ಅಪಘಾತ ಪ್ರಕರಣ:
ಸಂಚಾರಿ ಪೊಲೀಸ್ ಠಾಣೆ:ಶ್ರೀ ಶಿವಕುಮಾರ ತಂದೆ ಸಿದ್ರಾಮಪ್ಪ ರಾಂಪೂರೆ ಸಾ: ಡೊಂಗರಗಾಂವ ಹಾ||ವ||ಭವಾನಿ
ನಗರ ಸಿದ್ದಲಿಂಗೇಶ್ವರ ಗುಡಿಯ ಹತ್ತಿರ ಗುಲಬರ್ಗಾ ರವರು ನಾನು ದಿನಾಂಕ 21-05-2012 ರಂದು ಮದ್ಯಾಹ್ನ
3-30 ಗಂಟೆ ಸುಮಾರಿಗೆ ಗಂಜ್ ದಿಂದ ಹುಮನಾಬಾದ ರಿಂಗ್ ರೋಡ ಕಡೆಗೆ ನನ್ನ ಮೋಟಾರ ಸೈಕಲ ನಂಬರ ಕೆಎ 32 ಇಎ 3699 ನೇದ್ದರ ಮೇಲೆ ವೀರೇಶ ಈತನಿಗೆ ನನ್ನ
ಹಿಂದೆ ಕೂಡಿಸಿಕೊಂಡು ಹೊರಟಾಗ ಲಾಹೋಟಿ ಪೆಟ್ರೋಲ್ ಪಂಪನಲ್ಲಿ ಪೆಟ್ರೋಲ್ ಹಾಕಿಸುವ ಕುರಿತು ಪೆಟ್ರೋಲ್
ಪಂಪ ಮುಂದಿನ ರೋಡಿನ ಮೇಲೆ ಮೋಟಾರ ಸೈಕಲ ಬಲಗಡೆ ತಿರುಗಿಸುತ್ತಿದ್ದಾಗ ಹಿಂದಿನಿಂದ ಮೋಟಾರ ಸೈಕಲ ನಂ
ಕೆಎ 32 ಆರ್ 8220 ನೇದ್ದರ ಸವಾರನು ತನ್ನ ವಾಹನ ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು
ಬಂದು ನಮಗೆ ಡಿಕ್ಕಿ ತನ್ನ ವಾಹನ ಸ್ಥಳದಲ್ಲಿಯೇ ಬಿಟ್ಟು ಓಡಿಹೋಗಿರುತ್ತಾನೆ ಅಂತಾ ದೂರು
ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 28/2012 ಕಲಂ 279, 338 ಐ.ಪಿ.ಸಿ ಸಂಗಡ 187 ಐ.ಎಮ್.ವಿ ಆಕ್ಟ ಪ್ರಕಾರ ಪ್ರಕರಣ
ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಗ್ರಾಮೀಣ
ಪೊಲೀಸ ಠಾಣೆ:ಶ್ರೀ ಮಹ್ಮದ ಮಗದುಮ ತಂದೆ ಮಹ್ಮದ ಇಬ್ರಾಹಿಂ
ಹರಸೂರ ಸಾ: ಹರಸೂರ ಗ್ರಾಮ ಹಾ:ವ: ಆಜಾದಪೂರ ರೋಡ ಉಮರ ಕಾಲನಿ ಗುಲಬರ್ಗಾ ರವರು ನನ್ನ ಅಣ್ಣ ಮತ್ತು ಅಣ್ಣನ ಮಗ ಕೂಡಿಕೊಂಡು
ದಿನಾಂಕ 21-05-12
ರಂದು ಮಧ್ಯಾಹ್ನ 4-15 ಗಂಟೆ ಸುಮಾರಿಗೆ ಮೋಟಾರ ಸೈಕಲ ಕೆಎ 32 ಜೆ 3672 ನೇದ್ದರ ಮೇಲೆ ಹುಮನಾಬಾದ
ರಿಂಗ ರೋಡ ಕಡೆಯಿಂದ ಬರುವಾಗ ಮುಂದೆ ಹೊರಟ ಟಾಟಾ ಎಸಿಇ ನಮೊನೆಯ ವಾಹನಕ್ಕೆ(ನಂಬರ ಗೊತ್ತಿಲ್ಲಾ ನೇದ್ದರ ) ಅಲಕ್ಷತನದಿಂದ ನಡೆಸುತ್ತಾ ಹೋಗುವ ಕಾಲಕ್ಕೆ ಯಾವುದೇ ಮುನ್ಸೂಚನೆ ನೀಡದೇ ಟಾಟಾ ಎಸಿಇ ಚಾಲಕ ಒಮ್ಮಿಂದ ಒಮ್ಮೇಲೆ ಬ್ರೇಕ
ಹಾಕಿದ್ದರಿಂದ ಮೋಟಾರ ಸೈಕಲ ಟಾಟಾ ಎಸಿಇ ನಮೊನೆಯ ವಾಹನಕ್ಕೆ ಡಿಕ್ಕಿ ಹೊಡೆದಿದ್ದರಿಂದ ಮಹ್ಮದ
ಅಬ್ದುಲ ನಬೀ ಇತನಿಗೆ ಬಲಮೆಲಕಿನ, ಬಲಗಣ್ಣಿನ, ಭಾರಿ
ರಕ್ತಗಾಯವಾಗಿ ತಲೆಗೆ ಒಳಪೆಟ್ಟಾಗಿದರಿಂದ ಉಪಚಾರ ಕುರಿತು ಆಸ್ಪತ್ರೆಗೆ ತರುವಾಗ ಮಾರ್ಗ
ಮಧ್ಯದಲ್ಲಿ ಮೃತಪಟ್ಟಿರುತ್ತಾನೆ. ಮತ್ತು ಆತನ ಮಗನಾದ ಮಹಮದ ಅಬ್ದುಲ್ ನದೀಮ 4
ವರ್ಷ ಇತನಿಗೆ ಗಾಯಗಳಾಗಿರುತ್ತವೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 162/2012 ಕಲಂ
279, 337, 304 (ಎ) ಐಪಿಸಿ ಸಂಗಡ 187 ಐ.ಎಮ.ವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ
ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಗ್ರಾಮೀಣ
ಪೊಲೀಸ ಠಾಣೆ: ಶ್ರೀ ಪ್ರಭು ತಂದೆ ಸಿದ್ರಾಮ ಹೊಸಮನಿ ಸಾ||ಬೋಮ್ಮನಹಳ್ಳಿ
ತಾ: ಆಳಂದ ಜಿ: ಗುಲಬರ್ಗಾರವರು ನಾನು ದಿನಾಂಕ;20/5/2012 ರಂದು ಮಧ್ಯಾಹ್ನ 2:30 ಪಿಎಮ
ಸುಮಾರಿಗೆ ಪಟ್ಟಣ್ಣ ಕ್ರಾಸ ಹತ್ತಿರ ಬಸ್ಸಿಗಾಗಿ ಕಾಯುತ್ತಿರುವಾಗ ಗುಲಬರ್ಗಾ ಕಡೆಯಿಂದ ಒಂದು
ಮಿನಿ ಲಾರಿ ನಂ ಎಮ್‌ಹೆಚ್ 16 ಎಇ 8326 ನೇದ್ದರ ಚಾಲಕ ಅತೀವೇಗ ಹಾಗೂ
ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಡಿಕ್ಕಿ ಪಡೆಯಿಸಿ ಗಾಯಗೊಳಿಸಿ ತನ್ನ ವಾಹನವನ್ನು ತೆಗೆದುಕೊಂಡು
ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 163/2012 ಕಲಂ 279,
337, ಐಪಿಸಿ ಸಂಗಡ 187 ಐ.ಎಮ.ವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ
ಕೈಕೊಂಡಿರುತ್ತಾರೆ.
No comments:
Post a Comment