Police Bhavan Kalaburagi

Police Bhavan Kalaburagi

Saturday, May 5, 2012

GULBARGA DIST REPORTED CRIMES


ವಂಚನೆ ಪ್ರಕರಣ:
ಬ್ರಹ್ಮಪೂರ ಪೊಲೀಸ್ ಠಾಣೆ :.ಶ್ರೀ.ಶರಣಪ್ಪ ತಂದೆ ನಾಗಪ್ಪ ಶಹಾಬಾದ, ಸಾ|| ಶ್ರೀರಾಮ ಸಿಟಿ ಯೂನಿಯನ್ ಪೈನಾನ್ಸ ಕಂಪನಿ ಗುಲಬರ್ಗಾ ರವರು ನಾನು ಶ್ರೀರಾಮ ಸಿಟಿ ಯೂನಿಯನ್ ಕಂಪನಿಯಲ್ಲಿ ಅಸಿಸ್ಟೆಂಟ್  ಲೀಗಲ್ ಆಫೀಸರ ಅಂತಾ ಕೆಲಸ ಮಾಡುತ್ತಿದ್ದು, ಕಂಪನಿಯ ಪರವಾಗಿ ಕೇಸುಗಳು ನಡೆಸಲು ಅಧಿಕೃತ ಉದ್ಯೋಗಿಯಾಗಿರುತ್ತೇನೆ. ಗುಲಬರ್ಗಾ ನಗರದ ಗಂಜ ಏರಿಯಾದ ಕರಬಸಪ್ಪ ಕಡಗಂಚಿ ಈತನು ಸಾಲಕ್ಕಾಗಿ ಅರ್ಜಿ ಸಲ್ಲಿಸಿ, ಅಂಬಿಕಾ ಟ್ರೈಲರ್ಸ ಎಂಬ ಸಂಸ್ಥೆಯ ದಾಖಲಾತಿಗಳ ಪ್ರತಿಯನ್ನು ನೀಡಿ ನಮ್ಮ ಬ್ಯಾಂಕಿನ ಪ್ರಾಂತಿಯ ವ್ಯವಸ್ಥಾಪಕರಾದ ರಾಘವೇಂದ್ರ ಇವರು ಪ್ರಾಥಮಿಕ ಪರಿಶೀಲನೆ ಮಾಡಿ ಭದ್ರತೆಗಾಗಿ ನಿಗದಿ ಪಡಿಸಿದಂತೆ ಒಂದು ನಿವೇಶನವನ್ನು ಅಡಮಾನ ಮಾಡಿ ಸಾಲ ಮಂಜೂರಾತಿಗಾಗಿ ಬೆಂಗಳೂರಿನ ಮುಖ್ಯ ಕಚೇರಿಗೆ ಕಳುಹಿಸಿದ್ದು ಆ ಪ್ರಕಾರ ಕಳುಹಿಸಿದ ದಾಖಲೆಗಳ ಮೇಲೆ ಕರಬಸಪ್ಪ ಕಡಗಂಚಿ ಇವರಿಗೆ 15,00,000/- ಸಾಲ ಮಂಜೂರು ಮಾಡಿ ದಿನಾಂಕ:31/08/2010 ರಂದು ಬೆಂಗಳೂರಿನ ಆಕ್ಸಿಸ ಬ್ಯಾಂಕ ಚೆಕ್ ನಂ: 066953 ಮೂಲಕ 14,58,904/- ರೂಪಾಯಿ ರಾಘವೇಂದ್ರ ಇವರ ಮೂಲಕ ತಲುಪಿಸಲಾಗಿರುತ್ತದೆ. ಇದರ ಬಗ್ಗೆ ವಿಚಾರಣೆಗಾಗಿ ಹೋದಾಗ ಅಂಬಿಕಾ ಟ್ರೈಲರ್ಸ ಎಂಬ ಸಂಸ್ಥೆಯು ಬೇರೋಬ್ಬರಿಗೆ ಸೇರಿದ್ದು ಎಂದು ತಿಳಿದು ಬಂದಿದ್ದರಿಂದ ನಮ್ಮ ಕಂಪನಿಗೆ ಮೋಸ ಮಾಡಿ ಕರಬಸಪ್ಪ ಕಡಗಂಚಿ ಹಾಗೂ ಅದಕ್ಕೆ ಸಹಕರಿಸಿದ ರಾಘವೇಂದ್ರ ಮತ್ತು ಮಲ್ಲಿಕಾರ್ಜುನ ಇವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ದೂರು ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 55/2012 ಕಲಂ: 419, 420, 465, 468, 470, 471, ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ: ಶ್ರೀ ಪಾಂಡುರಂಗ ತಂದೆ ಬೋಜಪ್ಪ ಚೇಂಗಟಿ ಉ|| ಬಸ್ಸ ಕಂಡಕ್ಟರ ಡಿಪೋ ನಂ 2 ಗುಲಬರ್ಗಾರವರು ನಾನು ದಿನಾಂಕ: 04/05/2012 ರಂದು ಮಧ್ಯಾಹ್ನ 1-00 ಪಿಎಮ ಸುಮಾರಿಗೆ ಗುಲಬರ್ಗಾ- ಹುಮನಾಬಾದ ಮುಖ್ಯ ರಸ್ತೆಯ ಮಾಸಾಬ್ದಿ ದರ್ಗಾದ  ಎದುರಿನ ರಸ್ತೆಯ  ಮೇಲೆ ಬಸ್ಸಿನಲ್ಲಿ ಪಂಡಿತರಾವ ತಂದೆ ಹಣಮಂತರಾವ ಸಾ||ನೀಲಕೋಡ ಗ್ರಾಮ ಇತನು  ಬಸ್ಸ ಟಿಕೇಟ ಕೊಳ್ಳಲು 20/- ರೂ ನೀಡಿದ್ದು, ಚಿಲ್ಲರೆ ಇಲ್ಲದೆ ಕಾರಣ ಉಳಿದ ಹಣವನ್ನು ನಂತರ  ಕೊಡುತ್ತೇನೆ ಅಂತಾ ತಿಳಿಸುತ್ತಿದ್ದಾಗ ಪಂಡಿತರಾವ ಅವ್ಯಾಚ್ಚವಾಗಿ ಬೈದು ಕಿಸೆಯಲ್ಲಿದ್ದ ಚಾಕು ತೆಗೆದು ಎಡಗೈ ಮೊಳಕೈ ಹತ್ತಿರ ಹೊಡೆದು ಗಾಯಮಾಡಿ ಪ್ರಯಾಣಿಕರ ಹತ್ತಿರ ಇದ್ದ ಟೇಬಲ ಗ್ಲಾಸನ್ನು ಒಡೆದಿರುತ್ತಾನೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 136/2012 ಕಲಂ 504 324 427 353 506(2) ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಗ್ರಾಮೀಣ ಪೊಲೀಸ್ ಠಾಣೆ:ಶ್ರೀ ಸಿದ್ದಪ್ಪ ತಂದೆ ಶರಣಪ್ಪ ತಳಕೇರಿ ಸಾ:ಯಳವಂತಗಿ(ಕೆ) ತಾ: ಗುಲಬರ್ಗಾರವರು ನಾನು ದಿನಾಂಕ:04/05/2012 ರಂದು ಮುಂಜಾನೆ 10-00 ಗಂಟೆ  ಸುಮಾರಿಗೆ ಮನೆಯ ಹತ್ತಿರ ನಿಂತಾಗ ಪ್ಲಾಟ ನಂ 28 ರಲ್ಲಿ ಶರಣಪ್ಪ ತಂದೆ ಗಿರೇಪ್ಪ ತಳಕೇರಿ,ಪೀರಪ್ಪ ತಂದೆ ಶರಣಪ್ಪ ತಳಕೇರಿ,ದೇವಿಂದ್ರ  ಸಾವಳಗಿ   ಸಾ||ಎಲ್ಲರೂ ಯಳವಂತಗಿ (ಕೆ)  ಗ್ರಾಮದವರಿಗೆ ಈ ಜಾಗ ಇಲ್ಲಿ ಕಟ್ಟಡ ಕಟ್ಟಬೇಡಿರಿ ಈ ವಿಷಯ ನ್ಯಾಯಾಲದಲ್ಲಿ ಇದೇ ಹೇಳಿದಾಗ ಶರಣಪ್ಪಾ ಮತ್ತು ಇತರರು ಇದು ನಮ್ಮದೆ ಜಾಗ ಇದೇ ಅಂತಾ ಅವ್ಯಾಚ್ಛವಾಗಿ ಬೈದು ಕಟ್ಟಿಗೆಯಿಂದ ಕಲ್ಲಿನಿಂದ ತಲೆಗೆ ಹೊಡೆದು ರಕ್ತಗಾಯ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 137/2012 ಕಲಂ 323 324 504 506(2) ಸಂಗಡ 34  ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಬಕಾರಿ ಕಾಯಿದೆ:
ಗುಲಬರ್ಗಾ ಗ್ರಾಮೀಣ ಠಾಣೆ:ದಿನಾಂಕ:04/05/2012 ರಂದು ಸಾಯಂಕಾಲ ಸುಮಾರಿಗೆ ಉಪಳಾಂವ ಗ್ರಾಮದ ಸರದಾರಯ್ಯ ತಂದೆ ಹಣಮಯ್ಯ ಗುತ್ತೇದಾರ ಸಾ: ಉಪಳಾಂವ ಇತನು ತನ್ನ ಮನೆಯ ಹತ್ತಿರ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಬಗ್ಗೆ ಭಾತ್ಮಿ ಬಂದ ಮೇರೆಗೆ ಪಿ.ಎಸ.ಐ ಹಾಗು ಸಿಬ್ಬಂದಿಯವರು ದಾಳಿ ಮಾಡಿ ಮಧ್ಯದ ಬಾಟಲಿಗಳು  ಅ,ಕಿ 3933.12/- ರೂ ಮತ್ತು  ನಗದು ಹಣ 215/- ರೂ ಹೀಗೆ ಒಟ್ಟು 4148.15/- ರೂಗಳು  ಜಪ್ತಿ ಮಾಡಿಕೊಂಡಿದ್ದರಿಂದ ಠಾಣೆ ಗುನ್ನೆ ನಂ: 139/2012 ಕಲಂ 32 34 ಕರ್ನಾಟಕ ಅಬಕಾರಿ ಕಾಯ್ದೆ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಜೂಜಾಟ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ: ದಿನಾಂಕ: 04/05/2012 ರಂದು  ಸಾಯಂಕಾಲ ಉಪಳಾಂವ ಗ್ರಾಮದ ಮಲಕ್ಕಣ್ಣ ದೇವರ ಗುಡಿಯ ಎದರುಗಡೆಯ ಕಟ್ಟೆಯ ಮೇಲೆ  ನರಸರೆಡ್ಡಿ ತಂದೆ ವೆಂಕಣ್ಣರೆಡ್ಡಿ ವ:38 ವರ್ಷ ಸಾ: ಉಪಳಾಂವ,ಜಗದೇವಪ್ಪ ತಂದೆ ಬಲವಂತರಾಯ ಬಿರಾದಾರ ಸಾ: ಬೇಲೂರ ಸಂಗಡ ಇನ್ನೂ 3 ಜನ ಇವರು ದುಂಡಾಗಿ ಕುಳಿತು ಅಂದರ ಬಾಹರ ಜೂಜಾಟ ಆಡುತ್ತಿದ್ದವರ ಮೇಲೆ ಪಿಎಸಐ ಮತ್ತು ಸಿಬ್ಬಂದಿಯವರು ಪಂಚರ ಸಮಕ್ಷಮ ದಾಳಿ ಮಾಡಿ ಅವರ ಹತ್ತಿರದಿಂದ ನಗದು ಹಣ 1850/- ರೂ & ಇಸ್ಪೇಟ ಎಲೆಗಳು ಜಪ್ತಿ ಮಾಡಿಕೊಂಡಿದ್ದರಿಂದ ಠಾಣೆ ಗುನ್ನೆ ನಂ: 140/2012 ಕಲಂ 87 ಕರ್ನಾಟಕ ಪೊಲೀಸ ಕಾಯ್ದೆ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

No comments: