ಹಲ್ಲೆ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ:ಶ್ರೀ ವೈಜನಾಥ ತಂದೆ ಧರ್ಮರಾವ ರಾವಗೊಂಡ ಸಾ:ತರನಳ್ಳಿ ರವರು ನಾನು ದಿನಾಂಕ:23/05/2012 ರಂದು ಸಾಯಂಕಾಲ 6.00 ಗಂಟೆಗೆ ಕೂಲಿ ಕೆಲಸ ದಿಂದ ಮನೆಗೆ ಬಂದಾಗ ನನ್ನ ಹೆಂಡತಿ ಮನೆಯಲ್ಲಿ ಇರದೆ ನನ್ನ ಮಾವನ ಮನೆಗೆ ಹೋಗಿದ್ದು ಗೊತ್ತಾಗಿ ಕರೆಯಲು ಹೋಗಿ ಮನೆಯಲ್ಲಿ ಇರದೆ ಇಲ್ಲಿ ಏಕೆ ಬಂದಿರುವೆ ಅಂತಾ ಕೇಳಿದಾಗ ಅಲ್ಲಿಯೇ ಇದ್ದ ಶರಣಗೌಡ ಮಾಲಿ ಪಾಟೀಲ ಹಾಗೂ ಜಗನ್ನಾಥ ಪೊಲೀಸ ಪಾಟೀಲ ಇಬ್ಬರೂ ಬಂದು ನನಗೆ ಜಗಳ ತೆಗೆದು ಅವಾಚ್ಯವಾಗಿ ಬೈದು ಕೈಯಿಂದ ಹೊಡೆದು ಹಿಡಿ ಗಾತ್ರದ ಕಲ್ಲಿನಿಂದ ತಲೆಯ ಬಲಭಾಗಕ್ಕೆ ಹೊಡೆದು ರಕ್ತಗಾಯ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 73/2012 ಕಲಂ:323, 324, 504 ಸಂ:34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ ಠಾಣೆ: ಶ್ರೀಮತಿ ಮಲ್ಲಮ್ಮ ಗಂಡ ಬಂಡೇಪ್ಪ ಖಣಜೇಗೋಳ ಸಾ: ಸೈಯದ ಚಿಂಚೋಳಿರವರು ನಾವು ಮನೆಯರೆಲ್ಲರೂ ದಿನಾಂಕ 23/5/12 ರಂದು 8 ಎಎಮಕ್ಕೆ ಹೊಲದಲ್ಲಿದ್ದಾಗ ರಾಜು@ ರಾಜಶೇಖರ ತಂದೆ ಭೀಮಾಶಂಕರ ಖಣಜೇಗೋಳ ಉಮೇಶ ತಂದೆ ಭೀಮಾಶಂಕರ ಖಣಜೇಗೋಳ ಸಾ: ಇಬ್ಬರೂ ಸೈಯ್ಯದ ಚಿಂಚೋಳಿ ಗ್ರಾಮ ರವರು ನಾವು ಹೊಲದಲ್ಲಿ ಗಳೇ ಹೊಡೆಯುತ್ತಿ ದ್ದನ್ನು ನೋಡಿ ತಕರಾರು ಮಾಡಿ ಅವ್ಯಾಚ್ಛವಾಗಿ ಬೈದು ಹೊಡೆ ಬಡೆ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 167/2012 ಕಲಂ, 504 323 324 506 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಜೂಜಾಟ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ ಠಾಣೆ:ದಿನಾಂಕ: 23/5/2012 ರಂದು ಮದ್ಯಾಹ್ನ ಮಿಲ್ಲತ್ತ ನಗರ ಏಸೆಂಟ ಶಾಲೆಯ ಎದರು ಮಹ್ಮದ ಹುಸೇನ ತಂದೆ ಮಹ್ಮದ ದಾವಲಸಾಬ ಮಡ್ಡಿ ಸಾ: ಬುಲಂದ ಪರವೇಜ ಕಾಲನಿ ಗುಲಬರ್ಗಾ, ಬಾಬುಲಾಲ ತಂದೆ ಮಶಾಕಸಾಬ ಸಾ; ಮಿಲ್ಲತ್ತ ನಗರ ಗುಲಬರ್ಗಾ ಸಂಜುಕುಮಾರ ತಂದೆ ನೀಲಕಂಠಪ್ಪ ಬಿರಾದಾರ ಸಾ:ಶಿವಾಜಿ ನಗರ ಗುಲ್ಬರ್ಗಾ ರವರು ಮಟಕಾ ನಂಬರ ಬರೆದುಕೊಳ್ಳುತ್ತಿದ್ದಾಗ ಡಿವೈಎಸ್‌ಪಿ ಗ್ರಾಮಾಂತರ ಉಪ ವಿಭಾಗ ಗುಲಬರ್ಗಾ ಹಾಗೂ ಸಿಪಿಐ ಗ್ರಾಮೀಣ ವೃತ್ತ ಗುಲಬರ್ಗಾ ರವರ ಮಾರ್ಗದರ್ಶನದಲ್ಲಿ ಸಿಬ್ಬಂದಿಯರೊಂದಿಗೆ ದಾಳಿ ಮಾಡಿ ಆರೋಪಿತರನ್ನು ದಸ್ತಗಿರಿ ಅವರಿಂದ ನಗದು ಹಣ 4800/- ರೂ ಹಾಗೂ ಮಟಕಾ ಚೀಟಿ ಅಲ್ಲದೆ ಒಂದು ಬಾಲ ಪೆನ್ನು, ಒಂದು ಮೋಬೈಲ ವಶಪಡಿಸಿಕೊಂಡಿದ್ದರ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 168/2012 ಕಲಂ 78 (3) ಕೆಪಿ ಆಕ್ಟ್ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಜೂಜಾಟ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ ಠಾಣೆ:ಶ್ರೀಮತಿ ಅಂಬು ಗಂಡ ಪಾಂಡು ಗೌಳಿ ಸಾ:ಸೈಯ್ಯದ ಚಿಂಚೋಳಿ ಹಾ:ವ:ಪಟ್ಟಣ ತಾ:ಜಿ:ಗುಲಬರ್ಗಾರವರು ನನ್ನ ಗಂಡನು ದಿನಾಲು ಕುಡಿದು ಬಂದು ವಿನಾಃಕಾರಣ ಜಗಳ ತೆಗೆದು ಶೀಲದ ಶಂಕೆ ಮಾಡಿ ನೀನು ಬೇರೆಯವರ ಜೊತೆಗೆ ಮಲಗುತ್ತಿಯಾ ಅಂತಾ ಮಾನಸಿವಾಗಿ ಮತ್ತು ದೈಹಿಕವಾಗಿ ಹಿಂಸೆ ಕೊಟ್ಟು ಹೊಡೆ ಬಡೆ ಮಾಡುತ್ತಿದ್ದನು.ನನ್ನ ತವರು ಮನೆಯ ಸಂಬಂದಿಕರೆಲ್ಲರೂ ತೀರಿಕೊಂಡಿದ್ದರಿಂದ ಯಾರಿಗೂ ಹೇಳದೇ ನನ್ನ ಗಂಡ ಕೊಡುತ್ತಿದ್ದ ಹಿಂಸೆ ಸಹಿಸಿಕೊಂಡು ಇಷ್ಟು ದಿನ ಬಂದಿರುತ್ತೆನೆ. ನಿನ್ನೆ ದಿನಾಂಕ:-23/05/2012 ರಂದು ರಾತ್ರಿ 11:00 ಗಂಟೆಯ ಸುಮಾರಿಗೆ ನಾನು ಮನೆಯಲ್ಲಿ ಮಲಗಿಕೊಂಡಾಗ ನನ್ನ ಗಂಡನು ಹೊರಗಿನಿಂದ ಬಂದು ವಿನಾಕಾರಣ ಜಗಳ ತೆಗದು ಹೊಡೆ ಬಡೆ ಮಾಡುತ್ತಿದ್ದನು. ನಾನು ವಿರೋದಿಸಿದ್ದಕ್ಕೆ ನನಗೆ ಅವಚ್ಯವಾಗಿ ಬೈದು ಕೊಲೇ ಮಾಡುವ ಉದ್ದೇಶದಿಂದ ಸೀಮೆ ಎಣ್ಣೆ ನನ್ನ ಮೈ ಮೇಲೆ ಹಾಕಿ ಕಡ್ಡಿ ಕೊರೆದು ಮೈಗೆ ಬೆಂಕಿ ಹಚ್ಚಿದನು ನಾನು ಚೀರಾಡುತ್ತಿದ್ದಾಗ ಅಲ್ಲಿಯೇ ಇದ್ದ ಹೊಟೇಲ ಮಾಲಿಕ ಅಂಬಾರಾಯ ತಂದೆ ಅಯ್ಯಪಗೌಡ ಮತ್ತು ಶರಣಪ್ಪಾ ತಂದೆ ಲಾಡಪ್ಪಾ ನಾಟೀಕಾರ ಇಬ್ಬರೂ ಕೂಡಿ ಬಂದು ನನ್ನ ಮೈಗೆ ಹತ್ತಿದ ಬೆಂಕಿಯನ್ನು ಆರಿಸಿದರು ನಂತರ ನಾನು ನೋಡಿಕೊಳ್ಳಲು ನನಗೆ ಎರಡು ಕೈಗಳ ಮೊಳಕೈಯಿಂದ ಅಂಗೈವರೆಗೆ (ಬೆರಳುಗಳು) ಸುಟ್ಟ ಗಾಯಗಳಾಗಿ ಚರ್ಮ ಸುಲಿದ್ದಿದ್ದು ಎರಡು ತೊಡೆಗಳಿಗೆ, ಎಡ ಮಗ್ಗಲಿಗೆ ಹೊಟ್ಟೆಗೆ , ಸುಟ್ಟಗಾಯಗಳಾಗಿರುತ್ತವೆ. ಯಾರೋ 108 ಅಂಬುಲೆನ್ಸಗೆ ಪೋನ ಮಾಡಿ ವಿಷಯ ತಿಳಿಸಿದ್ದರಿಂದ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತಾರೆ.ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ : 169/2012 ಕಲಂ 498 (ಎ) 504 307 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
No comments:
Post a Comment