Police Bhavan Kalaburagi

Police Bhavan Kalaburagi

Saturday, May 19, 2012

GULBARGA DIST REPORTED CRIMES


ಕಳ್ಳತನ ಪ್ರಕರಣ:
ಅಫಜಲಪೂರ ಪೊಲೀಸ್ ಠಾಣೆ : ಶ್ರೀ ಚಂದ್ರಕಾಂತ ತಂದೆ  ರುದ್ರಪ್ಪ ರಾಠೋಡ ಉ|| ಮುಖ್ಯ ಗುರುಗಳು ಸಾ|| ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ  ದೇಸಾಯಿ ಕಲ್ಲೂರ ತಾ|| ಅಫಜಲಪೂರ ರವರು ನಮ್ಮ  ದೇಸಾಯಿ ಕಲ್ಲೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೋಣೆಯಲ್ಲಿ ಇಟ್ಟಿದ್ದ ಸಮ್ ಸಂಗ ಟಿ ವಿ 1,  ಹೋಲಿಗೆಯ 2 ಯಂತ್ರಗಳು ಅಂಧಾಜು ಕಿಮ್ಮತ್ತು 23,000/- ರೂ ಯಾರೊ ಕಳ್ಳರು ರಾತ್ರಿ ಸಮಯದಲ್ಲಿ ಕೋಣೆಯ ಬಾಗಿಲಿಗೆ ಹಾಕಿದ ಕೀಲಿಯನ್ನು ಮುರಿದು  ಟಿವಿ ಮತ್ತು ಹೋಲಿಗೆ ಯಂತ್ರಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಲಿಖೀತ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:88/2012 ಕಲಂ 457 380 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಸಂಚಾರಿ ಪೊಲೀಸ್ ಠಾಣೆ: ಶ್ರೀ ಮಹ್ಮದ ಸಲೀಮ್ ತಂದೆ ಮಹ್ಮದ ಸಲಾಮ್ ಮಿಯಾ ಉಃ ಅಟೋ ಚಾಲಕ ಸಾ: ಕೆ.ಬಿ.ಎನ್. ಕಾಲೇಜು ಹತ್ತಿರ ಬಿಲಾಲಾಬಾದ  ಗುಲಬರ್ಗಾರವರು ನಾನು  ದಿನಾಂಕ 18-05-2012 ರಂದು ಸಾಯಂಕಾಲ 6-00 ಗಂಟೆಗೆ ಗಂಜ್ ಬಸ್ ನಿಲ್ದಾಣ ರೋಡಿಗೆ ಇರುವ ದರಬಾರ ಹೋಟಲ ಮುಂದೆ ಹೊರಟಾಗ ಟಂ ಟಂ ನಂ ಕೆಎ 32  ಎ 4243 ಚಾಲಕ ಗಂಜ್ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಮೋಟಾರ ಸೈಕಲ ನಂ – ಕೆಎ 30 ಜೆ 9892 ನೇದ್ದಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ ಬಲಗಾಲಿನ ಪಾದಕ್ಕೆ ಗಾಯಗೊಳಿಸಿದ ವಾಹನ ಸಮೇತ ಓಡಿಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 27/2012 ಕಲಂ 279, 338 ಐ.ಪಿ.ಸಿ ಸಂಗಡ 187 ಐ.ಎಮ್.ವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:

ಗುಲಬರ್ಗಾ ಗ್ರಾಮೀಣ ಪೊಲೀಸ ಠಾಣೆ:ಶ್ರೀಮತಿ ಹೀರಾಮಣಿ ತಂದೆ ಗನ್ನು ರಾಠೋಡ ಉ:ಆಟೋ ಚಾಲಕ ಸಾ: ಕೇರೂರ ತಾಂಡಾ ತಾ:ಜಿ: ಗುಲಬರ್ಗಾರವರು ನಾನು ದಿನಾಂಕ:18/05/2012 ರಂದು ಮುಂಜಾನೆ ನಮ್ಮ ಊರಿನಿಂದ ಆಟೋ ನಂ ಕೆ.ಎ 32 ಎ-9043 ನೇದ್ದರಲ್ಲಿ ತಾಂಡಾದರೊಂದಿಗೆ ಗುಲ್ಬರ್ಗಾಕ್ಕೆ ಬರುವಾಗ ಮುಂಜಾನೆ 6:30 ಗಂಟೆಯ ಸುಮಾರಿಗೆ ಹುಮನಾಬಾದ ರಿಂಗ ರೋಡಿನ ಸರ್ಕಲದಲ್ಲಿ ಬಂದಾಗ ಸೇಡಂ ರಿಂಗ ರೋಡ ಕಡೆ ಯಿಂದ  ಲಾರಿ ನಂ ಎಮ್-ಎಚ್-24 ಜೆ-6722 ನೇದ್ದರ ಚಾಲಕನು ತನ್ನ ಲಾರಿ ಯನ್ನು ಅತೀವೇಗದಿಂದ & ಅಲಕ್ಷತನದಿಂದ ನಡೆಸಿಕೊಂಡು ಬಂದು ಆಟೋಕ್ಕೆ ಡಿಕ್ಕಿ ಪಡಿಸಿದ್ದರಿಂದ ನಮ್ಮ ಆಟೋ ಬಲಗಡೆ ಮಗ್ಗಲು ಪಲ್ಟಿ ಆಗಿ ಅದರಲ್ಲಿದ್ದ ನಮ್ಮಗೆಲ್ಲಾ ಗಾಯಗಳಾಗಿರುತ್ತವೆ ಲಾರಿ ಚಾಲಕ ಶ್ರೀ ಲಕ್ಷ್ಮಣಕುಮಾರ ತಂ/ ವಾಮನ ಕುಂಬಾರ ಸಾ:ಚಿಕ್ಕರೂಟ ತಾ:ಜಿ: ಲಾತೂರ ಇವರ ಮೇಲೆ ಕಾನೂನು ಕ್ರಮ ಜರೂಗಿಸಬೇಕು ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 157/2012 ಕಲಂ 279 337 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

No comments: