ಅಪಘಾತ ಪ್ರಕರಣ:
ಕಮಲಾಪೂರ ಪೊಲೀಸ್ ಠಾಣೆ:ದಿನಾಂಕ:27/05/2012 ರಂದು ಮುಂಜಾನೆ 6:30 ಎ.ಎಮ ಕ್ಕೆ ಕಮಲಾಪೂರ ದಿಂದ ಗುಲಬರ್ಗಾಕ್ಕೆ ಹೋಗುವ ರಾಷ್ಟ್ರೀಯ ಹೆದ್ದಾರಿಯ ಮೇಲೆ ಕೆಎ.39-2286 ನೇದ್ದರ ಲಾರಿ ಚಾಲಕ ಮದರ ಸಾಬ ತಂದೆ ನಬಿ ಸಾಬ ಸಾ: ತಿಪರಾಂತ ಈತನು ತನ್ನ ಲಾರಿ ಯನ್ನು ಯಾವುದೇ ಮುನ್ಸೂಚನೆ ನೀಡದೆ ರೋಡಿನ ಮೇಲೆ ನಿಲ್ಲಿಸಿದ್ದು ಅದರ ಹಿಂದಿನಿಂದ ಲಾರಿ ನಂ ಎಮ್ ಹೆಚ್ 22-ಎನ್-410 ನೇದ್ದರ ಚಾಲಕ ದಿಗಂಬರ ತಂದೆ ದೇವರಾವ ಕದಂ ಸಾ: ದೊಡ್ಡಗಾಂವ ಈತನು ತನ್ನ ಲಾರಿಯನ್ನು ಅತೀವೇಗದಿಂದ ಚಲಾಯಿಸಿಕೊಂಡು ಬಂದು ರೊಡಿನ ಮೇಲೆ ನಿಂತ ಲಾರಿಗೆ ಡಿಕ್ಕಿ ಹೊಡೆದನು. ಎಮ್ ಹೆಚ್ 22-ಎನ್-410 ನೇದ್ದರ ಲಾರಿಯಲ್ಲಿ ಕುಳಿತ ಕ್ಲೀನರ ಲಿಂಬಾಜಿ ತಂದೆ ನಿವೃತ್ತಿ ಈತನು ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಲಾರಿಯ ಚಾಲಕ ದಿಗಂಬರ ಈತನಿಗೆ ಗಾಯಗಳಾಗಿರುತ್ತವೆ. ಕಾರಣ ಎರಡು ಲಾರಿ ಚಾಲಕರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಶ್ರೀ ಸಲಾವುದ್ದಿನ ತಂದೆ ಜಾಫರ ಶೇಖ ಸಾ: ಕಮಲಾಪೂರ ರವರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ: 61/12 ಕಲಂ: 279,337,283, 304(ಎ) ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಕೆ ಕೈಕೊಂಡಿರುತ್ತಾರೆ.
ಕೊಲೆಗೆ ಪ್ರಯತ್ನ ಪ್ರಕರಣ:
ನೆಲೋಗಿ ಪೊಲೀಸ ಠಾಣೆ:ಶ್ರೀ ಶೆಂಕ್ರೇಪ್ಪ ತಂದೆ ರುದ್ರಗೌಡ ರವರು ನನ್ನ ಹೆಂಡತಿ ಭಾರತಿ ಮತ್ತು ಮಲ್ಲಪ್ಪ ಮೋರಟಗಿ ಇಬ್ಬರೂ ನಡುವೆ ಅನೈತಿಕ ಸಂಬಂಧ ಹೊಂದಿದ್ದು ಅವರಿಬ್ಬರೂ ದಿನಾಂಕ 25-05-2012 ರಂದು ರಾತ್ರಿ 1-00 ಗಂಟೆಗೆ ಇಬ್ಬರೂ ಮಲಗಿದನ್ನು ನಾನು ನೋಡಿದ್ದರಿಂದ ಮುಂಜಾನೆ 6-00 ಗಂಟೆಗೆ ಸುಮಾರಿಗೆ ನಾನು ಮನೆಯಲ್ಲಿ ಮಲಗಿದ್ದಾಗ ನನ್ನ ಹೆಂಡತಿ ಭಾರತಿ ನಮ್ಮ ಅತ್ತೆ ಗೋದಾಬಾಯಿ ಇಬ್ಬರೂ ಬಂದು ನನಗೆ ಹೊರಗೆ ಏಳೆದುಕೊಂಡು ಬಂದು ಅವಾಚ್ಯವಾಗಿ ಬೈದು ನನಗೆ ಹಾದರ ಹೊಂದುಸ್ತಿ ಅಂತ ಮಲ್ಕಪ್ಪ ಮುಗಾನೂರ ಇವರ ಮನೆಯ ಮುಂದೆ ಏಳೆದು ಕೊಂಡು ಹೋಗಿ ಹೊಡೆದರು. ಮತ್ತು ಮಲ್ಲಪ್ಪ ಮೋರಟಗಿ, ವಿಠಲ ಮೋರಟಗಿ. ಕಮಲಾಬಾಯಿ ಮೋರಟಗಿ. ಯಲ್ಲವ್ವ ಮೋರಟಗಿ ಇವರೆಲ್ಲರೂ ಕೂಡಿ ವಿಷದ ಬಾಟಲಿಯನ್ನು ನನ್ನ ಬಾಯಿಯಲ್ಲಿ ಹಾಕಿದನು ವಿಠಲ ಇವನು ನನ್ನ ಎರಡು ಕೈಗಳನ್ನು ಹಿಡಿದು ಎದೆಯ ಮೇಲೆ ಕುಳಿತು ಹೊಡದೆನು ಯಲ್ಲವ್ವ, ಕಮಲಾಬಾಯಿ ಇವರು ನನ್ನ ಕಾಲುಗಳನ್ನು ಒತ್ತಿ ಹಿಡಿದರು ಸತ್ತು ಹೊಡೆಯಿರಿ ಅಂತ ಬೈಯುತ್ತಿದರು ಆರು ಜನರು ವಿಷ ಕುಡಿಸಿ ಕೊಲೆ ಮಾಡಲು ಪ್ರಯತ್ನ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ 66/12 ಕಲಂ .143,147,148,323,504,307,ಸಂಗಡ 149 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಕೆ ಕೈಕೊಂಡಿರುತ್ತಾರೆ.
ಗಂಡನ ಮಾನಸಿಕ ಹಿಂಸೆಯಿಂದ ಮೈಮೇಲೆ ಸೀಮೆ ಎಣ್ಣೆ ಹಾಕಿಕೊಂಡು ಮೃತಪಟ್ಟ ಗೃಹಿಣೆ:
ಚಿತ್ತಾಪೂರ ಪೊಲೀಸ್ ಠಾಣೆ:ಶ್ರೀಮತಿ ಸುನಂದ ಗಂಡ ಬಸಪ್ಪ @ಬಸವರಾಜ ನಾಯಕಲ್ ಸಾ|| ಇಟಗಾ ರವರು ನನಗೆ ಒಂದು ವರ್ಷದ ಹಿಂದೆ ಇಟಗಾ ಗ್ರಾಮದ ಬಸಪ್ಪ ತಂದೆ ಮರೆಪ್ಪ ನಾಯಕಲ್ ಇವರಿಗೆ ಕೊಟ್ಟು ಮದುವೆ ಮಾಡಿರುತ್ತಾರೆ. ನನ್ನ ಗಂಡ ಬಸಪ್ಪ ನಾಯಕಲ್ ಮತ್ತು ಅತ್ತೆ ಸುಭದ್ರಮ್ಮ,ಮಾವನಾದ ಮರೆಪ್ಪ, ಹಾಗೂ ಭಾವನಾದ ಪೀರಪ್ಪ, ಎಲ್ಲರು ಒಂದೆ ಮನೆಯಲ್ಲಿ ಒಟ್ಟಿಗೆ ಇರುತ್ತೇವೆ. ನನ್ನ ಗಂಡನಾದ ಬಸಪ್ಪ ಈತನು ನಾನು ಬೇರೆಯವರ ಜೊತೆ ಮಾತಡಿದ್ದಲ್ಲಿ ನೀನು ನನಗೆ ಬೇರೆಯವರ ಜೋತೆ ಮಾತಾಡುತ್ತಿ ನಾನು ನೀನಗೆ ಚೆನ್ನಾಗಿ ಕಾಣುವದಿಲ್ಲವೇನು ಅಂತಾ ಸಂಶಯ ಪಟ್ಟುಕೊಳ್ಳುತ್ತಿದ್ದನು,ಈ ವಿಷಯವನ್ನು ನನ್ನ ತಂದೆ ತಾಯಿಯವರಿಗೆ ತಿಳಿಸಿದರೆ ನೀನು ನಿನ್ನ ಗಂಡನ ಮನೆಯಲ್ಲಿ ಚೆನ್ನಾಗಿ ಇರಬೇಕು ಅಂತಾ ಬುದ್ದಿಮಾತು ಹೇಳಿ ಕಳುಯಿಸುತ್ತಿದ್ದರು,ದಿನಾಂಕ 21/5/2012 ರಂದು ಸಾಯಾಂಕಾಲ 6-00 ಗಂಟೆಗೆ ನಾನು ನಮ್ಮ ಮಾವ ಮರೆಪ್ಪ ಇವರಿಗೆ ಟಿಪಿನ್ ಕೊಟ್ಟು ಮೇಲೆ ನೋಡುತ್ತಿರುವಾಗ ನನ್ನ ಗಂಡನು ನನಗೆ ಏನು ಮೇಲೆ ನೋಡುತ್ತಿ ಅವಾಚ್ಯವಾಗಿ ಬೈದು ಮಾನಸಿಕ ಹಿಂಸೆ ಕೊಟ್ಟನು ನಾನು ಮನಸ್ಸಿಗೆ ಬೆಜಾರು ಮಾಡಿಕೊಂಡು ಮನೆಯಲ್ಲಿದ್ದ ಸೀಮೆ ಎಣ್ಣೆ ಡಬ್ಬಾ ತಗೆದುಕೊಂಡು ಮೈಮೇಲೆ ಎಣ್ಣೆ ಹಾಕಿಕೊಂಡು ಬೆಂಕಿ ಹಚ್ಚಿಕೊಂಡೆನು.ನನಗೆ ತಲೆಗೆ ಮತ್ತು ಎರಡು ಕೈಗಳು ಮೊಣಕೈ ವರೆಗೆ,ಮುಖಕ್ಕೆ,ಕುತ್ತಿಗೆಗೆ,ಎರಡು ಕಾಲುಗಳು ಮೊಣಕಾಲನೊವರೆಗೆ ಸುಟ್ಟು ಗಾಯಗಳಾದವು, ನಮ್ಮ ಬಾಜು ಮನೆಯವರಾದ ಚಂದ್ರಭಾಗಮ್ಮ ,ಮರೆಮ್ಮ ಇವರುಗಳು ಒಂದು ಖಾಸಗಿ ವಾಹನದಲ್ಲಿ ಚಿತ್ತಾಪೂರ ಸರಕಾರಿ ಆಸ್ಪತ್ರೆಗೆ ತಂದು ಉಪಚಾರ ಕುರಿತು ಸೇರಿಕೆ ಮಾಡಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 50/2012 ಕಲಂ 498(ಎ), 306,504,ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. ಸದರಿ ಗಾಯಾಳು ಸುನಂಧ ಇವರಿಗೆ ಹೆಚ್ಚಿನ ಉಪಚಾರ ಕುರಿತು ಗುಲಬರ್ಗಾ ಬಸವೇಶ್ವರ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು, ಉಪಚಾರ ಹೊಂದುತ್ತಾ ದಿನಾಂಕ 27/5/2012 ರಂದು ಮಧ್ಯರಾತ್ರಿ 1-00 ಎ ಎಂ ಕ್ಕೆ ಗುಲಬರ್ಗಾ ಬಸವೇಶ್ವರ ಆಸ್ಪತ್ರೆಯಲ್ಲಿ ಮೃತ ಪಟ್ಟಿರುತ್ತಾರೆ.
No comments:
Post a Comment