Police Bhavan Kalaburagi

Police Bhavan Kalaburagi

Monday, May 14, 2012

GULBARGA DIST REPORTED CRIMES


ಮುಂಜಾಗ್ರತೆ ಕ್ರಮ:
ಬ್ರಹ್ಮಪೂರ ಪೊಲೀಸ್ ಠಾಣೆ: ದಿನಾಂಕ: 14/05/2012 ರಂದು ಮಧ್ಯಾಹ್ನ  1300 ಗಂಟೆಗೆ ಶ್ರೀ.ಸುಧಾಕರ ಸಿಪಿಸಿ ಬ್ರಹ್ಮಪೂರ ಪೊಲೀಸ ಠಾಣೆ ಗುಲಬರ್ಗಾರವರು ನಾಣು ದಿನಾಂಕ: 14/05/2012 ರಂದು ನಾನು ಪೆಟ್ರೋಲಿಂಗ ಕುರಿತು ಸುಪರ ಮಾರ್ಕೆಟದಿಂದ ತಹಶೀಲ ಆಫೀಸ ಹತ್ತಿರ ಹೋದಾಗ ಅಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಗೆ ಬೈಯುವದು, ಹೊಡೆಯಲ್ಲಿಕೆ ಹೋದಂತೆ ಮಾಡುವದು, ಮಾಡಿ ಭಯಾನಕ ರೀತಿಯಿಂದ ರೌಡಿ-ಗುಂಡಾನಂತೆ ವರ್ತಿಸುತ್ತಿದ್ದು ಸಾರ್ವಜನಿಕ ಶಾಂತತೆಯನ್ನು ಹಾಳು ಮಡುವುದನ್ನು ಕಂಡು ಅವನನ್ನು ಹಿಡಿದು ಹೆಸರು ವಿಚಾರಿಸಲಾಗಿ ಜಗಧೀಶ ತಂದೆ ದಾನಯ್ಯ ಸ್ವಾಮಿ, ವಯ|| 36 ವರ್ಷ,|| ಪೇಟಿಂಗ ಕೆಲಸ, ಸಾ|| ಗೋರಟಾ ತಾ|| ಬಸವ ಕಲ್ಯಾಣ, ಹಾ|||| ಅಲಗೂಡರ ಮನೆ ಶಹಾಬಜಾರ ಗುಲಬರ್ಗಾ ಅಂತಾ ಹೇಳಿದ್ದು ಸ್ಥಳದಲ್ಲಿ ಯಾಗೇಯೆ ಬಿಟ್ಟಲ್ಲಿ ಯಾವುದಾದರೊಂದು ಸಂಜ್ಞೆಯ ಅಪರಾಧ ವೆಸಗಬಹುದೆಂದು ಅಂತಾ ಮುಂಜಾಗೃತೆ ಕ್ರಮದ ಅಡಿಯಲ್ಲಿ ವರದಿ ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 61/2012 ಕಲಂ: 110(ಇ) (ಜಿ) ಸಿ.ಅರ್.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಸಂಚಾರಿ ಪೊಲೀಸ್ ಠಾಣೆ:ಶ್ರೀ ಜಯಾನಂದ ತಂದೆ ನೀಲಕಂಠ @ ಕಂಠೆಪ್ಪ ನರೋಣ, ಉಃ ಅಟೋ ಚಾಲಕ ಸಾ: ಕೆರೆಬೋಸಗಾ ಗುಲಬರ್ಗಾರವರು ನಾನು ದಿನಾಂಕ 14-05-2012 ರಂದು ಮಧ್ಯಾಹ್ನ ಅಟೋ ರಿಕ್ಷಾ ನಂ : ಕೆಎ 32-9535 ನೇದ್ದರಲ್ಲಿ ಪ್ರಯಾಣಿಕರನ್ನು ಕೂಡಿಸಿಕೊಂಡು ಶಹಾಬಜಾರ ನಾಕಾ ದಿಂದ ಮದನ ಟಾಕೀಜ್ ಕಡೆಗೆ ಬರುವಾಗ ಮಾರ್ಗ ಮದ್ಯದಲ್ಲಿರುವ ಸಾ ಮಿಲ್  ಮುಂದಿನ ರೋಡಿನಲ್ಲಿ ಲಾರಿ ನಂ ಎಮ್.ಹೆಚ್. 13 ಆರ್ 4868 ನೇದ್ದರ ಚಾಲಕನು ತನ್ನ ವಾಹನ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಅಟೋಕ್ಕೆ ಡಿಕ್ಕಿ ಪಡಿಸಿದ್ದರಿಂದ  ನನಗೆ ಭಾರಿಗಾಯವಾಗಿದ್ದು, ಮತ್ತು ಅಟೋದಲ್ಲಿದ್ದ ಪ್ರಯಾಣಿಕರಿಗು ಸಹ ಸಣ್ಣ ಪುಟ್ಟ ಗಾಯಗಳಾಗಿರುತ್ತವೆ ಲಾರಿ ಚಾಲಕನು ತನ್ನ ವಾಹನ ಬಿಟ್ಟು ಓಡಿ ಹೋಗಿರುತ್ತಾನೆ ಅಂತ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 26/2012 ಕಲಂ 279, 337, 338 ಐ.ಪಿ.ಸಿ ಸಂಗಡ 187 ಐ.ಎಮ್.ವಿ ಆಕ್ರ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

No comments: