುಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
No comments:
Post a Comment