ಕೊಲೆಗೆ ಪ್ರಯತ್ನ :
ಸ್ಟೇಷನ ಬಜಾರ ಪೊಲೀಸ ಠಾಣೆ :ಶ್ರೀ ಗಣೇಶ ತಂದೆ ಅಮರಯ್ಯ ಹಿರೇಮಠ ಸಾ:ರಾಮಪೂರ ತಾ:ಸಿಂದಗಿ, ಹಾ:ವ:ನಾಗಪ್ಪಾ ಸಿರಸಗಿ ಮನೆಯಲ್ಲಿ ಬಾಡಿಗೆ ವಾಸ, ಗಾಬ್ರೆ ಲೇಔಟ ಗುಲಬರ್ಗಾ ರವರು ನನ್ನ ತಂದೆಯವರು ರಾಂಪೂರದಲ್ಲಿರುವ ಹೊಲ ಸುಮಾರು ಎರಡು ವರ್ಷಗಳ ಹಿಂದೆ ಮಾರಾಟ ಮಾಡಿ ಬಂದ ಹಣವನ್ನು ಖರ್ಚು ಮಾಡಿರುತ್ತಾನೆ. ಹೀಗಾಗಿ ಸುಮಾರು ಎರಡು ತಿಂಗಳಿಂದ ಹೊಲ ಮಾರಿದ ಹಣದ ವಿಷಯದಲ್ಲಿ ನನ್ನ ತಾಯಿ ನನ್ನ ತಂದೆಗೆ ಹಣ ಕೇಳುತ್ತಿರುವದರಿಂದ ನನ್ನ ತಂದೆ ನನ್ನ ತಾಯಿಗೆ ಹೊಡೆಬಡೆ ಮಾಡುವದು ಜಗಳ ತೆಗೆಯುವದು ಮಾಡುತ್ತಿದ್ದನು.ದಿನಾಂಕ 25-05-12 ರಂದು ರಾತ್ರಿ 9-00 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಅಜ್ಜಿಯಾದ ಕರಿಬಸಮ್ಮ, ನನ್ನ ತಂಗಿ ಭಾಗ್ಯವತಿ ಮಾಳಿಗೆ ಮೇಲೆ ಮಲಗಲು ಹೋಗುವಾಗ ನನ್ನ ತಾಯಿ ಸಂಗಮ್ಮ ಗಣೇಶ ಅಂತಾ ಚೀರುದಳು. ಆಗ ನಾವೆಲ್ಲರು ಮಾಳಿಗೆ ಮೇಲಿಂದ ಕೆಳಗೆ ಬಂದು ನೋಡಲಾಗಿ ನನ್ನ ತಾಯಿಗೆ ಚಾಕುವಿನಿಂದ ಕುತ್ತಿಗೆಗೆ ಹಾಗೂ ಎರಡು ಭುಜಗಳ ಮೇಲೆ ಹೊಡೆದು ಬಾರಿ ರಕ್ತಗಾಯಗೊಳಿಸಿ ಕೊಲೆ ಮಾಡಲು ಪ್ರಯತ್ನಿಸಿ ತಾನು ನೇಣು ಹಾಕಿಕೊಳ್ಳಲು ಪ್ರಯತ್ನಿಸುತ್ತಿದ್ದನ್ನು ನನ್ನ ತಾಯಿಗೆ ಉಪಚಾರಕ್ಕಾಗಿ ಬಸವೇಶ್ವರ ಆಸ್ಪತ್ರೆಗೆ ಖಾಸಗಿ ವಾಹನದಲ್ಲಿ ನಾನು ಮತ್ತು ನನ್ನ ಮನೆಯ ಪಕ್ಕದವರು ಕೂಡಿ ಉಪಚಾರಕ್ಕಾಗಿ ಸೇರಿಕೆ ಮಾಡಿರುತ್ತೇವೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 77/12 ಕಲಂ 325, 307 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ:ಶ್ರೀ ಆಬಿದ ಹುಸೇನ ತಂದೆ ಚಾಂದ ಹುಸೇನ ಸಾ: ಹೈಕೋರ್ಟ ಆಫ ಕರ್ನಾಟಕ ಸೆರೂಕ್ಯೂಟ ಬಾಚ ಗುಲಬರ್ಗಾರವರು ರವರು ನಾನು ದಿನಾಂಕ 25-05-12 ರಂದು ರಾತ್ರಿ 8-30 ಗಂಟೆಗೆ ಹೈಕೋರ್ಟ ಕಾರ ನಂ ಕೆಎ-01 ಜೆ-4856 ರ ಚಾಲಕ ಸಲೀಮ ತಂದೆ ಮಹಿಬೂಬ ಸಾಬ ಇತನು ಕೋರ್ಟನಿಂದ ಕಾರಿಗೆ ಪೇಟ್ರೂಲ ಹಾಕಿಸಿಕೊಂಡು ಬರಲು ಶಕ್ತಿ ಪೇಟ್ರೂಲ ಪಂಪಗೆ ಬಂದು ಪೇಟ್ರೂಲ ಹಾಕಿಸಕೊಂಡು ಹೈಕೋರ್ಟ ಕಡೆಗೆ ಬರುವಾಗ ಸನ್ ಇಂಟರ ನ್ಯಾಷೆನಲ್ ಹೋಟೇಲ ಎದುರು ರೋಡಿನ ಮೇಲೆ ಒಂದು ಹುಡುಗಿ ನಡೆದುಕೊಂಡು ಹೋಗುವಾಗ ಅವಳನ್ನು ಬಚಾವ ಮಾಡಲು ಹೋಗಿ ರೋಡಿನ ಪುಟಪಾಲ ಮೇಲೆ ಇರುವ ಒಂದು ಮರಕ್ಕೆ ಡಿಕ್ಕಿ ಪಡಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 60/2012 ಕಲಂ: 279 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಮಾದನ ಹಿಪ್ಪರಗಾ ಪೊಲೀಸ್ ಠಾಣೆ:ಶ್ರೀ ಮಧುಕರ ತಂದೆ ಅಂಬಾಜಿ ಕಾಂಬಳೆ ಸಾ: ಮಾದನ ಹಿಪ್ಪರಗಾರವರು ದಿನಾಂಕ 24/05/2012 ರಂದು ನಮ್ಮ ಮನೆಯಲ್ಲಿ ನಾನು ಮತ್ತು ನನ್ನ ಹೆಂಡತಿ ಮಂಗಲಾಬಾಯಿನಮ್ಮ ಮನೆಯೆ ಮೇಲೆ ಪತ್ರವಾನ್ನು ಹಾಕುತ್ತಿದ್ದಾಗ ಮಲ್ಲಪ್ಪಾ ತಂದೆ ದೊಂಡಿಬಾ ಕಾಂಬಳೆ , ವಿಠಲ್ ತಂದೆ ದೊಂಡಿಬಾ ಕಾಂಬಳೆ, ವಿಮಲಾಬಾಯಿ ಗಂಡ ವಿಠ್ಠಲಕಾಂಬಳೆ ಮಹಾನಂದ ಗಂಡ ಗಣೇಶ, ಕು, ಹಿರಾಬಾಯಿತಂದೆ ವಿಠ್ಠಲಕಾಂಬಳೆ 6) ಯಶಾಬಾಯಿ ಗಂಡ ಮಲ್ಲಪ್ಪ ಕಾಂಬಳೆ 7) ಬಾಬು ತಂದೆ ವಿಠ್ಠಲ ಕಾಂಬಳೆ ಸಾ: ಎಲ್ಲರೂ ಮಾದನ ಹಿಪ್ಪರಗಾ ಇವರೆಲ್ಲರೂ ತಮ್ಮ ಕೈಯಲ್ಲಿ ಕಟ್ಟಿಗೆ ರಾಡು ಕೈಯಲ್ಲಿ ಹಿಡಿದುಕೊಂಡು ಎಕೊದ್ದೇಶದಿಂದ ಆಕ್ರಮಕೂಟ ಕಟ್ಟಿಕೊಂಡು ಬಂದು ಅವಾಚ್ಯವಾಗಿ ಬೈದು ಹೊಡೆ ಬಡೆ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ 21/2012 ಕಲಂ 143,147,148, 323,324,504,506, ಸಂಗಡ 149 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಮೋಸ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ ಠಾಣೆ: ಶ್ರೀ ಹೋಳಬಸಯ್ಯ ತಂದೆ ಚನ್ನವೀರಯ್ಯ ಸುರೇಬಾನ ಸಾ: ಇಂದ್ರಜೀತ ವ್ಹೇರ ಹೌಸಿಂಗ ಕಾರ್ಪೋರೆಷನ್ ಆಳಂದ ರೋಡ ಗುಲಬರ್ಗಾ ರವರು ದಿ: ನಾಂಕ: 22/5/2012 ರಂದು ಸಾಯಂಕಾಳ 4 ಪಿಎಮಕ್ಕೆ ಸಂಗಮೇಶ್ವರ ಟ್ರಾನ್ಸ್‌ಪೋರ್ಟ ಲಾರಿ ನಂ ಕೆಎ 17 9186 ನೇದ್ದರಲ್ಲಿ ಪಾರ್ಲೆ ಬಿಸ್ಕಿಟ್ & ಚಾಕಲೇಟ 555 ಬಾಕ್ಸಗಳನ್ನು ರಾಯಚೂರ ನಂದನ ಟ್ರೇಡರ್ಸ ಅವರಿಗೆ ಬಿಲ್ ನಂ 344 & 386 ನೇದ್ದರಲ್ಲಿ 3,49,739/- ರೂ ಕಿಮ್ಮತ್ತಿನದ್ದನ್ನು ಕೊಟ್ಟು ಕಳುಹಿಸಿದ್ದು ಅದನ್ನು ದಿನಾಂಕ:23/5/2012 ರಂದು ಮದ್ಯಾಹ್ನ 3 ಗಂಟೆಗೆ ನಂದನ ಟ್ರೇಡರ್ಸ ರಾಯಚೂರ ಇವರ ಹತ್ತಿರ 80 ಬಾಕ್ಸ್ ಬಿಸ್ಕಿಟ & ಚಾಕಲೇಟ ಕಡಿಮೆ ಕೊಟ್ಟು ಅಫರಾದಿಕ ನಂಬಿಕೆ ದ್ರೋಹವನ್ನು ವೆಸಗಿರುತ್ತಾನೆ ಅಂತಾದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 171/2012 ಕಲಂ 406 420 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಮೋಸ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ ಠಾಣೆ: ಶ್ರೀ ಉಮೇಶ ತಂದೆ ಭೀಮಾಶಂಕರ ಖಣಜೆಗೋಳ @ ಎಕಲೂರ ಸಾ: ಸೈಯದ್ಯ ಚಿಂಚೋಳಿರವರು ನಾನು ನನ್ನ ತಮ್ಮ ಕೂಡಿಕೊಂಡು ದಿನಾಂಕ: 23/4/2012 ರಂದು ಬೆಳಿಗ್ಗೆ 8-00 ಎಎಮಕ್ಕೆ ಸರ್ವೇ ನಂ 4 ನೇದ್ದರಲ್ಲಿ ಬಂಡೆಪ್ಪ ತಂದೆ ಶರಣಪ್ಪ ಖಣಜೇಗೊಳ,ಮಲ್ಲಮ್ಮಾ ಗಂಡ ಬಂಡೆಪ್ಪ ಖಣಜೇಗೋಳ,ಚಂದ್ರಕಾಂತ ತಂದೆ ಬಂಡೆಪ್ಪ ಖಣಜೇಗೋಳ ಸಾ: ಎಲ್ಲರೂ ಸೈಯದ ಚಿಂಚೋಳಿ ತಾ: ಜಿ: ಗುಲಬರ್ಗಾ ರವರು ಗಳ್ಯಾ ಹೊಡೆಯುತ್ತಿದ್ದಾಗ. ಇಲ್ಲಿ ಏಕೆ ಗಳ್ಯೆ ಹೊಡೆಯುತ್ತಿದ್ದಿರಿ ಅಂತ ಕೇಳಿದಕ್ಕೆ ಗಳ್ಯಾ ಹೊಡೆಯುವರು ಅವ್ಯಾಚ್ಯಚಾಗಿ ಬೈದು ಬಡಿಗೆಯಿಂದ ಹೊಡೆದು ರಕ್ತಗಾಯ ಗೊಳಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 172/2012 ಕಲಂ 504, 323,324, ಸಂ. 34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
No comments:
Post a Comment